»   » ಬಾಕ್ಸ್ ಆಫೀಸ್ ಚಿಂದಿ ಚಿತ್ರಾನ್ನ ಮಾಡಿದ ದಬಾಂಗ್

ಬಾಕ್ಸ್ ಆಫೀಸ್ ಚಿಂದಿ ಚಿತ್ರಾನ್ನ ಮಾಡಿದ ದಬಾಂಗ್

Posted By:
Subscribe to Filmibeat Kannada

ಸಲ್ಮಾನ್ ಖಾನ್ ಹಾಗೂ ಸೋನಾಕ್ಷಿ ಸಿನ್ಹಾ ಅಭಿನಯದ 'ದಬಾಂಗ್ 2' ಚಿತ್ರ ಬಾಕ್ಸ್ ಆಫೀಸ್ ಚಿಂದಿ ಚಿತ್ರಾನ್ನ ಮಾಡಿದೆ. ಎರಡನೇ ವಾರದಲ್ಲೂ ಗಳಿಕೆಯಲ್ಲಿ ಮುನ್ನುಗ್ಗಿದೆ. ಅರ್ಬಾಜ್ ಖಾನ್ ಚೊಚ್ಚಲ ನಿರ್ದೇಶನದ ಈ ರೊಮ್ಯಾಂಟಿಕ್ ಚಿತ್ರ ಹನ್ನೆರಡು ದಿನಗಳಲ್ಲಿ ರು.139.5 ಕೋಟೆ ಕಲೆಕ್ಷನ್ ಮಾಡಿದೆ.

ಚಿತ್ರ ಹೀಗೇ ಮುನ್ನುಗ್ಗಿದರೆ ಎರಡು ವಾರಗಳಲ್ಲಿ ರು.150 ಕೋಟಿ ಮೀರಲಿದೆ ಎನ್ನುತ್ತವೆ ಬಾಕ್ಸ್ ಆಫೀಸ್ ಮೂಲಗಳು. ಚಿತ್ರ ಬಿಡುಗಡೆಯಾದ 10 ದಿನಗಳಲ್ಲಿ ರು.127.78 ಕೋಟಿ ಗಳಿಸಿ 'ದಬಾಂಗ್ 2' ಚಿತ್ರ ಹೊಸ ದಾಖಲೆ ನಿರ್ಮಿಸಿದೆ.

ಇನ್ನು ಚಿತ್ರದ ಸ್ಯಾಟಲೈಟ್ ರೈಟ್ಸ್ ರು. 45 ಕೋಟಿಗೆ ಹಾಗೂ ಆಡಿಯೋ ರೈಟ್ಸ್ ರು.10 ಕೋಟಿಗೆ ಮಾರಾಟವಾಗಿದೆ. ಸರಿಸುಮಾರು ರು.40 ಕೋಟಿ ಬಜೆಟ್ ನಲ್ಲಿ ನಿರ್ಮಿಸಿರುವ ಚಿತ್ರ ನೂರೈವತ್ತು ಕೋಟಿ ಕಲೆಕ್ಷನ್ ಮಾಡುತ್ತಿರುವುದು ಬಾಲಿವುಡ್ ಮಂದಿಯನ್ನು ಅಚ್ಚರಿಗೆ ಗುರಿ ಮಾಡಿದೆ.

ಚುಲ್ ಬುಲ್ ಪಾಂಡೆಯಾಗಿ ಸಲ್ಮಾನ್ ಖಾನ್ ಎಲ್ಲರ ಮನಗೆದ್ದಿದ್ದಾರೆ. ಅವರ ಚಿತ್ರಗಳು ಬಾಕ್ಸ್ ಆಫೀಸಲ್ಲಿ ಕೋಟಿಗಟ್ಟಲೆ ಬಾಚುತ್ತಿದ್ದು ಮತ್ತೊಮ್ಮೆ ಅವರು ಬಾಕ್ಸ್ ಆಫೀಸ್ ಕಿಂಗ್ ಆಗಿ ಹೊರಹೊಮ್ಮಿದ್ದಾರೆ. ಕೇವಲ ದೇಶದ ಬಾಕ್ಸ್ ಆಫೀಸ್ ಅಷ್ಟೇ ಅಲ್ಲದೆ ವಿದೇಶದಲ್ಲೂ ದಬಾಂಗ್ 2 ಚಿತ್ರ ಭರ್ಜರಿ ಗಳಿಕೆ ಮಾಡಿದೆ.

2010ರಲ್ಲಿ ತೆರೆಕಂಡ ದಬಾಂಗ್ ಚಿತ್ರದ ಮುಂದಿನ ಭಾಗವಾಗಿ ದಬಾಂಗ್ 2 ಚಿತ್ರವನ್ನು ನಿರ್ಮಿಸಲಾಗಿದೆ. ವಿನೋದ್ ಖನ್ನಾ, ಪ್ರಕಾಶ್ ರಾಜ್, ಅರ್ಬಾಜ್ ಖಾನ್, ದೀಪಕ್ ದೊಬ್ರಿಯಲ್ ಮುಂತಾದವರು ಅಭಿನಯಿಸಿದ್ದಾರೆ. (ಏಜೆನ್ಸೀಸ್)

English summary
Arbaaz Khan's first directorial venture Dabangg 2 is going rock steady at the Indian Box Office in the second week. The Salman Khan and Sonakshi Sinha starrer is doing very good business on weekdays. And the romantic action flick is expected to cross Rs 150 crore mark by the end of the second week.
Please Wait while comments are loading...