For Quick Alerts
  ALLOW NOTIFICATIONS  
  For Daily Alerts

  ಶಿವಲಿಂಗಕ್ಕೆ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು

  |

  ನಟಿ ಸಯೋನಿ ಘೋಷ್ ಎಂಬಾಕೆ ಹಿಂದು ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡರೊಬ್ಬರು ನಟಿಯ ವಿರುದ್ಧ ದೂರು ದಾಖಲಿಸಿದ್ದಾರೆ.

  ಬೆಂಗಾಳಿ ನಟಿಯಾದ ಸಯೋನಿ ಘೋಷ್, ಮಹಿಳೆಯೊಬ್ಬರು ಶಿವಲಿಂಗಕ್ಕೆ ಕಾಂಡೋಮ್ ಧರಿಸುತ್ತಿರುವ ಕಾರ್ಟೂನ್ ಚಿತ್ರವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು. ಈ ಚಿತ್ರ ಹಿಂದುಗಳನ್ನು ಕೆರಳಿಸಿದೆ. ತ್ರಿಪುರಾ ರಾಜ್ಯದ ಮಾಜಿ ರಾಜ್ಯಪಾಲರೂ, ಪಶ್ಚಿಮ ಬಂಗಾಳ ಬಿಜೆಪಿ ಮುಖಂಡರೂ ಆಗಿರುವ ತಥಾಗತ ರಾಯ್ ಅವರು ನಟಿಯ ವಿರುದ್ಧ ದೂರು ಸಲ್ಲಿಸಿದ್ದಾರೆ.

  ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ನಟಿ ಸಯೋನಿ ಘೋಷ್, 'ಆ ಟ್ವೀಟ್ ಆಗಿರುವುದು 2015 ರಲ್ಲಿ ಆ ಸಮಯದಲ್ಲಿ ನನ್ನ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿತ್ತು. ನನ್ನ ಟ್ವಿಟ್ಟರ್ ಖಾತೆ ನನ್ನ ಹಿಡಿತಕ್ಕೆ ದೊರೆತಿದ್ದು ಎರಡು ವರ್ಷಗಳ ನಂತರ. ಹಾಗಾಗಿ ಆ ಟ್ವೀಟ್ ಅನ್ನು ನಾನು ಮಾಡಿಲ್ಲ' ಎಂದಿದ್ದಾರೆ.

  ನನ್ನ ಟ್ವಿಟ್ಟರ್ ಖಾತೆಯು ನನ್ನ ಹಿಡಿತಕ್ಕೆ ಬಂದಾಗ ಹ್ಯಾಕರ್ ಮಾಡಿದ್ದ ಹಲವು ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದೆ. ಆದರೆ ಕೆಲವು ಪೋಸ್ಟ್‌ಗಳು ಕಣ್‌ ತಪ್ಪಿನಿಂದ ಉಳಿದು ಹೋಗಿದ್ದವು. ಅದರಲ್ಲಿ ಈ ಶಿವಲಿಂಗದ ಕಾರ್ಟೂನ್ ಸಹ ಒಂದು. ವಿಷಯವು ಈಗ ನನ್ನ ಗಮನಕ್ಕೆ ಬಂದ ಕೂಡಲೇ ಆ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದೇನೆ ಎಂದಿದ್ದಾರೆ ನಟಿ.

  English summary
  BJP leader Thathagatha Roy filed complaint against Bengali actress Saayoni Ghosh for hurting Hindu sentiment.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X