For Quick Alerts
  ALLOW NOTIFICATIONS  
  For Daily Alerts

  ಸೆಟ್‌ನಲ್ಲಿ ಶಾರುಖ್ ಖಾನ್ ಕೆನ್ನೆಗೆ ಬಾರಿಸಿದ್ದರು ಈ ಮಹಿಳೆ

  |

  ಶುಕ್ರವಾರ ಮಧ್ಯರಾತ್ರಿ ಹೃದಯಾಘಾತದಿಂದ ನಿಧನರಾದ ಹಿರಿಯ ನೃತ್ಯ ಸಂಯೋಜಕಿ ಸರೋಜ್ ಖಾನ್ ಅವರಿಗೆ ಬಾಲಿವುಡ್‌ನಲ್ಲಿ ಅಪಾರ ಗೌರವವಿತ್ತು. ಹಿರಿಯ ಕಲಾವಿದರು, ನಿರ್ದೇಶಕರು, ನಿರ್ಮಾಪಕರು ಸರೋಜ್ ಕಾನ್ ಅವರ ಮಾತಿಗೆ ಮನ್ನಣೆ ನೀಡುತ್ತಿದ್ದರು. ನೃತ್ಯದ ವಿಚಾರದಲ್ಲಿ ಅವರಿಗೆ ಅಷ್ಟು ಅನುಭವ ಮತ್ತು ಪರಿಣತಿ ಇತ್ತು. ಚಿತ್ರರಂಗದಲ್ಲಿ ನಟಿಯರ ಹೊರತಾಗಿ ಬೇರೆ ವಿಭಾಗಗಳಲ್ಲಿ ಮಹಿಳೆಯರು ಅಷ್ಟಾಗಿ ತೊಡಗಿಸಿಕೊಳ್ಳದ ಕಾಲದಲ್ಲಿ ಚಿತ್ರರಂಗದಲ್ಲಿ ತಮ್ಮದೇ 'ಹೆಜ್ಜೆ' ಗುರುತು ಮೂಡಿಸಿದವರು ಸರೋಜ್ ಖಾನ್.

  Shivarajkumar,ಶಿವರಾಜ್ ಕುಮಾರ್ ತಮ್ಮ ಹುಟ್ಟುಹಬ್ಬಕ್ಕೆ ಈ ಬಾರಿ ಏನು ಮಾಡಲಿದ್ದಾರೆ ಗೊತ್ತೇ | Filmibeat Kannada

  ಬಹುತೇಕ ತಾರೆಯರು ಸರೋಜ್ ಖಾನ್ ಅವರ ಜತೆ ಕೆಲಸ ಮಾಡಿದ್ದಾರೆ. ಅಭಿನಯ, ಸಾಹಸ ಸನ್ನಿವೇಶಗಳಷ್ಟೇ ಚಿತ್ರರಂಗದಲ್ಲಿ ನೃತ್ಯವೂ ಮುಖ್ಯ. ಹಾಡುಗಳು ಮತ್ತು ಅದಕ್ಕೆ ಸಂಯೋಜಿಸುವ ನೃತ್ಯ ಬಲುಬೇಗ ಜನರನ್ನು ತಲುಪುತ್ತವೆ. ಹೀಗಾಗಿ ನೃತ್ಯ ಸಂಯೋಜನೆ ಅತ್ಯಂತ ಸವಾಲಿನ ಕೆಲಸವೂ ಹೌದು. ನೃತ್ಯ ಬಾರದವರನ್ನೂ ನರ್ತಿಸುವಂತೆ ಮಾಡುವ, ಅವರಿಗೆ ನೃತ್ಯ ಕಲಿಸುವ ಜವಾಬ್ದಾರಿ ಈ ನೃತ್ಯ ನಿರ್ದೇಶಕರ ಮೇಲೆ ಇರುತ್ತದೆ.

  ಬಾಲಿವುಡ್‌ನ ಹಿರಿಯ ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ ನಿಧನಬಾಲಿವುಡ್‌ನ ಹಿರಿಯ ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ ನಿಧನ

  ಸಿನಿಮಾ ವಿಷಯಕ್ಕೆ ಬಂದಾಗ ಸರೋಜ್ ಖಾನ್ ಅದ್ಭುತ ಸಂಯೋಜಕಿಯಷ್ಟೇ ಅಲ್ಲ, ಅಷ್ಟೇ ಕಠಿಣ ಶಿಕ್ಷಕಿ ಕೂಡ. ಅವರಿಂದ ಪೆಟ್ಟು ತಿಂದು ಪಾಠ ಕಲಿಸಿದ ಘಟನೆಯನ್ನು ನಟ ಶಾರುಖ್ ಖಾನ್ ನೆನಪಿಸಿಕೊಂಡಿದ್ದಾರೆ. ಮುಂದೆ ಓದಿ..

  ಮೂರು ಪಾಳಿಗಳಲ್ಲಿ ಕೆಲಸ

  ಮೂರು ಪಾಳಿಗಳಲ್ಲಿ ಕೆಲಸ

  'ಚಿತ್ರರಂಗಕ್ಕೆ ಬಂದ ಆರಂಭದ ದಿನಗಳಲ್ಲಿ ಮೂರು ಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದೆ. ನಿರಂತರ ಚಿತ್ರೀಕರಣದಲ್ಲಿ ಭಾಗವಹಿಸಿ ಕುರ್ಚಿಯಲ್ಲಿ ಕುಳಿತ ಕೂಡಲೇ ಅಲ್ಲೇ ಮಲಗಿಬಿಡುತ್ತಿದ್ದೆ. ಆ ಸಮಯದಲ್ಲಿ ಸರೋಜ್ ಖಾನ್ ಅವರೊಂದಿಗೆ ಕೆಲಸ ಮಾಡಬೇಕಿತ್ತು ಎಂದು ಹಳೆಯ ಸಂದರ್ಶನವೊಂದರಲ್ಲಿ ಶಾರುಖ್ ಹೇಳಿಕೊಂಡಿದ್ದರು.

  ಕೆನ್ನೆಗೆ ಬಾರಿಸಿದ್ದರು

  ಕೆನ್ನೆಗೆ ಬಾರಿಸಿದ್ದರು

  'ಸರೋಜ್‌ ಜಿ ನನಗೆ ಬಹಳ ಸುಸ್ತಾಗಿದೆ. ಬಹಳ ಕೆಲಸ ಇದೆ ಎಂದು ಹೇಳಿದೆ. ಅವರು ಅಮ್ಮನಂತೆಯೇ ನನ್ನನ್ನು ನೋಡುತ್ತಿದ್ದರು. ನನ್ನ ಕೆನ್ನೆಗೆ ಒಂದು ಬಾರಿಸಿದರು. ಬಳಿಕ, 'ಅತಿಯಾದ ಕೆಲಸ ಇದೆ ಎಂದು ಎಂದಿಗೂ ದೂರು ಹೇಳಿಕೊಳ್ಳಬೇಡ. ಈ ಕಾರ್ಯ ಕ್ಷೇತ್ರದಲ್ಲಿ ಎಂದಿಗೂ ವಿಪರೀತ ಕೆಲಸ ಇರುವುದಿಲ್ಲ. ನಾನು ಆಯ್ಕೆ ಮಾಡಿಕೊಂಡ ಕ್ಷೇತ್ರದ ಬಹಳ ಅದೃಷ್ಟಕರ ಎಂದು ಭಾವಿಸಿದ್ದೇನೆ. ಏಕೆಂದರೆ ಇಲ್ಲಿ ಹೆಚ್ಚು ಒತ್ತಡವಿಲ್ಲ' ಎಂದು ತಾಯಿಯ ಪ್ರೀತಿಯಲ್ಲಿ ಹೇಳಿದ್ದರು' ಎಂಬುದನ್ನು ಶಾರುಖ್ ನೆನಪಿಸಿಕೊಂಡಿದ್ದರು.

  ನನ್ನ ಗಂಡ ನೆಪೋಟಿಸಂ ಬಲಿಪಶು: ಕರಣ್, ಶಾರುಖ್ ವಿರುದ್ಧ ನಟ ಇಂದರ್ ಕುಮಾರ್ ಪತ್ನಿ ಆರೋಪನನ್ನ ಗಂಡ ನೆಪೋಟಿಸಂ ಬಲಿಪಶು: ಕರಣ್, ಶಾರುಖ್ ವಿರುದ್ಧ ನಟ ಇಂದರ್ ಕುಮಾರ್ ಪತ್ನಿ ಆರೋಪ

  ನನ್ನ ಮೊದಲ ನೈಜ ಶಿಕ್ಷಕಿ

  ನನ್ನ ಮೊದಲ ನೈಜ ಶಿಕ್ಷಕಿ

  ಸರೋಜ್ ಖಾನ್ ನಿಧನಕ್ಕೆ ಶಾರುಖ್ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ. 'ಚಿತ್ರರಂಗದ ನನ್ನ ಮೊದಲ ನೈಜ ಶಿಕ್ಷಕಿ. ಸಿನಿಮಾ ನೃತ್ಯದೊಳಗೆ ಹೇಗೆ ಮುಳುಗಬೇಕು ಎಂಬುದನ್ನು ಗಂಟೆಗಟ್ಟಲೆ ಅವರು ಹೇಳಿಕೊಟ್ಟಿದ್ದರು. ನಾನು ಭೇಟಿ ಮಾಡಿ ಅತ್ಯಂತ ಪ್ರೀತಿಸುವ, ಕಾಳಜಿ ತೋರುವ ಮತ್ತು ಸ್ಫೂರ್ತಿದಾಯಕ ವ್ಯಕ್ತಿಗಳಲ್ಲಿ ಒಬ್ಬರು' ಎಂದು ಶಾರುಖ್ ಹೇಳಿದ್ದಾರೆ.

  ಅವಕಾಶ ಕಳೆದುಕೊಂಡಿದ್ದ ಸರೋಜ್

  ಅವಕಾಶ ಕಳೆದುಕೊಂಡಿದ್ದ ಸರೋಜ್

  ದುರಂತವೆಂದರೆ ಅದ್ಭುತ ಹಾಡುಗಳಿಗೆ ನೃತ್ಯ ಸಂಯೋಜಿಸುವ ಮೂಲಕ ಮನೆ ಮಾತಾಗಿದ್ದ ಸರೋಜ್ ಖಾನ್, ಕಾಲಕ್ರಮೇಣ ಆಧುನಿಕ ಬಾಲಿವುಡ್‌ನ ಅಬ್ಬರದ ಸಿನಿಮಾಗಳಲ್ಲಿ ಅವಕಾಶ ವಂಚಿತರಾಗತೊಡಗಿದ್ದರು. ಅದನ್ನು ಕಳೆದ ವರ್ಷ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಅವರಿಗೆ ತಮ್ಮ ಮುಂದಿನ ಸಿನಿಮಾದಲ್ಲಿ ಕೆಲಸ ನೀಡುವುದಾಗಿ ಸಲ್ಮಾನ್ ಖಾನ್ ಭರವಸೆ ನೀಡಿದ್ದರಂತೆ.

  ಮಾತು ತಪ್ಪದವರು

  ಮಾತು ತಪ್ಪದವರು

  'ನಾವು ಒಮ್ಮೆ ಭೇಟಿಯಾದಾಗ ಈ ದಿನಗಳಲ್ಲಿ ಏನು ಮಾಡುತ್ತಿದ್ದೀರಿ ಎಂದು ಸಲ್ಮಾನ್ ಖಾನ್ ಕೇಳಿದ್ದರು. ನನಗೆ ಯಾವುದೇ ಕೆಲಸ ಇಲ್ಲ. ಹೀಗಾಗಿ ಯುವ ನಟಿಯರಿಗೆ ಭಾರತೀಯ ಶಾಸ್ತ್ರೀಯ ನೃತ್ಯ ಕಲಿಸಿಕೊಡುತ್ತಿದ್ದೇನೆ ಎಂದಿದ್ದೆ. ಅದನ್ನು ಕೇಳಿದ್ದ ಅವರು, ಮುಂದೆ ನೀವು ನನ್ನ ಜತೆ ಕೆಲಸ ಮಾಡುತ್ತೀರಿ ಎಂದಿದ್ದರು. ಅವರು ಮಾತು ತಪ್ಪದ ವ್ಯಕ್ತಿ. ಅವರ ಮಾತನ್ನು ಉಳಿಸಿಕೊಳ್ಳುತ್ತಾರೆ' ಎಂದು ಸರೋಜ್ ಹೇಳಿದ್ದರು.

  ಶಾರುಖ್ ಖಾನ್ ತದ್ರೂಪಿ ವ್ಯಕ್ತಿ ಚಿತ್ರರಂಗದಲ್ಲಿ ಸಂಪಾದಿಸುವುದೆಷ್ಟು ಗೊತ್ತೇ?ಶಾರುಖ್ ಖಾನ್ ತದ್ರೂಪಿ ವ್ಯಕ್ತಿ ಚಿತ್ರರಂಗದಲ್ಲಿ ಸಂಪಾದಿಸುವುದೆಷ್ಟು ಗೊತ್ತೇ?

  ಈಗಿನ ನಟಿಯರಿಗೆ ಸಾಧ್ಯವಾಗಲಿಲ್ಲ

  ಈಗಿನ ನಟಿಯರಿಗೆ ಸಾಧ್ಯವಾಗಲಿಲ್ಲ

  'ನಾನೆಷ್ಟು ಜನಪ್ರಿಯಳಾಗಿದ್ದೆ ಎಂದರೆ ನಟಿಯರು ನನಗಾಗಿ ಕಿತ್ತಾಡುತ್ತಿದ್ದರು. ಆದರೆ ಈಗ ಸಮಯ ಹೇಗಾಗಿದೆ ಎಂದರೆ ಯಾರಿಗೂ ನಾನು ಬೇಡವಾಗಿದ್ದೇನೆ. ನೃತ್ಯದಲ್ಲಿ ನನ್ನದು ಬಹಳ ಚುರುಕಾದ ಚಲನೆ. ಇಂದಿನ ಕಾಲದ ನಟಿಯರಿಗೆ ಅದು ಬಹಳ ಕಷ್ಟವೆನಿಸುತ್ತಿದೆ' ಎಂದು ಹೇಳಿದ್ದರು.

  English summary
  Demised choreographer Saroj Khan when slapped Shah Rukh Khan for complaining about having too much work.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X