For Quick Alerts
  ALLOW NOTIFICATIONS  
  For Daily Alerts

  ವಿವಾದಕ್ಕೆ ಕಾರಣವಾಯ್ತು 'ಸಂಜು' ಚಿತ್ರದಲ್ಲಿನ ಟಾಯ್ಲೆಟ್ ಸೀನ್.!

  By Harshitha
  |

  'ಖಳನಾಯಕ್' ಸಂಜಯ್ ದತ್ ಜೀವನವನ್ನಾಧರಿಸಿದ 'ಸಂಜು' ಚಿತ್ರದ ಟ್ರೈಲರ್ ಬಾಲಿವುಡ್ ಅಂಗಳದಲ್ಲಿ ದೊಡ್ಡ ಸಂಚಲನ ಉಂಟು ಮಾಡಿತು. ಈಗ ಅದೇ ಟ್ರೈಲರ್ ನಲ್ಲಿ ಇರುವ ಒಂದು ಅಂಶ ಇದೀಗ ವಿವಾದಕ್ಕೆ ಕಾರಣವಾಗಿದೆ.

  ನಾಯಕ ರಣ್ಬೀರ್ ಕಪೂರ್ ಜೈಲಿನಲ್ಲಿ ಇರುವಾಗ ಟಾಯ್ಲೆಟ್ ನಲ್ಲಿ ಲೀಕೇಜ್ ಆಗುವ ಒಂದು ಸನ್ನಿವೇಶ 'ಸಂಜು' ಚಿತ್ರದ ಟ್ರೈಲರ್ ನಲ್ಲಿದೆ. ಇದೇ ಸೀನ್ ಗೆ ಆಕ್ಷೇಪಣೆ ವ್ಯಕ್ತಪಡಿಸಿ, ಪೃಥ್ವಿ ಮಾಸ್ಕೆ ಎಂಬುವರು ಸಿ.ಬಿ.ಎಫ್.ಸಿ (ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್)ಗೆ ದೂರು ಕೊಟ್ಟಿದ್ದಾರೆ.

  ಬಟಾ ಬಯಲಾಗಲಿದೆ ಸಂಜಯ್ ದತ್ ಬದುಕಿನ ರೋಚಕ ಸತ್ಯಗಳು.! ಬಟಾ ಬಯಲಾಗಲಿದೆ ಸಂಜಯ್ ದತ್ ಬದುಕಿನ ರೋಚಕ ಸತ್ಯಗಳು.!

  ''ನಟ ಸಂಜಯ್ ದತ್ ಜೈಲಿನಲ್ಲಿ ಇರುವ ಟಾಯ್ಲೆಟ್ ಓವರ್ ಫ್ಲೋ ಆಗುವ ಸನ್ನಿವೇಶ 'ಸಂಜು' ಚಿತ್ರದಲ್ಲಿದೆ. ನಮಗೆ ಇರುವ ಮಾಹಿತಿ ಪ್ರಕಾರ, ಪ್ರತಿಯೊಂದು ಸೆಲ್ ನೂ ಸರ್ಕಾರ ಹಾಗೂ ಕಾರಾಗೃಹ ಅಧಿಕಾರಿಗಳು ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ಟಾಯ್ಲೆಟ್ ಲೀಕ್ ಆಗುವ ಘಟನೆಯನ್ನ ನಾವು ಎಲ್ಲಿಯೂ ಕೇಳಿಲ್ಲ. ಗ್ಯಾಂಗ್ ಸ್ಟರ್ ಕುರಿತಾದ ಸಿನಿಮಾಗಳು ಈ ಹಿಂದೆ ಬಿಡುಗಡೆ ಆದಾಗಲೂ, ಕಾರಾಗೃಹದ ಬಗ್ಗೆ ಇಂತಹ ಸೀನ್ ಗಳನ್ನು ಎಲ್ಲಿಯೂ ತೋರಿಸಿಲ್ಲ''

  ''ಟಾಯ್ಲೆಟ್ ಓವರ್ ಫ್ಲೋ ಆಗುವ ಸನ್ನಿವೇಶದಿಂದ ಕಾರಾಗೃಹದ ಅಧಿಕಾರಿಗಳ ಬಗ್ಗೆ ಕೆಟ್ಟ ಸಂದೇಶ ರವಾನೆ ಆಗುತ್ತದೆ. ಈ ಬಗ್ಗೆ ನೀವು ಸೂಕ್ತ ಕ್ರಮ ಕೈಗೊಳ್ಳದೇ ಇದ್ದರೆ, ಬೇರೆ ದಾರಿ ಇಲ್ಲದೆ ಚಿತ್ರ ಬಿಡುಗಡೆಗೆ ತಡೆ ಕೋರಿ ಕೋರ್ಟ್ ಮೊರೆ ಹೋಗುತ್ತೇವೆ'' ಎಂದು ಪೃಥ್ವಿ ಮಾಸ್ಕೆ ಎಂಬುವರು ಸಿ.ಬಿ.ಎಫ್.ಸಿಗೆ ಪತ್ರ ಬರೆದಿದ್ದಾರೆ.

  ಸುನೀಲ್ ದತ್ ಹಾಗೂ ನರ್ಗಿಸ್ ದತ್ ಎಂಬ ಪ್ರಖ್ಯಾತ ತಾರೆಯರ ಪುತ್ರನಾಗಿ ಹುಟ್ಟಿ, ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದು, ನಟನಾಗಿ ವೃತ್ತಿ ಜೀವನ ಆರಂಭಿಸಿದ ಸಂಜಯ್ ದತ್, ಮುಂಬೈ ಸರಣಿ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಜೈಲು ಪಾಲಾದರು.

  ಜೈಲಿನಲ್ಲಿ ನಟ ಸಂಜಯ್ ದತ್ ಕಳೆದ ದಿನಗಳು, ನಟಿಯರ ಜೊತೆಗಿನ ಅವರ ಸಂಬಂಧಗಳು... ಹೀಗೆ ಸಂಜಯ್ ದತ್ ಜೀವನದ ಪ್ರಮುಖ ಘಟ್ಟಗಳೇ 'ಸಂಜು' ಚಿತ್ರದ ಕಥಾಹಂದರ. ಜೂನ್ 29 ರಂದು 'ಸಂಜು' ಸಿನಿಮಾ ಬಿಡುಗಡೆ ಆಗಲಿದೆ.

  English summary
  Prithvi Mhaske has filed a case against Ranbir Kapoor starrer Sanju with the Central Board of Film Certification (CBFC).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X