»   » ಜ್ಯೂ. ಮಲ್ಯಗೆ ದೀಪಿಕಾ ಜತೆ ಡೇಟಿಂಗ್ ಕನವರಿಕೆ

ಜ್ಯೂ. ಮಲ್ಯಗೆ ದೀಪಿಕಾ ಜತೆ ಡೇಟಿಂಗ್ ಕನವರಿಕೆ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ಉದ್ಯಮಿ ವಿಜಯ್ ಮಲ್ಯ ಪುತ್ರ ಸಿದ್ಧಾರ್ಥ ಮಲ್ಯ ನಡುವಿನ ಪ್ರೇಮ ಮುರಿದುಬಿದ್ದು ಎಷ್ಟೋ ದಿನ, ತಿಂಗಳು, ವರ್ಷವಾಗಿದೆ. ಅದರೆ, ಜ್ಯೂ,ಮಲ್ಯ ಯಾಕೋ ಇನ್ನೂ ದೀಪಿಕಾ ಕನವರಿಕೆಯಲ್ಲೇ ಇದ್ದಂತೆ ಕಾಣುತ್ತಿದ್ದಾನೆ. ಪಾಪ, ಸೀನಿಯರ್ ಮಲ್ಯ ಮಾಡಿಕೊಂಡಿರುವ ಸಾಲದ ಹೊರೆಯನ್ನು ತಾಳಲಾರದೆ ಈ ಬಾರಿ ಕಿಂಗ್ ಫಿಷರ್ ಬಿಕಿನಿ ಕ್ಯಾಲೆಂಡರ್ ಹೊರ ತರುವುದೇ ಅನುಮಾನ ಎಂಬ ಸಂಗತಿ ಸಿದ್ದಾರ್ಥ್ ನ ಕಾಡುತ್ತಿದೆಯಂತೆ.

ಐಪಿಎಲ್ 3 ಫೈನಲ್ ಪಂದ್ಯದಲ್ಲಿ ಸಿದ್ದಾರ್ಥ್ ನಿಂದ ಓಪನ್ ಆಗಿಯೇ ಕಿಸ್ ಕೊಡಿಸಿಕೊಂಡಿದ್ದ ದೀಪಿಕಾ ಜೊತೆ ನಾನೇ ಮೊದಲು ಡೇಟಿಂಗ್ ಮಾಡಿದ್ದು ಎಂದು ಸಿದ್ದಾರ್ಥ್ ಮಲ್ಯ ಹೇಳಿಕೊಂಡಿದ್ದಾನೆ. ದೀಪಿಕಾ ಇಂದಿಗೂ ನನ್ನ ಮೆಚ್ಚಿನ ಗೆಳತಿ ಎಂದು ಹಲುಬಿದ್ದಾನೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

Deepika Padukone and I dated: Siddharth Mallya

ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಸಂದರ್ಭದಲ್ಲಿ ಸಿದ್ದಾರ್ಥ್ ತಮ್ಮ ಗುಡ್ ಟೈಮ್ಸ್ ಬಗ್ಗೆ ಹಂಚಿಕೊಂಡರು. ಐಪಿಎಲ್ ಪಂದ್ಯಗಳ ವೇಳೆ ತಮ್ಮ ತಂಡದ ಪರವಿದ್ದ ದೀಪಿಕಾ ಪಡುಕೋಣೆ ಜೊತೆ ಆತ್ಮೀಯತೆ ಬೆಳೆಯಿತು. ಕಿಂಗ್ ಫಿಷರ್ ಸೂಪರ್ ಮಾಡೆಲ್ ಆಗಿ ಬೆಳದ ದೀಪಿಕಾ ನಂತರ ಚಿತ್ರರಂಗಕ್ಕೆ ಕಾಲಿರಿಸಿ ಯಶಸ್ವಿಯಾಗಿದ್ದಾರೆ. ನಾನು ದೀಪಿಕಾ ಜೊತೆ ಡೇಟಿಂಗ್ ಮಾಡಿದ್ದು ನಿಜ. ಹಲವು ದೇಶಗಳಲ್ಲಿ ಸುತ್ತಾಟ ನಡೆಸಿದ್ದೆವು ಆದರೆ, ಹೆಚ್ಚಿನ ಕಾಲ ಸಂಬಂಧ ಮುಂದುವರೆಯಲಿಲ್ಲ ಎಂದಿದ್ದಾನೆ. [ಮದ್ವೆ ಬಗ್ಗೆ ದೀಪಿಕಾ ಪಡುಕೋಣೆ ಬಿಚ್ಚಿಟ್ಟ ಸತ್ಯ]

ದೀಪಿಕಾ ಪಡುಕೋಣೆ, ಅನುಷ್ಕಾ ಶರ್ಮ ಜೊತೆ ಪ್ರೇಮ ಸಂಬಂಧ ಹೊಂದಿರುವುದಾಗಿ ಆಗಾಗ ಸಿದ್ದಾರ್ಥ್ ಗಾಸಿಪ್ ಕಾಲಂಗೆ ಆಹಾರವಾಗುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ.

ಯೇ ಜವಾನಿ ಹೇ ದಿವಾನಿ, ಚೆನ್ನೈ ಎಕ್ಸ್ ಪ್ರೆಸ್, ರಾಮ್ ಲೀಲ, ಹ್ಯಾಪಿ ನ್ಯೂ ಇಯರ್ ಸೇರಿದಂತೆ ಸಾಲು ಸಾಲು ಯಶಸ್ವಿ ಚಿತ್ರಗಳ ನಂತರ ದೀಪಿಕಾ ಈಗ ಬಹುಬೇಡಿಕೆಯ ನಟಿಯಾಗಿದ್ದಾಳೆ. ಜೊತೆಗೆ ರಣವೀರ್ ಜೊತೆ ಲವ್ವಿ ಡವ್ವಿ ನಡೆಸಿದ್ದಾಳೆ. ಬೋಲ್ಡ್ ಅಂಡ್ ಬ್ಯೂಟಿಫುಲ್ ದೀಪಿ ಬಗ್ಗೆ ಮಲ್ಯ ಈಗ ಏಕೆ ಮಾತನಾಡುತ್ತಿದ್ದಾನೋ ಗೊತ್ತಿಲ್ಲ.

ಈಗೆಲ್ಲ ಕಾಲ ಬದಲಾಗಿದೆ. ಭಾರತದ ಸಮಾಜದಲ್ಲಿ ಪೋಷಕರು ತಮ್ಮ ಮಕ್ಕಳು ಅದರಲ್ಲೂ ಹೆಣ್ಣು ಮಕ್ಕಳ ಮದುವೆ ವಿಷಯದಲ್ಲಿ ಹೆಚ್ಚಿನ ಕಾಳಜಿ ಹಾಗೂ ಸ್ವತಂತ್ರ ನೀಡುತ್ತಿದ್ದಾರೆ. ಮಕ್ಕಳ ಸುಖದ ಮುಂದೆ, ಜಾತಿ, ಧರ್ಮ, ಮತಗಳು ಲೆಕ್ಕಕ್ಕೆ ಬರುವುದಿಲ್ಲ' ಎಂದು ದೀಪಿಕಾ ಈ ಹಿಂದೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
In an interview with the leading daily, business tycoon Vijay Mallya's son Siddharth confessed about dating Dippy darling at one point in time. Sid admitted to dating her but is still in touch despite parting ways.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada