twitter
    For Quick Alerts
    ALLOW NOTIFICATIONS  
    For Daily Alerts

    ಸಿನಿಮಾಟೋಗ್ರಫಿ ಕಾಯ್ದೆಗೆ ಶೀಘ್ರ ತಿದ್ದುಪಡಿ: ಕ್ಯಾಮೆರಾದ ಕತ್ತು ಹಿಸುಕುವ ಹುನ್ನಾರ?

    |

    ಸಿನಿಮಾಗಳಿಗೆ ಕಠಿಣ ಸೆನ್ಸಾರ್ ಬೇಕೆ, ಬೇಡವೇ ಎಂಬ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಸಿನಿಮಾಟೋಗ್ರಫಿ ಕಾಯ್ದೆಗೆ ತಿದ್ದುಪಡಿ ತಂದು ಸೆನ್ಸಾರ್ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸುವ ಯೋಜನೆ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿದೆ.

    ಹಳೆಯದಾದ ಸಿನಿಮಾಟೊಗ್ರಫಿ ಕಾಯ್ದೆಗೆ ತಿದ್ದುಪಡಿ ತರಲು ಕರಡು ಸಿದ್ಧವಾಗುತ್ತಿದ್ದು, ತಿದ್ದುಪಡಿ ಬಳಿಕ ಸಿಬಿಎಫ್‌ಸಿ ನೀಡಿದ ಪ್ರಮಾಣಪತ್ರವನ್ನು ಪ್ರಶ್ನಿಸುವ, ಬದಲಾಯಿಸುವಂತೆ ಸೂಚಿಸುವ ಅಧಿಕಾರವನ್ನು ಕೇಂದ್ರ ಸರ್ಕಾರ ಪಡೆದುಕೊಳ್ಳಲಿದೆ.

    ಭಾರತದ ಸಾರ್ವಭೌಮತೆ, ಸಮಗ್ರತೆಗೆ ಧಕ್ಕೆ ತರುವಂಥಹಾ ಅಂಶಗಳಿದ್ದರೆ, ಇತರೆ ದೇಶಗಳೊಟ್ಟಿಗೆ ಭಾರತದ ಸ್ನೇಹ ಸಂಬಂಧವನ್ನು ಕದಡಬಹುದಾದ ಅಂಶಗಳಿದ್ದರೆ, ಅಸಭ್ಯ ಹಾಗೂ ಅನೈತಿಕ ಅಂಶಗಳಿದ್ದರೆ, ಅಪರಾಧಕ್ಕೆ ಪ್ರಚೋದಿಸುವ ಅಂಶಗಳಿದ್ದರೆ ಅಂಥಹಾ ಸಿನಿಮಾಗಳಿಗೆ ನೀಡಲಾಗಿರುವ ಪ್ರಮಾಣವನ್ನು ಪುನರ್‌ಪರಿಶೀಲಿಸುವಂತೆ ಅಥವಾ ತಡೆ ಹಿಡಿಯುವಂತೆ ಸೂಚಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ.

    ಆದೇಶವನ್ನು ಪ್ರಶ್ನಿಸುವ, ಟೀಕಿಸುವ ಅಂಶಗಳಿದ್ದರೂ ಸಮಸ್ಯೆ

    ಆದೇಶವನ್ನು ಪ್ರಶ್ನಿಸುವ, ಟೀಕಿಸುವ ಅಂಶಗಳಿದ್ದರೂ ಸಮಸ್ಯೆ

    ಆದರೆ ನಿರ್ದೇಶಕರಿಗೆ ಆತಂಕ ತರಬಹುದಾಗಿರುವ ವಿಷಯವೆಂದರೆ ಸರ್ಕಾರ ಆದೇಶಗಳ ವಿರುದ್ಧವಾದ ಅಂಶಗಳಿದ್ದರೂ ಸಹ ಅಂಥಹಾ ಸಿನಿಮಾಗಳಿಗೆ ನೀಡಲಾಗಿರುವ ಪ್ರಮಾಣಪತ್ರವನ್ನು ಮರುಪರಿಶೀಲಿಸುವಂತೆ ಕೇಂದ್ರವು ಸೂಚಿಸಬಹುದಾಗಿದೆ. ಅಲ್ಲಿಗೆ ಸರ್ಕಾರದ ಆದೇಶಗಳನ್ನು, ನಿರ್ಣಯಗಳನ್ನು ಸಿನಿಮಾಗಳ ಮೂಲಕ ಪ್ರಶ್ನಿಸುವುದು, ಟೀಕಿಸುವುದು 'ಅಪರಾಧ' ಎನಿಸಿಕೊಳ್ಳುವ ಸಾಧ್ಯತೆ ಇದೆ.

    ಹೊಸ ಮಾದರಿಯಲ್ಲಿ ಪ್ರಮಾಣಪತ್ರ

    ಹೊಸ ಮಾದರಿಯಲ್ಲಿ ಪ್ರಮಾಣಪತ್ರ

    ಇದು ಮಾತ್ರವೇ ಅಲ್ಲದೆ, ಹೊಸ ಕಾಯ್ದೆಯಂತೆ, ಸಿನಿಮಾಗಳಿಗೆ ಸರ್ಟಿಫಿಕೇಟ್ ನೀಡುವ ಕ್ರಮವೂ ಸಹ ಬದಲಾವಣೆ ಆಗಲಿದೆ. 7+, 13+, 16+ ಎಂಬ ಮೂರು ವಿಧ ಹಾಗೂ U/A 7+, U/A 13+, U/A 16+, A ಮಾದರಿಯಲ್ಲಿ ಪ್ರಮಾಣಪತ್ರ ನೀಡಲಾಗುತ್ತದೆ. ಪ್ರಸ್ತುತ U, U/A, A ಮಾದರಿಯ ಪ್ರಮಾಣ ಪತ್ರಗಳನ್ನಷ್ಟೆ ನೀಡಲಾಗುತ್ತಿದೆ.

    ಹತ್ತು ವರ್ಷವಷ್ಟೆ ಮಾನ್ಯವಾಗಿರುತ್ತವೆ

    ಹತ್ತು ವರ್ಷವಷ್ಟೆ ಮಾನ್ಯವಾಗಿರುತ್ತವೆ

    ಹೊಸ ಕಾಯ್ದೆ ಅನ್ವಯ ಯಾವುದೇ ಸಿನಿಮಾಗಳಿಗೆ ನೀಡಲಾಗುವ ಪ್ರಮಾಣಪತ್ರಗಳು ಹತ್ತು ವರ್ಷವಷ್ಟೆ ಮಾನ್ಯವಾಗಿರುತ್ತವೆ. ಆ ನಂತರ ಪ್ರಮಾಣಪತ್ರದ ಮಾನ್ಯತೆ ರದ್ದಾಗುತ್ತದೆ. ಒಂದೊಮ್ಮೆ ಸಿನಿಮಾವನ್ನು ಮರು ಬಿಡುಗಡೆ ಮಾಡಬೇಕಾಗಿದ್ದರೆ ಅಥವಾ ಸಾರ್ವಜನಿಕ ಪ್ರದರ್ಶನಕ್ಕೆ ಇಡಬೇಕಾದರೆ ಮತ್ತೆ ಸೆನ್ಸಾರ್ ಮಂಡಳಿಗೆ ಪ್ರದರ್ಶಿಸಿ ಪ್ರಮಾಣಪತ್ರ ಪಡೆಯುವುದು ಕಡ್ಡಾಯ ಆಗಲಿದೆ.

    Recommended Video

    ರಶ್ಮಿಕಾ ಜೊತೆ ಸೆಲ್ಫಿ ಗಾಗಿ ಪೊಲೀಸರು ಏನ್ ಮಾಡಿದ್ರು ನೋಡಿ | Rashmika Mandanna | Filmibeat Kannada
    ಟ್ರಿಬ್ಯುನಲ್ ರದ್ದು ಮಾಡಿದ ಸರ್ಕಾರ

    ಟ್ರಿಬ್ಯುನಲ್ ರದ್ದು ಮಾಡಿದ ಸರ್ಕಾರ

    ಕೆಲವು ತಿಂಗಳ ಹಿಂದಷ್ಟೆ ಕೇಂದ್ರ ಸರ್ಕಾರವು ಫಿಲಂ ಸರ್ಟಿಫಿಕೇಶನ್ ಅಪಿಲಿಯೇಟ್ ಟ್ರಿಬ್ಯುನಲ್ (FACT) ಅನ್ನು ರದ್ದು ಮಾಡಿದೆ. ಈ ನಿರ್ಣಯದ ಬಗ್ಗೆ ದೇಶದ ಹಲವು ಸಿನಿಮಾ ರಂಗಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಈಗ ಸೆನ್ಸಾರ್‌ ಮಂಡಳಿಯ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಲು ಮುಂದಾಗಿದೆ.

    English summary
    Central government soon will have power to ask CBFC to review movie certificate. Censor rules are going to more tight and tough.
    Wednesday, June 23, 2021, 10:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X