For Quick Alerts
  ALLOW NOTIFICATIONS  
  For Daily Alerts

  ಗೋವಾದಲ್ಲಿ ರಾಜಕೀಯ ತಿರುವು ಪಡೆದ ಪೂನಂ ಪಾಂಡೆ ಅಸಭ್ಯ ವಿಡಿಯೋ

  |

  ನಟಿ ಮತ್ತು ಮಾಡೆಲ್ ಪೂನಂ ಪಾಂಡೆಯ ವಿವಾದಾತ್ಮಕ ವಿಡಿಯೋ ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ಇತ್ತೀಚಿಗೆ ಹಾಟ್ ನಟಿ ಪೂನಂ ಪಾಂಡೆ ಗೋವಾದ ಕಾನಕೋಣದ ಚಾಪೋಲಿ ಡ್ಯಾಮ್ ಬಳಿ ಅಸಭ್ಯವಾಗಿ ವಿಡಿಯೋ ಶೂಟ್ ಮಾಡಿಸಿದ್ದರು. ಈ ವಿಡಿಯೋ ಗೋವಾ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

  ಅಶ್ಲೀಲ ವಿಡಿಯೋ, ಫೊಟೊ ಶೂಟ್ ಗಳಿಂದಲೇ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಮಾದಕ ನಟಿ ಪೂನಂ ಪಾಂಡೆ ತಿಂಗಳ ಹಿಂದೆ ಗೋವಾದ ಕಾನಕೋಣಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕಾನಕೋಣದ ವಿವಿಧ ಬೀಚ್ ಗಳಲ್ಲಿ ತಿರುಗಾಡಿ ಫೊಟೊ ಶೂಟ್ ಮಾಡಸಿಕೊಂಡಿದ್ದಾರೆ. ಈ ಫೊಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ನಡುವೆ ಚಾಪೋಲಿ ಡ್ಯಾಮ್ ಬಳಿ ಅಸಭ್ಯ ವಿಡಿಯೋವನ್ನು ಮಾಡಿದ್ದಾರೆ. ಈ ವಿಡಿಯೋ ಗೋವಾದಲ್ಲಿ ರಾಜಕೀಯ ತಿರುವು ಪಡೆದುಕೊಂಡಿದೆ. ಮುಂದೆ ಓದಿ...

  ಕಿತ್ತಾಡಿಕೊಂಡು ಠಾಣೆ ಮೆಟ್ಟಿಲೇರಿದ್ದ ಪೂನಂ ಪಾಂಡೆ ದಂಪತಿ ಈಗ ಮತ್ತೆ ಒಂದು!ಕಿತ್ತಾಡಿಕೊಂಡು ಠಾಣೆ ಮೆಟ್ಟಿಲೇರಿದ್ದ ಪೂನಂ ಪಾಂಡೆ ದಂಪತಿ ಈಗ ಮತ್ತೆ ಒಂದು!

  ವಿವಾದಕ್ಕೆ ಕಾರಣವಾದ ಪೂನಂ ಪಾಂಡೆ ಬೆತ್ತಲೆ ವಿಡಿಯೋ

  ವಿವಾದಕ್ಕೆ ಕಾರಣವಾದ ಪೂನಂ ಪಾಂಡೆ ಬೆತ್ತಲೆ ವಿಡಿಯೋ

  ಪೂನಂ ಪಾಂಡೆ ಬೆತ್ತಲೆಯಾಗಿರುವ ಒಂದು ನಿಮಿಷದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ಥಳೀಯರು ಹಾಗೂ ವಿರೋಧ ಪಕ್ಷಗಳು ಗೋವಾ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ. ನಿರ್ಬಂಧಿತ ಪ್ರದೇಶದಲ್ಲಿ ವಿಡಿಯೋ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಟ್ಟ ಸರ್ಕಾರದ ವಿರುದ್ಧ ವಿರೋಧ ಪಕ್ಷದವರು ಟೀಕಾಪ್ರಹಾರ ನಡೆಸುತ್ತಿದ್ದಾರೆ.

  ಗೋವಾ ಫಾರ್ವರ್ಡ್ ಪಾರ್ಟಿಯಿಂದ ದೂರು ದಾಖಲು

  ಗೋವಾ ಫಾರ್ವರ್ಡ್ ಪಾರ್ಟಿಯಿಂದ ದೂರು ದಾಖಲು

  ನಿರ್ಬಂಧಿತ ಪ್ರವೇಶವಾಗಿರುವ ಹಾಗೂ ಸರ್ಕಾರಿ ಆಸ್ತಿಯಾಗಿರುವ ಚಾಪೋಲಿ ಅಣೆಕಟ್ಟಿನ ಬಳಿ ಅಶ್ಲೀಲ ವಿಡಿಯೋ ಚಿತ್ರೀಕರಿಸುರುವ ಕುರಿತು ಗೋವಾ ಫಾರ್ವರ್ಡ್ ಪಾರ್ಟಿ ಪೊಲೀಸ್ ದೂರನ್ನು ಕೂಡ ದಾಖಲಿಸಿದೆ. ಈ ವೀಡಿಯೋ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಉತ್ತೇಜನ ನೀಡುವಂತಿದ್ದು, ಸಂಸ್ಕೃತಿಗೆ ಹೆಸರುವಾಸಿಯಾಗಿರುವ ಕಾನಕೋಣಕ್ಕೆ ಅಪಮಾನವಾಗಿದೆ. ಈ ವಿಡಿಯೋವನ್ನು ಸರ್ಕಾರಿ ಆಸ್ತಿಯಲ್ಲಿ ಹೇಗೆ ಚಿತ್ರೀಕರಿಸಲಾಗಿದೆ ಮತ್ತು ಯಾರ ಅನುಮತಿಯೊಂದಿಗೆ ಚಿತ್ರಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗೋವಾ ಫಾರ್ವರ್ಡ್ ಪಾರ್ಟಿ ನೀಡಿರುವ ದೂರಿನಲ್ಲಿ ವಿವರಿಸಲಾಗಿದೆ.

  ಲವ್ವು, ಮದ್ವೆ, ಗಲಾಟೆ.....ಈಗ ವಿಚ್ಛೇದನಕ್ಕೆ ಮುಂದಾದ ಪೂನಂ ಪಾಂಡೆಲವ್ವು, ಮದ್ವೆ, ಗಲಾಟೆ.....ಈಗ ವಿಚ್ಛೇದನಕ್ಕೆ ಮುಂದಾದ ಪೂನಂ ಪಾಂಡೆ

  ಬಿಜೆಪಿ ರಾಜ್ಯವನ್ನು 'ಅಶ್ಲೀಲ ತಾಣ'ವನ್ನಾಗಿ ಪರಿವರ್ತಿಸಿದೆ

  ಬಿಜೆಪಿ ರಾಜ್ಯವನ್ನು 'ಅಶ್ಲೀಲ ತಾಣ'ವನ್ನಾಗಿ ಪರಿವರ್ತಿಸಿದೆ

  ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದ ಗೋವಾದ ಎಂಟರ್‌ಟೈನ್ ಮೆಂಟ್ ಸೊಸೈಟಿ ಸಾಮಾನ್ಯವಾಗಿ ಇಂಥವುಗಳಿಗೆ ಅನುಮತಿ ನೀಡುತ್ತದೆ. ಚಾಪೋಲಿ ಅಣೆಕಟ್ಟು ಸಚಿವ ಫಿಲಿಪ್ ನೆರಿ ರೊಡ್ರಿಗಸ್ ನೇತೃತ್ವದ ರಾಜ್ಯ ಜಲಸಂಪನ್ಮೂಲ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಕಡಲತೀರಗಳಿಗೆ ಹೆಸರುವಾಸಿಯಾಗಿರುವ ರಾಜ್ಯವನ್ನು ಬಿಜೆಪಿ 'ಅಶ್ಲೀಲ ತಾಣ'ವನ್ನಾಗಿ ಪರಿವರ್ತಿಸಿದೆ ಎಂದು ಗೋವಾ ಫಾರ್ವರ್ಡ್ ಪಕ್ಷದ ಮುಖಂಡ ದುರ್ಗದಾಸ್ ಕಾಮತ್ ಕಿಡಿಕಾರಿದ್ದಾರೆ.

  ಅಣ್ಣನನ್ನು ನೆನೆದು ವೇದಿಕೆ ಮೇಲೆ ಕಣ್ಣೀರಿಟ್ಟ Jote Joteyali ಅನು | Filmibeat Kannada
  ಸರ್ಕಾರದ ವಿರುದ್ಧ ದುರ್ಗದಾಸ್ ಕಾಮತ್ ಕಿಡಿ

  ಸರ್ಕಾರದ ವಿರುದ್ಧ ದುರ್ಗದಾಸ್ ಕಾಮತ್ ಕಿಡಿ

  'ಈ ವಿಡಿಯೋಗೆ ಸಂಬಂಧಿಸಿದಂತೆ ಗೋವಾ ಚಿತ್ರಣವನ್ನು ಕೆಡಿಸುವ ಮುಖ್ಯಮಂತ್ರಿ ಸಾವಂತ್, ಜಲಸಂಪನ್ಮೂಲ ಸಚಿವ ಫಿಲಿಪ್ ನೆರಿ ಮತ್ತು ಪೂನಂ ಪಾಂಡೆ ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು' ಎಂದು ಫಾರ್ವರ್ಡ್ ಪಕ್ಷದ ಮುಖಂಡ ದುರ್ಗದಾಸ್ ಕಾಮತ್ ಒತ್ತಾಯಿಸಿದ್ದಾರೆ. ಅಲ್ಲದೇ ಬಿಜೆಪಿ ನಮ್ಮ ರಾಜ್ಯವನ್ನು 'ಪೋರ್ನ್ ಡೆಸ್ಟಿನೇಶನ್' ಎಂದು ಪ್ರಚಾರ ಮಾಡುತ್ತಿದೆಯೇ? ಕಾಮತ್ ಕಿಡಿಕಾರಿದ್ದಾರೆ.

  English summary
  Goa Forward Party files complaint Against Actress Poonam Pandey for Shooting obscene video at Chapoli Dam.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X