»   » ದೀಪಿಕಾಗೆ ದುಃಸ್ವಪ್ನದಂತೆ ಕಾಡಿದ ಪ್ರತಿಭಟನೆಯ ಕಾವು

ದೀಪಿಕಾಗೆ ದುಃಸ್ವಪ್ನದಂತೆ ಕಾಡಿದ ಪ್ರತಿಭಟನೆಯ ಕಾವು

Posted By:
Subscribe to Filmibeat Kannada

ಅಹಮದಾಬಾದಿನಲ್ಲಿ ತನ್ನ ಗುಜರಾತಿ ಅಭಿಮಾನಿಗಳಿಂದ ಅದ್ದೂರಿ ಸ್ವಾಗತ ನಿರೀಕ್ಷಿಸಿದ್ದ ದೀಪಿಕಾ ಪಡುಕೋಣೆಗೆ ಕಾದಿದ್ದು ಪ್ರತಿಭಟನೆಯ ಕಾವು.

ಗರ್ಭಾ ನೃತ್ಯ ಪ್ರದರ್ಶನಕ್ಕೆಂದು ದೀಪಿಕಾ ಪಡುಕೋಣೆ ಅಹಮದಾಬಾದಿಗೆ ಬಂದಿದ್ದರು. ಅಲ್ಲಿ ನೃತ್ಯ ಪ್ರದರ್ಶನ ವೀಕ್ಷಿಸಲು ಬಂದಿದ್ದವರ ಜೊತೆ ಪ್ರತಿಭಟನಾಕಾರರೂ ಇದ್ದರು. ಇನ್ನೇನು ಪ್ರತಿಭಟನಾಕಾರರು ದೀಪಿಕಾ ಮೇಲೆ ಟೊಮ್ಯಾಟೋ ಮತ್ತು ಮೊಟ್ಟೆ ಎಸೆಯ ಬೇಕು ಎನ್ನುವಷ್ಟರಲ್ಲಿ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಬಾಲಿವುಡ್ಡಿನ ಖ್ಯಾತ ಚಿತ್ರ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿಯವರ 'ರಾಮ್ ಲೀಲಾ' ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಆ ಚಿತ್ರದ ಪ್ರಮುಖ ನಾಯಕಿ ದೀಪಿಕಾ.

ರಾಮ್ ಲೀಲಾ ಚಿತ್ರದಲ್ಲಿ ರಜಪೂತ್ ಸಮುದಾಯವನ್ನು ಅವಹೇಳನ ಮಾಡುವ ಕೆಲವೊಂದು ದೃಶ್ಯಗಳಿವೆ ಎನ್ನುವುದು ಇತ್ತೀಚೆಗೆ ಕೇಳಿ ಬರುತ್ತಿರುವ ಆರೋಪ ಮತ್ತು ಅದಕ್ಕಾಗಿ ಪ್ರತಿಭಟನೆ.

ದೀಪಿಕಾ ಕಿವಿ ಹಿಂಡಿದ್ದ ಪ್ರತಿಭಟನಾಕಾರರು...ಮುಂದೆ ಓದಿ

                                    ರಾಮ್ ಲೀಲಾ ಚಿತ್ರದ ಗ್ಯಾಲರಿ

ರಾಮ್ ಲೀಲಾ

ಅಹಮದಾಬಾದ್ ಕಾರ್ಯಕ್ರಮದಲ್ಲಿ ರಜಪೂತ್ ಸಮುದಾಯದ ಭಾಗವಾದ ಜಡೇಜಾ ಮತ್ತು ರಾಬ್ರಿ ಸಮುದಾಯವದವರು ದೀಪಿಕಾ ಮತ್ತು ಚಿತ್ರದ ವಿರುದ್ದ ಪ್ರತಿಭಟನೆಗೆ ಇಳಿದಿದ್ದರು.

ಸಂಜಯ್ ಲೀಲಾ ಬನ್ಸಾಲಿ

ಬನ್ಸಾಲಿ ಈ ಚಿತ್ರದ ಕೆಲವೊಂದು ದೃಶ್ಯಗಳಿಗೆ ಕತ್ತರಿ ಪ್ರಯೋಗಿಸಲು ಒಪ್ಪಿ ಕೊಂಡಿದ್ದರು. ಅಲ್ಲದೇ ಆ ಸಮುದಾಯದ ಪ್ರಮುಖರ ಜೊತೆ ಮಾತುಕತೆ ಕೂಡಾ ನಡೆಸಿದ್ದರು. ಪೊಲೀಸರು ಮಧ್ಯ ಪ್ರವೇಶಿಸಿ ಆ ಕಾರ್ಯಕ್ರಮದಲ್ಲಿ ದೀಪಿಕಾ ವಿರುದ್ದ ಪ್ರತಿಭಟನೆಯ ತೀವ್ರತೆಯನ್ನು ಕಮ್ಮಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ದೀಪಿಕಾ ಕಿವಿ ಹಿಂಡಿದ್ದ ಪ್ರತಿಭಟನಾಕಾರರು

ಅಹಮದಾಬಾದ್ ವಿಮಾನ ನಿಲ್ದಾಣದಲ್ಲೂ ದೀಪಿಕಾ ಪ್ರತಿಭಟನೆಯ ಬಿಸಿ ಎದುರಿಸ ಬೇಕಾಯಿತು. ಸುಮಾರು ನಲವತ್ತಕ್ಕೂ ಹೆಚ್ಚು ಪ್ರತಿಭಟನಾಕಾರರು ದೀಪಿಕಾ ಕಿವಿಯನ್ನು ಹಿಂಡಿ ಅವಮಾನಿಸಿದ್ದರು.

ಚಿತ್ರದ ವಿರುದ್ದ ಪಿಐಎಲ್

ಚಿತ್ರದಲ್ಲಿ ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆಯಾಗುವ ಹಲವಾರು ಸನ್ನಿವೇಶಗಳಿವೆ ಎಂದು ವಕೀಲರೊಬ್ಬರು ಚಿತ್ರದ ಪಿಐಎಲ್ (Public Interest Litigation).

ರಾಮ್ ಲೀಲಾ ತಾರಾಗಣ

ಸಂಜಯ್ ಲೀಲಾ ಬನ್ಸಾಲಿ ಜೊತೆ ಕಿಶೋರ್ ಲುಲ್ಲಾ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ರಣ್ವೀರ್ ಸಿಂಗ್, ದೀಪಿಕಾ ಪಡುಕೋಣೆ, ರಿಚಾ ಚಡ್ಡಾ, ಸುಪ್ರಿಯಾ ಪಾಠಕ್ ಪ್ರಮುಖ ಪಾತ್ರದಲ್ಲಿದ್ದಾರೆ. ಶೇಕ್ಸಪಿಯರ್ ಅವರ ರೋಮಿಯೋ ಮತ್ತು ಜ್ಯೂಲಿಯಟ್ ಕಥಾದಾರಿತ ಈ ಚಿತ್ರ ನವೆಂಬರ್ ತಿಂಗಳಲ್ಲಿ ತೆರೆಗೆ ಬರಲಿದೆ.

English summary
Deepika Padukone almost attacked with Eggs and Tomatoes when she reached Ahmedabad venue for Garba event. Rajput community protesting against Deepika the lead actress of Sanjay Leela Bansali's 'Ram Leela'.
Please Wait while comments are loading...