For Quick Alerts
  ALLOW NOTIFICATIONS  
  For Daily Alerts

  ಮಾಕಾವುನಲ್ಲಿ 'IIFA Rocks 2013' ನೋಟಗಳು

  By Rajendra
  |

  ಕ್ಯಾನೆ ಚಿತ್ರೋತ್ಸವದ ರೆಡ್ ಕಾರ್ಪೆಟ್ ದೃಶ್ಯಗಳನ್ನು ನೋಡಿದ್ದೀರಿ. ಈಗ IIFA ಗ್ರೀನ್ ಕಾರ್ಪೆಟ್ ಸಂಭ್ರಮ. ಚಲನಚಿತ್ರ ಪ್ರಶಸ್ತಿ, ಪುರಸ್ಕಾರಗಳಲ್ಲಿ ಇಂಡಿಯನ್ ಇಂಟರ್ ನ್ಯಾಶನಲ್ ಫಿಲಂ ಅಕಾಡೆಮಿ ಪ್ರಶಸ್ತಿಗಳಿಗೆ (IIFA) ತನ್ನದೇ ಆದಂತಹ ಪ್ರಾಧಾನ್ಯತೆ ಇದೆ. 2013ರ ಸಾಲಿನ 14ನೇ ಐಐಎಫ್ಎ ಪ್ರಶಸ್ತಿ ಪ್ರದಾನ ಸಮಾರಂಭ ಜುಲೈ 5ರಂದು ಮಕಾವುನಲ್ಲಿ ಆರಂಭವಾಗಿದೆ.

  ಮಾಧುರಿ ದೀಕ್ಷಿತ್, ಜಾಕ್ವೆಲಿನ್ ಫರ್ನಾಂಡೀಸ್, ಶಾಹಿದ್ ಕಪೂರ್, ಆಯುಷ್ಮಾನ್ ಖುರಾನಾ, ಶ್ರೀದೇವಿ, ನೇಹಾ ಧೂಪಿಯಾ, ಗೌರಿ ಖಾನ್ ಸೇರಿದಂತೆ ಹಲವು ಖ್ಯಾತ ತಾರೆಗಳು ಗ್ರೀನ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ಎಲ್ಲರ ಗಮನಸೆಳೆದರು.

  ಬಣ್ಣಬಣ್ಣದ ವಸ್ತ್ರಗಳಲ್ಲಿ ಎಲ್ಲಾ ಸಿನಿಮಾ ತಾರೆಗಳೂ ಕಂಗೊಳಿಸುತ್ತಿದ್ದದ್ದು ವಿಶೇಷ. ಮಾಧುರಿ ದೀಕ್ಷಿತ್ ಅವರಂತೂ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸುತ್ತಿದ್ದರು. ಇದಕ್ಕೆ ಅವರ ಮುಗುಳ್ನಗೆ ಮತ್ತಷ್ಟು ಮೆರುಗು ನೀಡುತ್ತಿತ್ತು.

  ಕಪ್ಪು ಉಡುಪಿನಲ್ಲಿ ಅರ್ಜುನ್ ಕಪೂರ್

  ಕಪ್ಪು ಉಡುಪಿನಲ್ಲಿ ಅರ್ಜುನ್ ಕಪೂರ್

  ಇಫಾ ರಾಕ್ಸ್ 2013ರ ಪ್ರಶಸ್ತಿ ಸಂಭ್ರಮದಲ್ಲಿ ಜುಲೈ 5ರಂದು ಅರ್ಜುನ್ ಕಪೂರ್ ಕಂಡುಬಂದಿದ್ದು ಹೀಗೆ. ಕಪ್ಪು ಸೂಟ್ ನಲ್ಲಿ ಟಿಪ್ ಟಾಪ್ ಆಗಿ ಓಡಾಡುತ್ತಿದ್ದರು.

  ಜಾಕ್ವೆಲಿನ್ ಫರ್ನಾಂಡೀಸ್ ಪರ್ಫೆಕ್ಟ್ ಲುಕ್

  ಜಾಕ್ವೆಲಿನ್ ಫರ್ನಾಂಡೀಸ್ ಪರ್ಫೆಕ್ಟ್ ಲುಕ್

  ಕೆಂಪು ಬಣ್ಣದ ಡ್ರೆಸ್ ನಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಎಲ್ಲರ ಗಮನಸೆಳೆದರು.

  ತಿಳಿಗೆಂಪು ಬಣ್ಣದಲ್ಲಿ ಇವೆಲಿನ್ ಶರ್ಮಾ

  ತಿಳಿಗೆಂಪು ಬಣ್ಣದಲ್ಲಿ ಇವೆಲಿನ್ ಶರ್ಮಾ

  ತಿಳಿಗೆಂಪು ಬಣ್ಣದಲ್ಲಿ ಇವೆಲಿನ್ ಶರ್ಮಾ ಆವರು ಎಲ್ಲರನ್ನೂ ರೋಮಾಂಚನಗೊಳಿಸಿದರು.

  ಸಾಂಪ್ರಾದಾಯಿಕ ಉಡುಗೆಯಲ್ಲಿ ಮಾಧುರಿ

  ಸಾಂಪ್ರಾದಾಯಿಕ ಉಡುಗೆಯಲ್ಲಿ ಮಾಧುರಿ

  ದೇಸಿ ದಿರಿಸಿನಲ್ಲಿ ಮಾಧುರಿ ದೀಕ್ಷಿತ್ ಎಲ್ಲರ ಕಣ್ಮನ ಸೆಳೆದರು. ಅವರ ಸಾಂಪ್ರದಾಯಿಕ ಉಡುಗೆಗೆ ಮಾರುಹೋಗದವರುಂಟೇ?

  ಗ್ರೀನ್ ಕಾರ್ಪೆಟ್ ಲುಕ್ ನಲ್ಲಿ ನೇಹಾ ಧುಪಿಯಾ

  ಗ್ರೀನ್ ಕಾರ್ಪೆಟ್ ಲುಕ್ ನಲ್ಲಿ ನೇಹಾ ಧುಪಿಯಾ

  ನೇಹಾ ಧುಪಿಯಾ ಅವರ ಬೆಡಗು ಭಿನ್ನಾಣಕ್ಕೆ ಮರುಳಾಗದವರುಂಟೇ? ಗ್ರೀನ್ ಕಾರ್ಪೆಟ್ ಲುಕ್ ನಲ್ಲಿ ಅವರ ಮೋಹಕ ನೋಟ.

  ಬ್ಲ್ಯಾಕ್ ಅಂಡ್ ವೈಟ್ ನಲ್ಲಿ ಶಾಹಿದ್ ಕಪೂರ್

  ಬ್ಲ್ಯಾಕ್ ಅಂಡ್ ವೈಟ್ ನಲ್ಲಿ ಶಾಹಿದ್ ಕಪೂರ್

  ಕಪ್ಪು ಬಿಳುಪಿನ ಪ್ರಿಂಟೆಡ್ ಶರ್ಟ್ ನಲ್ಲಿ ಶಾಹಿದ್ ಕಪೂರ್ ಕ್ಯೂಟ್ ಆಗಿ ಎಲ್ಲರ ಕಣ್ಣಿಗೆ ಬಿದ್ದರು.

  ಶ್ರೀದೇವು ಬೋನಿ ಕಪೂರ್ ಜೋಡಿ

  ಶ್ರೀದೇವು ಬೋನಿ ಕಪೂರ್ ಜೋಡಿ

  ಇಫಾ ರಾಕ್ಸ್ 2013ರ ಗ್ರೀನ್ ಕಾರ್ಪೆಟ್ ಮೇಲೆ ಶ್ರೀದೇವಿ ದಂಪತಿಗಳು ಕಂಡುಬಂದದ್ದು ಹೀಗೆ.

  ಬಾಯ್ ಫ್ರೆಂಡ್ ಜೊತೆ ದಿಯಾ ಮಿರ್ಜಾ

  ಬಾಯ್ ಫ್ರೆಂಡ್ ಜೊತೆ ದಿಯಾ ಮಿರ್ಜಾ

  ಹಲವು ತಾರೆಗಳೊಂದಿಗೆ ದಿಯಾ ಮಿರ್ಜಾ ಅವರು ಮಿಂಚಿದರು. ಜೊತೆಯಲ್ಲಿ ಬಾಯ್ ಫ್ರೆಂಡ್ ಸಹ ಇದ್ದರು.

  ಬ್ಯೂಟಿಫುಲ್ ಡ್ರೆಸ್ ನಲ್ಲಿ ಗೌರಿ ಖಾನ್

  ಬ್ಯೂಟಿಫುಲ್ ಡ್ರೆಸ್ ನಲ್ಲಿ ಗೌರಿ ಖಾನ್

  ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಅವರು ಮನಮೋಹಕ ಉಡುಪಿನಲ್ಲಿ ಎಲ್ಲರ ಕಣ್ಣು ಅರಳುವಂತೆ ಮಾಡಿದರು.

  ಕರೀಷ್ಮಾ ಕೋಟಕ್ ಜೊತೆ ಮಿನಿಷಾ ಲಾಂಬಾ

  ಕರೀಷ್ಮಾ ಕೋಟಕ್ ಜೊತೆ ಮಿನಿಷಾ ಲಾಂಬಾ

  ಇಫಾ ರಾಕ್ಸ್ 2013ರಲ್ಲಿ ಮಿಂಚಿದ ಜೋಡಿ. ಕರೀಷ್ಮಾ ಕೋಟಕ್ ಜೊತೆ ಮಿನಿಷಾ ಲಾಂಬಾ.

  ಜಂಟಲ್ ಮನ್ ಲುಕ್ ನಲ್ಲಿ ನೀಲ್ ನಿತಿನ್ ಮುಕೇಶ್

  ಜಂಟಲ್ ಮನ್ ಲುಕ್ ನಲ್ಲಿ ನೀಲ್ ನಿತಿನ್ ಮುಕೇಶ್

  ಸದಾ ಮನ್ನಥನಂತೆ ಕಾಣುವ ನೀಲ್ ನಿತಿನ್ ಮುಕೇಶ್ ಈ ಬಾರಿ ಯಾಕೋ ಏನೋ ಸೂಟು ಬೂಟು ಹಾಕಿಕೊಂಡು ಜಂಟಲ್ ಮನ್ ತರಹ ಕಾಣಿಸಿದರು.

  ಗ್ರೀನ್ ಕಾರ್ಪೆಟ್ ಮೇಲೆ ಗೋಲ್ಡನ್ ಗರ್ಲ್

  ಗ್ರೀನ್ ಕಾರ್ಪೆಟ್ ಮೇಲೆ ಗೋಲ್ಡನ್ ಗರ್ಲ್

  ಗೋಲ್ಡನ್ ಡ್ರೆಸ್ ನಲ್ಲಿ ಕಂಗೊಳಿಸಿದ ಸೋಫಿ ಚೌದರಿ. ಗ್ರೀನ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುತ್ತಿದರೆ ಕಣ್ಣಿಗೆ ಹಬ್ಬ.

  ಗ್ರೀನ್ ಕಾರ್ಪೆಟ್ ಮೇಲೆ ಕಿಂಗ್ ಖಾನ್ ಶಾರುಖ್

  ಗ್ರೀನ್ ಕಾರ್ಪೆಟ್ ಮೇಲೆ ಕಿಂಗ್ ಖಾನ್ ಶಾರುಖ್

  ಶಾರುಖ್ ಖಾನ್ ಗ್ರೀನ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ ಸಂಭ್ರಮಿಸಿದರು. ಜೊತೆಗೆ ಡಿಂಪಲ್ ಸುಂದರಿ ದೀಪಿಕಾ ಪಡುಕೋಣೆ ಸಹ ಇದ್ದರು.

  ಇನ್ನು ದಿಯಾ ಮಿರ್ಜಾ ಅವರು ತಮ್ಮ ಬಾಯ್ ಫ್ರೆಂಡ್ ಸಹಿಲ್ ಸಂಘ್ ಜೊತೆ ಕಪ್ಪು ದಿರಿಸಿನಲ್ಲಿ ಎಲ್ಲರ ಗಮನಸೆಳೆದರು. ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡೀಸ್ ಕೆಂಪು ವಸ್ತ್ರದಲ್ಲಿ ಅಷ್ಟೇ ಕೆಂಪಗೆ ಕಾಣುತ್ತಿದ್ದರು. ದಟ್ಟ ಹಸಿರು ಗೌನ್ ನಲ್ಲಿ ಬಾಲಿವುಡ್ ಅಭಿನೇತ್ರಿ ಶ್ರೀದೇವಿ ಅವರು ತಮ್ಮ ಪತಿ ಬೋನಿ ಕಪೂರ್ ಜೊತೆ ಎಲ್ಲರ ಕಣ್ಣು ಕುಕ್ಕಿದರು.

  ಇವರ ಜೊತೆಗೆ ಹೊಸಬರಾದ ಇವಲಿನ್ ಶರ್ಮಾ, ನೇಹಾ ಧುಪಿಯಾ, ಸೋಫಿ ಚೌದರಿ ಸ್ವಲ್ಪ ಡಲ್ ಆಗಿ ಕಂಡುಬಂದರು. ಗೋಲ್ಡನ್ ಗ್ರೀನ್ ಡ್ರೆಸ್ ನಲ್ಲಿ ಶಾರುಖ್ ಪತ್ನಿ ಗೌರಿಖಾನ್ ಕಣ್ಣಿಗೆ ಹಬ್ಬವನ್ನೇ ತಂದರು.

  ನಟಿಯರಿಗಿಂತ ತಾವೇನು ಕಮ್ಮಿ ಎಂಬಂತೆ ಅರ್ಜುನ್ ಕಪೂರ್, ಆಯುಷ್ಮಾನ್ ಖುರಾನಾ, ನೀಲ್ ನಿತಿನ್ ಮುಕೇಶ್ ಸೂಟು ಬೂಟು ಹಾಕಿಕೊಂಡು ಸೂಪರ್ ಆಗಿ ಕಾಣಿಸಿಕೊಂಡರು. ಬನ್ನಿ ಕಣ್ಣಾರೆ ಸವಿಯೋಣ ಪ್ರಶಸ್ತಿ ಸಮಾರಂಭದ ದೃಶ್ಯಗಳನ್ನು.

  English summary
  The 2013 Indian International Film Academy Awards also known as IIFA has just begun in Macau and we can witness many celebrities like Madhuri Dixit, Jacqueline Fernandez, Shahid Kapoor, Ayushman Khurana, Sridevi, Neha Dhupia, Gauhar Khan and many others gracing the IIFA Rocks green carpet.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X