For Quick Alerts
    ALLOW NOTIFICATIONS  
    For Daily Alerts

    ಟ್ರಾಫಿಕ್‌ ಸಿಗ್ನಲ್‌ ಲೈಟಿಗೆ ನಟಿ ಕರೀನಾ ಮುಖವಿಟ್ಟ ದೆಹಲಿ ಪೊಲೀಸರು!

    |

    ಸಿನಿಮಾ ಪ್ರಚಾರ, ಉತ್ಪನ್ನಗಳ ಪ್ರಚಾರ, ಸಾಮಾಜಿಕ ಜಾಗೃತಿ ಮೂಡಿಸಲು ಹೀಗೆ ಅನೇಕ ಕಾರಣಗಳಿಗೆ ಸಿನಿಮಾ ನಟ-ನಟಿಯರನ್ನು ಬಳಸಲಾಗುತ್ತದೆ.

    ಸರ್ಕಾರಗಳು ಸಹ ತಮ್ಮ ಯೋಜನೆಗಳನ್ನು ಜನರಿಗೆ ತಲುಪಿಸಲು ಸಿನಿಮಾ ನಟ-ನಟಿಯರನ್ನು ಬಳಸಿಕೊಳ್ಳುವುದುಂಟು. ಹಲವು ಸರ್ಕಾರಿ ಯೋಜನೆಗಳ ಜಾಹೀರಾತುಗಳಲ್ಲಿ ಸಿನಿಮಾ ನಟ-ನಟಿಯರು ಕಾಣಿಸಿಕೊಂಡಿದ್ದಾರೆ.

    ಹಲವು ಇಲಾಖೆಗಳು ಸಿನಿಮಾ ನಟ-ನಟಿಯರ ಜನಪ್ರಿಯತೆಯನ್ನು ಬಳಸಿಕೊಂಡು ಜನ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಲೇ ಬಂದಿವೆ. ಆದರೆ ಸಾಮಾಜಿಕ ಜಾಲತಾಣದ ಈ ಜಮಾನಾದಲ್ಲಿ ನಟ-ನಟಿಯರ ಚಿತ್ರಗಳನ್ನು, ವಿಡಿಯೋಗಳನ್ನು ಭಿನ್ನವಾಗಿ ಬಳಸಲಾಗುತ್ತಿದೆ. ಅದಕ್ಕೆ ತಾಜಾ ಉದಾಹರಣೆ ದೆಹಲಿ ಪೊಲೀಸರು.

    ಸಿಗ್ನಲ್‌ ಮೇಲೆ ಕರೀನಾ ಕಪೂರ್ ಮುಖವಿಟ್ಟ ದೆಹಲಿ ಪೊಲೀಸರು

    ಸಿಗ್ನಲ್‌ ಮೇಲೆ ಕರೀನಾ ಕಪೂರ್ ಮುಖವಿಟ್ಟ ದೆಹಲಿ ಪೊಲೀಸರು

    ದೆಹಲಿ ಪೊಲೀಸರು ಸಿಗ್ನಲ್ ಜಂಪ್ ಮಾಡುವವರಿಗಾಗಿ ವಿಶೇಷ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ವಿಡಿಯೋದಲ್ಲಿ ಕರೀನಾರ ಮುಖವನ್ನು ಬಳಸಿಕೊಂಡಿದ್ದಾರೆ. ಆದರೆ ದೆಹಲಿ ಪೊಲೀಸರು ಕ್ರಿಯಾಶೀಲತೆ ಪ್ರದರ್ಶಿಸಿ ಸಿಗ್ನಲ್‌ನ ಕೆಂಪು ಲೈಟಿನ ಮೇಲೆ ಕರೀನಾ ಕಪೂರ್ ಮುಖ ಅಂಟಿಸಿದ್ದಾರೆ. ಇದೀಗ ಈ ವಿಡಿಯೋ ಸಖತ್ ವೈರಲ್ ಆಗಿದ್ದು, ದೆಹಲಿ ಪೊಲೀಸರ ಕ್ರಿಯಾಶೀಲತೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಡೈಲಾಗ್ ಹೇಳುವ ಕರೀನಾ ಕಪೂರ್

    ಡೈಲಾಗ್ ಹೇಳುವ ಕರೀನಾ ಕಪೂರ್

    ವಿಡಿಯೋ ಒಂದನ್ನು ಪೋಸ್ಟ್ ಮಾಡಿರುವ ದೆಹಲಿ ಪೊಲೀಸರು, ವೇಗವಾಗಿ ಹೋಗುತ್ತಿರುವ ಕಾರೊಂದನ್ನು ತೋರಿಸಿ ಬಳಿಕ ಸಿಗ್ನಲ್ ಲೈಟ್ ಕೆಂಪಾಗಿರುವುದನ್ನು ತೋರಿಸಿದ್ದಾರೆ. ಕೆಂಪು ದೀಪದ ಮೇಲೆ ಕರೀನಾ ಮುಖವಿದ್ದು, ಕರೀನಾ, ತಮ್ಮ 'ಕಭಿ ಖುಷಿ ಕಭಿ ಗಮ್' ಸಿನಿಮಾದ ಜನಪ್ರಿಯ ಸಂಭಾಷಣೆ, 'ಕೌನ್ ಹೇ ಎ ಜೊ ಮುಝೆ ಮುಡ್ಕೆ ನಹಿ ದೇಕಾ' (ಯಾರಿದು ನನ್ನನ್ನೇ ನೋಡದೇ ಹೋಗುತ್ತಿದ್ದಾನಲ್ಲಾ) ಹೇಳುವಂತೆ ವಿಡಿಯೋ ಕ್ರಿಯೇಟ್ ಮಾಡಲಾಗಿದೆ.

    ಕರೀನಾ ಕಪೂರ್‌ಳ ಸಂಭಾಷಣೆ ಬಳಸಿಕೊಂಡ ಪೊಲೀಸರು

    ಕರೀನಾ ಕಪೂರ್‌ಳ ಸಂಭಾಷಣೆ ಬಳಸಿಕೊಂಡ ಪೊಲೀಸರು

    ವಿಡಿಯೋ ಹಂಚಿಕೊಂಡಿರುವ ದೆಹಲಿ ಪೊಲೀಸರು, ''ಯಾರದು ಸಂಚಾರಿ ನಿಯಮ ಉಲ್ಲಂಘಿಸುತ್ತಿರುವುದು. ತನ್ನನ್ನು ನೋಡದೇ ಮುಂದೆ ಹೋಗುವವರೆಂದರೆ ಪೂಗೆ ಇಷ್ಟಾಗುವುದಿಲ್ಲ. ಟ್ರಾಫಿಕ್ ಲೈಟ್ಸ್‌ಗೆ ಸಹ ಅವನ್ನು ನೋಡದೇ ಮುಂದೆ ಹೋಗುವವರೆಂದರೆ ಇಷ್ಟವಾಗುವುದಿಲ್ಲ'' ಎಂದು ಬರೆದಿದ್ದಾರೆ. 'ಕಭಿ ಖುಷಿ ಕಭಿ ಗಮ್' ಸಿನಿಮಾದಲ್ಲಿ ಕರೀನಾ ಕಪೂರ್ ಪೂ ಹೆಸರಿನ ಪಾತ್ರದಲ್ಲಿ ನಟಿಸಿದ್ದರು. ತನ್ನ ಅಂದವನ್ನು ಎಲ್ಲರೂ ನೋಡಬೇಕು, ಹೊಗಳಬೇಕು ಎಂಬುದು ಪೂ ಆಸೆಯಾಗಿರುತ್ತದೆ. ಆದರೆ ಹೃತಿಕ್ ರೋಷನ್ ಪೂ ಅನ್ನು ನೋಡದೆ ಮುಂದೆ ಹೋದಾಗ, ಕೌನ್ ಹೇ ಎ ಜೊ ಮುಝೆ ಮುಡ್ಕೆ ನಹಿ ದೇಕಾ' (ಯಾರಿದು ನನ್ನನ್ನೇ ನೋಡದೇ ಹೋಗುತ್ತಿದ್ದಾನಲ್ಲಾ) ಎಂದು ಪೂ ಹೇಳುತ್ತಾಳೆ. ಅದೇ ಸಂಭಾಷಣೆಯನ್ನು ದೆಹಲಿ ಪೊಲೀಸರು ಇದೀಗ ತಮ್ಮ ವಿಡಿಯೋದಲ್ಲಿ ಬಳಸಿದ್ದಾರೆ.

    ಯಶ್ ಡೈಲಾಗ್ ಬಳಸಿದ್ದ ಪೊಲೀಸರು

    ಯಶ್ ಡೈಲಾಗ್ ಬಳಸಿದ್ದ ಪೊಲೀಸರು

    ಹೀಗೆ ಜನಪ್ರಿಯ ಸಿನಿಮಾಗಳ ಡೈಲಾಗ್‌ಗಳನ್ನು, ಜನಪ್ರಿಯ ಸಿನಿಮಾ ನಟ-ನಟಿಯರ ಚಿತ್ರಗಳನ್ನು ಸಂಚಾರಿ ನಿಯಮದ ಬಗ್ಗೆ ಜಾಗೃತಿ ಮೂಡಿಸಲು ಬಳಸುವುದು ತೀರ ಸಾಮಾನ್ಯ. 'ಕೆಜಿಎಫ್' ಹಾಗೂ 'ಕೆಜಿಎಫ್ 2' ಸಿನಿಮಾಗಳು ಹಿಟ್ ಆದಾಗ ಹಲವು ರಾಜ್ಯದ ಸಂಚಾರಿ ಪೊಲೀಸರು ಯಶ್‌ರ ಡೈಲಾಗ್‌ಗಳನ್ನು ಬಳಸಿ ಸಂಚಾರ ನಿಯಮ ಉಲ್ಲಂಘನೆ ಮಾಡುವವರಿಗೆ ಸಾಮಾಜಿಕ ಜಾಲತಾಣದ ಮೂಲಕ ಎಚ್ಚರಿಕೆ ನೀಡಿದ್ದರು. ಅದರಲ್ಲೂ 'ವೈಲೆನ್ಸ್‌, ವೈಲೆನ್ಸ್, ವೈಲೆನ್ಸ್' ಸಂಭಾಷಣೆಯಂತೂ ಅತಿ ಹೆಚ್ಚು ಬಳಕೆಯಾಗಿತ್ತು.

    English summary
    Delhi traffic police use actress Kareena Kapoor's image to create traffic rule awareness

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X