For Quick Alerts
  ALLOW NOTIFICATIONS  
  For Daily Alerts

  'ಚಪಾಕ್' ಸಿನಿಮಾದ ಫಸ್ಟ್ ಲುಕ್ ನಲ್ಲಿ ದೀಪಿಕಾ

  |

  ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತೊಂದು ಸವಾಲಿನ ಪಾತ್ರವನ್ನು ಸ್ವೀಕರಿಸಿದ್ದಾರೆ. ಆಸಿಡ್ ದಾಳಿಗೆ ಒಳಗಾಗಿದ್ದ ಲಕ್ಷ್ಮಿ ಅಗರ್ವಾಲ್ ಅವರ ಪಾತ್ರದಲ್ಲಿ ನಟಿಸಲು ಸಿದ್ಧರಾಗಿದ್ದಾರೆ.

  ಲಕ್ಷ್ಮಿ ಅಗರ್ವಾಲ್ ಅವರ ಜೀವನ ಕುರಿತು ಬಾಲಿವುಡ್ ನಲ್ಲಿ ಸಿನಿಮಾ ತಯಾರಾಗುತ್ತಿದೆ. ಈ ಸಿನಿಮಾಗೆ 'ಚಪಾಕ್' ಎಂದು ಹೆಸರಿಡಲಾಗಿದೆ. ಇಂದು ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ.

  ವರ್ಷದ ನಂತರ ಸವಾಲಿನ ಪಾತ್ರದ ಮೂಲಕ ಬಂದ ದೀಪಿಕಾ

  ಚಿತ್ರದ ಮೊದಲ ನೋಟ ಭರವಸೆ ಹುಟ್ಟಿಸಿದೆ. ಸಿನಿಮಾ ಕೂಡ ಒಳ್ಳೆಯ ರೀತಿಯಲ್ಲಿ ಮೂಡಿಬರಬಹುದು ಎಂಬ ನಂಬಿಕೆಯನ್ನು ಹುಟ್ಟುಹಾಕಿದೆ. ಲಕ್ಷ್ಮಿ ಪಾತ್ರದಲ್ಲಿ ನಟಿಸಿರುವ ದೀಪಿಕಾ ಪಡುಕೋಣೆ ಅವರಿಗೆ ದೊಡ್ಡ ಪ್ರಶಂಸೆ ವ್ಯಕ್ತವಾಗುತ್ತಿದೆ.

  ಈ ಸಿನಿಮಾದ ಫಸ್ಟ್ ಲುಕ್ ಅನ್ನು ದೀಪಿಕಾ ಪಡುಕೋಣೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮಾಲ್ಟಿ ಎಂಬ ಪಾತ್ರದಲ್ಲಿ ದೀಪಿಕಾ ನಟಿಸುತ್ತಿದ್ದಾರೆ. ಇಂದಿನಿಂದ ಚಿತ್ರದ ಶೂಟಿಂಗ್ ಶುರು ಆಗುತ್ತಿದೆ.

  15 ವರ್ಷ ಇರುವಾಗ ಲಕ್ಷ್ಮಿ ಅಗರ್ವಾಲ್ ಆಸಿಡ್ ದಾಳಿಗೆ ಒಳಗಾದರು. ಅವರಿಗೆ ಪರಿಚಯ ಇದ್ದ ವ್ಯಕ್ತಿಯೇ ಮುಖಕ್ಕೆ ಆಸಿಡ್ ಹಾಕಿದ. ಆ ಪಾಪಿ ಮಾಡಿದ ಕೆಲಸಕ್ಕೆ ಲಕ್ಷ್ಮಿ ನೋವು ಅನುಭವಿಸಿದರು. ಆದರೆ, ನಂತರ ತನ್ನ ರೀತಿಯಲ್ಲಿ ಆಸಿಡ್ ದಾಳಿಗೆ ಒಳಗಾದವರ ವಿರುದ್ಧ ಹೋರಾಡಲು ಶುರು ಮಾಡಿದರು.

  ಇಂತಹ ಕಥೆಗೆ ನಿರ್ದೇಶಕಿ ಮೇಘನಾ ಗುಲ್ಜಾರ್ ಸಿನಿಮಾ ರೂಪ ನೀಡುತ್ತಿದ್ದಾರೆ. ಈ ಚಿತ್ರದ ಮೂಲಕ ಒಂದು ಒಳ್ಳೆಯ ಸಂದೇಶ ನೀಡುತ್ತಿದ್ದಾರೆ. ಫಾಕ್ಸ್ ಸ್ಟಾರ್ ಸ್ಟುಡಿಯೊ ಜೊತೆಗೆ ಸೇರಿ ದೀಪಿಕಾ ಕೂಡ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. 2020ರ ಜನವರಿ 10 ರಂದು ಸಿನಿಮಾ ಬಿಡುಗಡೆಯಾಗಲಿದೆ.

  English summary
  'Chhapaak' hindi movie first look released. The movie is about acid attack victim Lakshmi Agarwal. 'Chhapaak' is directed by Meghna Gulzar, it will releasing on 2020 January 10th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X