For Quick Alerts
  ALLOW NOTIFICATIONS  
  For Daily Alerts

  ದೀಪಿಕಾ ಪಡುಕೋಣೆ-ಕತ್ರಿನಾ ಕೈಫ್ ನಡುವಿನ ಶೀತಲ ಸಮರ ಅಂತ್ಯ.!

  By Harshitha
  |

  ಎರಡು ಜಡೆ ಇದ್ದ ಕಡೆ ಜಗಳ ಗ್ಯಾರೆಂಟಿ... ಹೆಣ್ಣಿಗೆ ಹೆಣ್ಣೇ ಶತ್ರು ಎಂಬಂತೆ ಬಾಲಿವುಡ್ ಬೆಳ್ಳಿ ಬೊಂಬೆ ಕತ್ರಿನಾ ಕೈಫ್ ಕಂಡ್ರೆ ಬೆಂಗಳೂರು ಬೆಡಗಿ ದೀಪಿಕಾ ಪಡುಕೋಣೆಗೆ ಆಗ್ಬರ್ತಿರ್ಲಿಲ್ಲ. ಅದಕ್ಕೆ ನೇರ ಹೊಣೆ ರಣ್ಬೀರ್ ಕಪೂರ್.!

  ಹೇಗೆ ಅಂದ್ರೆ... ಒಂದ್ಕಾಲದಲ್ಲಿ ದೀಪಿಕಾ ಪಡುಕೋಣೆಯನ್ನ ರಣ್ಬೀರ್ ಕಪೂರ್ ಪ್ರೀತಿಸುತ್ತಿದ್ದರು. ರಣ್ಬೀರ್ ಕಪೂರ್ ಹೆಸರಿನಲ್ಲಿ ದೀಪಿಕಾ ಪಡುಕೋಣೆ ಟಾಟ್ಯೂ ಕೂಡ ಹಾಕಿಸಿಕೊಂಡಿದ್ದರು. ಇನ್ನೇನು ಇವರಿಬ್ಬರು ಮದುವೆ ಆಗೇ ಬಿಟ್ಟರು ಎನ್ನುವಷ್ಟರಲ್ಲಿ ರಣ್ಬೀರ್ - ದೀಪಿಕಾ ನಡುವೆ ಬ್ರೇಕಪ್ ಆಯ್ತು.

  ದಿನಗಳು ಉರುಳಿದ ಹಾಗೆ ರಣ್ಬೀರ್ ಕಪೂರ್ - ಕತ್ರಿನಾ ಕೈಫ್ ಡೇಟಿಂಗ್ ಮಾಡಲು ಆರಂಭಿಸಿದರು. ಇದರಿಂದ ಕತ್ರಿನಾ ಹಾಗೂ ದೀಪಿಕಾ ನಡುವಿನ ಗೆಳೆತನ ಹಳಸಿತು. ಕತ್ರಿನಾ ಕಂಡ್ರೆ ದೀಪಿಕಾ ಉರಿದುಬೀಳ್ತಿದ್ರು. ಕತ್ರಿನಾ ಹಾಗೂ ದೀಪಿಕಾ ಮಧ್ಯೆ ದೊಡ್ಡ ಕಂದಕ ಸೃಷ್ಟಿ ಆಯ್ತು.

  ಎಲ್ಲೇ ಹೋದರೂ, ಒಬ್ಬರನ್ನೊಬ್ಬರು ಮಾತನಾಡಿಸದೇ ಇರುವಷ್ಟು ದ್ವೇಷ ಹೊಗೆಯಾಡುತ್ತಿತ್ತು. ಆದ್ರೀಗ, ಎಲ್ಲವೂ ಸರಿ ಹೋಗಿರುವ ಹಾಗಿದೆ. ದೀಪಿಕಾ ಹಾಗೂ ಕತ್ರಿನಾ ಕೈಫ್ ನಡುವಿನ ಶೀತಲ ಸಮರ ಅಂತ್ಯವಾಗಿದೆ. ಮುಂದೆ ಓದಿರಿ...

  ಮುನಿಸಿಗೆ ಪೂರ್ಣವಿರಾಮ ಇಟ್ಟ ದೀಪಿಕಾ

  ಮುನಿಸಿಗೆ ಪೂರ್ಣವಿರಾಮ ಇಟ್ಟ ದೀಪಿಕಾ

  ನಿನ್ನೆಯಷ್ಟೇ ಕತ್ರಿನಾ ಕೈಫ್ ತಮ್ಮ ಜನ್ಮದಿನವನ್ನು ಆಚರಿಸಿಕೊಂಡರು. ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಕತ್ರಿನಾ ಕೈಫ್ ಗೆ ದೀಪಿಕಾ ಪಡುಕೋಣೆ ಶುಭಾಶಯ ತಿಳಿಸುವ ಮೂಲಕ ತಮ್ಮ ನಡುವೆ ಇದ್ದ ಮುನಿಸಿಗೆ ಪೂರ್ಣ ವಿರಾಮ ಇಟ್ಟರು.

  ಗೆಳೆಯ ರಣ್ವೀರ್ ಹುಟ್ಟುಹಬ್ಬಕ್ಕೆ ದೀಪಿಕಾ ಶುಭ ಕೋರಿದ್ದು ಹೇಗೆ ಗೊತ್ತಾ.?ಗೆಳೆಯ ರಣ್ವೀರ್ ಹುಟ್ಟುಹಬ್ಬಕ್ಕೆ ದೀಪಿಕಾ ಶುಭ ಕೋರಿದ್ದು ಹೇಗೆ ಗೊತ್ತಾ.?

  ದೀಪಿಕಾ ಪಡುಕೋಣೆ ಕಳುಹಿಸಿದ ಸಂದೇಶ ಏನು.?

  ದೀಪಿಕಾ ಪಡುಕೋಣೆ ಕಳುಹಿಸಿದ ಸಂದೇಶ ಏನು.?

  ''ಹ್ಯಾಪಿ ಬರ್ತಡೇ ಕತ್ರಿನಾ... ಆರೋಗ್ಯ ಹಾಗೂ ಸಂತೋಷ ಸದಾ ನಿಮ್ಮದಾಗಿರಲಿ ಎಂದು ಹಾರೈಸುವೆ'' ಅಂತ ಹಾರ್ಟ್ ಸಿಂಬಲ್ ಹಾಕಿ ಕತ್ರಿನಾ ಕೈಫ್ ಫೋಟೋಗೆ ದೀಪಿಕಾ ಪಡುಕೋಣೆ ಕಾಮೆಂಟ್ ಮಾಡಿದ್ದಾರೆ. ದೀಪಿಕಾ ಹಾಗೂ ಕ್ಯಾಟ್ ನಡುವಿನ ಕಿತ್ತಾಟ ಕೊನೆಗೊಂಡಿದೆ ಅನ್ನೋದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ.?

  ಛೇ.. ಕತ್ರಿನಾ ಬಗ್ಗೆ ಅರ್ಜುನ್ ಕಪೂರ್ ಹೀಗಾ ಕಾಮೆಂಟ್ ಮಾಡೋದು.?!ಛೇ.. ಕತ್ರಿನಾ ಬಗ್ಗೆ ಅರ್ಜುನ್ ಕಪೂರ್ ಹೀಗಾ ಕಾಮೆಂಟ್ ಮಾಡೋದು.?!

  ಒಂದಾಗಿದ್ದು ಹೇಗೆ.?

  ಒಂದಾಗಿದ್ದು ಹೇಗೆ.?

  ಅಷ್ಟಕ್ಕೂ, ದೀಪಿಕಾ ಹಾಗೂ ಕತ್ರಿನಾ ಹೇಗೆ ಒಂದಾದ್ರು ಅಂದುಕೊಳ್ತಿದ್ದೀರಾ.? ಕತ್ರಿನಾ ಕೈಫ್ ಗೂ ರಣ್ಬೀರ್ ಕಪೂರ್ ಕೈಕೊಟ್ಟು, ಇದೀಗ ಆಲಿಯಾ ಭಟ್ ಜೊತೆ ಸುತ್ತಾಡುತ್ತಿದ್ದಾರೆ. ಹೀಗಾಗಿ, ಸಮಾನ ದುಃಖಿಗಳಾದ ದೀಪಿಕಾ ಮತ್ತು ಕತ್ರಿನಾ ಒಂದಾಗಿದ್ದಾರೆ. ಇದೀಗ ಒಂದಾಗಿರುವ ಇವರಿಬ್ಬರ ಸಿಟ್ಟು ಆಲಿಯಾ ಮೇಲೆ ತಿರುಗಬಹುದೇನೋ.?!

  ರಣ್ವೀರ್ ಸಿಂಗ್ ಜೊತೆಗೆ ದೀಪಿಕಾ ಮದುವೆ

  ರಣ್ವೀರ್ ಸಿಂಗ್ ಜೊತೆಗೆ ದೀಪಿಕಾ ಮದುವೆ

  ರಣ್ಬೀರ್ ಕಪೂರ್ ರಿಂದ ದೂರವಾದ ಬಳಿಕ ರಣ್ವೀರ್ ಸಿಂಗ್ ಪ್ರೀತಿಯಲ್ಲಿ ದೀಪಿಕಾ ಪಡುಕೋಣೆ ಮುಳುಗಿದ್ದಾರೆ. ಇದೇ ವರ್ಷಾಂತ್ಯದಲ್ಲಿ ಇವರಿಬ್ಬರ ಮದುವೆ ನಡೆಯುವ ಸಾಧ್ಯತೆ ಇದೆ. ಆದ್ರೆ, ಕತ್ರಿನಾ ಮಾತ್ರ ಇನ್ನೂ ಸಿಂಗಲ್ ಆಗೇ ಇರುವ ಹಾಗಿದೆ.?

  English summary
  Bollywood Actress Deepika Padukone ends cold war with Katrina Kaif.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X