»   » ರಣ್ವೀರ್ ಜೊತೆ ಡೇಟಿಂಗ್: ದೀಪಿಕಾ ಹೇಳಿದ್ದೇನು?

ರಣ್ವೀರ್ ಜೊತೆ ಡೇಟಿಂಗ್: ದೀಪಿಕಾ ಹೇಳಿದ್ದೇನು?

Posted By:
Subscribe to Filmibeat Kannada

ಚೆನ್ನೈ ಎಕ್ಸ್ ಪ್ರೆಸ್ ಮತ್ತು ರಾಮ್ ಲೀಲಾ ಚಿತ್ರದ ಯಶಸ್ಸಿನಿಂದ ಬೀಗುತ್ತಿರುವ ದೀಪಿಕಾ ಪಡುಕೋಣೆಯ ಸುತ್ತಮುತ್ತ ರೂಮರ್ಸ್ ಸುದ್ದಿಗಳು ರೋಮಿಂಗ್ ಮಾಡುತ್ತಲೇ ಇವೆ. ಈ ಎಲ್ಲಾ ಸುದ್ದಿಗಳಿಗೆ ದೀಪಿಕಾ ತೇಪೆ ಹಚ್ಚುವ ಕೆಲಸಕ್ಕೀಗ ಮುಂದಾಗಿದ್ದಾರೆ.

ರಾಮ್ ಲೀಲಾ ಚಿತ್ರದ ಶೂಟಿಂಗ್ ವೇಳೆ ದೀಪಿಕಾ, ಚಿತ್ರದ ಹೀರೋ ರಣ್ವೀರ್ ಸಿಂಗ್ ಜೊತೆ ಡೇಟಿಂಗ್ ಮಾಡುತ್ತಿದ್ದಳು ಎನ್ನುವ ಸುದ್ದಿ ಕೇಳಿ ದೀಪಿಕಾಗೆ ಮಂಡೆ ಬಿಸಿಯಾಗಿದೆಯತೆ. ನೋ..ನೋ.. ನಾನು ಯಾರ ಜೊತೆನೂ ಡೇಟಿಂಗ್ ಮಾಡುತ್ತಿಲ್ಲ, ಮುಂದೇನೂ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ.

Bollywood actress Deepika Padukone not dating with Ranveer Singh

ಮೇಲಿನ ಹೇಳಿಕೆಗೆ ತದನಂತರ ಸ್ವಲ್ಪ ತಿದ್ದುಪಡಿ ಮಾಡಿದ ದೀಪಿಕಾ, ಸದ್ಯ ಯಾರ ಜೊತೆನೂ ಸಂಬಂಧ ಬೆಳಿಸಿ ಕೊಳ್ಳಲು ಸಿದ್ದಳಿಲ್ಲ. ನನ್ನ ಸಿನಿಮಾ ಜೀವನಕ್ಕೆ ಇದರಿಂದ ಏನೂ ಆಗಬೇಕಿಲ್ಲ. ಈಗ ನಾನು ನನ್ನ ಚಿತ್ರಗಳ ಯಶಸ್ಸಿನಿಂದ ಸಂತುಷ್ಟನಾಗಿದ್ದೇನೆ ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ರಾಮ್ ಲೀಲಾ ಚಿತ್ರದಲ್ಲಿ ನಾಯಕ ರಣ್ವೀರ್ ಸಿಂಗ್ ಮತ್ತು ನಾಯಕಿ ದೀಪಿಕಾ ಪಡುಕೋಣೆ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಇದಕ್ಕೆ ಸುಣ್ಣಬಣ್ಣ ಹೊಡೆದು ಮುಂಬೈ ಫಿಲ್ಮಿ ಜಗತ್ತು ಇಬ್ಬರೂ ಶೂಟಿಂಗ್ ವೇಳೆ ಮತ್ತು ನಂತರವೂ ಡೇಟಿಂಗ್ ನಲ್ಲಿದ್ದರು ಎಂದು ಸುದ್ದಿ ಹಬ್ಬಿಸಿತ್ತು.

ಇತ್ತ ಬಾಲಿವುಡ್ ಫಿಲ್ಮಿ ಜಗತ್ತಿನ 'ಚಿಕ್ನಿ ಚಮೇಲಿ' ಬೆಡಗಿ ಕತ್ರಿನಾ ಕೈಫ್ ಹೇಳಿಕೆ ನೀಡಿ, ನಾನೀಗ ಏಕಾಂಗಿ, ಮದುವೆಯಾಗುವ ತನಕ ಯಾರ ಜೊತೆನೂ ಡೇಟಿಂಗ್ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಕತ್ರಿನಾ ಈ ಹೇಳಿಕೆ ಸಲ್ಮಾನ್ ಖಾನ್ ಮತ್ತು ಕಪೂರ್ ಖಾಂದಾನ್ ಕುಡಿ ರಣಬೀರ್ ಸಿಂಗ್ ಕಿವಿಗೆ ಬಿದ್ದಿದೆಯೋ ಇಲ್ಲವೋ ಎನ್ನುವ ಮಾಹಿತಿ ಲಭ್ಯವಾಗಿಲ್ಲ.

ರಾಮ್ ಲೀಲಾ ಚಿತ್ರ ವಿಮರ್ಶೆ

English summary
Bollywood actress Deepika Padukone said, I don't think I am ready for a relationship at the moment. I don't think my career has anything to do with my relationship. I am in a happy space right now and not ready to be in a relationship. About Ranveer Singh all news are baseless.
Please Wait while comments are loading...