twitter
    For Quick Alerts
    ALLOW NOTIFICATIONS  
    For Daily Alerts

    'ವಿಶ್ವ ಆರ್ಥಿಕ ವೇದಿಕೆ'ಯಲ್ಲಿ ಡಿಪ್ರೆಷನ್ ಬಗ್ಗೆ ದೀಪಿಕಾ ಹೃದಯಸ್ಪರ್ಶಿ ಭಾಷಣ

    |

    Recommended Video

    ಖಿನ್ನತೆ ಬಗ್ಗೆ ಮನಮುಟ್ಟುವಂತೆ ಭಾಷಣ ಮಾಡಿದ ದೀಪಿಕಾ | Deepika Padukone | World Economic Forum | Depression

    ಬಾಲಿವುಡ್ ನ ಮೋಸ್ಟ್ ಟ್ಯಾಲೆಂಟೆಡ್ ಅಂಡ್ ಬ್ಯೂಟಿಫುಲ್ ನಟಿ ದೀಪಿಕಾ ಪಡುಕೋಣೆ. ಟಾಪ್ ಒನ್ ನಟಿಯ ಸಾಲಿನಲ್ಲಿ ಇರುವ ದೀಪಿಕಾ ಇತ್ತೀಚಿಗೆ ಸ್ವಿಡ್ಜರ್ಲ್ಯಾಂಡ್ ನ ದಾವೋಸ್ ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಭಾಗಿಯಾಗಿ, ಕ್ರಿಸ್ಟಲ್ ಅವಾರ್ಡ್ ಸ್ವೀಕರಿಸಿದ್ದಾರೆ.

    ಹೌದು, ವಿಶ್ವ ಆರ್ಥಿಕ ವೇದಿಕೆಯಲ್ಲಿ ದೀಪಿಕಾಗೆ ಕ್ರಿಸ್ಟಲ್ ಅವಾರ್ಡ್ ನೀಡಿ ಗೌರವಿಸಲಾಗಿದೆ. ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದ್ದಕ್ಕಾಗಿ ದೀಪಿಕಾ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಅಂದ್ಹಾಗೆ ದೀಪಿಕಾ ಖಿನ್ನತೆಗೆ ಒಳಗಾದರಿಗೆ ಸಹಾಯ ಮಾಡುವ ಉದ್ದೇಶದಿಂದ 2015ರಲ್ಲಿ 'ಲೀವ್ ಲವ್ ಲಾಫ್' ಸಂಸ್ಥೆಯನ್ನು ಸ್ಥಾಪಿಸಿದ್ದಾರೆ.

    'ಚಪಾಕ್' ನಂತರ ಬಯೋಪಿಕ್ ಆಫರ್: ರಿಜೆಕ್ಟ್ ಮಾಡಿದ ದೀಪಿಕಾ'ಚಪಾಕ್' ನಂತರ ಬಯೋಪಿಕ್ ಆಫರ್: ರಿಜೆಕ್ಟ್ ಮಾಡಿದ ದೀಪಿಕಾ

    ಪ್ರಶಸ್ತಿ ಸ್ವೀಕಾರ ಮಾಡಿ ಮಾತನಾಡಿದ ದೀಪಿಕಾ, ಖಿನ್ನತೆಗೆ ಒಳಗಾದ ಅನುಭವನ್ನು ಹೇಳಿಕೊಂಡಿದ್ದಾರೆ. 2014ರಲ್ಲಿ ಪ್ರಾರಂಭವಾದ ಖಿನ್ನತೆ ಮತ್ತು ಆತಂಕದಿಂದ ಸಾಕಷ್ಟು ಬಾರಿ ವೃತ್ತಿ ಬದುಕನ್ನು ತೊರೆಯುವ ನಿರ್ಧಾರ ಮಾಡಿದ್ದರಂತೆ. ನಂತರ ಅವರ ತಾಯಿ ಹೇಗೆ ಖಿನ್ನತೆಯಿಂದ ಹೊರಗೆ ಕರೆದುಕೊಂಡು ಬಂದರು ಎನ್ನುವ ಬಗ್ಗೆಯು ಮಾತನಾಡಿದ್ದಾರೆ.

    Deepika Padukone Speak About Depression At World Economic Forum

    "ಖಿನ್ನತೆ ಮತ್ತು ಆತಂಕಕ್ಕೆ ಚಿಕಿತ್ಸೆ ನೀಡಲಾಗುತ್ತೆ. ನನ್ನ ಅನುಭವದ ಪ್ರಕಾರ ಸ್ವೀಕಾರವು ಚೇತರಿಕೆಯ ಮೊದಲ ಹೆಜ್ಜೆಯಾಗಿದೆ" ಎಂದು ಹೇಳಿದ್ದಾರೆ. ತನ್ನ ಖಿನ್ನತೆಯ ಅನುಭವನ್ನು ಬಿಚ್ಚಿಡುತ್ತ 'ಲೀವ್ ಲವ್ ಲಾಫ್' ಫೌಂಡೇಶನ್ ಸ್ಥಾಪಿಸಿರುವ ಬಗ್ಗೆಯು ಹೇಳಿದ್ದಾರೆ. ಖಿನ್ನತೆಯಿಂದ ಹೊರಬಂದ ನಂತರ 2015ರಲ್ಲಿ ಲೀವ್ ಲವ್ ಲಾಫ್' ಫೌಂಡೇಶನ್ ಸ್ಥಾಪಿಸುತ್ತಾರೆ. ಬದಲಾವಣೆಯನ್ನು ಮಾಡುವುದು ಮತ್ತು ಕನಿಷ್ಠ ಒಂದು ಜೀವವನ್ನಾದರು ಉಳಿಸುವ ಉದ್ದೇಶದಿಂದ ಸ್ಥಾಪಿಸಲಾಗಿದೆ.

    "ನೀವು ಖಂಡಿತ ಒಬ್ಬಂಟಿಯಲ್ಲ. ಮುಖ್ಯವಾಗಿ ಭರವಸೆ ಇರಬೇಕು" ಎಂದು ಹೇಳಿದ್ದಾರೆ. ದೀಪಿಕಾ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇತ್ತೀಚಿಗೆ ರಿಲೀಸ್ ಆದ ಚಪಾಕ್ ಸಿನಿಮಾದ ಬಗ್ಗೆಯು ದೀಪಿಕಾ ಮಾತನಾಡಿದ್ದಾರೆ.

    English summary
    Bollywood Actress Deepika Padukone speech about Depression At World Economic Forum.
    Tuesday, January 21, 2020, 15:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X