For Quick Alerts
  ALLOW NOTIFICATIONS  
  For Daily Alerts

  ಜಾಹೀರಾತು : ಕತ್ರೀನಾಗಿಂತ ದೀಪಿಕಾ ರೇಟು ಜಾಸ್ತಿ

  By ಜೇಮ್ಸ್ ಮಾರ್ಟಿನ್
  |

  ಬೆಂಗಳೂರು ಬೆಡಗಿ ದೀಪಿಕಾ ಪಡುಕೋಣೆಗೆ ಲಕ್ ತಿರುಗಿದೆ ಕಣ್ರಿ. ಕಿಂಗ್ ಖಾನ್ ಶಾರುಖ್ ಜತೆ ಚೆನ್ನೈ ಎಕ್ಸ್ ಪ್ರೆಸ್ ಏರಿದ್ದೇ ಬಂತು. ಈಗ ದೀಪಿಕಾ ಪಡುಕೋಣೆ ಬ್ರ್ಯಾಂಡ್ ಮೌಲ್ಯ ಏರಿಕೆಯಾಗಿದೆ. ಸೋಪಿನ ಜಾಹೀರಾತೊಂದಕ್ಕೆ ದೀಪಿಕಾ ಬರೋಬ್ಬರಿ 6 ಕೋಟಿ ರು ಕೇಳಿದ್ದಾಳಂತೆ.

  ಈ ಮುಂಚೆ ಅದೇ ಉತ್ಪನ್ನದ ಜಾಹೀರಾತಿಗಾಗಿ ಕತ್ರೀನಾ ಕೈಫ್ ಪಡೆದಿದ್ದು 4 ಕೋಟಿ ರು ಮಾತ್ರವಂತೆ. ಸೂಪರ್ ಸ್ಟಾರ್ ರಜನಿಕಾಂತ್ ಜತೆ ದೀಪಿಕಾ ಪಡುಕೋಣೆ ಅಭಿನಯಿಸಿರುವ 'ಕೊಚಾಡಿಯನ್' ಕೂಡಾ ಭಾರಿ ನಿರೀಕ್ಷೆ ಹುಟ್ಟಿಸಿರುವ ಸಾಧ್ಯತೆ ಇರುವುದರಿಂದ ದೀಪಿಕಾ ಜಾಹೀರಾತು ಜಗತ್ತನ್ನು ಮತ್ತೊಮ್ಮೆ ಆಳಲು ಆರಂಭಿಸುವ ಎಲ್ಲಾ ಲಕ್ಷಣಗಳಿವೆ ಎಂದು ಮಾರುಕಟ್ಟೆ ತಜ್ಞರು ಭವಿಷ್ಯ ನುಡಿದಿದ್ದಾರೆ.

  ಸೌಂದರ್ಯವರ್ಧಕ ಸಾಬೂನಿಗೆ ಅನಾದಿ ಕಾಲದಿಂದಲೂ ಬಾಲಿವುಡ್ ಬೆಡಗಿಯರು ಪ್ರಚಾರ ನೀಡುತ್ತಾ ಬಂದಿದ್ದಾರೆ. ಶಾರುಖ್ ಖಾನ್ ಕೂಡಾ ಸೋಪು ಹಚ್ಚಿಕೊಂಡಿದ್ದು ಇದೆ. ಈಗ ದೀಪಿಕಾ ಚಿತ್ರಗಳು ಬಾಕ್ಸಾಫೀಸ್ ನಲ್ಲಿ ಸದ್ದು ಮಾಡುತ್ತಿದ್ದರೆ, ದೀಪಿಕಾ ಜಾಹೀರಾತು ಜಗತ್ತು ಆಳಲು ಸಿದ್ಧಳಾಗುತ್ತಿದ್ದಾಳೆ.

  ಫಾಸ್ಟ್ ಅಂಡ್ ಫ್ಯೂರಿಯಸ್ 7 ಚಿತ್ರಕ್ಕಾಗಿ ಬಾಲಿವುಡ್ ನಿಂದ ಹಾಲಿವುಡ್ ಗೆ ದೀಪಿಕಾ ಹಾರುತ್ತಿರುವುದರಿಂದ ಈ ಜಾಹೀರಾತು ಕೈತಪ್ಪಬಹುದು ಎಂದು ಹೇಳಲಾಗುತ್ತಿದೆ. ಕತ್ರೀನಾ ಈಗಲೂ ಬಹುಬೇಡಿಕೆಯ ನಟಿಯಾಗಿದ್ದಾಳೆ ಆಕೆಯನ್ನೇ ಜಾಹೀರಾತಿನಲ್ಲಿ ಇನ್ನಷ್ಟು ಕಾಲ ತೋರಿಸಿದರೆ ಆಯಿತು ಎಂಬ ಅಭಿಪ್ರಾಯ-ಭಿನ್ನಾಭಿಪ್ರಾಯ ಚರ್ಚೆ ಚಾಲ್ತಿಯಲ್ಲಿದೆ.

  ನೆಸ್ ಕೆಫೆ, ಸೋನಿ ಸೈಬರ್ ಶಾಟ್ ಕೆಮೆರಾ, ನ್ಯೂಟೋಜಿನಾ, ಆರ್ಟಿಬ್, ಫಿಯಾಮಾ, ಟಿಸ್ಸಾಟ್ ವಾಚ್, ಕಿಂಗ್ ಫಿಷರ್ ಏರ್ ಲೈನ್ಸ್ ನ ಪ್ರಚಾರ ನಡೆಸುತ್ತಿರುವ ದೀಪಿಕಾ ಅವರತ್ತ ಇನ್ನಷ್ಟು ಸಂಸ್ಥೆಗಳು ಮುಖ ಮಾಡುವ ಸಾಧ್ಯತೆ ಹೆಚ್ಚಿದೆ, ಯೇ ಜವಾನಿ ಹೇ ದಿವಾನಿ ಹಾಗೂ ಚೆನ್ನೈ ಎಕ್ಸ್ ಪ್ರೆಸ್ ಯಶಸ್ಸಿನ ನಂತರ ದೀಪಿಕಾ ಫಾಸ್ಟ್ ಅಂಡ್ ಫ್ಯೂರಿಯಸ್ 7, ಫರಾನ್ ಅಖ್ತರ್ ಅವರ ಹ್ಯಾಪಿ ನ್ಯೂ ಇಯರ್ ಚಿತ್ರದಲ್ಲಿ ಮತ್ತೊಮ್ಮೆ ಶಾರುಖ್ ಖಾನ್ ಜತೆ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Bollywood actress Deepika Padukone is on the top of everyone's lists. Be it a person's favourite actress, choice for a movie or a commercial, she has topped it all. We think now is the time to say that Deepika is highly in demand. She is going non-stop on her success ladder.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X