»   » ಬಿಕಿನಿ 'ಬೇಬ್' ದೀಪಿಕಾ ಭಾವಭಂಗಿಗಳು

ಬಿಕಿನಿ 'ಬೇಬ್' ದೀಪಿಕಾ ಭಾವಭಂಗಿಗಳು

Posted By:
Subscribe to Filmibeat Kannada

ಬೆಂಗಳೂರಿನ ಬೆಡಗಿ ದೀಪಿಕಾ ಪಡುಕೋಣೆ ಈಗ ಬಾಲಿವುಡ್ ನಲ್ಲಿ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರು. ಆದರೆ, ಇದಕ್ಕೂ ಮುನ್ನ ಭಾರತದ 'ಸೂಪರ್ ಮಾಡೆಲ್' ಆಗಿ ಮೆರೆದಿದ್ದರು ಎಂಬುದನ್ನು ಮರೆಯುವಂತಿಲ್ಲ. ಮಾಡೆಲ್ ಪ್ರಪಂಚಕ್ಕೆ ಕಾಲಿಟ್ಟವರು ಬಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ಕೊಡುವುದು ಮಾಮೂಲಿ ಎಂಬ ಮಾತು ನಿಜವಾದರೂ ಈ ರೀತಿ ಎಂಟ್ರಿ ಕೊಟ್ಟ ಕನ್ಯೆಯರು ಕ್ಲಿಕ್ ಆಗಿದ್ದು ತುಂಬಾ ಕಮ್ಮಿ

ಭಾರತದ ಹೆಮ್ಮೆಯ ಬಾಡ್ಮಿಂಟನ್ ಪಟು ಪ್ರಕಾಶ್ ಪಡುಕೋಣೆ ಅವರ ಪುತ್ರಿಯಾಗಿರುವ ದೀಪಿಕಾ ಚಿಕ್ಕ ವಯಸ್ಸಿನಲ್ಲಿ ಅಪ್ಪನ ಹಾದಿಯಲ್ಲೇ ಸಾಗುವ ಕುರುಹು ತೋರಿದ್ದರು. ದೀಪಿಕಾ ಅಮ್ಮ ಉಜ್ವಲ ಅವರು ಕೂಡಾ ಮಗಳು ಈ ರೀತಿ ಬೆಳೆಯಬೇಕು ಇದೇ ವೃತ್ತಿ ಹಿಡಿಯಬೇಕು ಎಂದು ಒತ್ತಡ ಹೇರಿರಲಿಲ್ಲ.

ಆದರೆ, ಕಿಂಗ್ ಫಿಷರ್ ಮಾಡೆಲ್ ಆಗಿ ಮೆರೆದ ದೀಪಿಕಾ ಮುಂದೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಭರದಲ್ಲೇ ಬಾಲಿವುಡ್ ಗೆ ಹಾರಿ ಶಾರುಖ್ ಖಾನ್ ಜೊತೆ ನಟಿಸಿದ್ದು ಈಗ ಇತಿಹಾಸ. ಮೊದಲ ಚಿತ್ರ ಓಂ ಶಾಂತಿ ಓಂ ಚಿತ್ರ ಭರ್ಜರಿ ಹಿಟ್ ಆಗಿದ್ದೇ ತಡ ದೀಪಿಕಾ ಸ್ಟಾರ್ ಆಗಿ ಬಿಟ್ಟರು.

ಈಗ ಯೇ ಜವಾನಿ ಹೇ ದಿವಾನಿ ಯಶಸ್ಸಿನಲ್ಲಿ ಮುಳುಗಿರುವ ದೀಪಿಕಾ ಅವರು ಚೆನ್ನೈ ಎಕ್ಸ್ ಪ್ರೆಸ್ ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ. ದೀಪಿಕಾ ಅವರ ಮಾಡೆಲಿಂಗ್ ದಿನದ ಕೆಲವು ಚಿತ್ರಗಳು ಇಲ್ಲಿವೆ ನೋಡಿ..

ಕಿಂಗ್ ಫಿಷರ್ ಗರ್ಲ್

ವಿಜಯ್ ಮಲ್ಯ ಅವರು ಪ್ರತಿ ವರ್ಷ ಕಿಂಗ್ ಫಿಷರ್ ಸೂಪರ್ ಮಾಡೆಲ್ ಹುಡುಕಾಟ ನಡೆಸುತ್ತಾರೆ. ಕಿಂಗ್ ಫಿಷರ್ ಗ್ಲಾಮರ್ ಕ್ಯಾಲೆಂಡರ್ ಗೆ ಎಲ್ಲಿಲ್ಲದ ಬೇಡಿಕೆ. ಕಿಂಗ್ ಫಿಷರ್ ಮೂಲಕ ಬೆಳೆದು ಬಂದ ದೀಪಿಕಾ ಅವರು ಆಸ್ಟ್ರೇಲಿಯಾದ ಕೆವರಾ ಬೀಚ್ ಲಾಡ್ಜ್ ಬಳಿ ಕಾಣಿಸಿದ್ದು ಹೀಗೆ

ಪುರುಷರ ಸೆಳೆಯುವ ಮಾದಕತೆ

ಬಿಕಿನಿ ತೊಡಲು ಆಕರ್ಷಕ ಮೈ ಕಟ್ಟು ಇದ್ದರಷ್ಟೇ ಸಾಲದು. ಬಿಕಿನಿ ತೊಟ್ಟು ಪುರುಷರ ಸೆಳೆಯುವ ಮಾದಕತೆ ದೀಪಿಕಾಗಿದೆ.

ಜಲಕನ್ಯೆ

ಮಾಡೆಲಿಂಗ್ ನಿಂದ ದೀಪಿಕಾ ಅವರಿಗೆ ಚಿತ್ರಗಳಲ್ಲಿ ಮೈಚಳಿ ಬಿಟ್ಟು ನಟಿಸುವುದು ಸಲೀಸಲಾಗಿತ್ತು. ಅಳುಕಿಲ್ಲದೆ ಥಳಕು ಬಳಕು ನಡಿಗೆ ಮೂಲಕ ಪ್ರೇಕ್ಷಕರ ಹೃದಯ ಸಿಂಹಾಸನವೇರಿದರು.

ಬುದ್ಧಿವಂತ ಸುಂದರಿ

ದೀಪಿಕಾ ಬೆಳೆದಿದ್ದು ಬೆಂಗಳೂರಿನಲ್ಲಿದ್ದರೂ ಹುಟ್ಟಿದ್ದು ಡೆನ್ಮಾರ್ಕ್ ನ ಕೊಪೆನ್ ಹೇಗನ್ ನಲ್ಲಿ ಮನೆ ಮಾತು ಕೊಂಕಣಿ, ಕನ್ನಡ ಮಾತನಾಡಲು ಅಲ್ಪಸ್ವಲ್ಪ ಗೊತ್ತಿದೆ. ಹಿಂದಿ, ಇಂಗ್ಲೀಷ್ ನಿರರ್ಗಳ.

ದೀಪಿಕಾ ಪಡುಕೋಣೆ

ಕಾಕ್ ಟೈಲ್ ಚಿತ್ರ ಸೇರಿದಂತೆ ಹಲವಾರು ಚಿತ್ರಗಳಲ್ಲಿ ತುಂಡುಡುಗೆಯಲ್ಲಿ ದೀಪಿಕಾ ಕಾಣಿಸಿಕೊಂಡಿದ್ದಾರೆ. ಗ್ಲಾಮರ್ ಮಿತಿಯೊಳಗೆ ಸುಂದರವಾಗಿ ಕಾಣಿಸಿಕೊಳ್ಳುವ ರೀತಿ ಹೇಗೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಹೌಸ್ ಫುಲ್ ನಾಯಕಿ

ಹೌಸ್ ಫುಲ್ ಚಿತ್ರದಲ್ಲಿ ಟೂ ಪೀಸ್ ನಲ್ಲಿ ಕಾಣಿಸಿಕೊಂಡ ದೀಪಿಕಾ ಅವರು ಅಕ್ಷಯ್ ಕುಮಾರ್ ಅವರ ಪ್ರಿಯತಮೆಯಾಗಿ ನಟಿಸಿದ್ದರು.

ದೀಪಿಕಾ ಪಡುಕೋಣೆ

ಲಾರಾದತ್ತಾ, ಜಿಯಾ ಖಾನ್ ಜೊತೆ ದೀಪಿಕಾ ಪಡುಕೋಣೆ

ಮ್ಯಾಗಜೀನ್ ಕ್ವೀನ್

ಮ್ಯಾಕ್ಸಿಮ್ ಸೇರಿದಂತೆ ಹತ್ತು ಹಲವು ಪ್ರಮುಖ ಪತ್ರಿಕೆ, ನಿಯತಕಾಲಿಕೆಗಳ ಮುಖಪುಟವನ್ನು ದೀಪಿಕಾ ಪಡುಕೋಣೆ ಅಲಂಕರಿಸಿದ್ದಾರೆ.

ಬೆಕ್ಕಿನ ನಡಿಗೆ ಮರೆತಿಲ್ಲ

ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟು ಸ್ಟಾರ್ ಪಟ್ಟ ಪಡೆದ ಮೇಲೂ ದೀಪಿಕಾ ಪಡುಕೋಣೆ ಅವರು ಬೆಂಗಳೂರು, ಮುಂಬೈ ಸೇರಿದಂತೆ ಪ್ರಮುಖ ನಗರಗಳ ವಸ್ತ್ರ ವಿನ್ಯಾಸಗಾರರ ಆಹ್ವಾನದ ಮೇರೆಗೆ ಬೆಕ್ಕಿನ ನಡಿಗೆ ಇಟ್ಟು ಫ್ಯಾಷನ್ ಶೋಗಳಲ್ಲಿ ಪಾಲ್ಗೊಂಡಿದ್ದಾರೆ.

ಸಕತ್ ಹಾಟ್ ದೀಪಿಕಾ

ಮುಗ್ಧ ನಗು, ಮಾದಕ ಕಂಗಳು, ನೀಳಕಾಯದ ಸಪೂರ ಸುಂದರಿ ದೀಪಿಕಾ ಮಾಡೆಲಿಂಗ್ ಜಗತ್ತಿನಂತೆ ಬಾಲಿವುಡ್ ನಲ್ಲೂ ಬೇಡಿಕೆ ಉಳಿಸಿಕೊಂಡಿದ್ದಾರೆ.

English summary
Deepika Padukone is considered as one of the most beautiful and admired actresses of Bollywood today. She has also been an established supermodel of India. Dippy entered the glamorous world of modelling at a very tender age. And then, she finally went on to become one of the top-notch stars of the nation.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada