»   » ರಂಜಾನ್ ತಿಂಗಳಲ್ಲಿ ಬಿಕಿನಿ ಅವತಾರ.. 'ದಂಗಲ್' ಫಾತಿಮಾಗೆ ತಂದ ಅವಾಂತರ

ರಂಜಾನ್ ತಿಂಗಳಲ್ಲಿ ಬಿಕಿನಿ ಅವತಾರ.. 'ದಂಗಲ್' ಫಾತಿಮಾಗೆ ತಂದ ಅವಾಂತರ

Posted By:
Subscribe to Filmibeat Kannada

ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಅಭಿನಯದ 'ದಂಗಲ್' ಚಿತ್ರ ಭಾರತದಲ್ಲಿ ತೆರೆಕಂಡು 5 ತಿಂಗಳನ್ನು ಕಂಪ್ಲೀಟ್ ಮಾಡಿದೆ. ಕಳೆದ ತಿಂಗಳಷ್ಟೆ ಚೀನಾದಲ್ಲಿ ತೆರೆಕಂಡ ಈ ಚಿತ್ರ 1000 ಕೋಟಿ ಗೂ ಹೆಚ್ಚು ಬಾಕ್ಸ್ ಆಫೀಸ್ ಗಳಿಕೆಯನ್ನು ಚೀನಾವೊಂದರಲ್ಲಿಯೇ ಪಡೆದಿದೆ.

'ದಂಗಲ್' ಚಿತ್ರದ ದೊಡ್ಡ ಮಟ್ಟದ ಯಶಸ್ಸಿಗೆ ಕೇವಲ ಅಮೀರ್ ಖಾನ್ ಮಾತ್ರವಲ್ಲದೇ ಚಿತ್ರದಲ್ಲಿ ನಟಿಸಿದ ಫಾತಿಮಾ ಸನಾ ಶೇಖ್, ಸಾನ್ಯ ಮಲ್ಹೋತ್ರ, ಜೈರಾ ವಾಸಿಮ್, ಸಾಕ್ಷಿ ತನ್ವರ್ ಮತ್ತು ಇತರರು ಕಾರಣ.

ಅಂದಹಾಗೆ ನಿನ್ನೆಯಷ್ಟೆ ನಟಿ ಫಾತಿಮಾ ಸನಾ ಶೇಖ್ ತಮ್ಮ ಇನ್‌ಸ್ಟಗ್ರಾಂನಲ್ಲಿ ತಮ್ಮ ಹಾಟೆಸ್ಟ್ ಬಿಕಿನಿ ಅವತಾರಗಳನ್ನು ಶೇರ್ ಮಾಡಿದ್ದರು. ಈ ಬಗ್ಗೆ ಫಿಲ್ಮಿಬೀಟ್ ನಲ್ಲಿ ನಾವು ನಿಮಗೆ ತಿಳಿಸಿದ್ವಿ. ಆದರೆ ನಟಿಯ ಮನಮೋಹಕವಾದ ಇದೇ ಬಿಕಿನಿ ಫೋಟೋಗಳಿಗೆ ಈಗ ಹಲವು ಇಸ್ಲಾಮಿಕ್ ಧರ್ಮೀಯರು ಆಕ್ರೋಶ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದ್ದು, ಕೆಂಡಕಾರಿದ್ದಾರೆ. ನಟಿಯ ಬಿಕಿನಿ ಅವತಾರ ಕುರಿತು ಏನೆಲ್ಲಾ ಕಾಮೆಂಟ್ ಮಾಡಿದ್ದಾರೆ ಎಂಬುದನ್ನು ಮುಂದೆ ಓದಿ...

ಫಾತಿಮಾ ಸನಾ ಸೇಖ್ ಬಿಕಿನಿ ಫೋಟೋ

'ದಂಗಲ್' ಚಿತ್ರದ ಗೀತಾ ಪೊಗಟ್ ಪಾತ್ರದಾರಿ ನಟಿ ಫಾತಿಮಾ ಸನಾ ಶೇಖ್ ನಿನ್ನೆಯಷ್ಟೇ ಇನ್‌ಸ್ಟಗ್ರಾಂನಲ್ಲಿ ಅಪ್‌ಲೋಡ್ ಮಾಡಿದ್ದ ಬಿಕಿನಿ ಅವತಾರದ ಫೋಟೋಗಳಿವು. ಅಸಲಿ ಈ ಚಿತ್ರಗಳು 'ಜಿಕ್ಯೂ ಇಂಡಿಯಾ' ನಿಯತಕಾಲಿಕೆಯ ಕವರ್ ಫೋಟೋಗಾಗಿ ನೀಡಿದ್ದ ಪೋಸ್ ಗಳು. ಈ ಚಿತ್ರಗಳಿಗೆ ಈಗ ಇಸ್ಲಾಮಿಕ್ ಧರ್ಮದ ಸ್ವಯಂ ಘೋಷಿತ ಪೋಷಕರು ಕಿಡಿಕಾರಿದ್ದಾರೆ.['ದಂಗಲ್' ಗರ್ಲ್ ಫಾತಿಮಾ ಬಿಕಿನಿ ಅವತಾರ ನೋಡಿದ್ರೆ ಶಾಕ್ ಆಗ್ತಿರಾ..!]

ಫಾತಿಮಾಳಿಂದ ಈ ರೀತಿ ನಿರೀಕ್ಷೆ ಮಾಡಿರಲಿಲ್ಲ

"ನಾನು ಅತೀಸೂಕ್ಷ್ಮವು ಅಲ್ಲ ಹಾಗಂತ ನಿಮ್ಮನ್ನು ಬೈಯುತಿಲ್ಲ. 'ದಂಗಲ್' ಚಿತ್ರದಲ್ಲಿಯ ಫಾತಿಮಾ ಅಂದ್ರೆ ನನಗೆ ತುಂಬಾ ಇಷ್ಟ. ಆದರೆ ಈ ರೀತಿಯ ಬಿಕಿನಿ ಅವತಾರಗಳನ್ನು ರಂಜಾನ್ ಸಮಯದಲ್ಲಿ ಪೋಸ್ಟ್ ಮಾಡುತ್ತೀರಿ ಎಂದು ನಿರೀಕ್ಷಿಸಿರಲಿಲ್ಲ. ಈ ತಿಂಗಳ ಮುಂದಿನ ದಿನಗಳಲ್ಲಿ ನಿಮಗೆ ಬೇಕೆನಿಸಿದ್ದನ್ನು ಮಾಡಿಕೊಳ್ಳಿ. ಆದರೆ ಇಸ್ಲಾಂ ಧರ್ಮದ ಈ ಪವಿತ್ರ ತಿಂಗಳಲ್ಲಿ ಸಾಧ್ಯವಾದಷ್ಟು ಡಿಗ್ನಿಟಿ ತೋರಿಸಿ" - afra_fatima

ಶೇಮ್ ಆನ್ ಯು

'ಫಾತಿಮಾ ನಿಮಗೆ ನಾಚಿಕೆ ಆಗಬೇಕು. ಕನಿಷ್ಟ ಪಕ್ಷ ರಂಜಾನ್ ಬಗ್ಗೆಯಾದರೂ ಥಿಂಕ್ ಮಾಡಬೇಕಿತ್ತು" - ಮೊಹಮ್ಮೆದ್ ಶೋಬಿ

ನಿರಾಶೆ ಆಗಿದೆ

"ಗಂಭೀರವಾಗಿ ಯೋಚಿಸಬೇಕಾದ ವಿಷಯ. ರಂಜಾನ್ ಹಬ್ಬದ ಪವಿತ್ರ ತಿಂಗಳಲ್ಲಿ ನಿಮ್ಮಂತಹ ಖ್ಯಾತ ನಟಿಯಿಂದ ಇಂತಹ ಬಿಕಿನಿ ಫೋಟೋಗಳು ಪೋಸ್ಟ್ ಆಗಬಾರದಿತ್ತು. ನಿಮ್ಮ ಮೇಲೆ ಇಟ್ಟಿದ್ದ ಗೌರವಕ್ಕೆ ನಿರಾಸೆ ಉಂಟುಮಾಡಿದೆ" -ಸಮಿರ್‌ಮೆತರ್" -ಸಮಿರ್‌ಮೆತರ್

ಫಾತಿಮಾಗೆ ಹಲವರ ಸಪೋರ್ಟ್

ಇಸ್ಲಾಂ ಧರ್ಮದ ಹಲವು ಸ್ವಯಂ ಘೋಷಿತ ಪೋಷಕರು ಫಾತಿಮಾಳ ಬಿಕಿನಿ ಡ್ರೆಸ್ ಬಗ್ಗೆ ವಿರೋಧ ವ್ಯಕ್ತಪಡಿಸಿ ಟ್ರೋಲ್ ಮಾಡಿದ್ರೆ, ಇನ್ನೂ ಹಲವು ಅದೇ ಧರ್ಮದವರು ನಟಿಗೆ ಸಪೋರ್ಟ್ ಮಾಡಿದ್ದಾರೆ. ನೀವು ತುಂಬಾ ಸುಂದರವಾಗಿ ಕಾಣಿಸುತ್ತಿದ್ದೀರಿ. ಫೂಲಿಶ್ ಫೀಪಲ್ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಕಾಮೆಂಟ್ ಮಾಡಿದ್ದಾರೆ.

English summary
Aamir Khan Starrer 'Dangal' movie actress Fatima Sana Shaikh trolled for wearing a swimsuit during Ramzan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada