»   » 'ಬಾಹುಬಲಿ'ಯ 1000 ಕೋಟಿ ದಾಖಲೆಯನ್ನ ಬೆನ್ನತ್ತಿ ಹೊರಟಿರುವ 'ದಂಗಲ್'

'ಬಾಹುಬಲಿ'ಯ 1000 ಕೋಟಿ ದಾಖಲೆಯನ್ನ ಬೆನ್ನತ್ತಿ ಹೊರಟಿರುವ 'ದಂಗಲ್'

Posted By:
Subscribe to Filmibeat Kannada

ಎಸ್.ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ-2' ಸದ್ಯ ಭಾರತೀಯ ಬಾಕ್ಸ್ ಆಫೀಸ್ ನಲ್ಲಿ ಪರಾಕ್ರಮ ಮೆರೆದಿದ್ದು, ಈ ಹಿಂದಿನ ಎಲ್ಲ ದಾಖಲೆಗಳನ್ನ ಉಡೀಸ್ ಮಾಡಿ ಹೊಸ ಇತಿಹಾಸ ಸೃಷ್ಟಿಸಿದೆ.

250 ಕೋಟಿ ವೆಚ್ಚದಲ್ಲಿ ತಯಾರಾಗಿರುವ ಈ ಚಿತ್ರ ಜಾಗತಿಕ ಮಾರುಕಟ್ಟೆಯಲ್ಲಿ 1000 ಕೋಟಿ ಗಳಿಸಿದೆ. ಈ ಮೂಲಕ 1000 ಕೋಟಿ ಗಳಿಸಿದ ಮೊದಲ ಭಾರತೀಯ ಚಿತ್ರವೆಂಬ ಸಾಧನೆ ಮಾಡಿದೆ. ಇದರ ಜೊತೆಯಲ್ಲೇ, ಅತಿ ವೇಗವಾಗಿ 100 ಕೋಟಿ, 200 ಕೋಟಿ, 500 ಕೋಟಿ 1000 ಕೋಟಿ ಗಳಿಸಿದ ಸಿನಿಮಾ ಎನಿಸಿಕೊಂಡಿದೆ.[ಭಾರತ ಚಿತ್ರ ಜಗತ್ತಿಗೆ 'ಬಾಹುಬಲಿ ನಂ.1', ಹಳೆ ದಾಖಲೆಗಳೆಲ್ಲ ಪುಡಿ.. ಪುಡಿ! ]

ಸದ್ಯ, ಬಾಹುಬಲಿಯ ಈ ವೇಗ ನೋಡುತ್ತಿದ್ದರೇ, ಇನ್ನು ಈ ದಾಖಲೆಯನ್ನ ಬೇರೆ ಯಾರು ಮುರಿಯಲು ಸಾಧ್ಯವಿಲ್ಲ ಎನ್ನುತ್ತಿದ್ದರು. ಆದ್ರೆ, 'ಬಾಹುಬಲಿ' ಕಲೆಕ್ಷನ್ ಗೆ ಮತ್ತೆ ಸವಾಲೆಸೆದಿದೆ ಅಮೀರ್ ಖಾನ್ ಅಭಿನಯದ 'ದಂಗಲ್' ಚಿತ್ರ. ನಿಮಗಿದು ಆಶ್ಚರ್ಯವೆನಿಸಿದರೂ ನಂಬಲೇಬೇಕು. ಅದು ಹೇಗೆ ಅಂತ ಮುಂದೆ ಓದಿ.....

'ಬಾಹುಬಲಿ' ಓಟಕ್ಕೆ 'ದಂಗಲ್' ಬ್ರೇಕ್!

'ಬಾಹುಬಲಿ' ಬಾಕ್ಸ್ ಆಫೀಸ್ ಕಲೆಕ್ಷನ್ ವೇಗಕ್ಕೆ ಅಮೀರ್ ಖಾನ್ ಅಭಿನಯದ 'ದಂಗಲ್' ಬ್ರೇಕ್ ಹಾಕಲಿದ್ಯಾ? ಇಂತಾದೊಂದು ಪ್ರಶ್ನೆ ಈಗ ಬಾಕ್ಸ್ ಆಫೀಸ್ ಪಂಡಿತರನ್ನ ಕಾಡುತ್ತಿದೆ. ಯಾಕಂದ್ರೆ, 'ಬಾಹುಬಲಿ'ಯ ಕಲೆಕ್ಷನ್ ಮೇಲೆ ಅಮೀರ್ ಖಾನ್ ಸಿನಿಮಾ ಅಟ್ಯಾಕ್ ಮಾಡಿದೆ. ಅದು ಹೇಗೆ? ಮುಂದೆ ಓದಿ....['ಬಾಹುಬಲಿ 2' ಸಕ್ಸಸ್ ನಂತರ ಪ್ರಭಾಸ್ ಬಗ್ಗೆ ಕೇಳಿಬಂದ ಹೊಸ ಸುದ್ದಿ! ]

ಮತ್ತೆ ಥಿಯೇಟರ್ ಗೆ ಬಂದ 'ದಂಗಲ್'

ಅಮೀರ್ ಖಾನ್ ಅಭಿನಯದ 'ದಂಗಲ್' ಚಿತ್ರ ಚೀನಾದಲ್ಲಿ ರೀ-ರಿಲೀಸ್ ಆಗಿದೆ. ಎರಡನೇ ಬಾರಿ ಬಿಡುಗಡೆಯಾಗಿರುವ 'ದಂಗಲ್' ಚಿತ್ರಕ್ಕೆ ಭರ್ಜರಿ ರೆಸ್ ಪಾನ್ಸ್ ಸಿಕ್ಕಿದ್ದು ಕಲೆಕ್ಷನ್ ನಲ್ಲೂ ಭರ್ಜರಿ ಭೇಟೆ ಮಾಡುತ್ತಿದೆ.[ಪ್ರಭಾಸ್ ಮತ್ತು ಅಮೀರ್ ನಡುವೆ ಮೆಗಾಫೈಟ್.! ಭಾರತದ ನಂ.1 ನಟ ಯಾರು? ]

'ದಂಗಲ್' ಅಕೌಂಟ್ ಗೆ ಮತ್ತೆ 121 ಕೋಟಿ!

ಕಳೆದ ವರ್ಷ ಡಿಸೆಂಬರ್ ನಲ್ಲಿ ಬಿಡುಗಡೆಯಾಗಿದ್ದ 'ದಂಗಲ್' ಚಿತ್ರ 746 ಕೋಟಿ ಗಳಿಸಿ ದಾಖಲೆ ಮಾಡಿತ್ತು. ಈಗ ಮತ್ತೊಮ್ಮೆ ತೆರೆಕಂಡಿದ್ದು 'ದಂಗಲ್' ಅಕೌಂಟ್ ಗೆ ಮತ್ತೆ 121 ಕೋಟಿ ಸೇರಿದೆ. ಹೀಗಾಗಿ, ದಂಗಲ್ ಒಟ್ಟು ಮೊತ್ತ 867 ಕೋಟಿ ದಾಟಿದೆ.['ಬಾಹುಬಲಿ' ಅಬ್ಬರಕ್ಕೆ ಭಾರತೀಯ ಬಾಕ್ಸ್ ಆಫೀಸ್ ಖಲ್ಲಾಸ್! ]

ಚೀನಾದಲ್ಲಿ ಅತಿ ಹೆಚ್ಚು ಗಳಿಸಿದ ಭಾರತೀಯ ಮೊದಲ ಚಿತ್ರ!

ದಂಗಲ್ ಚೀನಾದಲ್ಲಿ ಅತಿ ಹೆಚ್ಚು ಗಳಿಸಿದ ಭಾರತೀಯ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮೂಲಕ ಭಾರತೀಯ ಚೀನಾ ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸಿದೆ.

900 ಕೋಟಿಯತ್ತ ಅಮೀರ್ ಸಿನಿಮಾ!

ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಮತ್ತೆ ಬೇಟೆ ಶುರು ಮಾಡಿರುವ 'ದಂಗಲ್' ಆದಷ್ಟೂ ಬೇಗ 900 ಕೋಟಿ ಗಳಿಸಲಿದೆ. ಹೀಗೆ, 'ದಂಗಲ್' ಮುನ್ನುಗಿದ್ರೆ 1000 ಕೋಟಿ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುತ್ತಿದ್ದಾರೆ ಬಾಲಿವುಡ್ ಮಂದಿ.

ಬಾಹುಬಲಿ' ರೆಕಾರ್ಡ್ ಬ್ರೇಕ್ ಮಾಡುತ್ತಾ ಬಾಲಿವುಡ್!

ಈಗ 'ಬಾಹುಬಲಿ' ಸೆಟ್ ಮಾಡಿರುವ ದಾಖಲೆಗಳನ್ನ ಮುಂದೆ ತೆರೆಕಾಣಲಿರುವ ಬಹುನಿರೀಕ್ಷಿತ ಚಿತ್ರಗಳು ಮುರಿಯುತ್ತಾ ಎಂಬ ಲೆಕ್ಕಾಚಾರ ಈಗಲೇ ಶುರುವಾಗಿದೆ. ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅಭಿನಯದ '2.0', ಸಲ್ಮಾನ್ ಖಾನ್ ಅಭಿನಯದ 'ಟ್ಯೂಬ್ ಲೈಟ್', 'ಟೈಗರ್ ಜಿಂದಾ ಹೈ', ಹಾಗೂ ಅಮೀರ್ ಖಾನ್ ಅವರ 'ಥಗ್ಸ್ ಆಫ್ ಹಿಂದೂಸ್ತಾನ್' ಅಂತಹ ಹೈ ಎಕ್ಸ್ ಪೆಕ್ಟೇಶನ್ ಚಿತ್ರಗಳು ಬಿಡುಗಡೆಯ ಸನಿಹದಲ್ಲಿದೆ.

'ಯುಎಸ್'ನಲ್ಲಿ ಬಾಹುಬಲಿ ಪರಾಕ್ರಮ

ಯುಎಸ್ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ಗಳಿಸುವ ಮೂಲಕ ಬಾಹುಬಲಿ ಮೊದಲ ಭಾರತದ ಚಿತ್ರ ಎನಿಸಿಕೊಂಡಿದೆ. ಒಟ್ಟಾರೆ ಇದುವರೆಗೂ ಯುಎಸ್ ನಲ್ಲಿ ಬಾಹುಬಲಿ 111 ಕೋಟಿ ಲೂಟಿ ಮಾಡಿದೆಯಂತೆ.

ಏಪ್ರಿಲ್ 28 ರಂದು ತೆರೆಕಂಡಿದ್ದ 'ಬಾಹುಬಲಿ'

ಎಸ್.ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ-2' ಏಪ್ರಿಲ್ 28 ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಿತ್ತು. ಪ್ರಭಾಸ್, ರಾಣಾ, ರಮ್ಯಾಕೃಷ್ಣ, ಸತ್ಯರಾಜ್, ಅನುಷ್ಕಾ ಶೆಟ್ಟಿ, ತಮನ್ನ, ನಾಸೀರ್ ಸೇರಿದಂತೆ ಹಲವರು ಅಭಿನಯಿಸಿದ್ದರು.

English summary
While Baahubali 2: The Conclusion is well past the Rs 1000-crore mark at the box office, the release of Dangal starring Aamir Khan in China is threatening to break the records made by SS Rajamouli's epic.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada