ಬಿಗ್ ಬ್ರೇಕಿಂಗ್: ಶ್ರೀದೇವಿ ಸಾವಿನ ಹಿಂದೆ ದಾವೂದ್ ಇಬ್ರಾಹಿಂ ಕೈವಾಡ.!
Recommended Video

ಬಾಲಿವುಡ್ ಎವರ್ ಗ್ರೀನ್ ನಟಿ ಶ್ರೀದೇವಿ ಸಾವಿನ ರಹಸ್ಯ ದಿನದಿಂದ ದಿನಕ್ಕೆ ಬೇರೆ ಬೇರೆ ರೂಪ ಪಡೆದುಕೊಳ್ಳುತ್ತಿದೆ. ಕುಟುಂಬದವರೇ ಶ್ರೀದೇವಿ ಸಾವಿನ ಪ್ರಕರಣವನ್ನ ಕೈಬಿಟ್ಟಿದ್ದರೂ, ಕೆಲವರು ಈ ನಿಗೂಢ ಸಾವನ್ನ ಭೇದಿಸಲು ಹೊರಟಿದ್ದಾರೆ ತನಿಖೆಯ ಮಧ್ಯೆ ಸ್ಫೋಟಕ ಮಾಹಿತಿಗಳನ್ನ ಹೊರಹಾಕುತ್ತಿರುವುದು ತೀರಾ ಕುತೂಹಲ ಮೂಡಿಸಿದೆ.
ಫೆಬ್ರವರಿ 24 ರಂದು ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕಾಗಿ ದುಬೈಗೆ ತೆರೆಳಿದ್ದ ಶ್ರೀದೇವಿ ಖಾಸಗಿ ಹೋಟೆಲ್ ನಲ್ಲಿ ಅನುಮಾನಸ್ಪಾದವಾಗಿ ಸಾವನ್ನಪ್ಪಿದರು. ಆಕಸ್ಮಿಕವಾಗಿ ಬಾತ್ ಟಬ್ ನಲ್ಲಿ ಮುಳುಗಿ ಕೊನೆಯುಸಿರೆಳೆದಿದ್ದರು.
ತನಿಖೆ ನಡೆಸಿದ್ದ ದುಬೈ ಪೊಲೀಸರು ಇದು ಆಕಸ್ಮಿಕ ಸಾವು ಎಂದು ಪ್ರಕರಣ ಕ್ಲೋಸ್ ಮಾಡಿದ್ದರು. ನಂತರ ಶ್ರೀದೇವಿ ಪಾರ್ಥೀವ ಶರೀರವನ್ನ ಭಾರತಕ್ಕೆ ತಂದು ಸಂಪ್ರದಾಯವಾಗಿ ಅಂತ್ಯ ಸಂಸ್ಕಾರ ಮಾಡಲಾಗಿತ್ತು. ಈ ನಡುವೆ ಶ್ರೀದೇವಿ ಸಾವಿನ ಬಗ್ಗೆ ಅನುಮಾನಗಳು ಕಾಡುತ್ತಿದ್ದು, ಖಾಸಗಿ ತನಿಖಾಧಿಕಾರಿಯೊಬ್ಬರು ದುಬೈನಲ್ಲಿ ತನಿಖೆ ಮಾಡುತ್ತಿದ್ದು, ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ.

ಶ್ರೀದೇವಿ ಸಾವಿನ ಹಿಂದೆ ದಾವೂದ್.!
ಲೆಜೆಂಡ್ ನಟಿ ಶ್ರೀದೇವಿ ಸಾವಿನ ಹಿಂದೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕೈವಾಡ ಇದೆ ಎಂಬ ಅನುಮಾನವನ್ನ ಖಾಸಗಿ ತನಿಖಾಧಿಕಾರಿ ವೇದ್ ಭೂಷಣ್ ಬಹಿರಂಗಪಡಿಸಿದ್ದಾರೆ. ದುಬೈನಲ್ಲಿ ಶ್ರೀದೇವಿ ತಂಗಿದ್ದ ಹೋಟೆಲ್ ಮಾಲೀಕತ್ವದಲ್ಲಿ ದಾವೂದ್ ಪಾಲಿದೆ ಎಂಬ ಅಂಶವನ್ನ ದೆಹಲಿಯ ಮಾಜಿ ಎಸಿಪಿ ತಿಳಿಸಿದ್ದಾರೆ.

ದಾವೂದ್ ಗೂ ಶ್ರೀದೇವಿಗೂ ಏನ್ ಸಂಬಂಧ.?
ಬಾಲಿವುಡ್ ನ ಅನೇಕ ನಟ-ನಟಿಯರ ಜೊತೆ ದಾವೂದ್ ಇಬ್ರಾಹಿಂ ಸಂಬಂಧ ಹೊಂದಿದ್ದಾರೆ ಎಂಬುದು ಮುಚ್ಚಿಡುವಂತಿಲ್ಲ. ಬಾಲಿವುಡ್ ಕಲಾವಿದರಿಂದ ದಾವೂದ್ ಹಫ್ತಾ ವಸೂಲಿ ಮಾಡ್ತಿದ್ದರು ಎಂಬ ಆರೋಪಗಳು ಈ ಹಿಂದೆ ಕೇಳಿಬಂದಿದ್ದವು. ಹೀಗಿರುವಾಗ, ಶ್ರೀದೇವಿ ಮತ್ತು ದಾವೂದ್ ಮಧ್ಯೆ ಯಾವ ರೀತಿಯ ಸಂಬಂಧ ಇತ್ತು ಎಂಬ ಅನುಮಾನ ಈಗ ಕಾಡುತ್ತಿದೆ.

ಶ್ರೀದೇವಿ ಹೆಸರಿನಲ್ಲಿ 240 ಕೋಟಿ ವಿಮೆ
ಶ್ರೀದೇವಿ ಸಾವಿನ ಬಗ್ಗೆ ಅನುಮಾನ ಹೆಚ್ಚಾಗಲು ಕಾರಣ ಅವರ ಹೆಸರಿನಲ್ಲಿದ್ದ ಜೀವ ವಿಮೆಯ ಹಣ ಎಂಬುದು ಬಲವಾದ ನಂಬಿಕೆ. ಶ್ರೀದೇವಿ ಹೆಸರಿನಲ್ಲಿ ಸುಮಾರು 240 ಕೋಟಿ ವಿಮೆ ಹಣ ಇತ್ತು. ಅವರ ಸಾವಿನ ಬಳಿಕವೇ ಅದು ಕುಟುಂಬದವರು ಕೈ ಸೇರುತ್ತಿತ್ತು. ಈ ಉದ್ದೇಶದಿಂದ ಯಾರಾದರೂ ಕೊಲೆ ಮಾಡಿಸಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ದುಬೈನಲ್ಲಿ ತನಿಖೆ ಮಾಡುತ್ತಿರುವ ಭೂಷಣ್
ಇನ್ನು ಶ್ರೀದೇವಿ ಸಾವಿನ ಬಗ್ಗೆ ಇಷ್ಟೆಲ್ಲ ಅನುಮಾನ ವ್ಯಕ್ತಪಡಿಸಿರುವ ದೆಹಲಿ ಮಾಜಿ ಎಸಿಪಿ, ಖಾಸಗಿ ತನಿಖಾಧಿಕಾರಿ ವೇದ್ ಭೂಷಣ್, ಈಗಾಗಲೇ ದುಬೈನಲ್ಲಿ ತನಿಖೆ ಮಾಡುತ್ತಿದ್ದಾರಂತೆ. ಶ್ರೀದೇವಿ ತಂಗಿದ್ದ ರೂಂ ಪಕ್ಕದಲ್ಲೇ ರೂಂ ಬುಕ್ ಮಾಡಿ ಮಾಹಿತಿ ಕಲೆ ಹಾಕುತ್ತಿದ್ದಾರಂತೆ. ಕೆಲವು ಪ್ರಾಥಮಿಕ ಅಂಶಗಳ ಬಗ್ಗೆ ತನಿಖೆ ನಡೆಸಿ, ಸುಪ್ರೀಂ ಕೋರ್ಟ್ ಗೆ ದೂರು ನೀಡಲಿದ್ದಾರಂತೆ.

ಯಾರು ಈ ವೇದ್ ಭೂಷಣ್.?
ಅಂದ್ಹಾಗೆ, ಮಾಜಿ ಎಸಿಪಿ ವೇದ್ ಭೂಷಣ್ ಅವರು ಈಗ ಖಾಸಗಿಯಾಗಿ ತನಿಖೆ ಸಂಸ್ಥೆಯನ್ನ ನಡೆಸುತ್ತಿದ್ದಾರೆ. ದುಬೈ ಪೊಲೀಸರು ನೀಡಿರುವ ಮರಣೋತ್ತರ ಪರೀಕ್ಷೆಯ ವರದಿ ಬಗ್ಗೆ ನನಗೆ ಅನುಮಾನವಿದೆ. ಬಾತ್ ಟಾಬ್ ನಲ್ಲಿ ಬಲವಂತವಾಗಿ ಮುಳುಗಿಸಿ ಸಾಯಿಸಬಹುದು. ನಂತರ ಸಹಜವಾಗಿ ಬಿದ್ದರು ಎಂದು ತಪ್ಪಿಸಿಕೊಳ್ಳಬಹುದು. ಶ್ರೀದೇವಿ ಅವರ ವಿಚಾರದಲ್ಲೂ ಅಷ್ಟೇ. ಅವರು ದುರದೃಷ್ಟವಶಾತ್ ಸಾಯಲಿಲ್ಲ. ಯಾರೋ ಪ್ಲ್ಯಾನ್ ಮಾಡಿ ಕೊಂದಿದ್ದಾರೆ'' ಎಂದಿದ್ದರು. ಈಗ ತನಿಖೆ ಕೂಡ ಆರಂಭಿಸಿದ್ದಾರೆ.


Click it and Unblock the Notifications











