For Quick Alerts
  ALLOW NOTIFICATIONS  
  For Daily Alerts

  ಅಂತೂ ರಣ್ವೀರ್-ದೀಪಿಕಾ ಪಡುಕೋಣೆ ಮದುವೆ ಆಗೋದು ಪಕ್ಕಾ ಆಯ್ತು.!

  By Harshitha
  |

  ಬಾಲಿವುಡ್ ನ ಎನರ್ಜಿಟಿಕ್ ಹೀರೋ ರಣ್ವೀರ್ ಸಿಂಗ್ ಹಾಗೂ ಬೆಂಗಳೂರು ಬೆಡಗಿ ದೀಪಿಕಾ ಪಡುಕೋಣೆ ಲವ್ ಸ್ಟೋರಿ ಎಲ್ಲರಿಗೂ ಗೊತ್ತಿರುವ ವಿಷಯವೇ.! ತಮ್ಮ ಪ್ರೇಮ್ ಕಹಾನಿ ಬಗ್ಗೆ ರಣ್ವೀರ್ ಸಿಂಗ್ ಆಗಲಿ ದೀಪಿಕಾ ಪಡುಕೋಣೆ ಆಗಲಿ ಎಲ್ಲೂ ಬಾಯಿ ಬಿಟ್ಟಿಲ್ಲ. ಆದ್ರೆ, ಇಬ್ಬರ ಮಧ್ಯೆ ಪ್ರೀತಿ ಅರಳಿರುವುದು ಒಂಥರಾ ಓಪನ್ ಸೀಕ್ರೆಟ್ ಇದ್ದ ಹಾಗೆ.

  ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಮದುವೆ ಆದ ಬಳಿಕ ಇಡೀ ಬಾಲಿವುಡ್ ಕಣ್ಣು ರಣ್ವೀರ್ ಸಿಂಗ್-ದೀಪಿಕಾ ಪಡುಕೋಣೆ ವಿವಾಹದ ಮೇಲೆ ಬಿದ್ದಿದೆ. ದೀಪಿಕಾ-ರಣ್ವೀರ್ ಈಗ ಮದುವೆ ಆಗ್ತಾರೆ, ಆಗ ಮದುವೆ ಆಗ್ತಾರೆ ಅಂತೆಲ್ಲಾ ಈ ವರ್ಷಾರಂಭದಿಂದಲೂ ಗಾಸಿಪ್ ಕೇಳಿಬರುತ್ತಲೇ ಇತ್ತು.

  ಇದೇ ವರ್ಷ ರಣ್ವೀರ್-ದೀಪಿಕಾ ಮದುವೆಯಂತೆ.! ಹೌದಾ.?ಇದೇ ವರ್ಷ ರಣ್ವೀರ್-ದೀಪಿಕಾ ಮದುವೆಯಂತೆ.! ಹೌದಾ.?

  ಇದೀಗ ದೀಪಿಕಾ-ರಣ್ವೀರ್ ಸಿಂಗ್ ಮದುವೆ ದಿನಾಂಕ ಆಲ್ಮೋಸ್ಟ್ ನಿಗದಿ ಆಗಿರುವ ಹಾಗೆ ಕಾಣುತ್ತಿದೆ. ಅಸಲಿಗೆ, ದೀಪಿಕಾ-ರಣ್ವೀರ್ ಇದೇ ವರ್ಷ ಮದುವೆ ಆಗುತ್ತಿರುವುದು ಪಕ್ಕಾ ಎನ್ನುವುದಕ್ಕೆ ಸಾಕ್ಷಿ ಕಬೀರ್ ಬೇಡಿ ಮಾಡಿರುವ ಒಂದು ಟ್ವೀಟ್.

  ಗೆಳೆಯ ರಣ್ವೀರ್ ಹುಟ್ಟುಹಬ್ಬಕ್ಕೆ ದೀಪಿಕಾ ಶುಭ ಕೋರಿದ್ದು ಹೇಗೆ ಗೊತ್ತಾ.? ಗೆಳೆಯ ರಣ್ವೀರ್ ಹುಟ್ಟುಹಬ್ಬಕ್ಕೆ ದೀಪಿಕಾ ಶುಭ ಕೋರಿದ್ದು ಹೇಗೆ ಗೊತ್ತಾ.?

  ದೀಪಿಕಾ ಪಡುಕೋಣೆ-ರಣ್ವೀರ್ ಸಿಂಗ್ ಮದುವೆ ದಿನಾಂಕದ ಬಗ್ಗೆ ಫಿಲ್ಮ್ ಫೇರ್ ವರದಿ ಪ್ರಕಟ ಮಾಡಿತ್ತು. ಫಿಲ್ಮ್ ಫೇರ್ ಮಾಡಿರುವ ಟ್ವೀಟ್ ನ ರೀಟ್ವೀಟ್ ಮಾಡಿದ ಕಬೀರ್ ಬೇಡಿ, ''ಅದ್ಭುತ ಜೋಡಿ! ಇಟಲಿಯಲ್ಲಿ ಅದ್ಭುತ ತಾಣ! ಅದ್ಭುತ ಸಮಾರಂಭ! ರಣ್ಬೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆಗೆ ಶುಭಾಶಯಗಳು'' ಎಂದಿದ್ದಾರೆ.

  ಅಲ್ಲಿಗೆ, ದೀಪಿಕಾ-ರಣ್ವೀರ್ ಇದೇ ವರ್ಷ ಮದುವೆ ಆಗುತ್ತಿರುವ ಬಗ್ಗೆ ಬಾಲಿವುಡ್ ನಟ ಕಬೀರ್ ಬೇಡಿ ಖಚಿತ ಪಡಿಸಿದ ಹಾಗಾಯ್ತು.

  ದೀಪಿಕಾ-ರಣ್ವೀರ್ ಸಿಂಗ್ ಮದುವೆ ದಿನಾಂಕ ನಿಗದಿ ಆಯ್ತಂತೆ.! ದೀಪಿಕಾ-ರಣ್ವೀರ್ ಸಿಂಗ್ ಮದುವೆ ದಿನಾಂಕ ನಿಗದಿ ಆಯ್ತಂತೆ.!

  ಅಂದ್ಹಾಗೆ, ಸದ್ಯದ ಮಾಹಿತಿ ಪ್ರಕಾರ ನವೆಂಬರ್ 20 ರಂದು ಇಟಲಿಯ Lake Como ದಲ್ಲಿ ದೀಪಿಕಾ-ರಣ್ವೀರ್ ಮದುವೆ ನಡೆಯಲಿದೆ. ಕೇವಲ 30 ಜನರಿಗೆ ಮಾತ್ರ ಮದುವೆಗೆ ಆಹ್ವಾನ ನೀಡಲಾಗುತ್ತಿದ್ದು, ಭಾರತದಲ್ಲಿ ಗ್ರ್ಯಾಂಡ್ ರಿಸೆಪ್ಷನ್ ನಡೆಸಲು ಜೋಡಿ ನಿರ್ಧರಿಸಿದೆ.

  English summary
  Deepika Padukone-Ranveer Singh wedding in Italy confirmed. Kabir Bedi sends out Wishes to the couple.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X