twitter
    For Quick Alerts
    ALLOW NOTIFICATIONS  
    For Daily Alerts

    ಆಸ್ಕರ್‌ಗೆ ಆಯ್ಕೆಯಾದ 'ಚೆಲ್ಲೊ ಶೋ' ಭಾರತದ ಸಿನಿಮಾ ಅಲ್ಲ: ಆರೋಪ

    |

    ಆಸ್ಕರ್ 2023 ಕ್ಕೆ ಭಾರತದಿಂದ ಗುಜರಾತಿ ಸಿನಿಮಾ 'ಚೆಲ್ಲೊ ಶೋ' ಅನ್ನು ಎಫ್‌ಎಫ್‌ಐನ ಜ್ಯೂರಿಗಳು ಆಯ್ಕೆ ಮಾಡಿದ್ದಾರೆ. ಆದರೆ ಜ್ಯೂರಿಗಳ ಆಯ್ಕೆಯ ಬಗ್ಗೆ ಅಸಮಾಧಾನ ಎದ್ದಿದೆ.

    'RRR' ಸಿನಿಮಾದ ಬದಲಿಗೆ 'ಚೆಲ್ಲೊ ಶೋ' ಸಿನಿಮಾವನ್ನು ಆಸ್ಕರ್‌ಗೆ ಆಯ್ಕೆ ಮಾಡಿರುವ ಬಗ್ಗೆ ಈಗಾಗಲೇ ಹಲವರು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು ಆಯ್ಕೆ ಮಾಡಬೇಕಿತ್ತು ಎಂದು ಸಹ ವಾದಿಸಿದ್ದಾರೆ.

    ಈ ನಡುವೆ ಎಫ್‌ಎಫ್‌ಐ ಆಯ್ಕೆ ಮಾಡಿರುವ 'ಚೆಲ್ಲೊ ಶೋ' ಸಿನಿಮಾ ಭಾರತದ್ದೇ ಅಲ್ಲ ಎಂಬ ಆರೋಪ ಇದೀಗ ಕೇಳಿ ಬಂದಿದೆ. ಫೆಡರೇಶನ್ ಆಫ್ ವೆಸ್ಟರ್ನ್ ಸಿನಿ ಎಂಪ್ಲಾಯ್ಸ್ (ಎಫ್‌ಡಬ್ಲುಐಸಿಇ) ಸಂಘವು 'ಚೆಲ್ಲೊ ಶೋ' ಭಾರತದ ಸಿನಿಮಾ ಅಲ್ಲ. ಎಫ್‌ಎಫ್‌ಐನ ಆಸ್ಕರ್‌ಗೆ ಸಿನಿಮಾ ಆರಿಸುವ ಜ್ಯೂರಿ ತಂಡದಲ್ಲಿದ್ದ ಅನೇಕರು 'ಚೆಲ್ಲೊ ಶೋ' ಸಿನಿಮಾವನ್ನೇ ನೋಡಿಲ್ಲ ಎಂದು ಸಹ ಸಂಘವು ಆರೋಪ ಮಾಡಿದೆ.

    ''ಚೆಲ್ಲೊ ಶೋ' ಸಿನಿಮಾ ಭಾರತದ ಸಿನಿಮಾ ಅಲ್ಲ. ಆಸ್ಕರ್‌ಗೆ ಈ ಸಿನಿಮಾವನ್ನು ಕಳಿಸಿದ ವಿಧಾನದಲ್ಲಿ ತಪ್ಪುಗಳಾಗಿವೆ. ಹಲವು ಅಪ್ಪಟ ಭಾರತೀಯ ಸಿನಿಮಾಗಳು ರೇಸ್‌ನಲ್ಲಿದ್ದವು, 'ದಿ ಕಾಶ್ಮೀರ್ ಫೈಲ್ಸ್', 'RRR' ಅಂಥಹಾ ಸಿನಿಮಾಗಳನ್ನು ಆಸ್ಕರ್‌ಗೆ ಕಳಿಸಬಹುದಿತ್ತು'' ಎಂದಿದ್ದಾರೆ ಎಫ್‌ಡಬ್ಲುಐಸಿಇ ನ ಅಧ್ಯಕ್ಷ ಬಿ.ಎನ್.ತಿವಾರಿ.

    Chhello Show Is Not An Indian Movie Still It Selected For Oscars: FWICE

    ಸಿನಿಮಾಗಳನ್ನು ಆಯ್ಕೆ ಮಾಡುವ ಜ್ಯೂರಿ ಸಮಿತಿಯಲ್ಲಿ ಕೆಲವು ಸದಸ್ಯರು ವರ್ಷಾನುಗಟ್ಟಲೆಯಿಂದ ಅಲ್ಲಿಯೇ ಇದ್ದಾರೆ. ಅವರು ಸಿನಿಮಾಗಳನ್ನೂ ನೋಡದೆ ವೋಟಿಂಗ್ ಮಾಡುತ್ತಾರೆ. ಸಿನಿಮಾಗಳ ಬಗ್ಗೆ ರೀ ವೋಟಿಂಗ್ ಆಗಬೇಕಿದೆ. ಈ ರೀತಿ ತಪ್ಪು ಮಾರ್ಗದಲ್ಲಿ ಸಿನಿಮಾವನ್ನು ಆಸ್ಕರ್‌ಗೆ ಕಳಿಸಿದರೆ ಅದರ ಪರಿಣಾಮ ಇಡೀಯ ಚಿತ್ರರಂಗದ ಮೇಲಾಗುತ್ತದೆ'' ಎಂದಿದ್ದಾರೆ ಬಿ.ಎನ್.ತಿವಾರಿ.

    ಒಟ್ಟು ಹದಿನೇಳು ಜನರಿದ್ದ ಜ್ಯೂರಿಗಳ ತಂಡವು ಆಸ್ಕರ್‌ಗೆ ಕಳಿಸಲು ಸಿನಿಮಾವನ್ನು ಆಯ್ಕೆ ಮಾಡುವ ಕಾರ್ಯವನ್ನು ಮಾಡಿದೆ. ಅದರಲ್ಲಿ 13 ಮಂದಿ 'ಚೆಲ್ಲೊ ಶೋ' ಸಿನಿಮಾವನ್ನು ಆಸ್ಕರ್‌ಗೆ ಕಳಿಸಬೇಕೆಂದು ಮತ ಚಲಾಯಿಸಿದ್ದರು.

    ಆಯ್ಕೆ ಸಮಿತಿಯ ಮುಖ್ಯಸ್ಥರಾಗಿರುವ ಟಿಎಸ್ ನಾಗಾಭರಣ ಮಾತನಾಡಿ, ''ಆಸ್ಕರ್‌ಗೆ ಆಯ್ಕೆ ಆಗಲು ಸಿನಿಮಾದ ಜನಪ್ರಿಯತೆ, ಮನರಂಜನಾ ಮೌಲ್ಯ, ಮಾಸ್ ರೀಚ್ ಅಥವಾ ಕಲೆಕ್ಷನ್ ಅಂಕಿಅಂಶಗಳು ಮಾತ್ರ ಮಾನದಂಡ ಆಗುವುದಿಲ್ಲ? 'ಚೆಲ್ಲೊ ಶೋ' ಸಿನಿಮಾ ಕಲಾತ್ಮಕ ಅಂಶಗಳಿರುವ ಸ್ಪೂರ್ತಿದಾಯಕ ಸಿನಿಮಾ. ಹಾಗಾಗಿ ಅದು ಆಯ್ಕೆ ಆಗಿದೆ'' ಎಂದಿದ್ದಾರೆ.

    English summary
    FWICE alleged that Gujarati movie Chhello Show is not an Indian movie still FFI jury selected the movie for Oscars.
    Saturday, September 24, 2022, 9:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X