For Quick Alerts
  ALLOW NOTIFICATIONS  
  For Daily Alerts

  ಮತ್ತೊಂದು ಸಂಕಷ್ಟದಲ್ಲಿ 'ಲಾಲ್ ಸಿಂಗ್ ಚಡ್ಡ': ಧಾರ್ಮಿಕ ಭಾವನೆಗೆ ಧಕ್ಕೆ, ಸೈನ್ಯಕ್ಕೆ ಅಪಮಾನ ಆರೋಪ

  |

  ಆಮಿರ್ ಖಾನ್-ಕರೀನಾ ಕಪೂರ್ ನಟನೆಯ 'ಲಾಲ್ ಸಿಂಗ್ ಚಡ್ಡ' ಸಿನಿಮಾ ನಿರೀಕ್ಷಿತ ಓಪನಿಂಗ್ ಪಡೆದುಕೊಳ್ಳುವಲ್ಲಿ ವಿಫಲವಾಗಿದೆ.

  ಸಿನಿಮಾ ಬಿಡುಗಡೆಗೆ ಮುಂಚಿನಿಂದಲೂ ಪ್ರತಿಭಟನೆಗೆ, ಬಾಯ್ ಕಾಟ್ ಟ್ರೆಂಡ್ ಗೆ ಕಾರಣವಾಗಿದ್ದ ಈ ಸಿನಿಮಾ ಬಿಡುಗಡೆಯ ಬಳಿಕವೂ ವಿವಾದಗಳಿಗೆ ಈಡಾಗಿದೆ.

  ದೆಹಲಿ ಮೂಲದ ವಕೀಲ ವಿನೀತ್ ಜಿಂದಾಲ್, ಸಿನಿಮಾದ ವಿರುದ್ಧ ಪ್ರಕರಣ ದಾಖಲಿಸಿದ್ದು, ಆಮಿರ್ ಖಾನ್ ರ ಈ ಸಿನಿಮಾ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದೂ ಭಾರತೀಯ ಸೇನೆಗೆ ಅಪಮಾನ ಎಸಗಿದೆ ಎಂದು ಆರೋಪಿಸಿದ್ದಾರೆ.

  ಸಿನಿಮಾದಲ್ಲಿ ಮಾನಸಿಕ‌ ಅಸ್ವಸ್ಥ ವ್ಯಕ್ತಿಯೊಬ್ಬ ಸೈನ್ಯಕ್ಕೆ ಸೇರಿ ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗುವಂತೆ ಚಿತ್ರಿಸಲಾಗಿದೆ. ಫಿಟ್ ಆಗಿರುವ, ಮಾನಸಿಕ ಸ್ವಸ್ಥವಾಗಿರುವ ವ್ಯಕ್ತಿಗಳನ್ನಷ್ಟೆ ಯುದ್ಧಕ್ಕೆ ಕಳಿಸಲಾಗುತ್ತದೆ. ಯುದ್ಧಕ್ಕೆ ಕಳಿಸುವ ಸೈನಿಕರನ್ನು ತರಬೇತುಗೊಳಿಸಲಾಗುತ್ತದೆ. ಆದರೆ ಸಿನಿಮಾ ಮಾಡಿರುವವರು ತಪ್ಪು ಮಾಹಿತಿ ನೀಡುವ ಮೂಲಕ ಸೈನ್ಯಕ್ಕೆ ಅಪಮಾನ ಎಸಗಿದ್ದಾರೆ ಎಂದಿದ್ದಾರೆ ದೂರು ದಾರ ವಕೀಲ ವಿನೀತ್ ಜಿಂದಾಲ್.

  ಸಿನಿಮಾದಲ್ಲಿ ಧಾರ್ಮಿಕ ಭಾವನೆಗಳಿಗೂ ಧಕ್ಕೆ ತರಲಾಗಿದೆ ಎಂದು ಆರೋಪಿಸಲಾಗಿದ್ದು, ಸಿನಿಮಾದಲ್ಲಿ ಬರುವ ದೃಶ್ಯವೊಂದರಲ್ಲಿ, ಪಾಕಿಸ್ತಾನಿ ಸೈನ್ಯದ ಆಧಿಕಾರಿಯೊಬ್ಬ ಸಿನಿಮಾದ ನಾಯಕ ಲಾಲ್ ಅನ್ನು ಕುರಿತಂತೆ, 'ನೀನೇಕೆ ಯಾವ ದೇವರಿಗೂ ಪ್ರಾರ್ಥನೆ ಮಾಡುವುದಿಲ್ಲ' ಎಂದು ಕೇಳುತ್ತಾನೆ. ಅದಕ್ಕೆ ಉತ್ತರಿಸುವ ಲಾಲ್, 'ಅಮ್ಮ ಹೇಳಿದ್ದಾಳೆ, ಪೂಜೆ ಪುನಸ್ಕಾರಗಳೆಲ್ಲವೂ ಮಲೇರಿಯಾ ಇದ್ದಂತೆ, ಅವು ಗಲಭೆ ಹತ್ತಿಸುತ್ತವೆ' ಎನ್ನುತ್ತಾನೆ.

  ಈ ಹೇಳಿಕೆಯು ಜಾತ್ಯತೀತ ಪ್ರಜಾಪ್ರಭುತ್ವ ರಾಷ್ಟ್ರದ ಸಿದ್ಧಾಂತಕ್ಕೆ ವಿರುದ್ಧವಾಗಿದೆ. ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ಯುದ್ಧವನ್ನು ನಡೆಸುವ ಮತ್ತು ದ್ವೇಷವನ್ನು ಸಕ್ರಿಯಗೊಳಿಸುವ ಉದ್ದೇಶವನ್ನು ಇದು ತೋರಿಸುತ್ತದೆ ಮತ್ತು ಭಾರತೀಯ ಸೇನೆಯ ವಿರುದ್ಧ ಕಿಡಿಗೇಡಿತನ ಪ್ರದರ್ಶಿಸಿರುವುದು ಸಹ ದೇಶದ ಕಾನೂನಿನ ಪ್ರಕಾರ ಕ್ರಿಮಿನಲ್ ಅಪರಾಧವಾಗಿದೆ ಎಂದಿದ್ದಾರೆ.

  ಆಮಿರ್ ಖಾನ್, ಪ್ಯಾರಾಮೌಂಟೆನ್ ನಿರ್ಮಾಣ ಸಂಸ್ಥೆ ಹಾಗೂ ನಿರ್ದೇಶಕ ಅದ್ವೈತ್ ಚಂದನ್ ವಿರುದ್ಧ ಕೋಮುಗಳ ನಡುವೆ ದ್ವೇಷ ಬಿತ್ತಲು ಯತ್ನ, ಗಲಭೆ ಹುಟ್ಟುಹಾಕುವ ಯತ್ನ, ಧಾರ್ಮಿಕ ಭಾವನೆಗೆ ಧಕ್ಕೆ ಆರೋಪದಡಿ ಎಫ್ ಐಆರ್ ದಾಖಲಿಸುವಂತೆ ವಕೀಲ ವಿನೀತ್ ಜಿಂದಾಲ್ ದೆಹಲಿ ಪೊಲೀಸ್ ಆಯುಕ್ತ ಅಂಜಯ್ ಅರೋರಾಗೆ ದೂರು ನೀಡಿದ್ದಾರೆ.

  ಆಮಿರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡ ಸಿನಿಮಾ ಆಗಸ್ಟ್ 11 ರಂದು ಬಿಡುಗಡೆ ಆಗಿದೆ. ಸಿನಿನಾದಲ್ಲಿ ಆಮಿರ್ ಖಾನ್, ಕರೀನಾ ಕಪೂರ್, ನಾಗ ಚೈತನ್ಯ ಇತರರು ನಟಿಸಿದ್ದಾರೆ. ಸಿನಿಮಾದಲ್ಲಿ ಶಾರುಕ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.

  English summary
  A Delhi based lawyer gave complaint on Aamir Khan and team of Laal Singh Chaddha movie for hurting religious sentiment and disrespecting Army.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X