For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿಗಳಿಗೆ ಆಘಾತ ತಂದ ದೀಪಿಕಾ ನಡೆ: ಟ್ವಿಟ್ಟರ್- ಇನ್ಸ್ಟಾಗ್ರಾಮ್ ಪೋಸ್ಟ್ ಡಿಲೀಟ್ ಮಾಡಿದ ನಟಿ

  |

  ಬಾಲಿವುಡ್ ನ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ಆಘಾತಕಾರಿ ಸುದ್ದಿ ನೀಡಿದ್ದಾರೆ. ಎಲ್ಲಾ ಸೆಲೆಬ್ರಿಟಿಗಳು ಹೊಸ ಹೊಸ ಫೋಟೋಗಳನ್ನು ಶೇರ್ ಮಾಡುತ್ತಾ, ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ವಿಶ್ ಮಾಡುತ್ತಿದ್ದಾರೆ. ಆದರೆ ದೀಪಿಕಾ ಪಡುಕೋಣೆ ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿದ್ದ ಎಲ್ಲಾ ಪೋಸ್ಟ್ ಗಳನ್ನು ಡಿಲೀಟ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.

  ದೀಪಿಕಾ ಅವರ ದಿಢೀರ್ ಈ ನಿರ್ಧಾರಕ್ಕೆ ಕಾರಣವೇನು ಎನ್ನುವುದು ಬಹಿರಂಗವಾಗಿಲ್ಲ. ಆದರೆ ಎಲ್ಲಾ ಪೋಸ್ಟ್ ಗಳನ್ನು ಡಿಲೀಟ್ ಮಾಡಿರುವುದು ಅಭಿಮಾನಿಗಳಿಗೆ ಆಘಾತ ತಂದಿದೆ. ಡಿಸೆಂಬರ್ 31ರ ರಾತ್ರಿ ಎಲ್ಲಾ ಪೋಸ್ಟ್ ಗಳನ್ನು ದೀಪಿಕಾ ಡಿಲೀಟ್ ಮಾಡಿದ್ದಾರೆ. ದೀಪಿಕಾ ಅವರ ಈ ನಡೆ ಅಭಿಮಾನಿಗಳಿಗೆ ಮಾತ್ರವಲ್ಲದೆ ಬಾಲಿವುಡ್ ಮಂದಿಗೂ ಅಚ್ಚರಿ ಮೂಡಿಸಿದೆ. ಮುಂದೆ ಓದಿ...

  ಹೊಸ ವರ್ಷ ಆಚರಣೆಗಾಗಿ ಮುಂಬೈ ಬಿಟ್ಟು ಹೊರನಡೆದ ದೀಪಿಕಾ-ರಣ್ವೀರ್ ದಂಪತಿ

  ಹೆಚ್ಚು ಫಾಲೋವರ್ಸ್ ಹೊಂದಿದ ನಟಿ

  ಹೆಚ್ಚು ಫಾಲೋವರ್ಸ್ ಹೊಂದಿದ ನಟಿ

  ಅಂದಹಾಗೆ ದೀಪಿಕಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರೀಯರಾಗಿದ್ದರು. ಇನ್ಸ್ಟಾಗ್ರಾಮ್ ನಲ್ಲಿ 52.5 ಮಿಲಿಯಲ್ ಫಾಲೋವರ್ಸ್ ಹೊಂದುವ ಮೂಲಕ ಅತೀ ಹೆಚ್ಚು ಫಾಲೋವರ್ಸ್ ಹೊಂದಿದ ನಟಿ ಎನ್ನುವ ಖ್ಯಾತಿ ಸಹ ಗಳಿಸಿದ್ದರು. ಟ್ವಿಟ್ಟರ್ ನಲ್ಲಿ 27.7 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಹೊಸ ಹೊಸ ಫೋಟೋಗಳನ್ನು ಶೇರ್ ಮಾಡುತ್ತ ಅಭಿಮಾನಿಗಳನ್ನು ರಂಜಿಸುತ್ತಿದ್ದ ದೀಪಿಕಾ ದಿಢೀರನೆ ಎಲ್ಲಾ ಪೋಸ್ಟ್ ಡಿಲೀಟ್ ಮಾಡಿರುವುದು ಆಘಾತತಂದಿದೆ.

  ವಿಜಯ್ 65ನೇ ಚಿತ್ರಕ್ಕೆ ಬಾಲಿವುಡ್‌ನಿಂದ ಸ್ಟಾರ್ ನಟಿ ಮತ್ತು ನಟ ಎಂಟ್ರಿ!

  ಡಿಲೀಟ್ ಮಾಡಲು ಕಾರಣವೇನು?

  ಡಿಲೀಟ್ ಮಾಡಲು ಕಾರಣವೇನು?

  ಇತ್ತೀಚಿಗೆ ಅನೇಕ ಸೆಲೆಬ್ರಿಟಿಗಳ ಖಾತೆಗಳು ಹ್ಯಾಕ್ ಆಗಿವೆ. ಹಾಗೆ ದೀಪಿಕಾ ಖಾತೆ ಸಹ ಹ್ಯಾಕ್ ಆಗಿರಬಹುದೇ ಎನ್ನುವ ಅನುಮಾನವನ್ನು ನೆಟ್ಟಿಗರು ವ್ಯಕ್ತಪಡಿಸುತ್ತಿದ್ದಾರೆ. ಇನ್ನು 2020 ಎಲ್ಲರ ಪಾಲಿಗೂ ಕರಾಳ ವರ್ಷ. ಆದರೆ ದೀಪಿಕಾ ಪಾಲಿಗೆ ಮತ್ತಷ್ಟು ಕೆಟ್ಟವರ್ಷವಾಗಿತ್ತು. ಡ್ರಗ್ಸ್ ಜಾಲ ಪ್ರಕರಣದಲ್ಲಿ ದೀಪಿಕಾ ಹೆಸರು ಕಳಿಬಂದಿದ್ದು, ಎನ್ ಸಿ ಬಿ ವಿಚಾರಣೆಯನ್ನು ಎದುರಿಸಿದ್ದರು. ಹಾಗಾಗಿ ಕಳೆದ ವರ್ಷದ ಹಳೆಯ ನೆನಪುಗಳು ಯಾವುದು ಬೇಡ, ಹೊಸ ವರ್ಷದಿಂದ ಹೊಸ ಪೋಸ್ಟ್ ಗಳ ಮೂಲಕ ಅಭಿಮಾನಿಗಳ ಮುಂದೆ ಬರೋಣ ಎನ್ನುವ ಕಾರಣಕ್ಕೆ ಹೀಗೆ ಮಾಡಿದ್ದಾರೆ ಎನ್ನಲಾಗುತ್ತಿದೆ.

  ದೀಪಿಕಾ ಪಡುಕೋಣೆ ಚಿತ್ರದ ರೀಮೇಕ್‌ನಲ್ಲಿ ತ್ರಿಷಾ ನಟನೆ!

  ಜೈಪುರದಲ್ಲಿರುವ ದೀಪಿಕಾ ದಂಪತಿ

  ಜೈಪುರದಲ್ಲಿರುವ ದೀಪಿಕಾ ದಂಪತಿ

  ದೀಪಿಕಾ ಪೋಸ್ಟ್ ಡಿಲೀಟ್ ಆದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಹಿರಂಗ ವಾಗಿಲ್ಲ. ದೀಪಿಕಾ ಸದ್ಯ ಪತಿ ರಣ್ವೀರ್ ಸಿಂಗ್ ಜೊತೆ ಜೈಪುರದಲ್ಲಿ ತಂಗಿದ್ದಾರೆ. ಒಂದು ವಾರ ಮುಂಚಿತವಾಗಿಯೇ ರಾಜಸ್ಥಾನಕ್ಕೆ ತೆರಳಿರುವ ರಣ್ವೀರ್ ಮತ್ತು ದೀಪಿಕಾ ಅಲ್ಲೇ 2021ಅನ್ನು ಅದ್ದೂರಿಯಾಗಿ ಬರಮಾಡಿಕೊಂಡಿದ್ದಾರೆ.

  ಮಾತಾಡೋರು ಇದ್ರೇನೆ ಅವರು ಬದುಕಿದ್ದಾರೆ ಅನೋದು ಗೊತ್ತಾಗೋದು | Filmibeat Knnada
  ದೀಪಿಕಾ ಬಳಿ ಇರುವ ಸಿನಿಮಾಗಳು

  ದೀಪಿಕಾ ಬಳಿ ಇರುವ ಸಿನಿಮಾಗಳು

  ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ದೀಪಿಕಾ ಸದ್ಯ ಶಕುನ್ ಭಾತ್ರ ನಿರ್ದೇಶನದ ಇನ್ನು ಹೆಸರಿಡದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅನನ್ಯಾ ಪಾಂಡೆ ಮತ್ತು ಸಿದ್ಧಾಂತ್ ಚತುರ್ವೇದಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಶಾರುಖ್ ಖಾನ್ ನಟನೆಯ ಪಠಾಣ್ ಮತ್ತು ಪ್ರಭಾಸ್ ಗೆ ನಾಯಕಿಯಾಗಿ ತೆಲುಗು ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ.

  English summary
  Bollywood Actress Deepika Padukone delete all posts on Instagram and twitter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X