For Quick Alerts
  ALLOW NOTIFICATIONS  
  For Daily Alerts

  ಮಾರ್ಟಿನ್ ಗಪ್ಟಿಲ್ ವಿಕೆಟ್ ಚಹಾಲ್ ಪಡೆಯಬೇಕು ಎಂದ ಸ್ಟಾರ್ ನಟ!

  |

  ಭಾರತ ಮತ್ತು ನ್ಯೂಜಿಲ್ಯಾಂಡ್ ಮೂರನೇ ಟಿ-ಟ್ವೆಂಟಿ ಪಂದ್ಯ ಇಂದು ನಡೆಯಲಿದೆ. ಐದು ಪಂದ್ಯಗಳ ಸರಣಿಯಲ್ಲಿ ಎರಡು ಪಂದ್ಯ ಗೆದ್ದು ಮುನ್ನಡೆಯಲ್ಲಿರುವ ಭಾರತ ಇಂದು ಸರಣಿ ವಶಪಡಿಸಿಕೊಳ್ಳುವ ವಿಶ್ವಾಸದಲ್ಲಿದೆ. ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲ್ಯಾಂಡ್ ಭಾರತ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದೆ.

  ಈ ಪಂದ್ಯದಲ್ಲಿ ಭಾರತದ ಸ್ಪಿನ್ ಬೌಲರ್ ಯುಜುವೇಂದ್ರ ಚಹಾಲ್ ನ್ಯೂಜಿಲ್ಯಾಂಡ್ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ ಅವರ ವಿಕೆಟ್ ಪಡೆಯಬೇಕು ಎಂದು ಬಾಲಿವುಡ್ ನಟ ಸೈಫ್ ಅಲಿ ಖಾನ್ ಆಸೆ ವ್ಯಕ್ತಪಡಿಸಿದ್ದಾರೆ.

  'ವಿಕ್ರಂ ವೇದ' ಹಿಂದಿ ರಿಮೇಕ್ : ಒಬ್ಬರು ಸ್ಟಾರ್, ಮತ್ತೊಬ್ಬರು ಸೂಪರ್ ಸ್ಟಾರ್'ವಿಕ್ರಂ ವೇದ' ಹಿಂದಿ ರಿಮೇಕ್ : ಒಬ್ಬರು ಸ್ಟಾರ್, ಮತ್ತೊಬ್ಬರು ಸೂಪರ್ ಸ್ಟಾರ್

  ಎರಡನೇ ಟಿ-ಟ್ವೆಂಟಿ ಪಂದ್ಯದ ಬಳಿಕ ಚಹಾಲ್ ಮತ್ತು ಮಾರ್ಟಿನ್ ಗಪ್ಟಿಲ್ ನಡುವಿನ ಸಂಭಾಷಣೆ ಸನ್ನಿವೇಶ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿತ್ತು. ನೇರ ಪ್ರಸಾರದಲ್ಲೇ ಚಹಾಲ್ ಗೆ ಗಪ್ಟಿಲ್ ಅವಾಚ್ಯವಾಗಿ ಸಂಬೋಧಿಸಿದ್ದು, ಈ ವಿಡಿಯೋ ವೈರಲ್ ಆಗಿತ್ತು.

  ಮತ್ತೆ ಗುಡ್ ನ್ಯೂಸ್ ಕೊಡ್ತಾರಾ ಕರೀನಾ ಕಪೂರ್ ಖಾನ್.?ಮತ್ತೆ ಗುಡ್ ನ್ಯೂಸ್ ಕೊಡ್ತಾರಾ ಕರೀನಾ ಕಪೂರ್ ಖಾನ್.?

  ಹಾಗಾಗಿ, ಗಪ್ಟಿಲ್ ವಿಕೆಟ್ ಚಹಾಲ್ ಪಡೆದರೆ ಮಜಾ ಇರುತ್ತೆ ಎಂದು ಸೈಫಿ ಅಭಿಪ್ರಾಯಪಟ್ಟಿದ್ದಾರೆ. ಅಂದ್ಹಾಗೆ, ಚಹಾಲ್ ಗೆ ಗಪ್ಟಿಲ್ ಅವಾಚ್ಯ ಶಬ್ದ ಬಳಸಿದ್ದು ಗಂಭೀರವಾಗಲ್ಲ. ಅದು ಅಕಸ್ಮಾತ್ ಆಗಿ. ರೋಹಿತ್ ಶರ್ಮಾ ಮತ್ತು ಗಪ್ಟಿಲ್ ಸಂಭಾಷಣೆಯಲ್ಲಿ ತೊಡಗಿದ್ದರು. ಈ ವೇಳೆ ಆಂಕರ್ ಕೈಯಿಂದ ಮೈಕ್ ಪಡೆದುಕೊಂಡ ಚಹಾಲ್, ''ವಾಟ್ಸಾಪ್ ಬಾಯ್ಸ್ ಎಂದು ಹೇಳಿಕೊಂಡು ಅವರ ಬಳಿ ಹೋದರು. ಅಷ್ಟರಲ್ಲಿ, ಗಪ್ಟಿಲ್ ಕ್ಯಾರೆ ಗಾಂ....' ಎಂದರು. ಬಹುಶಃ ಆ ಪದದ ಅರ್ಥವೇನು ಎಂಬುದು ಕೂಡ ಗಪ್ಟಿಲ್ ಗೆ ಗೊತ್ತಿಲ್ಲ. ರೋಹಿತ್ ಶರ್ಮಾ ಹೇಳಿಕೊಟ್ಟಿರಬೇಕು ಎನ್ನಲಾಗಿದೆ. ಆದರೂ ಇದು ಕಾಮಿಡಿಗೆ ಆಗಿದ್ದು.

  ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಮನ್ಸೂರ್ ಅಲಿ ಖಾನ್ ಪಟೌಡಿ ಅವರ ಮಗ ಸೈಫಿ ಅಲಿ ಖಾನ್. ಕ್ರಿಕೆಟ್ ಕುಟುಂಬದ ಸೆಲೆಬ್ರಿಟಿ ಆಗಿರುವ ಸೈಫ್ ತಮ್ಮ ಮುಂದಿನ ಚಿತ್ರವನ್ನು ಸ್ಟಾರ್ ಸ್ಫೋರ್ಟ್ಸ್ ವಾಹಿನಿಯಲ್ಲಿ ಪ್ರಚಾರ ಮಾಡಿದ್ದಾರೆ. ಈ ಸಂದರ್ಭದಲ್ಲಿ ಗಪ್ಟಿಲ್ ವಿಕೆಟ್ ಚಹಾಲ್ ಪಡೆಯಬೇಕು ಎಂದು ಹೇಳಿದ್ದಾರೆ.

  English summary
  Yuzvendra Chahal to take martin guptill wicket in 3rd T20 match said bollywood actor saif ali khan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X