For Quick Alerts
  ALLOW NOTIFICATIONS  
  For Daily Alerts

  ಮದುವೆ ಬಳಿಕ ಬೆಂಗಳೂರಿಗೆ ಆಗಮಿಸಿದ ದೀಪಿಕಾ - ರಣ್ವೀರ್ ಜೋಡಿ

  |
  ಬೆಂಗಳೂರಿಗೆ ಬಂದಿಳಿದ ದೀಪಿಕಾ ಪಡುಕೋಣೆ ರಣ್ವೀರ್ ಸಿಂಗ್ ಜೋಡಿ | FILMIBEAT KANNADA

  ನಟ ರಣ್ವೀರ್ ಸಿಂಗ್ ಹಾಗೂ ನಟಿ ದೀಪಿಕಾ ಪಡುಕೋಣೆ ವಿವಾಹ ಕಳೆದ ಗುರುವಾರದಂದು ಇಟಲಿಯ ಲೇಕ್ ಕೋಮೊದಲ್ಲಿ ನಡೆದಿತ್ತು.

  ಮದುವೆಯ ಬಳಿಕ ಈ ನವ ಜೋಡಿ ಇದೀಗ ಬೆಂಗಳೂರಿಗೆ ಬಂದಿದ್ದಾರೆ. ಇಂದು ಬೆಳಗ್ಗೆ ದೀಪಿಕಾ ತಮ್ಮ ಪತಿ ಜೊತೆಗೆ ತವರೂರಿಗೆ ಆಗಮಿಸಿದ್ದಾರೆ.

  ಸಿಂಧಿ ಸಂಪ್ರದಾಯದಂತೆ ಮದುವೆ ಆದ ದೀಪಿಕಾ-ರಣ್ವೀರ್

  ನಾಳೆ ಈ ನವ ಜೋಡಿಯ ಆರತಕ್ಷತೆ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಲಿದ್ದು, ಇಂದು ಈ ಜೋಡಿ ಗಾರ್ಡನ್ ಸಿಟಿಗೆ ಆಗಮಿಸಿದೆ. ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಣ್ವೀರ್ ಸಿಂಗ್ ಹಾಗೂ ನಟಿ ದೀಪಿಕಾ ಪಡುಕೋಣೆ ತಲುಪಿದ ಫೋಟೋಗಳು ಈಗ ಲಭ್ಯವಾಗಿವೆ. ರಾಯಲ್ ಲುಕ್ ನಲ್ಲಿ ನವ ದಂಪತಿಗಳು ಮಿಂಚಿದ್ದಾರೆ.

  ನಾಳೆ ಬೆಂಗಳೂರಿನ ಲೀಲಾ ಪ್ಯಾಲೇಸ್ ಹೋಟೆಲ್ ನಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮ ನಡೆಯಲಿದೆ. ಭಾರತ ಚಿತ್ರರಂಗದ ಹಾಗೂ ಸೌತ್ ಚಿತ್ರರಂಗದ ಅನೇಕ ದಿಗ್ಗಜರು ಸೇರಿದಂತೆ ಅನೇಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮೂಲತಃ ದೀಪಿಕಾ ಕುಟುಂಬ ಕರ್ನಾಟಕದವರಾಗಿದ್ದು, ಅವರ ಇಡೀ ಕುಟುಂಬ ಹಾಗೂ ಸ್ನೇಹಿತರು ಕಾರ್ಯಕ್ರಮಕ್ಕೆ ಹಾಜರಾಗಲಿದ್ದಾರೆ.

  ಅಂತೂ-ಇಂತೂ ದೀಪಿಕಾ-ರಣ್ವೀರ್ ಮದುವೆ ಫೋಟೋ ಹೊರಬಿತ್ತು.!

  ಬೆಂಗಳೂರಿನ ನಂತರ ಮುಂದಿನ ತಿಂಗಳ 28 ರಂದು ಮುಂಬೈನಲ್ಲಿ ಒಂದು ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆಯಂತೆ.

  ಅಂದಹಾಗೆ, ದೀಪಿಕಾ ಮೂಲತಃ ಕೊಂಕಣಿ. ಇನ್ನೂ ರಣ್ವೀರ್ ಸಿಂಗ್ 'ಸಿಖ್' ಸಮುದಾಯಕ್ಕೆ ಸೇರಿದವರು. ಹೀಗಾಗಿ, ಎರಡೂ ಸಂಪ್ರದಾಯಗಳಂತೆ ವಿವಾಹ ಶಾಸ್ತ್ರೋಕ್ತವಾಗಿ ನಡೆದಿದೆ.

  English summary
  Actress Deepika Padukone and Ranveer Singh reach Bengaluru Today (November 20th). Deepika and Ranveer are all set to host a grand wedding reception Tomorrow.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X