For Quick Alerts
  ALLOW NOTIFICATIONS  
  For Daily Alerts

  ಕರಣ್ ಜೋಹರ್ ವಿರುದ್ಧ ಕ್ರಮ ಕೈಗೊಳ್ಳದಂತೆ ನ್ಯಾಯಾಲಯ ತಡೆ

  |

  ಪ್ರಕರಣವೊಂದಕ್ಕೆ ಸಂಬಧಿಸಿದಂತೆ ಕರಣ್ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ನ್ಯಾಯಾಲಯವು ರಾಜಸ್ಥಾನ ಸರ್ಕಾರಕ್ಕೆ ಸೂಚಿಸಿದೆ.

  ಕರಣ್ ಜೋಹರ್ ನಡೆಸಿಕೊಡುವ 'ಕಾಫಿ ವಿತ್ ಕರಣ್' ಕಾರ್ಯಕ್ರಮದ ಎಪಿಸೋಡ್ ಒಂದರ ವಿರುದ್ಧ ಹಲವು ತಿಂಗಳ ಹಿಂದೆ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರಣ್ ಜೋಹರ್ ವಿರುದ್ಧ ಕ್ರಮಕ್ಕೆ ರಾಜಸ್ಥಾನ ಪೊಲೀಸರು ಮುಂದಾಗಿದ್ದರು.

  ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಂತರ ರಕ್ಷಣೆಗಾಗಿ ಕರಣ್ ಜೋಹರ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ರಾಜಸ್ಥಾನ ಹೈಕೋರ್ಟ್ ಕರಣ್ ಜೋಹರ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ರಾಜಸ್ಥಾನ ಸರ್ಕಾರಕ್ಕೆ ಸೂಚನೆ ನೀಡಿದೆ.

  ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯಾ ಹಾಗೂ ಕೆ.ಎಲ್.ರಾಹುಲ್ ಭಾಗವಹಿಸಿದ್ದ 'ಕಾಫಿ ವಿತ್ ಕರಣ್' ಕಾರ್ಯಕ್ರಮದ ಕುರಿತಂತೆ ಆ ಇಬ್ಬರು ಕ್ರಿಕೆಟಿಗರು ಹಾಗೂ ಕರಣ್ ಜೋಹರ್ ವಿರುದ್ಧ ರಾಜಸ್ಥಾನದ ಜೋಧ್‌ಪುರದಲ್ಲಿ ಡಿ.ಆರ್.ಮೇಘವಾಲ್ ಎಂಬುವರು ಪ್ರಕರಣ ದಾಖಲಿಸಿದ್ದರು.

  Recommended Video

  ಸದ್ದಿಲ್ಲದೆ ಮುಗಿದುಹೋಯ್ತು ವರುಣ್ ಧವನ್ ಮದುವೆ | Filmibeat Kannada

  ಆ ಎಪಿಸೋಡ್‌ನಲ್ಲಿ ಹಾರ್ದಿಕ್ ಪಾಂಡ್ಯಾ ತನ್ನ 'ಲೈಂಗಿಕ ಸಾಹಸಗಳ' ಬಗ್ಗೆ ಮಾತನಾಡಿದ್ದರು. ಅಷ್ಟೇ ಅಲ್ಲದೆ ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡಿದ್ದರು. ಇದು ಭಾರಿ ವಿವಾದ ಎಬ್ಬಿಸಿತ್ತು. ಇಬ್ಬರೂ ಆಟಗಾರರನ್ನು ವಿಶೇಷವಾಗಿ ಹಾರ್ದಿಕ್ ಪಾಂಡ್ಯಾ ಅನ್ನು ತಂಡದಿಂದ ಹೊರಗೆ ಹಾಕಬೇಕು ಎನ್ನಲಾಗಿತ್ತು. ಬಿಸಿಸಿಐ, ಇಬ್ಬರೂ ಆಟಗಾರರನ್ನು ಕೆಲವು ಪಂದ್ಯಗಳಿಂದ ಅಮಾನತ್ತು ಮಾಡಿತ್ತು.

  English summary
  Rajastan high court stayed to take action against againt Karan Johar in releated to Coffee with Karan case.
  Monday, January 25, 2021, 9:43
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X