Don't Miss!
- News
ಕೂತಹಲ ಮೂಡಿಸಿದೆ ಈಶ್ವರಪ್ಪ ಸಿಎಂ ಭೇಟಿ; ನನಗೆ ಸಚಿವ ಸ್ಥಾನ ಬೇಡ- ಈಶ್ವರಪ್ಪ ಅಸಮಾಧಾನಕ್ಕೆ ಕಾರಣವೇನು?
- Finance
Adani Stocks: ಅದಾನಿ ಸಂಸ್ಥೆ ಮೌಲ್ಯ ಅರ್ಧದಷ್ಟು ಇಳಿಕೆ, 108 ಬಿಲಿಯನ್ ಡಾಲರ್ ನಷ್ಟ
- Technology
ನಿಮ್ಮ ರಕ್ಷಣೆಗೆ ನೆರವಾಗಲಿವೆ ಈ ಗ್ಯಾಜೆಟ್ಗಳು; ಮಹಿಳೆಯರಿಗಂತೂ ಅಗತ್ಯ!
- Automobiles
ಮಾರುತಿ, ಟಾಟಾ ಕಾರುಗಳ ಪ್ರಾಬಲ್ಯದ ನಡುವೆ ದಾಖಲೆ ಮಟ್ಟದ ಮಾರಾಟವಾದ ಹ್ಯುಂಡೈ ಕ್ರೆಟಾ
- Sports
ಸ್ಪಿನ್ನರ್ಗಳ ವಿರುದ್ಧ ಪರದಾಡುವ ಕೊಹ್ಲಿಗೆ ಆಸಿಸ್ ಸರಣಿಗೂ ಮುನ್ನ ಪಠಾಣ್ 'ಆಕ್ರಮಣಕಾರಿ' ಸಲಹೆ!
- Lifestyle
ಗಂಡಾಗಿ ಬದಲಾಗಿದ್ದ ಮಂಗಳಮುಖಿ ಜಿಹಾದ್ ಈಗ ಗರ್ಭಿಣಿ: 8 ತಿಂಗಳ ಗರ್ಭಿಣಿ ಈ ಜಿಹಾದ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕೇಸರಿ ಬಿಕಿನಿ ವಿವಾದ: ಕೇಸರಿ ಬಣ್ಣ ಹಿಂದೂಗಳದ್ದೇ ಅಲ್ಲ ಇವರದ್ದು ಎಂದ ಚೇತನ್ ಅಹಿಂಸಾ!
ವಿವಾದಗಳ ಗೂಡಾಗಿರುವ ಬಾಲಿವುಡ್‌ಗೆ ಹೊಸದಾಗಿ ಬಿಕಿನಿ ವಿವಾದವೊಂದು ಸೇರ್ಪಡೆಗೊಂಡಿದೆ. ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ನಟನೆಯ ಪಠಾಣ್ ಚಿತ್ರದ ಬೇಷರಂ ರಂಗ್ ಹಾಡು ಈಗ ದೊಡ್ಡ ವಿವಾದವನ್ನು ಎಬ್ಬಿಸಿದೆ. ಈ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ತೊಟ್ಟಿದ್ದಾರೆ ಹಾಗೂ ಕೇಸರಿ ಬಣ್ಣದ ಬಗ್ಗೆ ನಾಚಿಕೆಗೇಡು ಎಂಬ ಅರ್ಥ ಬರುವಂತೆ ಹಾಡಿನಲ್ಲಿ ಸಾಹಿತ್ಯ ಬರೆಯಲಾಗಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ಹಿಂದೂ ಪರ ಹೋರಾಟಗಾರರು ಆಕ್ರೋಶ ಹೊರಹಾಕಿದ್ದಾರೆ.
ಇನ್ನು ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಹಾಕಿದ್ದರೆ, ಶಾರುಖ್ ಖಾನ್ ಕಡುಹಸಿರು ಬಣ್ಣದ ಬಟ್ಟೆ ತೊಟ್ಟಿದ್ದಾರೆ ಎಂದೂ ಸಹ ಹಲವರು ಆರೋಪಿಸಿದ್ದು ಇದು ಹಿಂದೂ ಧರ್ಮಕ್ಕೆ ಮಾಡಿರುವ ಅವಮಾನ ಎಂದು ಕಿಡಿಕಾರಿದ್ದಾರೆ. ಈ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಕೆಲವರು ಇದು ಬೇಕಂತಲೇ ಮಾಡಿರುವ ಕೆಲಸ ಎನ್ನುತ್ತಿದ್ದರೆ, ಇನ್ನೂ ಕೆಲವರು ಈ ಹಿಂದೆಯೇ ಹಲವಾರು ನಟಿಯರು ಈ ರೀತಿ ಕೇಸರಿ ಬಣ್ಣದ ಬಿಕಿನಿ ಧರಿಸಿ ಕುಣಿದಿದ್ದಾರೆ, ಆಗ ಇಲ್ಲದಿದ್ದ ವಿವಾದ ಈಗ ಏಕೆ ಎಂದು ಆರೋಪಗಳ ವಿರುದ್ಧ ಮಾತನಾಡಿದ್ದಾರೆ.
ಇನ್ನು ಚರ್ಚೆಗಳು ಹೆಚ್ಚಾಗುತ್ತಿದ್ದಂತೆ ಈ ಕುರಿತಾಗಿ ಇದೀಗ ಚಂದನವನದ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಕೂಡ ಪ್ರತಿಕ್ರಿಯಿಸಿದ್ದಾರೆ. ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ನಟ ಚೇತನ್ ಅಹಿಂಸಾ ಬಿಕಿನಿ ವಿವಾದದ ಬಗ್ಗೆ ಬರೆದುಕೊಂಡು ಬಣ್ಣದ ರಾಜಕೀಯ ಶುರುವಾಗಿದೆ ಎಂದಿದ್ದಾರೆ.

ಚೇತನ್ ಕೇಸರಿ ಬಿಕಿನಿ ವಿವಾದದ ಬಗ್ಗೆ ಕಿಡಿಕಾರಿದ್ದು ಹೀಗೆ
ನಟ ಚೇತನ್ ಅಹಿಂಸಾ "'ಪಠಾಣ್' ಚಿತ್ರದ ಹಾಡು ಈಗ ಅದರ ಕೇಸರಿ ಬಿಕಿನಿ ಮತ್ತು ಹಸಿರು ಶರ್ಟ್ ಕಾರಣದಿಂದ ರಾಜಕೀಯಗೊಳ್ಳುತ್ತಿದೆ. ಬಟ್ಟೆಯ ಬಣ್ಣದ ಕಾರಣಕ್ಕೆ ವ್ಯಕ್ತಿಸುತ್ತಿರುವ ವಿರೋಧವು ಬಹಳ ಕ್ಷುಲ್ಲಕವಾಗಿದೆ ಬುದ್ಧ ಮತ್ತು ಬಸವನವರ ಬಣ್ಣವಾದ ಕೇಸರಿಯನ್ನು ಹಿಂದುತ್ವವು ತನ್ನದಾಗಿಸಿಕೊಳ್ಳುತ್ತಿದೆ ಪ್ರಕೃತಿ ಮತ್ತು ರೈತರ ಸಂಕೇತವಾದ ಹಸಿರು ಬಣ್ಣವು ಇಸ್ಲಾಮೀಕರಣಗೊಳ್ಳುತ್ತಿದೆ. ಮಾಡಬೇಕೆಂದೇ ಮಾಡುತ್ತಿರುವ ವಿವಾದವಿದು" ಎಂದು ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಕೇಸರಿ ಬಣ್ಣ ಹಿಂದೂಗಳದ್ದಲ್ಲ
ಇನ್ನು ಹಿಂದೂ ಧರ್ಮಕ್ಕೂ ಮುನ್ನ ಆದಿವಾಸಿಗಳಿದ್ದರು, ಹಿಂದೂ ಧರ್ಮ ನಂತರ ಬಂದದ್ದು ಎಂದು ಹಲವಾರು ಬಾರಿ ಕಿಡಿಕಾರಿರುವ ಚೇತನ್ ಅಹಿಂಸಾ ಈ ಪೋಸ್ಟ್‌ನಲ್ಲಿಯೂ ಸಹ ಕೇಸರಿ ಬಣ್ಣ ಹಿಂದೂ ಧರ್ಮದ್ದಲ್ಲ ಎಂದು ಬರೆದುಕೊಂಡಿದ್ದಾರೆ. ಬುದ್ಧ ಹಾಗೂ ಬಸವಣ್ಣವನರ ಬಣ್ಣವಾದ ಕೇಸರಿಯನ್ನು ಹಿಂದುತ್ವ ತನ್ನದಾಗಿಸಿಕೊಳ್ಳುತ್ತಿದೆ ಎಂದು ಉಲ್ಲೇಖಿಸಿ ಹಿಂದೂ ಧರ್ಮದವರು ಕೇಸರಿ ಬಣ್ಣವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

ವಿವಾದದ ಬಗ್ಗೆ ಶಾರುಖ್ ಪ್ರತಿಕ್ರಿಯೆ ಏನು?
ಇಷ್ಟೆಲ್ಲಾ ವಿವಾದಕ್ಕೆ ಒಳಗಾಗಿರುವ ತಮ್ಮ ಪಠಾಣ್ ಚಿತ್ರದ ಬೇಷರಂ ರಂಗ್ ಹಾಡಿನ ಬಗ್ಗೆ ಶಾರುಖ್ ಖಾನ್ ಕೊಲ್ಕತ್ತಾ ಫಿಲ್ಮ್ ಫೆಸ್ಟಿವಲ್ ಕಾರ್ಯಕ್ರಮದಲ್ಲಿ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ. ಕೆಲವರು ಚಿತ್ರದ ಬಗ್ಗೆ ನೆಗೆಟಿವ್ ಹರಡುತ್ತಿದ್ದಾರೆ, ಯಾರು ಏನೇ ಮಾನತಾಡಿದರೂ ತಲೆ ಕೆಡಿಸಿಕೊಳ್ಳುವುದಿಲ್ಲ, ಪಾಸಿಟಿವ್ ಆಗಿ ಯೋಚಿಸುವ ನಾನು, ನೀವು ಹಾಗೂ ಹಲವಾರು ಮಂದಿ ಜೀವಂತವಾಗಿದ್ದೇವೆ ಎಂದು ಶಾರುಖ್ ಖಾನ್ ಹೇಳಿಕೆ ನೀಡಿದ್ದಾರೆ.