Just In
Don't Miss!
- News
ಮೈಸೂರು ಕಾಂಗ್ರೆಸ್ ಬಿಕ್ಕಟ್ಟು; ಡಿಕೆಶಿ ಭೇಟಿಗೆ ತನ್ವೀರ್ ಸೇಠ್ಗೆ ಕರೆ!
- Automobiles
ಒಕಿ100 ಎಲೆಕ್ಟ್ರಿಕ್ ಬೈಕ್ ಟೀಸರ್ ಚಿತ್ರ ಬಿಡುಗಡೆ ಮಾಡಿದ ಒಕಿನಾವ
- Education
RBI Grade B Admit Card 2021: ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Sports
ಟೀಮ್ ಇಂಡಿಯಾದ ಆಲ್ರೌಂಡರ್ ಯೂಸುಫ್ ಪಠಾಣ್ ನಿವೃತ್ತಿ ಘೋಷಣೆ
- Lifestyle
ಮಕ್ಕಳಿಗೆ ಪಿಸ್ತಾ ನೀಡಿದರೆ ಬುದ್ಧಿ ಶಕ್ತಿ ಹೆಚ್ಚುವುದರ ಜೊತೆಗೆ ಈ ಪ್ರಯೋಜನಗಳಿವೆ
- Finance
ಷೇರುಪೇಟೆಯಲ್ಲಿ ರಕ್ತದೋಕುಳಿ: ಸೆನ್ಸೆಕ್ಸ್ 1900 ಪಾಯಿಂಟ್ಸ್ ಕುಸಿತ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಹಾಸ್ಯ ಮಾಡಿದ ಕಮಿಡಿಯನ್ ವಿರುದ್ಧ ದೂರು
ಖ್ಯಾತ ಕಮಿಡಿಯನ್ ಶಾಮ್ ರಂಗೀಲಾ ವಿರುದ್ಧ ದೂರು ದಾಖಲಾಗಿದೆ. ನರೇಂದ್ರ ಮೋದಿ ಅವರ ಇಮಿಟೇಶನ್ ಮಾಡುವುದರಿಂದ ಖ್ಯಾತಿ ಗಳಿಸಿರುವ ಶ್ಯಾಮ್ ರಂಗೀಲಾ ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಹಾಸ್ಯ ವಿಡಿಯೋ ಒಂದು ಮಾಡಿದ್ದರು. ಇದರಿಂದಾಗಿ ಇಕ್ಕಟ್ಟಿಗೆ ಸಿಲುಕಿದ್ದಾರೆ ಶ್ಯಾಮ್ ರಂಗೀಲಾ.
ಶ್ಯಾಮ್ ರಂಗೀಲಾ ಅವರು ಪೆಟ್ರೋಲ್ ಬಂಕ್ ನಲ್ಲಿ ನಿಂತು ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಮೋದಿ ಶೈಲಿಯಲ್ಲಿ ಭಾಷಣ ಮಾಡಿ ಅದನ್ನು ಯೂಟ್ಯೂಬ್, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ.
ರಾಜಸ್ಥಾನದ ಶ್ರೀಗಂಗಾನಗರದ ಪೆಟ್ರೋಲ್ ಬಂಕ್ ಒಂದರಲ್ಲಿ ನಿಂತು ಶ್ಯಾಮ್ ರಂಗೀಲಾ ಈ ವಿಡಿಯೋ ಮಾಡಿದ್ದು, ಪೆಟ್ರೋಲ್ ಪಂಪ್‌ನ ಏಜೆನ್ಸಿಯವರು, ಆ ಪೆಟ್ರೋಲ್ ಪಂಪ್ ಮಾಲೀಕನಿಗೆ ರಂಗೀಲಾ ವಿರುದ್ಧ ದೂರು ನೀಡುವಂತೆ ಸೂಚಿಸಿರುವ ಕಾರಣ ಪೆಟ್ರೋಲ್ ಬಂಕ್ ಮಾಲೀಕ ಸುರೇಂದ್ರ ಅಗರ್ವಾಲ್ ಸದಾರ್ ಪೊಲೀಸ್ ಠಾಣೆಯಲ್ಲಿ ಶ್ಯಾಮ್ ರಂಗೀಲ ವಿರುದ್ಧ ದೂರು ದಾಖಲಿಸಿದ್ದಾರೆ.
'ಮೇರೆ ಪ್ಯಾರೆ ದೇಶ್ ವಾಸಿಯೋ, ಇಂದು ರಾಜಸ್ಥಾನದ ಶ್ರೀಗಂಗಾನಗರದ ಜನರ ಎದೆ ಹೆಮ್ಮೆಯಿಂದ ಉಬ್ಬಿದೆ, ಕಾರಣ ನಾನು ಪೆಟ್ರೋಲ್‌ಗೆ ಇಂದು ಅದರ ನಿಜವಾದ ಮೌಲ್ಯವನ್ನು ದೊರಕಿಸಿಕೊಟ್ಟಿದ್ದೇನೆ. ಇಂದು ಇಲ್ಲಿ ಪೆಟ್ರೋಲ್ ಲೀಟರ್‌ಗೆ 100 ರೂ. ಆಗಿದೆ ಇಲ್ಲಿಯವರೆಗೆ ಯಾವ ಸರ್ಕಾರವೂ ಸಹ ಪೆಟ್ರೋಲ್‌ಗೆ ಅದರ ನಿಜವಾದ ಮೌಲ್ಯವನ್ನು ಕೊಡಿಸಿರಲಿಲ್ಲ, ಪೆಟ್ರೋಲ್‌ಗೆ ಅದರ ನಿಜವಾದ ಹಕ್ಕನ್ನು ನಾವು ಕೊಡಿಸಿದ್ದೇವೆ' ಎಂದು ತಮ್ಮ ಹಾಸ್ಯ ವಿಡಿಯೋನಲ್ಲಿ ಮೋದಿ ಶೈಲಿಯಲ್ಲಿ ಹೇಳಿದ್ದಾರೆ ಶ್ಯಾಮ್ ರಂಗೀನಾ.
'ಪೆಟ್ರೋಲ್ ಬೆಲೆಯನ್ನು ನೋಡಿ ಹೆಮ್ಮೆ ಪಡುವ ಅವಕಾಶ ಶ್ರೀಗಂಗಾನಗರಕ್ಕೆ ಮಾತ್ರವಲ್ಲ ದೇಶದ ಎಲ್ಲ ನಗರಗಳಿಗೂ ಕಲ್ಪಿಸುತ್ತೇನೆ. ದೇಶದ ಏಳಿಗೆಗಾಗಿ ನಾನು ಪೆಟ್ರೋಲ್ ಬೆಲೆ ಏರಿಸಿದ್ದೇನೆ, ಇದಕ್ಕೆ ನಿಮ್ಮ ಬೆಂಬಲ ಬೇಕಿದೆ. ಈ ಬಾರಿ ನೀವು ಬೆಂಬಲ ಕೊಟ್ಟಿರೆಂದರೆ ಮುಂದೆ ಡೀಸೆಲ್ ಅನ್ನೂ ದೇಶದ ಹಿತಕ್ಕಾಗಿ ನೂರು ರೂಪಾಯಿಗೆ ಸಿಗುವಂತೆ ನಾನು ಮಾಡುತ್ತೇನೆ' ಎಂದು ತಮಾಷೆಯಾಗಿ ಹೇಳಿದ್ದಾರೆ ಶ್ಯಾಮ್ ರಂಗೀಲಾ.
ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಮೋದಿ ಶೈಲಿಯ ಭಾಷಣ ಮಾಡಿದ ಶ್ಯಾಮ್ ರಂಗೀಲಾ ವಿಡಿಯೋದ ಅಂತ್ಯದಲ್ಲಿ ಸೈಕಲ್ ಏರಿ, ಮೋದಿ ಶೈಲಿಯಲ್ಲಿ ಕೈ ಬೀಸುತ್ತಾ ಹೋಗುತ್ತಾರೆ. ಈ ಹಾಸ್ಯಮಯ ವಿಡಿಯೋ ವಿರುದ್ಧ ಈಗ ದೂರು ದಾಖಲಾಗಿದೆ. ದೂರು ದಾಖಲಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಶ್ಯಾಮ್ ರಂಗೀಲಾ, 'ನಾನು ಸುಳ್ಳು ಹೇಳಿಲ್ಲ' ಎಂದಿದ್ದಾರೆ.
ಇತ್ತೀಚೆಗೆ ಸಾಕಷ್ಟು ಕಮಿಡಿಯನ್‌ಗಳ ಮೇಲೆ ವಿವಿಧ ರೀತಿಯ ಪ್ರಕರಣಗಳು ದಾಖಲಾಗಿವೆ. ಕೆಲವೇ ದಿನಗಳ ಹಿಂದೆ ಸ್ಟ್ಯಾಂಡಪ್ ಕಮಿಡಿಯನ್ ಮುನಾವರ್ ಫಾರುಖಿಯನ್ನು ಪೊಲೀಸರು ಬಂಧಿಸಿದ್ದರು. ಹಲವು ದಿನಗಳ ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.
ಕುನಾಲ್ ಕಾಮ್ರಾ, ವೀರ್ ದಾಸ್, ಕೆನ್ನಿ ಸೆಬಾಸ್ಟಿಯನ್, ವರುಣ್ ಗ್ರೋವರ್ ಅವರುಗಳ ವಿರದ್ದವೂ ಪ್ರಕರಣಗಳು ದಾಖಲಾಗಿವೆ. ವಿಮಾನದಲ್ಲಿ ಅರ್ನಬ್ ಗೋಸ್ವಾಮಿಯನ್ನು ಪ್ರಶ್ನೆ ಮಾಡಿದ್ದಕ್ಕೆ ಕುನಾಲ್ ಕಾಮ್ರಾ ಅನ್ನು ಹಲವು ವಿಮಾನಯಾನ ಸಂಸ್ಥೆಗಳು ಬ್ಯಾನ್ ಮಾಡಿದ ಘಟನೆಯೂ ನಡೆದಿದೆ.