»   » 'ದಾವೂದ್' ವಿರುದ್ಧ ಸಿಡಿದೆದ್ದ ನಟಿ ಶ್ರುತಿ ಹಾಸನ್

'ದಾವೂದ್' ವಿರುದ್ಧ ಸಿಡಿದೆದ್ದ ನಟಿ ಶ್ರುತಿ ಹಾಸನ್

Posted By:
Subscribe to Filmibeat Kannada

ರಂಗಾಚಾರಿ ಎಂಬ ತಮಿಳು ನಿರ್ಮಾಪಕರ ಮೇಲೆ ನಟಿ ಶ್ರುತಿ ಹಾಸನ್ ಗರಂ ಆಗಿದ್ದಾರೆ. ಅವರ ವಿರುದ್ಧ ದಾವಾ ಹೂಡಲು ನಿರ್ಧರಿಸಿದ್ದಾರೆ. ಬಾಲಿವುಡ್ ನ 'ಡಿ-ಡೇ' ಚಿತ್ರ ಈಗ ತಮಿಳಿಗೆ 'ದಾವೂದ್' ಎಂಬ ಹೆಸರಿನಲ್ಲಿ ಡಬ್ ಆಗಿ ಬಿಡುಗಡೆಗೆ ಸಿದ್ಧವಾಗಿದೆ. ಆದರೆ ತಮ್ಮ ಅನುಮತಿಯನ್ನು ಪಡೆಯದೆ ಚಿತ್ರವನ್ನು ಡಬ್ ಮಾಡಲಾಗಿದೆ ಎಂದು ಶ್ರುತಿ ಆರೋಪಿಸಿದ್ದಾರೆ.

ಮೂಲ ಚಿತ್ರಕ್ಕೆ ನಿಖಿಲ್ ಅದ್ವಾನಿ ಆಕ್ಷನ್ ಕಟ್ ಹೇಳಿದ್ದರು. ಈ ಚಿತ್ರದಲ್ಲಿ ಶ್ರುತಿ ಹಾಸನ್ ವೇಶ್ಯೆಯ ಪಾತ್ರ ಪೋಷಿಸಿದ್ದರು. ಅರ್ಜುನ್ ರಾಂಪಾಲ್ ಹಾಗೂ ಶ್ರುತಿ ನಡುವಿನ ಹಾಟ್ ಸನ್ನಿವೇಶಗಳು ಚಿತ್ರದಲ್ಲಿ ಬರುತ್ತವೆ. ಈ ಹಾಟ್ ದೃಶ್ಯಗಳಿಂದ ಚಿತ್ರಕ್ಕೆ ಸಾಕಷ್ಟು ಪ್ರಚಾರ ಸಿಕ್ಕಿತ್ತು. ಈಗ ರಂಗಾಚಾರಿ ಇದನ್ನೇ ಎನ್ ಕ್ಯಾಶ್ ಮಾಡಿಕೊಡುತ್ತಿದ್ದಾರೆ. [ಡಿ-ಡೇ ಚಿತ್ರ ವಿಮರ್ಶೆ]


ಈಗ ತಮ್ಮ ಗಮನಕ್ಕೆ ಬರದಂತೆ ಚಿತ್ರವನ್ನು ತಮಿಳಿಗೆ ಡಬ್ ಮಾಡುತ್ತಿರುವುದು ಸರಿಯಲ್ಲ ಎಂಬುದು ಶ್ರುತಿ ಆರೋಪ. ಇದಕ್ಕೆ ಮೂಲ ಚಿತ್ರದ ನಿರ್ದೇಶಕ ನಿಖಿಲ್ ಅದ್ವಾನಿ ಸಹ ಧ್ವನಿಗೂಡಿಸಿದ್ದಾರೆ. ಚಿತ್ರದ ಡಬ್ಬಿಂಗ್ ರೈಟ್ಸ್ ಮಾರಾಟ ಮಾಡಬೇಕಾದರೆ ತಮ್ಮ ಗಮನಕ್ಕೆ ತಂದಿಲ್ಲ. ಈ ವಿಷಯವಾಗಿ ತಮಗೆ ತುಂಬಾ ನೋವುಂಟಾಗಿದೆ ಎಂದಿದ್ದಾರೆ.

ಇದಿಷ್ಟೇ ಅಲ್ಲದೆ ಚಿತ್ರಕ್ಕೆ 'ದಾವೂದ್' ಎಂದು ಹೆಸರಿಟ್ಟಿರುವುದು ಮಿಸ್ ಲೀಡ್ ಮಾಡಿದಂತಾಗುತ್ತದೆ. ಈ ಸಂಬಂಧ ತಾವು ಕಾನೂನು ಮೊರೆ ಹೋಗುತ್ತೇವೆ ಎಂದಿದ್ದಾರೆ. ಡಿ-ಡೇ ಬಗ್ಗೆ ಶ್ರುತಿ ಮಾತನಾಡುತ್ತಾ, "ಕಥೆಗೆ ತಕ್ಕಂತೆ ತಾನು ಆ ರೀತಿಯ ಸನ್ನಿವೇಶದಲ್ಲಿ ಅಭಿನಯಿಸಿದ್ದೇನೆ. ನನ್ನ ಪಾತ್ರ ಸವಾಲಿನಿಂದ ಕೂಡಿತ್ತು. ಕಥೆ ಕೇಳಿದ ಕೂಡಲೆ ತಕ್ಷಣ ಅಂಗೀಕರಿಸಿದೆ" ಎಂದಿದ್ದಾರೆ.

ಡಿ-ಡೇ ಚಿತ್ರದಲ್ಲಿ ಶ್ರುತಿ ಅವರು ಕರಾಚಿಯ ವೇಶ್ಯೆಯಾಗಿ ಕಾಣಿಸಿಕೊಳ್ಳುತ್ತಾರೆ. ಆ ಪಾತ್ರಕ್ಕೆ ಸಾಕಷ್ಟು ಪ್ರಚಾರ ಹಾಗೂ ಮೆಚ್ಚುಗೆಯೂ ವ್ಯಕ್ತವಾಯಿತು. ಈಗ ತಮ್ಮ ಗಮನಕ್ಕೆ ಬಾರದಂತೆ ಚಿತ್ರವನ್ನು ಡಬ್ ಮಾಡಿ ಬಿಡುಗಡೆ ಮಾಡುತ್ತಿರುವ ಬಗ್ಗೆ ಅತ್ತ ನಿರ್ದೇಶಕ ಇತ್ತ ಶ್ರುತಿ ಹಾಸನ್ ವಿರೋಧ ವ್ಯಕ್ತಪಡಿಸಿದ್ದಾರೆ. ಶ್ರುತಿ ಅವರ ಪಾತ್ರ ಚಿತ್ರದಲ್ಲಿ ಸ್ವಲ್ಪ ಸಮಯ ಮಾತ್ರ ಬರುತ್ತದೆ. ಆದರೂ ಎಲ್ಲರಿಗೂ ನೆನಪಿನಲ್ಲಿ ಉಳಿಯುವಂತೆ ಅಭಿನಯಿಸಿರುವುದು ಗಮನಾರ್ಹ.

English summary
Shruti Haasan and Nikhil Advani are both planning to dissociate themselves from DAR Motion Pictures, the producers of D-Day. The film is also being released in Tamil as Dawood. Nikhil, who co-produced the film with the Rangacharis, is upset that the rights of the film were sold without his knowledge. Shruti says she too plans to take action against the makers.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada