For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್ ಸಿನಿಮಾಕ್ಕೆ ಕೈಕೊಟ್ಟರಾ ದೀಪಿಕಾ ಪಡುಕೋಣೆ?

  |

  ಇನ್ನೂ ಹೆಸರಿಡದ ತೆಲುಗು ಸಿನಿಮಾ ಒಂದರಲ್ಲಿ ನಟ ಪ್ರಭಾಸ್ ಹಾಗೂ ದೀಪಿಕಾ ಪಡುಕೋಣೆ ಒಟ್ಟಿಗೆ ನಟಿಸುತ್ತಿರುವ ಅಧಿಕೃತವಾಗಿ ಬಹಳ ದಿನಗಳಾಗಿವೆ.

  ಹೊಸ ಸುದ್ದಿಯೆಂದರೆ ಪ್ರಭಾಸ್ ಜೊತೆ ಮಾಡಬೇಕಾಗಿದ್ದ ಸಿನಿಮಾಕ್ಕೆ ದೀಪಿಕಾ ಪಡುಕೋಣೆ ಕೈಕೊಟ್ಟರಾ? ಎಂಬುದು. ಈ ಅನುಮಾನ ಏಳಲು ಕಾರಣ ದೀಪಿಕಾ ಪಡುಕೋಣೆ ಒಪ್ಪಿಕೊಂಡಿರುವ ಹೊಸ ಸಿನಿಮಾ.

  ನಟಿ ದೀಪಿಕಾ ಪಡುಕೋಣೆ , ಹೃತಿಕ್ ರೋಷನ್ ಜೊತೆಗೆ ಹೊಸ ಸಿನಿಮಾ ಒಂದಕ್ಕೆ ಸಹಿ ಹಾಕಿದ್ದಾರೆ. ಸಿನಿಮಾಕ್ಕೆ ಫೈಟರ್ ಎಂಬ ಹೆಸರಿಡಲಾಗಿದ್ದು. ಇದೊಂದು ಪಕ್ಕಾ ಆಕ್ಷನ್ ಥ್ರಿಲ್ಲರ್ ಆಗಿರಲಿದೆ. ಆದರೆ ಹೃತಿಕ್ ಜೊತೆಗೆ ಸಿನಿಮಾದಲ್ಲಿ ನಟಿಸಲು ಪ್ರಭಾಸ್‌ ಸಿನಿಮಾದಿಂದ ಹಿಂದೆ ಸರಿದರೇ ದೀಪಿಕಾ ಎಂಬ ಅನುಮಾನ ಕಾಡುತ್ತಿದೆ.

  ಹೃತಿಕ್ ರೋಷನ್ ಸಿನಿಮಾಕ್ಕೆ ಡೇಟ್ಸ್ ನೀಡಿದ ದೀಪಿಕಾ

  ಹೃತಿಕ್ ರೋಷನ್ ಸಿನಿಮಾಕ್ಕೆ ಡೇಟ್ಸ್ ನೀಡಿದ ದೀಪಿಕಾ

  ನಾಗ್ ಅಶ್ವಿನ್ ನಿರ್ದೇಶಿಸಲಿರುವ ಪ್ರಭಾಸ್-ದೀಪಿಕಾ ನಟನೆಯ ಸಿನಿಮಾವು ಮೇ-ಜೂನ್ ವೇಳೆಗೆ ಪ್ರಾರಂಭವಾಗಲಿತ್ತು. ಅದೇ ವೇಳೆಗೆ ದೀಪಿಕಾ ಪಡುಕೋಣೆ ಚಿತ್ರೀಕರಣಕ್ಕೆ ಹಾಜರಾಗಬೇಕಿತ್ತು. ಆದರೆ ಅದೇ ಡೇಟ್ಸ್ ಅನ್ನು ಈಗ ಹೃತಿಕ್ ರೋಷನ್ ಸಿನಿಮಾಕ್ಕೆ ಕೊಟ್ಟಿದ್ದಾರೆ ದೀಪಿಕಾ ಪಡುಕೋಣೆ.

  ಫೈಟರ್ ಗಾಗಿ ಪ್ರಭಾಸ್ ಸಿನಿಮಾದಿಂದ ಹಿಂದಕ್ಕೆ

  ಫೈಟರ್ ಗಾಗಿ ಪ್ರಭಾಸ್ ಸಿನಿಮಾದಿಂದ ಹಿಂದಕ್ಕೆ

  'ಫೈಟರ್' ಸಿನಿಮಾಕ್ಕಾಗಿ ಪ್ರಭಾಸ್ ಸಿನಿಮಾದಿಂದ ದೀಪಿಕಾ ಪಡುಕೋಣೆ ಹಿಂದೆ ಸರಿದಿದ್ದಾರೆ ಎನ್ನಲಾಗುತ್ತಿದೆ. ಸಲಾರ್ ಹಾಗೂ ಆದಿಪುರುಷ್ ಸಿನಿಮಾದಲ್ಲಿ ಬ್ಯುಸಿಯಾಗಿರುವ ಪ್ರಭಾಸ್ , ದೀಪಿಕಾ ಜೊತೆಗಿನ ಸಿನಿಮಾವನ್ನು ಇನ್ನಷ್ಟು ಹಿಂದಕ್ಕೆ ತಳ್ಳಿದ್ದಾರೆ ಎನ್ನಲಾಗಿದೆ.

  ಹೃತಿಕ್ ಸಿನಿಮಾಕ್ಕೆ ಡೇಟ್ಸ್ ಕೊಟ್ಟ ದೀಪಿಕಾ

  ಹೃತಿಕ್ ಸಿನಿಮಾಕ್ಕೆ ಡೇಟ್ಸ್ ಕೊಟ್ಟ ದೀಪಿಕಾ

  ಸಿನಿಮಾ ವನ್ನು ಮುಂದೂಡಿದ ಕಾರಣದಿಂದಲೇ ದೀಪಿಕಾ ಪಡುಕೋಣೆ ತಮ್ಮ ಡೇಟ್ಸ್ ಅನ್ನು ಹೃತಿಕ್ ಸಿನಿಮಾಕ್ಕೆ ನೀಡಿದ್ದಾರೆ, ಪ್ರಭಾಸ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಟಿಸುವುದು ಅನುಮಾನ ಎನ್ನಲಾಗುತ್ತಿದೆ. ನಿರ್ದೇಶಕ ನಾಗ್ ಅಶ್ವಿನ್, ಹೊಸ ನಾಯಕಿಯನ್ನು ಹುಡುಕಬೇಕಾದ ಪರಿಸ್ಥಿತಿ ಒದಗಿ ಬರುವ ಸಾಧ್ಯತೆ ಇದೆ.

  ಯಾವ-ಯಾವ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಪ್ರಭಾಸ್-ದೀಪಿಕಾ

  ಯಾವ-ಯಾವ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಪ್ರಭಾಸ್-ದೀಪಿಕಾ

  ನಟಿ ದೀಪಿಕಾ ಪಡುಕೋಣೆ ಪ್ರಸ್ತುತ ಶಾರುಖ್ ಖಾನ್ ನಟನೆಯ 'ಪಠಾಣ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾದ ಬಳಿಕ ಹೃತಿಕ್ ಜೊತೆ ಫೈಟರ್ ಪ್ರಾರಂಭಿಸಲಿದ್ದಾರೆ. ಇನ್ನು ನಟ ಪ್ರಭಾಸ್, ರಾಧೆ-ಶ್ಯಾಂ ಚಿತ್ರೀಕರಣ ಮುಗಿಸಿ ಇದೀಗ ಸಲಾರ್ ಹಾಗೂ ಆದುಪುರುಷ್ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲಿದ್ದಾರೆ.

  English summary
  Deepika Padukone may out of Prabhas's movie due to dates issue. She given dates to Hritik Roshan's movie 'Fighter'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X