For Quick Alerts
  ALLOW NOTIFICATIONS  
  For Daily Alerts

  ಕೆಟ್ಟದಾಗಿ ಕಾಮೆಂಟ್ ಮಾಡಿದವರಿಗೆ ತಕ್ಕ ತಿರುಗೇಟು ನೀಡಿದ ದೀಪಿಕಾ ಪಡುಕೋಣೆ

  |

  ಸಾಮಾಜಿಕ ಜಾಲತಾಣದಲ್ಲಿ ತನ್ನ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ ಮತ್ತು ತನ್ನ ಹೆಸರನ್ನು ಬಳಸಿ ಅಸಭ್ಯವಾಗಿ ಟ್ರೋಲ್ ಮಾಡುವವರಿಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಕ್ಕ ತಿರುಗೇಟು ನೀಡಿದ್ದಾರೆ.

  ತನಗೆ ಕೆಟ್ಟದಾಗಿ ಸಂದೇಶ ಕಳುಹಿಸಿರುವ ವ್ಯಕ್ತಿಯ ಸ್ಕ್ರೀನ್ ಶಾರ್ಟ್‌ ಹಾಗೂ ಅದಕ್ಕೆ ನೀಡಿದ್ದ ಉತ್ತರವನ್ನು ಇನ್ಸ್ಟಾದಲ್ಲಿ ಶೇರ್ ಮಾಡಿದ್ದರು. ಈ ಪೋಸ್ಟ್‌ನ್ನು ತಮ್ಮ ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದರು. ನಂತರ, ಆ ಸ್ಟೇಟಸ್ ಸಹ ಡಿಲೀಟ್ ಮಾಡಿದ್ದಾರೆ.

  ಖಳನಾಯಕಿ ಆಗಲಿದ್ದಾರೆ ನಟಿ ದೀಪಿಕಾ ಪಡುಕೋಣೆ

  ಕೆಟ್ಟದಾಗಿ ಕಾಮೆಂಟ್ ಮಾಡಿದ್ದ ವ್ಯಕ್ತಿಗೆ ''ನಿನ್ನ ಬಗ್ಗೆ ನಿಮ್ಮ ಕುಟುಂಬ ಮತ್ತು ಸ್ನೇಹಿತರು ಹೆಮ್ಮೆ ಪಡುತ್ತಾರೆ'' ಎಂದು ಪ್ರತಿಕ್ರಿಯಿಸಿದ್ದರು. ಈ ಪೋಸ್ಟ್‌ನ್ನು ಇನ್ಸ್ಟಾಗ್ರಾಂ ಸ್ಟೇಟಸ್‌ನಿಂದ ದೀಪಿಕಾ ಡಿಲೀಟ್ ಮಾಡಿಕೊಂಡಿದ್ದಾರೆ.

  ಇದಕ್ಕೂ ಮುಂಚೆ ನಟಿ ದೀಪಿಕಾ ಪಡುಕೋಣೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿದ್ದ ಎಲ್ಲ ಪೋಸ್ಟ್‌ಗಳನ್ನು ತೆಗೆದು ಹಾಕಿದ್ದರು. ಡಿಸೆಂಬರ್ 31 ರಂದು ಎಲ್ಲ ಪೋಸ್ಟ್ ಡಿಲೀಟ್ ಮಾಡಿದ್ದರು. ನಂತರ, ಹೊಸದಾಗಿ ವಿಡಿಯೋಗಳನ್ನು ಹಂಚಿಕೊಂಡಿದ್ದರು.

  ದೀಪಿಕಾ ಪಡುಕೋಣೆಯನ್ನು ಹಿಗ್ಗಾ-ಮುಗ್ಗಾ ಹೊಗಳಿದ ಹೊಸ ನಟಿ

  ದೀಪಿಕಾ ಪಡುಕೋಣೆ ಸದ್ಯ ಶಕುನ್ ಬಾತ್ರ ನಿರ್ದೇಶನದಲ್ಲಿ ಇನ್ನು ಹೆಸರಿಡದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರೀಕರಣ ಬಹುತೇಕ ಮುಗಿದಿದೆ. ರಣ್ವೀರ್ ಸಿಂಗ್ ನಟಿಸಿರುವ '83' ಚಿತ್ರದಲ್ಲೂ ದೀಪಿಕಾ ಕಾಣಿಸಿಕೊಂಡಿದ್ದಾರೆ.

  ಹೃತಿಕ್ ರೋಷನ್ ಅಭಿನಯಿಸಲಿರುವ ಚಿತ್ರದಲ್ಲಿ ದೀಪಿಕಾ ನಟಿಸಲಿದ್ದು, ಈ ಚಿತ್ರವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸಲಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ ಪ್ರಭಾಸ್ 21ನೇ ಚಿತ್ರದಲ್ಲೂ ದೀಪಿಕಾ ನಾಯಕಿಯಾಗಿದ್ದಾರೆ.

  ಸಿನಿಮಾ ರಿಲೀಸ್ ಗು ಮುಂಚೆಯೇ ಬರ್ತಿದೆ ಸಿಕ್ಕಾಪಟ್ಟೆ ಆಫರ್ | Zaid Khan | Filmibeat Kannada
  English summary
  Bollywood actress Deepika padukone Has Reply For Troller Who abused her on Instagram.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X