For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್ ಅಭಿಮಾನಿಗಳ ಸಿಟ್ಟೇರಿಸಿದ ದೀಪಿಕಾ ಪಡುಕೋಣೆ ಟ್ವೀಟ್

  |

  ನಟ ಪ್ರಭಾಸ್ ಅಭಿಮಾನಿಗಳು ನಟಿ ದೀಪಿಕಾ ಪಡುಕೋಣೆ ಮೇಲೆ ಸಿಟ್ಟಾಗಿದ್ದಾರೆ. ಇದಕ್ಕೆ ಕಾರಣ ದೀಪಿಕಾ ಪಡುಕೋಣೆ ಮಾಡಿದ್ದ ಟ್ವೀಟ್.

  Hulivana Gangadhar ,ಹಿರಿಯ ನಟ ಕೊರೊನದಿಂದ ಸಾವು | Filmibeat Kannada

  ನಿನ್ನೆಯಷ್ಟೆ ದೀಪಿಕಾ ಪಡುಕೋಣೆ ಅವರು ಪ್ರಭಾಸ್ ಜೊತೆ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ಅಧಿಕೃತಗೊಳಿಸಿದ್ದರು. ಈ ಬಗ್ಗೆ ಟ್ವಿಟ್ಟರ್‌ ನಲ್ಲಿ ಪೋಸ್ಟ್‌ ಹಾಕಿದ್ದರು. ಇಷ್ಟು ದಿನ ಹರಿದಾಡುತ್ತಿದ್ದ ಗಾಳಿಸುದ್ದಿಗಳಿಗೆ ಇದು ತೆರೆ ಎಳೆಯಿತು.

  ಪ್ರಭಾಸ್ ಜೊತೆಗೆ ದೀಪಿಕಾ ಪಡುಕೋಣೆ ನಟಿಸುತ್ತಿರುವ ಬಗ್ಗೆ ಮೊದಲಿಗೆ ಅಭಿಮಾನಿಗಳು ಸಂತಸ ಹಂಚಿಕೊಂಡಿದ್ದರು. ಆದರೆ ನಂತರ ದೀಪಿಕಾ ಪಡುಕೋಣೆ ಮಾಡಿದ ಟ್ವೀಟ್ ಅಭಿಮಾನಿಗಳನ್ನು ಕೆರಳಿಸಿತು. ಆದರೆ ಕೆಲವರು ದೀಪಿಕಾ ಟ್ವೀಟ್‌ಗೆ ಬೆಂಬಲವನ್ನೂ ವ್ಯಕ್ತಪಡಿಸಿದ್ದಾರೆ.

  50ನೇ ವಾರ್ಷಿಕೋತ್ಸವಕ್ಕೆ ಭರ್ಜರಿ ಸುದ್ದಿ ನೀಡಿದ ವೈಜಯಂತಿ ಮೂವೀಸ್50ನೇ ವಾರ್ಷಿಕೋತ್ಸವಕ್ಕೆ ಭರ್ಜರಿ ಸುದ್ದಿ ನೀಡಿದ ವೈಜಯಂತಿ ಮೂವೀಸ್

  ಪ್ರಭಾಸ್ ನಟಿಸುತ್ತಿರುವ 21 ನೇ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. ಈ ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ ಹಾಗಾಗಿ ಅಭಿಮಾನಿಗಳು ಇದನ್ನು 'ಪ್ರಬಾಸ್21' ಎಂದು ಕರೆಯುತ್ತಿದ್ದಾರೆ. ಆದರೆ ಇದು ದೀಪಿಕಾ ಪಡುಕೋಣೆಗೆ ಇಷ್ಟವಾಗಿಲ್ಲ.

  'ಸಿನಿಮಾ ಹೆಸರು 'ಪ್ರಭಾಸ್ 21' ಅಲ್ಲ'

  'ಸಿನಿಮಾ ಹೆಸರು 'ಪ್ರಭಾಸ್ 21' ಅಲ್ಲ'

  ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಭಾನುವಾರ ಟ್ವೀಟ್ ಮಾಡಿರುವ ದೀಪಿಕಾ, 'ಈ ಸಿನಿಮಾಕ್ಕೆ ಪ್ರಭಾಸ್ 21 ಎಂದು ಹೆಸರಿಟ್ಟಿಲ್ಲ. ಇದು ಪ್ರಭಾಸ್ ನಟಿಸುತ್ತಿರುವ 21ನೇ ಸಿನಿಮಾ ಅಷ್ಟೆ' ಎಂದು ಹೇಳಿದ್ದಾರೆ. ಮುಂದುವರೆದು ಇನ್ನೂ ಕೆಲವು ವಿಷಯಗಳನ್ನು ದೀಪಿಕಾ ಸ್ಪಷ್ಟಪಡಿಸಿದ್ದಾರೆ.

  'ಇದು ತ್ರಿಭಾಷಾ ಸಿನಿಮಾ, ಕೇವಲ ತೆಲುಗು ಸಿನಿಮಾ ಅಲ್ಲ'

  'ಇದು ತ್ರಿಭಾಷಾ ಸಿನಿಮಾ, ಕೇವಲ ತೆಲುಗು ಸಿನಿಮಾ ಅಲ್ಲ'

  ಇದು ತ್ರಿಭಾಷಾ ಸಿನಿಮಾ ಆಗಿದ್ದು, ಸಿನಿಮಾವನ್ನು ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ ನಿರ್ಮಿಸಲಾಗುತ್ತಿದೆ. ಇದು ಕೇವಲ ತೆಲುಗು ಸಿನಿಮಾ ಮಾತ್ರ ಅಲ್ಲ ಎಂಬರ್ಥದಲ್ಲಿ ಹೇಳಿದ್ದಾರೆ ದೀಪಿಕಾ ಪಡುಕೋಣೆ.

  13 ವರ್ಷದ ಹಿಂದೆ ತನಗಾಗಿ ಬರೆದಿದ್ದ ಕತೆಯನ್ನು ಈಗ ಒಪ್ಪಿಕೊಂಡ ಪ್ರಭಾಸ್13 ವರ್ಷದ ಹಿಂದೆ ತನಗಾಗಿ ಬರೆದಿದ್ದ ಕತೆಯನ್ನು ಈಗ ಒಪ್ಪಿಕೊಂಡ ಪ್ರಭಾಸ್

  ಪ್ರಭಾಸ್ ವೈಭವೀಕರಣಕ್ಕೆ ದೀಪಿಕಾ ಆಕ್ಷೇಪ

  ಪ್ರಭಾಸ್ ವೈಭವೀಕರಣಕ್ಕೆ ದೀಪಿಕಾ ಆಕ್ಷೇಪ

  ಸಿನಿಮಾವನ್ನು ಕೇವಲ ಪ್ರಭಾಸ್‌ಗೆ ಸೀಮಿತ ಮಾಡುತ್ತಿರುವುದಕ್ಕೆ ದೀಪಿಕಾ ಆಕ್ಷೇಪ ವ್ಯಕ್ತಪಡಿಸಿದ್ದು, ಸಿನಿಮಾದಲ್ಲಿ ನಾಯಕ ನಟನನ್ನು ಮಾತ್ರವೇ ವೈಭವೀಕರಿಸುತ್ತಿರುವ ಬಗ್ಗೆ ಆಕ್ಷೇಪ ಹೊಂದಿರುವುದು ಅವರ ಟ್ವೀಟ್‌ನಲ್ಲಿ ಕಂಡುಬರುತ್ತಿದೆ.

  ಪ್ರಭಾಸ್‌ಗಾಗಿಯೇ ರಚಿಸಲಾದ ಚಿತ್ರಕತೆ

  ಪ್ರಭಾಸ್‌ಗಾಗಿಯೇ ರಚಿಸಲಾದ ಚಿತ್ರಕತೆ

  ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಪ್ರಭಾಸ್ ಅಭಿಮಾನಿಗಳು, ಈ ಸಿನಿಮಾದ ಚಿತ್ರಕತೆಯನ್ನು ಪ್ರಭಾಸ್‌ಗಾಗಿಯೇ ರಚಿಸಲಾಗಿದೆ, ಹಾಗಾಗಿ ಅದನ್ನು ಪ್ರಭಾಸ್ 21 ಎಂದು ಕರೆಯಲಾಗುತ್ತದೆ. ಹಾಗೂ ಸಿನಿಮಾದ ನಾಯಕ, ನಿರ್ದೇಶಕ, ನಿರ್ಮಾಪಕ ಎಲ್ಲರೂ ತೆಲುಗಿನವರು ಹಾಗಾಗಿ ಇದು ತೆಲುಗು ಸಿನಿಮಾ. ತಮಿಳು ಹಾಗೂ ಹಿಂದಿಗೆ ಡಬ್ ಆಗುತ್ತಿದೆ ಅಷ್ಟೆ ಎಂದು ದೀಪಿಕಾ ಗೆ ಉತ್ತರಿಸಿದ್ದಾರೆ.

  'ಕೇವಲ ಪ್ರಭಾಸ್ ಅಲ್ಲ ಇದು ಎಲ್ಲರ ಸಿನಿಮಾ'

  'ಕೇವಲ ಪ್ರಭಾಸ್ ಅಲ್ಲ ಇದು ಎಲ್ಲರ ಸಿನಿಮಾ'

  ದೀಪಿಕಾ ಪಡುಕೋಣೆ ಸಹ ಸೂಪರ್ ಸ್ಟಾರ್ ನಟಿ, ಆಕೆಗೆ ಸಿನಿಮಾದಲ್ಲಿ ಪ್ರಾಮುಖ್ಯತೆ ನೀಡದಿರುವುದು ಅವರಿಗೆ ಸಿಟ್ಟು ತರಿಸಿರುವುದು ಸಾಮಾನ್ಯ. ಇದು ಕೇವಲ ಪ್ರಭಾಸ್ ಸಿನಿಮಾ ಅಲ್ಲ ಎಲ್ಲರ ಸಿನಿಮಾ ಎಂದು ದೀಪಿಕಾ ಗೆ ಬೆಂಬಲ ನೀಡಿದ್ದಾರೆ ಸಹ.

  ಪ್ರಭಾಸ್ ಸಿನಿಮಾ ಬಹಿಷ್ಕರಿಸಲು ಆಗ್ರಹ: ಕನ್ನಡಿಗರ ಅಸಮಾಧಾನಕ್ಕೆ ಕಾರಣವೇನು?ಪ್ರಭಾಸ್ ಸಿನಿಮಾ ಬಹಿಷ್ಕರಿಸಲು ಆಗ್ರಹ: ಕನ್ನಡಿಗರ ಅಸಮಾಧಾನಕ್ಕೆ ಕಾರಣವೇನು?

  English summary
  Deepika Padukone tweeted about Prabhas 21 movie. She said its not titled Prabhas 21 its Prabhas's 21st movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X