Just In
Don't Miss!
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- News
ಮ್ಯಾಡ್ರಿಡ್ ಕಟ್ಟಡ ಸ್ಫೋಟ: ಇಬ್ಬರು ಸಾವು, ಹಲವರಿಗೆ ಗಾಯ
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Sports
ಐಪಿಎಲ್ 2021: ಬೆಂಗಳೂರಿಗೆ ಬಂದ ಹರ್ಷಲ್ ಪಟೇಲ್, ಡೇನಿಯಲ್ ಸ್ಯಾಮ್ಸ್!
- Lifestyle
ಯಾವಾಗ ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಬೆಳೆಸುತ್ತಾರೆ?
- Education
UAS Dharwad Recruitment 2021: ರಿಸರ್ಚ್ ಅಸೋಸಿಯೇಟ್ ಹುದ್ದೆಗೆ ಜ.28ಕ್ಕೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೆಣ್ಣಾಗಿ ಬದಲಾದ ಬಾಲಿವುಡ್ ನಟಿಯರ ನೆಚ್ಚಿನ ಫ್ಯಾಷನ್ ಡಿಸೈನರ್ ಸ್ವಪ್ನಿಲ್
ಬಾಲಿವುಡ್ ನಟಿಯರ ಮೆಚ್ಚಿನ ಫ್ಯಾಷನ್ ಡಿಸೈನರ್‌ಗಳಲ್ಲಿ ಒಬ್ಬರಾಗಿರುವ, ಮಾಧುರಿ ದೀಕ್ಷಿತ್, ದೀಪಿಕಾ ಪಡುಕೋಣೆ, ಕರೀನಾ ಇನ್ನೂ ಅನೇಕ ನಟಿಯರೊಟ್ಟಿಗೆ ಕೆಲಸ ಮಾಡಿದ್ದ ಫ್ಯಾಷನ್ ಡಿಸೈನರ್ ಸ್ವಪ್ನಿಲ್ ಹೆಣ್ಣಾಗಿ ಬದಲಾಗಿದ್ದಾರೆ.
ಹೌದು, ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಆಗಿರುವ ಸ್ವಪ್ನಿಲ್ ಈ ವಿಷಯವನ್ನು ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದು, ತಾವು ಇನ್ನು ಮುಂದೆ ಸ್ವಪ್ನಿಲ್ ಅಲ್ಲ ಸಾಯಿಷಾ ಎಂದು ಹೇಳಿದ್ದಾರೆ.
ತಮ್ಮ ಹೊಸ ಚಿತ್ರದೊಂದಿಗೆ ಸಂದೇಶವೊಂದನ್ನು ಇನ್‌ಸ್ಟಾಗ್ರಾಂ ನಲ್ಲಿ ಪ್ರಕಟಿಸಿರುವ ಸಾಯಿಷಾ, '2021 ಪ್ರಾರಂಭವಾಗಿದೆ. ಸಾಯಿಷೆ ಎಂದರೆ ಅರ್ಥಪೂರ್ಣ ಜೀವನ ಎಂದರ್ಥ. ನಾನು ಸಹ ನನ್ನ ಜೀವನವನ್ನು ಅರ್ಥಪೂರ್ಣವಾಗಿ ಕಳೆಯಬೇಕು ಎಂದುಕೊಂಡಿದ್ದೇನೆ' ಎಂದಿದ್ದಾರೆ.

ಬಹಳ ನೋವು ಅನುಭವಿಸಿದ್ದೇನೆ: ಸಾಯಿಷಾ
ಬಾಲ್ಯದ ನೆನಪನ್ನು ಹಂಚಿಕೊಂಡಿರುವ ಸಾಯಿಷಾ, 'ನನ್ನ ಶಾಲೆ, ಕಾಲೇಜು ದಿನಗಳು ಬಹಳ ಕೆಟ್ಟದಾಗಿದ್ದವು. ನಾನು ಭಿನ್ನ ಎಂಬ ಕಾರಣಕ್ಕೆ ಹುಡುಗರು ನನ್ನನ್ನು ವಿಚಿತ್ರವಾಗಿ ನೋಡುತ್ತಿದ್ದರು, ತಮ್ಮ ಗುಂಪಿನಿಂದ ಹೊರಗೆ ಇಟ್ಟಿದ್ದರು. ಇದು ನನಗೆ ಏಕಾಂತಗೊಳಿಸಿತ್ತಿತ್ತು. ಬಹಳ ನೋವು ನಾನು ಅನುಭವಿಸಿದ್ದೇನೆ' ಎಂದಿದ್ದಾರೆ ಸಾಯಿಷಾ.

ಉಸಿರುಗಟ್ಟಿದ ಅನುಭವವಾಗುತ್ತಿತ್ತು: ಸಾಯಿಷಾ
'ನಾನು ನನ್ನದಲ್ಲದ ಜೀವನವನ್ನು ಬದುಕುತ್ತಿದ್ದೆ. ಆಗೆಲ್ಲಾ ನನಗೆ ಉಸಿರುಗಟ್ಟಿದ ಅನುಭವವಾಗುತ್ತಿತ್ತು. 20 ರ ವಯಸ್ಸಿನ ನಂತರ ಫ್ಯಾಷನ್ ಡಿಸೈನಿಂಗ್ ಕೋರ್ಸ್‌ಗೆ ಸೇರಿದ ಮೇಲೆ ನಾನು ನನ್ನ ತನವನ್ನು ಕಂಡುಕೊಂಡೆ. ಅಲ್ಲಿಂದ ನಾನು ನನ್ನನ್ನು ಕಂಡುಕೊಳ್ಳಲು ಆರಂಭಿಸಿದೆ' ಎಂದಿದ್ದಾರೆ ಸಾಯಿಷಾ.

ನಾನು ಸಲಿಂಗಿ ಎಂದು ತಪ್ಪುತಿಳಿದುಕೊಂಡಿದ್ದೆ: ಸಾಯಿಷಾ
'ಪುರುಷರನ್ನು ನೋಡಿ ಆಕರ್ಷಿತಳಾಗುತ್ತಿದ್ದ ನಾನು ಇಷ್ಟು ವರ್ಷಗಳು ನನ್ನನ್ನು ನಾನು ಸಲಿಂಗಿ ಎಂದುಕೊಂಡಿದ್ದೆ. ಆದರೆ ಆರು ವರ್ಷಗಳ ಹಿಂದೆ ನನಗೆ ಗೊತ್ತಾಯಿತು ನಾನು ಗೇ ಅಲ್ಲ ಬದಲಿಗೆ ಹೆಣ್ಣು (ತ್ರಿಲಿಂಗಿ) ಎಂದು' ತಮ್ಮಲ್ಲಾದ ಬದಲಾವಣೆಯನ್ನು ಹೊರಗೆಡವಿದ್ದಾರೆ ಸಾಯಿಷಾ.

ಹಲವು ಬಾಲಿವುಡ್ ಸೆಲೆಬ್ರಿಟಿಗಳು ಬೆಂಬಲಿಸಿದ್ದಾರೆ
ಹಲವು ಬಾಲಿವುಡ್ ಸೆಲೆಬ್ರಿಟಿಗಳು ಸಾಯಿಷಾ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ನಟಿಯರಾದ ಅದಿತಿ ರಾವ್ ಹೈದಿರಿ, ಇಶಾ ಗುಪ್ತಾ, ಸಿಕಂದರ್ ಖೇರ್ ಅವರುಗಳು ಸಾಯಿಷಾ ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಸಾಯಿಷೆ ಈ ಹಿಂದೆ ಮಾಧುರಿ ದೀಕ್ಷಿತ್, ದೀಪಿಕಾ ಪಡುಕೋಣೆ, ಕರೀನಾ ಕಪೂರ್, ಅನುಷ್ಕಾ ಶರ್ಮಾ, ಕಿಯಾರಾ ಅಡ್ವಾಣಿ ಇನ್ನೂ ಹಲವು ಖ್ಯಾತ ನಟಿಯರೊಂದಿಗೆ ಫ್ಯಾಷನ್ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ.