For Quick Alerts
  ALLOW NOTIFICATIONS  
  For Daily Alerts

  ಈ ಒಂದು ಕಾರಣಕ್ಕೆ ಖ್ಯಾತ ನಿರ್ದೇಶಕ ಬನ್ಸಾಲಿ ಸಿನಿಮಾದಿಂದ ದೀಪಿಕಾ ಔಟ್

  |

  ಬಾಲಿವುಡ್ ಸೂಪರ್ ಹಿಟ್ ಕಾಂಬಿನೇಷನ್‌ಗಳಲ್ಲಿ ದೀಪಿಕಾ ಪಡುಕೋಣೆ ಮತ್ತು ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಕಾಂಬಿನೇಷನ್ ಕೂಡ ಒಂದು. ಈ ಜೋಡಿ ರಾಮ್ ಲೀಲಾ, ಬಾಜಿರಾವ್ ಮಸ್ತಾನಿ, ಪದ್ಮಾವತ್ ಅಂಥ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.

  ಇದೀಗ ಮತ್ತೆ ಈ ಜೋಡಿ ಒಂದಾಗಲಿದೆ ಎನ್ನುವ ಮಾತು ಕೇಳಿಬರುತ್ತಿತ್ತು. ಮತ್ತೊಂದು ಅದ್ಭುತ ಸಿನಿಮಾ ಪ್ರೇಕ್ಷಕರಿಗೆ ಸಿಗಲಿದೆ ಎಂದು ಬನ್ಸಾಲಿ ನಿರ್ದೇಶನದ ಸಿನಿಮಾದಲ್ಲಿ ದೀಪಿಕಾರನ್ನು ನೋಡಲು ಅಭಿಮಾನಿಗಳು ಸಹ ಕಾತುರದಿಂದ ಕಾಯುತ್ತಿದ್ದರು. ಆದರೀಗ ಅಭಿಮಾನಿಗಳ ಆಸೆಗೆ ನಿರಾಸೆ ಮೂಡಿಸಿದ್ದಾರೆ ದೀಪಿಕಾ. ಬನ್ಸಾಲಿ ಹೊಸ ಸಿನಿಮಾ ಬೈಜು ಬಾವ್ರಾ ಚಿತ್ರದ ತಯಾರಿಯಲ್ಲಿದ್ದಾರೆ. ಈಗಾಗಲೇ ಪ್ರಿ-ಪ್ರೊಡಕ್ಷನ್ ಕೆಲಸ ಪ್ರಾರಂಭವಾಗಿದ್ದು, ಚಿತ್ರದಲ್ಲಿ ಯಾರೆಲ್ಲ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.

  ಆಸ್ಪತ್ರೆಯಲ್ಲಿ ಕಾಣಿಸಿಕೊಂಡ ರಣ್ವೀರ್ ದಂಪತಿ: ದೀಪಿಕಾ ಗರ್ಭಿಣಿನಾ? ನೆಟ್ಟಿಗರ ಪ್ರಶ್ನೆಆಸ್ಪತ್ರೆಯಲ್ಲಿ ಕಾಣಿಸಿಕೊಂಡ ರಣ್ವೀರ್ ದಂಪತಿ: ದೀಪಿಕಾ ಗರ್ಭಿಣಿನಾ? ನೆಟ್ಟಿಗರ ಪ್ರಶ್ನೆ

  ನಾಯಕಿ ಪಾತ್ರಕ್ಕೆ ದೀಪಿಕಾ ಹೆಸರು ಬಹುತೇಕ ಖಚಿತವಾಗಿತ್ತು. ಆದರೀಗ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ದೀಪಿಕಾ ಸಿನಿಮಾದಿಂದ ಔಟ್ ಆಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಚಿತ್ರದಲ್ಲಿ ನಾಯಕನಾಗಿ ಖ್ಯಾತ ನಟ ರಣ್ವೀರ್ ಸಿಂಗ್ ಕಾಣಿಸಿಕೊಳ್ಳುತ್ತಿದ್ದಾರೆ. ರಣ್ವೀರ್‌ಗೆ ನಾಯಕಿಯಾಗಿ ರಿಯಲ್ ಲೈಫ್ ಪತ್ನಿ ದೀಪಿಕಾ ನಟಿಸಬೇಕಿತ್ತು. ಆದರೆ ಕರಾವಳಿ ಸುಂದರಿ ಬನ್ಸಾಲಿ ಸಿನಿಮಾದಿಂದ ಹೊರಬಿದ್ದಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ಅಂಗಳದಲ್ಲಿ ವೈರಲ್ ಆಗಿದೆ.

  ದೀಪಿಕಾ ಸಿನಿಮಾದಿಂದ ಔಟ್ ಆಗಲು ಕಾರಣ ಕೇಳಿದ್ರೆ ನಿಜಕ್ಕೂ ಅಚ್ಚರಿ ಪಡುತ್ತೀರಿ. ಬೈಜು ಬಾವ್ರಾ ಸಿನಿಮಾದಲ್ಲಿ ದೀಪಿಕಾ ನಾಯಕಿಯಾಗಿ ನಟಿಸಲು ಪತಿ ರಣ್ವೀರ್ ಸಿಂಗ್ ಅಷ್ಟೆ ಸಂಭಾವನೆ ಕೇಳಿದ್ದಾರಂತೆ. ಈ ಒಂದು ಕಾರಣಕ್ಕೆ ದೀಪಿಕಾರನ್ನು ಸಿನಿಮಾದಿಂದ ಕೈಬಿಡಲಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

  ಸಿನಿಮಾತಂಡದ ಮೂಲಗಳು ಆಂಗ್ಲ ಮಾಧ್ಯಮಕ್ಕೆ ನೀಡಿದ ಮಾಹಿತಿ ಪ್ರಕಾರ, "ದೀಪಿಕಾ ಸ್ಪಷ್ಟವಾಗಿ ತನ್ನ ಗಂಡನಂತೆಯೇ ಸಂಭಾವನೆಯನ್ನು ಬಯಸುತ್ತಾರೆ. ಒಂದು ಪೈಸೆಯೂ ಹೆಚ್ಚಿಲ್ಲ, ಒಂದು ಪೈಸೆಯೂ ಕಡಿಮೆಯಿಲ್ಲ" ಎಂದು ಹೇಳಿದ್ದಾರೆ. ನಟರು ಮತ್ತು ನಟಿಯರ ನಡುವಿನ ಸಮಾನತೆಯ ಸಂಬಳಕ್ಕಾಗಿ ಬೇಡಿಕೆ ಇಡುವರಲ್ಲಿ ನಟಿ ದೀಪಿಕಾ ಕೂಡ ಮೊದಲಿಗರು. ಪುರುಷರಷ್ಟೆ ಸಂಬಳ ಬೇಡಿಕೆ ಇಡುವ ದೀಪಿಕಾ, ಬನ್ಸಾಲಿ ಸಿನಿಮಾಗೂ ಪತಿಯಷ್ಟೆ ಸಂಬಳ ಕೇಳಿದ್ದಾರೆ. ಆದರೆ ವೇತನ ಸಮಾನತೆಯ ಬೇಡಿಕೆಯೇ ದೀಪಿಕಾಗೆ ಮುಳುವಾಗಿದೆ.

  ಬನ್ಸಾಲಿ ಹತ್ತಿರದ ಮೂಲಗಳ ಪ್ರಕಾರ ಇದು ಅತಿಯಾಯಿತು ಅಂತ ಅನಿಸಿಲ್ವಾ? ಎಂದು ಕೇಳುತ್ತಿದ್ದಾರೆ ಎನ್ನಲಾಗುತ್ತಿದೆ. ಬನ್ಸಾಲಿ ನಿರ್ದೇಶನದಲ್ಲಿ ದೀಪಿಕಾ ಉತ್ತಮ ಸಿನಿಮಾಗಳನ್ನು ನೀಡಿದ್ದಾರೆ. ಮೂರು ಸಿನಿಮಾಗಳನ್ನು ರಣ್ವೀರ್ ಮತ್ತು ದೀಪಿಕಾ ಮಾಡಿದ್ದಾರೆ. ಹೀಗಿರುವಾಗ ದೀಪಿಕಾರದ್ದು ಇದು ಅತಿಯಾಯಿತು ಅಂತ ಅನಿಸಿಲ್ಲವಾ? ಎಂದು ಹೇಳಿದ್ದಾರೆ.

  Deepika Padukone out of Sanjay Leela Bhansali film; seeks equal remuneration as Ranveer Singh for the movie

  ಇನ್ನು ಈ ಹಿಂದೆ ಸಂಭಾವನೆ ವಿಚಾರ ನಟಿ ಕರೀನಾ ಕಪೂರ್ ಬಾಳಿಗೂ ಮುಳುವಾಗಿತ್ತು. ರಾಮಾಯಣ ಸಿನಿಮಾದಲ್ಲಿ ಸೀತೆ ಪಾತ್ರ ಮಾಡಲು ಕರೀನಾ ಅತೀ ಹೆಚ್ಚು ಸಂಭಾವನೆ ಬೇಡಿಕೆ ಇಟ್ಟಿದ್ದಾರೆ ಎನ್ನುವ ಸುದ್ದಿ ವೈರಸ್ ಆಗಿತ್ತು. ಅನೇಕರು ಕರೀನಾ ಪರ ಮಾತನಾಡಿದ್ದರು. ಪುರುಷರಷ್ಟೆ ಸಂಭಾವನೆ ಪಡೆಯುವುದು ತಪ್ಪಾ ಎಂದು ಕೇಳಿದ್ದರು. ಅಂದಹಾಗೆ ಅಲೌಕಿಕ್ ಕುಮಾರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾದಲ್ಲಿ ಕರೀನಾ 12 ಕೋಟಿ ಸಂಭಾವನೆ ಕೇಳಿದ್ದರು. ಸೀತೆ ಪಾತ್ರಕ್ಕೆ ಕರೀನಾ ಇಷ್ಟೊಂದು ಸಂಭಾವನೆ ಕೇಳಬಾರದಿತ್ತು ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದರು.

  ಸದ್ಯ ದೀಪಿಕಾ ಹೆಚ್ಚು ಸಂಭಾವನೆ ಕೇಳಿ ಬನ್ಸಾಲಿ ಸಿನಿಮಾ ಕಳೆದುಕೊಂಡಿದ್ದಾರೆ. ರಣ್ವೀರ್ ಸಿಂಗ್ ಜೊತೆ ನಾಯಕಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಅಭಿಮಾನಿಗಳ ಕುತೂಹಲ ಮೂಡಿಸಿದೆ. ಬನ್ಸಾಲಿ ಸದ್ಯ ಗಂಗೂಬಾಯಿ ಕಾಠಿಯಾವಾಡಿ ಸಿನಿಮಾದ ಚಿತ್ರೀಕರಣ ಮುಗಿಸಿ, ಬಿಡುಗಡೆಗೆ ತಯಾರಿ ನಡೆಸುತ್ತಿದ್ದಾರೆ.

  English summary
  Actress Deepika Padukone out of Sanjay Leela Bhansali film; seeks equal remuneration as Ranveer Singh for the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X