For Quick Alerts
  ALLOW NOTIFICATIONS  
  For Daily Alerts

  ದೀಪಿಕಾ-ರಣಬೀರ್ ಹೊಸ '2012 ಲವ್ ಸ್ಟೋರಿ' ಶುರು

  |

  ಬಾಲಿವುಡ್ ನಲ್ಲಿ ಮಾಜಿ ಪ್ರೇಮಿಗಳಿಬ್ಬರು ಮತ್ತೆ ಒಂದಾಗಿದ್ದಾರೆಯೇ? ಹಬ್ಬಿರುವ ಈ ಸುದ್ದಿಗೆ ಉತ್ತರ ಹೌದು, ನಟಿ ದೀಪಿಕಾ ಪಡುಕೋಣೆ ಹಾಗೂ ಅವರ ಮಾಜಿ ಬಾಯ್ ಫ್ರೆಂಡ್ ಎಂದಾಗಿದ್ದ ರಣಬೀರ್ ಕಪೂರ್ ಮತ್ತೆ ಒಂದಾಗಿದ್ದಾರೆ. 'ಕಾಕ್ ಟೈಲ್' ಚಿತ್ರದ ಯಶಸ್ಸನ ಮೂಲಕ ಇದೀಗ ಭಾರೀ ಸುದ್ದಿಯಲ್ಲಿರುವ ದೀಪಿಕಾ, ಮತ್ತೆ ತನ್ನ ಹಳೆಯ ಗೆಳೆಯ ರಣಬೀರ್ ಜೊತೆ ಕೈಜೋಡಿಸಲು ಮುಂದಾಗಿದ್ದಾರೆ. ಸದ್ಯದಲ್ಲೇ ಮಾಜಿ ಪ್ರೇಮಿಗಳು 'ಹಾಲಿ ಪ್ರೇಮಿ'ಗಳು ಎನಿಸಿದರೆ ಅಚ್ಚರಿಯಿಲ್ಲ.

  ರಾಜಕೀಯದಲ್ಲಿ ಹಾಗೂ ಸಿನಿಮಾರಂಗದಲ್ಲಿ ಶಾಶ್ವತ ಸ್ನೇಹಿತರು ಹಾಗೂ ಶಾಶ್ವತ ಶತ್ರುಗಳು ಯಾರೂ ಇರುವುದಿಲ್ಲ ಎಂಬ ಮಾತಿದೆ. ಅದಕ್ಕೆ ಈ ಜೋಡಿಯೂ ಅಪವಾದವಾಗಿಲ್ಲ. 'ಸ್ನೇಹಿತರು' ಜಾಗದಲ್ಲಿ ಪ್ರೇಮಿಗಳು ಎಂಬುದನ್ನು ಸೇರಿಸಿಕೊಂಡರಾಯ್ತು ಅಷ್ಟೇ! 'ಯೇ ಜವಾನಿ ಹೈ ದಿವಾನಿ' ಸೆಟ್ಸ್ ನಲ್ಲಿ ಈ ಇಬ್ಬರು ಮಾಜಿ ಪ್ರೇಮಿಗಳು ಮತ್ತೆ ಒಂದಾಗಿದ್ದಾರೆ ಎಂಬ ಸುದ್ದಿ ಮಿಂಚಿನ ಸಂಚಾರದ ಮೂಲಕ ಎಲ್ಲರ ಕಿವಿ ತಲುಪಿದೆ.

  ಇತ್ತೀಚಿಗೆ 'ಝೂಮ್' ಚಾನೆಲ್ ನಲ್ಲಿ ಚಾಟ್ ಮಾಡುತ್ತಿದ್ದ ದೀಪಿಕಾ " ಒಮ್ಮೆ ನಾನೇ ಇಮ್ತೈಜ್ ಅಲಿಯಾಗಿದ್ದರೆ.., ನನ್ನ ಮುಂದಿನ ರೊಮ್ಯಾಂಟಿಕ್ ಚಿತ್ರಕ್ಕೆ ದೀಪಿಕಾ ಹಾಗೂ ರಣಬೀರ್ ಕಪೂರ್ ಜೋಡಿಯನ್ನೇ ಸೆಲೆಕ್ಟ್ ಮಾಡುತ್ತಿದ್ದೆ" ಎಂದು ಹೇಳುವ ಮೂಲಕ ರಣಬೀರ್ ಕಪೂರ್ ಬಗ್ಗೆ ತಮಗಿರುವ ಆಸಕ್ತಿಯನ್ನು ಬಹಿರಂಗಪಡಿಸಿದ್ದಾರೆ. ಜೊತೆಗೆ ತಾವಿಬ್ಬರೂ ಮತ್ತೆ ಒಂದಾಗಲಿದ್ದೇವೆ ಎಂಬ ಸೂಚನೆ ನೀಡಿದ್ದಾರೆ.

  ಈ ಹಿಂದೊಮ್ಮೆ ಭಾರಿ ಪ್ರೇಮಿಗಳಾಗಿದ್ದ ದೀಪಿಕಾ ಪಡುಕೋಣೆ ಹಾಗೂ ರಣಬೀರ್ ಕಪೂರ್ ಮಧ್ಯೆ ಅದೇನಾಯ್ತೋ ಏನೋ! ಈ ಜೋಡಿಯ ಪ್ರೇಮದಲ್ಲಿ ಬಿರುಕು ಮೂಡಿ ದೂರವಾಗಿದ್ದರು. ಅದೇ ವೇಳೆ ದೀಪಿಕಾ ಪಡುಕೋಣೆಗೆ ಸಿದ್ಧಾರ್ಥ ಮಲ್ಯ ಸಮೀಪವಾಗಿದ್ದು ಎಲ್ಲರ ಗಮನಕ್ಕೆ ಬಂದಿತ್ತು. ಅಷ್ಟೇ ಏಕೆ, ದೀಪಿಕಾ ಹಾಗೂ ಸಿದ್ಧಾರ್ಥ ಬಹಿರಂಗವಾಗೇ ಕೈಕೈ ಹಿಡಿದು ಓಡಾಡುತ್ತಿದ್ದರು. ಇತ್ತೀಚಿಗೆ ಅವರಿಬ್ಬರ ಸಂಬಂಧವೂ ಮುರಿದುಬಿದ್ದಿತ್ತು.

  ಒಟ್ಟಿನಲ್ಲಿ ಈಗ, ಕಾಕ್ ಟೈಲ್ ಮೂಲಕ ದೀಪಿಕಾ ಯಶಸ್ಸಿನ ಗುಂಗಿನಲ್ಲಿದ್ದಾರೆ. ಜೊತೆಗೆ ರಾಕ್ ಸ್ಟಾರ್ ಮೂಲಕ ಈಗಾಗಲೇ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿರುವ ರಣಬೀರ್ ಕೂಡ ದೀಪಿಕಾ ಬಗ್ಗೆ ಯಾವುದೇ ಪೂರ್ವಾಗ್ರಹ ಇಟ್ಟುಕೊಂಡಿಲ್ಲ. ಹಾಲಿ ಪ್ರೇಮಿಗಳಾಗಲು ಇನ್ನೇನು ಬೇಕು? ಏನೇ ಆಗಲಿ, ತಮ್ಮ ಅಭಿಮಾನಿಗಳು ಹೊಸ ಸುದ್ದಿಯನ್ನು ನೋಡಿ ಕಚಗುಳಿಯಿಟ್ಟಿದ್ದಾರೆ ದೀಪಿಕಾ ಪಡುಕೋಣೆ. (ಏಜೆನ್ಸೀಸ್)

  English summary
  There is news buzz that Bollywood actress Deepika Padukone wants her ex-boyfriend Ranbir Kapoor Back. Now, the success of movie 'Cocktail' made Deepika flying very high. But much talking is about her patch-up with her ex-boyfriend Ranbir Kapoor. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X