Don't Miss!
- News
ವಿಧಾನಸಭಾ ಚುನಾವಣೆ: ಮತ್ತೆ ರಾಜ್ಯಕ್ಕೆ ಅಮಿತ್ ಶಾ, ಮತ ಬೇಟೆಗೆ ಕುಂದಗೋಳದಲ್ಲಿ ಬೃಹತ್ ಸಾರ್ವಜನಿಕ ಸಭೆ
- Lifestyle
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ? ಈ ಬಗೆಯ ಆಹಾರ ಸೇವನೆ ಒಳ್ಳೆಯದು
- Automobiles
ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- Sports
KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
1947ರಲ್ಲಿ ಸಿಕ್ಕಿದ್ದು ಸ್ವಾತಂತ್ರ್ಯ ಅಲ್ಲ ಭಿಕ್ಷೆ: ಕಂಗನಾ ಹೇಳಿಕೆ ವಿರುದ್ಧ ದೂರು
ಬಾಲಿವುಡ್ ನಟಿ ಕಂಗನಾ ರಣಾವತ್ ಒಂದಲ್ಲ ಒಂದು ವಿವಾದಕ್ಕೆ ಸಿಲುಕುತ್ತಲೇ ಇರುತ್ತಾರೆ. ತನ್ನ ಸಿನಿಮಾದಿಂದ ಎಷ್ಟು ಸದ್ದು ಮಾಡುತ್ತಾರೋ ಅಷ್ಟೇ ವಿವಾದಗಳಿಂದಲೂ ಸದ್ದು ಮಾಡುತ್ತಲೇ ಇರುತ್ತಾರೆ. ಖಾಸಗಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಭಾರತದ ಸ್ವಾತಂತ್ರ್ಯದ ಹೇಳಿಕೆ ನೀಡಿ ವಿವಾದಕ್ಕೆ ಕೇಂದ್ರ ಬಿಂದುವಾಗಿದ್ದಾರೆ.
ಕಂಗನಾ ರಣಾವತ್ ಖಾಸಗಿ ವಾಹಿನಿ ಕಾರ್ಯಕ್ರಮದಲ್ಲಿ 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು, ಸ್ವಾತಂತ್ರ್ಯ ಅಲ್ಲ. ಅದು ಭಿಕ್ಷೆ. ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು 2014ರಲ್ಲಿ" ಎಂದು ವಾದ ಮಂಡಿಸಿದ್ದರು. ಕಂಗನಾ ಕೊಟ್ಟ ಇದೇ ಹೇಳಿಕೆ ವಿರುದ್ಧ ಈಗ ರಾಜಕೀಯ ಪಕ್ಷ ಹಾಗೂ ಮುಖಂಡರು ತಿರುಗಿಬಿದ್ದಿದ್ದಾರೆ. ಕಾಂಟ್ರವರ್ಸಿ ಕ್ವೀನ್ ವಿರುದ್ಧ ದೂರು ಕೂಡ ದಾಖಲಾಗಿದೆ.
|
ಕಂಗನಾ ವಿರುದ್ಧ ಆಮ್ ಆದ್ಮಿ ನಾಯಕಿ ದೂರು
1947ರಲ್ಲಿ ಸಿಕ್ಕಿದ್ದು ಸ್ವಾತಂತ್ರ್ಯ ಅಲ್ಲ ಅದು ಭಿಕ್ಷೆ ಎಂಬ ಕಂಗನಾ ಹೇಳಿಕೆ ವಿರುದ್ಧ ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ. ನಟಿ ಕಂಗನಾ ರಣಾವತ್ ನೀಡಿರುವ ಅವಹೇಳನಕಾರಿ ಹೇಳಿಕೆಗಳನ್ನು ಆಮ್ ಆದ್ಮಿ ರಾಜಕೀಯ ಪಕ್ಷ ಖಂಡಿಸಿದ್ದು, ಕಂಗನಾ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದೆ. ಈ ಬೆನ್ನಲ್ಲೇ ಆಮ್ ಆದ್ಮಿ ಪಾರ್ಟಿಯ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷೆ ಪ್ರೀತಿ ಮೆನನ್ ಎಂಬುವರು ದೂರು ದಾಖಲಿಸಿದ್ದಾರೆ. ಮುಂಬೈ ಪೊಲೀಸರಿಗೆ ದೂರು ನೀಡಿದ್ದು, 504,505 ಹಾಗೂ 124ಎ ಅಡಿಯಲ್ಲಿ ಕೇಸ್ ದಾಖಲಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಪ್ರೀತಿ ಮೆನನ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಕಂಗನಾ ಹೇಳಿಕೆಯನ್ನು ಖಂಡಿಸಿದ್ದ ವರುಣ್ ಗಾಂಧಿ
"ಇದೊಂದು ದೇಶವಿರೋಧಿ ಕೃತ್ಯವಾಗಿದ್ದು, ಇದನ್ನು ಖಂಡಿಸಬೇಕು. ಹಾಗೆ ಮಾಡದಿರುವುದು ರಕ್ತ ಸುರಿಸಿದ ಎಲ್ಲರಿಗೂ ದ್ರೋಹ ಮಾಡಿದಂತಾಗುತ್ತದೆ. ಇದರಿಂದ ನಾವು ಇಂದು ಒಂದು ಸ್ವತಂತ್ರ ರಾಷ್ಟ್ರವಾಗಿ ಬಹು ಎತ್ತರದಲ್ಲಿ ನಿಲ್ಲಬಹುದು. ನಮ್ಮ ಸ್ವಾತಂತ್ರ್ಯ ಚಳವಳಿಯ ತ್ಯಾಗ ಮತ್ತು ಲಕ್ಷಾಂತರ ಜೀವಗಳನ್ನು ಕಳೆದುಕೊಂಡು ಕುಟುಂಬಗಳು ನಾಶವಾದುದನ್ನು ಜನರು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಾಚಿಕೆಯಿಲ್ಲದ ರೀತಿಯಲ್ಲಿ ಅಸಡ್ಡೆ ಅಥವಾ ನಿಷ್ಠುರ ಹೇಳಿಕೆ ನೀಡುವುದನ್ನು ಎಂದು ಕ್ಷಮಿಸಲು ಸಾಧ್ಯವಿಲ್ಲ" ಎಂದು ವರುಣ್ ಗಾಂಧಿ ಕಿಡಿಕಾರಿದ್ದರು.

ವರುಣ್ ಗಾಂಧಿಗೆ ತಿರುಗೇಟು ನೀಡಿದ ಕಂಗನಾ
ಕಂಗನಾ ಟ್ವಿಟರ್ ಅಕೌಂಟ್ ಅನ್ನು ಶಾಶ್ವತವಾಗಿ ನಿಷ್ಕ್ರಿಯಗೊಳಿಸಲಾಗಿದೆ. ಹೀಗಾಗಿ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವರುಣ್ ಗಾಂಧಿ ಹೇಳಿಕೆಗೆ ಕಂಗನಾ ತಿರುಗೇಟು ನೀಡಿದ್ದಾರೆ. "ನಾನು 1857 ರಂದ ಕ್ರಾಂತಿ ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದು ಹೇಳಿದ್ದೆ. ಇದರಿಂದ ಬ್ರಿಟಿಷರ ದ್ವೇಷ ಹಾಗೂ ಕ್ರೌರ್ಯತೆ ಮತ್ತಷ್ಟು ಹೆಚ್ಚಾಗಲು ಕಾರಣವಾಯಿತು ಎಂದಿದ್ದೇನೆ. ಸುಮಾರು ನೂರು ವರ್ಷಗಳ ಬಳಿಕ ಗಾಂಧಿಜಿಯವರ ಭಿಕ್ಷಾ ಪಾತ್ರೆಗೆ ಸ್ವಾತಂತ್ರ ನೀಡಲಾಯಿತು ಎಂದು ಹೇಳಿದ್ದೇನೆ" ಎಂದು ವರುಣ್ ಗಾಂಧಿಗೆ ತಿರುಗೇಟು ನೀಡಿದ್ದಾರೆ.

ಕಾಂಟ್ರವರ್ಸಿ ಕ್ವೀನ್ ಕಂಗನಾ
ಕೆಲವೇ ದಿನಗಳ ಹಿಂದೆ ಕಂಗನಾ ರಣಾವತ್‌ಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಬೆನ್ನಲ್ಲೇ ಖಾಸಗಿ ವಾಹಿನಿ ಸಂವಾದವನ್ನು ಏರ್ಪಡಿಸಿತ್ತು. ಆಲ್ಲಿ ಕಂಗನಾ ಸ್ವಾತಂತ್ರ್ಯದ ಬಗ್ಗೆ ಹೇಳಿಕೆ ನೀಡಿ ಪೇಚಿಗೆ ಸಿಲುಕಿದ್ದಾರೆ. ಅಂದ್ಹಾಗೆ ಕಂಗನಾಗೆ ಈ ವಿವಾದಗಳು ಹೊಸದೇನಲ್ಲ. ಹೃತಿಕ್ ರೋಷನ್‌ನಿಂದ ಶುರುವಾಗಿದ್ದ ಕಂಗಾನ ವಿವಾದ ಇನ್ನೂ ನಿಂತಿಲ್ಲ. ಬಾಲಿವುಡ್ ಡ್ರಗ್ಸ್ ಕೇಸ್, ಸುಶಾಂತ್ ಸಿಂಗ್ ಸಾವುನ್ನೂ ಟೀಕಿಸಿ ಬಾಲಿವುಡ್ ಅನ್ನು ಎದುರು ಹಾಕಿಕೊಂಡಿದ್ದರು. ಇತ್ತೀಚೆಗೆ ತೆರೆಕಂಡ ತಲೈವಾ ಸಿನಿಮಾ ಚಿತ್ರಮಂದಿರ ನೀಡಿಲ್ಲವೆಂದು ಕಿಡಿಕಾರಿದ್ದರು.