twitter
    For Quick Alerts
    ALLOW NOTIFICATIONS  
    For Daily Alerts

    ದೀಪಿಕಾ ಪಡುಕೋಣೆ ಹೊಸ ಬ್ಯುಸಿನೆಸ್: ಬೆಲೆ ಹೆಚ್ಚೆಂದ ನೆಟ್ಟಿಗರು

    |

    ನಾಯಕಿಯರ ವೃತ್ತಿ ಆಯಸ್ಸು ಕಡಿಮೆ ಎಂಬ ಮಾತು ಚಿತ್ರರಂಗದಲ್ಲಿ ಚಾಲ್ತಿಯಲ್ಲಿದೆ ಹಾಗಾಗಿಯೇ ಸ್ಟಾರ್ ನಟರು ವರ್ಷಕ್ಕೊಂದು ಸಿನಿಮಾ ಎಂದು ತಮ್ಮನ್ನು ತಾವು ಸೀಮಿತಗೊಳಿಸಿಕೊಂಡರೆ ನಟಿಯರು ವರ್ಷಕ್ಕೆ ಐದಾರು ಸಿನಿಮಾಗಳಲ್ಲಿ ನಟಿಸಿಬಿಡುತ್ತಾರೆ. ಜೊತೆಗೆ ಬೇರೆ ಕೆಲವೆಡೆಯೂ ಬಂಡವಾಳ ಹೂಡಿರುತ್ತಾರೆ.

    ಬಾಲಿವುಡ್‌ನ ನಂಬರ್ 1 ನಟಿ ದೀಪಿಕಾ ಪಡುಕೋಣೆ ಪ್ರತಿ ಸಿನಿಮಾಕ್ಕೆ ಕೆಲವು ಸ್ಟಾರ್ ನಟರಿಗೆ ಕಡಿಮೆ ಇಲ್ಲದ ಸಂಭಾವನೆ ಪಡೆಯುತ್ತಾರೆ. ಆದರೆ ಅವರೂ ಸಹ ಸಿನಿಮಾವನ್ನು ಮಾತ್ರವೇ ನಂಬಿಕೊಂಡಿಲ್ಲ, ಸಿನಿಮಾದಿಂದ ಸಂಪಾದಿಸಿದ ಕೋಟ್ಯಂತರ ಹಣವನ್ನು ಬೇರೆ ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದಾರೆ.

    ಸೈಮಾ 2022: ಪ್ರಶಸ್ತಿ ಪಡೆಯಲು ಬಂದ ಬಾಲಿವುಡ್‌ನ ರಣ್ವೀರ್ ಸಿಂಗ್‌ ಕೆನ್ನೆಗೆ ಬಿತ್ತು ಏಟು! ಸೈಮಾ 2022: ಪ್ರಶಸ್ತಿ ಪಡೆಯಲು ಬಂದ ಬಾಲಿವುಡ್‌ನ ರಣ್ವೀರ್ ಸಿಂಗ್‌ ಕೆನ್ನೆಗೆ ಬಿತ್ತು ಏಟು!

    ದೀಪಿಕಾ ಪಡುಕೋಣೆ ಹೊಸ ಬ್ಯುಸಿನೆಸ್ ಒಂದನ್ನು ಪ್ರಾರಂಭ ಮಾಡಿದ್ದಾರೆ. ತ್ವಚೆ ಆರೈಕೆ ಮಾಡುವ ಪ್ರಾಡೆಕ್ಟ್‌ಗಳ ಸಂಸ್ಥೆಯನ್ನು ಬ್ಯುಸಿನೆಸ್‌ ಪಾರ್ಟನರ್ ಜೊತೆ ಸೇರಿ ಪ್ರಾರಂಭ ಮಾಡಿದ್ದಾರೆ. ತಮ್ಮ ಸಂಸ್ಥೆಯ ಜಾಹೀರಾತುಗಳಲ್ಲಿ ತಾವೇ ಕಾಣಿಸಿಕೊಂಡಿದ್ದಾರೆ. ಆದರೆ ಜನರು ಮಾತ್ರ ಯಾಕೋ ದೀಪಿಕಾರ ಸಂಸ್ಥೆಯ ಪ್ರಾಡೆಕ್ಟ್‌ಗಳ ಬಗ್ಗೆ ಹಾಗೂ ಸಂಸ್ಥೆಯ ಹೆಸರಿನ ಬಗ್ಗೆ ತುಸು ಋಣಾತ್ಮಕವಾಗಿ ಮಾತನಾಡುತ್ತಿದ್ದಾರೆ.

    ಹೊಸ ಸಂಸ್ಥೆ ಕಟ್ಟಿರುವ ದೀಪಿಕಾ ಪಡುಕೋಣೆ

    ಹೊಸ ಸಂಸ್ಥೆ ಕಟ್ಟಿರುವ ದೀಪಿಕಾ ಪಡುಕೋಣೆ

    ದೀಪಿಕಾ ಪಡುಕೋಣೆಯವರ ತ್ವಚೆ ಆರೈಕೆ ಪ್ರಾಡೆಕ್ಟ್‌ನ ಸಂಸ್ಥೆಯ ಹೆಸರು ತುಸು ಭಿನ್ನವಾಗಿದ್ದು '82 ಡಿಗ್ರಿ ಇ' (82E) ಎಂದಿಟ್ಟಿದ್ದಾರೆ. ಎರಡು ವರ್ಷ ಇದಕ್ಕಾಗಿ ಶ್ರಮ ಪಟ್ಟು ಈಗ ಈ ಸ್ಕಿನ್ ಕೇರ್ ಬ್ರ್ಯಾಂಡ್ ಅನ್ನು ಬಿಡುಗಡೆ ಮಾಡಿದ್ದೇವೆ ಎಂದು ದೀಪಿಕಾ ಪಡುಕೋಣೆ ಹೇಳಿದ್ದಾರೆ. ಭಾರತವನ್ನು ಹಾದು ಹೋಗುವ ಅಕ್ಷಾಂಶದಿಂದ ಪ್ರೇರಣೆಗೊಂಡು ಈ ಹೆಸರಿಟ್ಟಿದ್ದೇವೆ ಎಂದು ದೀಪಿಕಾ ಪಡುಕೋಣೆ ಹೇಳಿಕೊಂಡಿದ್ದಾರೆ. ಆದರೆ ಇದು ಸುಲಭಕ್ಕೆ ಅರ್ಥವಾಗುವ ಹೆಸರಲ್ಲ, ಪ್ರಾಡೆಕ್ಟ್‌ಗೆ ಸರಳವಾದ, ಸರಳವಾಗಿ ಉಚ್ಛರಿಸಬಲ್ಲ ಹೆಸರಿರಬೇಕಿತ್ತು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

    ಬೆಲೆ ಬಲು ದುಬಾರಿ

    ಬೆಲೆ ಬಲು ದುಬಾರಿ

    ದೀಪಿಕಾರ ಸಂಸ್ಥೆ ಸದ್ಯಕ್ಕೆ ಮಾಯ್ಶ್ಚಿರೈಸರ್ ಹಾಗೂ ಸನ್‌ಸ್ಕ್ರೀನ್‌ ಅನ್ನು ಮಾತ್ರವೇ ಮಾರುಕಟ್ಟೆಗೆ ತಂದಿದೆ. ಮಾಯ್ಶ್ಚಿರೈಸರ್‌ಗೆ 'ಅಶ್ವಗಂಧ ಬೌನ್ಸ್' ಎಂದು ಹೆಸರಿಟ್ಟಿದ್ದು, ಸನ್‌ಸ್ಕ್ರೀನ್‌ಗೆ 'ಪಚೌಲಿ ಗ್ಲೋ' ಎಂದು ಹೆಸರಿಟ್ಟಿದ್ದಾರೆ. ದೀಪಿಕಾರ 'ಅಶ್ವಗಂಧ ಬೌನ್ಸ್'ನ ಒಂದು ಸಣ್ಣ 50 ಎಂಎಲ್ ಬಾಟಲಿಗೆ 2700 ರುಪಾಯಿ. ಪಚೌಲಿ ಗ್ಲೋ ಸನ್‌ ಸ್ಕ್ರೀಮ್‌ನ 30 ಎಂಎಲ್ ಬಾಟಲಿಗೆ 1800 ರುಪಾಯಿ ಬೆಲೆ ಇದೆ. ಮಾರುಕಟ್ಟೆಯಲ್ಲಿರುವ ಇತರೆ ಕೆಲವು ಜನಪ್ರಿಯ ಬ್ರ್ಯಾಂಡ್‌ಗಳಿಗೆ ಹೋಲಿಸಿದರೆ ಇದು ಬಹಳ ಹೆಚ್ಚು. ಇದರ ಬಗ್ಗೆಯೂ ಕೆಲವು ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಕತ್ರಿನಾ ಕೈಫ್‌ರ ಉತ್ಪನ್ನಗಳು ಕಡಿಮೆ ದರದಲ್ಲಿ ಲಭ್ಯ

    ಕತ್ರಿನಾ ಕೈಫ್‌ರ ಉತ್ಪನ್ನಗಳು ಕಡಿಮೆ ದರದಲ್ಲಿ ಲಭ್ಯ

    ದೀಪಿಕಾರಂತೆ ಕತ್ರಿನಾ ಕೈಫ್ ಸಹ ಸ್ಕಿನ್ ಕೇರ್ ಪ್ರಾಡೆಕ್ಟ್‌ ಸಂಸ್ಥೆಯ ಒಡತಿಯಾಗಿದ್ದಾರೆ. 'ಕೇ ಬ್ಯುಟಿ' ಸಂಸ್ಥೆ ಹೊಂದಿರುವ ಕತ್ರಿನಾ ಕೈಫ್ ಹಲವು ಬ್ಯೂಟಿ ಪ್ರಾಡೆಕ್ಟ್‌ಗಳನ್ನು ತಮ್ಮ ಸಂಸ್ಥೆಯಿಂದ ಮಾರುಕಟ್ಟೆಗೆ ತಂದಿದ್ದಾರೆ. ಆದರೆ ಅವರ ಪ್ರಾಡೆಕ್ಟ್‌ಗಳ ಬೆಲೆ ಸಮಂಜಸವಾಗಿದೆ. ಮಧ್ಯಮ ವರ್ಗದವರೂ ಸಹ ಕೊಳ್ಳಬಹುದಾದ ಬೆಲೆಯನ್ನೇ ಅವರು ತಮ್ಮ ಬ್ಯೂಟಿ ಪ್ರಾಡೆಕ್ಟ್‌ಗಳಿಗೆ ಇರಿಸಿದ್ದಾರೆ. ಆದರೆ ದೀಪಿಕಾರ ಪ್ರಾಡೆಕ್ಟ್‌ನ ಬೆಲೆ ತುಸು ಹೆಚ್ಚಾಯಿತೆಂದು ಕೆಲವರು ದೂರಿದ್ದಾರೆ.

    ಹಲವು ಉದ್ದಿಮೆಗಳಲ್ಲಿ ಹೂಡಿಕೆ ಮಾಡಿರುವ ದೀಪಿಕಾ

    ಹಲವು ಉದ್ದಿಮೆಗಳಲ್ಲಿ ಹೂಡಿಕೆ ಮಾಡಿರುವ ದೀಪಿಕಾ

    ದೀಪಿಕಾ ಪಡುಕೋಣೆ ಸ್ಕಿನ್ ಕೇರ್ ಸಂಸ್ಥೆಯ ಒಡತಿಯಾಗಿರುವ ಜೊತೆಗೆ ರಿಯಲ್ ಎಸ್ಟೇಟ್‌ನಲ್ಲಿಯೂ ಬಂಡವಾಳ ಹೂಡಿದ್ದಾರೆ. ಬೆಂಗಳೂರು, ಮುಂಬೈ ಹಾಗೂ ಪುಣೆ ನಗರಗಳಲ್ಲಿ ಅಪಾರ್ಟ್‌ಮಿಂಟ್‌ಗಳನ್ನು ದೀಪಿಕಾ ಖರೀದಿಸಿದ್ದು ಕೆಲವನ್ನು ಬಾಡಿಗೆಗೆ ಸಹ ನೀಡಿದ್ದಾರೆ. ಇವುಗಳ ಜೊತೆಗೆ ಕೆಲವು ಸಂಸ್ಥೆಯ ಷೇರುಗಳಲ್ಲಿ ಬಂಡವಾಳವನ್ನೂ ಸಹ ದೀಪಿಕಾ ತೊಡಗಿಸಿದ್ದಾರೆ. ಪತಿಯ ಜೊತೆ ಸೇರಿಕೊಂಡು ನಿರ್ಮಾಣ ಸಂಸ್ಥೆಯನ್ನೂ ಸಹ ದೀಪಿಕಾ ಕಟ್ಟಿದ್ದಾರೆ.

    English summary
    Deepika Padukone co founded new skin care company. Netizen complaints of high pricing.
    Thursday, November 17, 2022, 21:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X