For Quick Alerts
  ALLOW NOTIFICATIONS  
  For Daily Alerts

  2013ರ ಎಲ್ಲಾ ಚಿತ್ರಗಳ ಮೆಟ್ಟಿನಿಂತ ಧೂಮ್ 3

  By ಜೇಮ್ಸ್ ಮಾರ್ಟಿನ್
  |

  ಅಮೀರ್ ಖಾನ್ ಮತ್ತೊಮ್ಮೆ ಖಳ ನಟನಾಗಿ ಗೆದ್ದಿದ್ದಾರೆ. ಅಮೀರ್ ಖಾನ್ ಅಭಿನಯದ 'ಧೂಮ್ 3' ಚಿತ್ರದ ಗಳಿಕೆ ವೇಗವನ್ನು ಹೆಚ್ಚಿಸುತ್ತಲೇ ಇದೆ. ಅಮೀರ್ ಸೇರಿದಂತೆ ಚಿತ್ರದ ಮೇಕಿಂಗ್ ಗೆ ಎಲ್ಲೆಡೆಯಿಂದಲೂ ಮೆಚ್ಚುಗೆಯ ಪ್ರವಾಹ ಹರಿದುಬರುತ್ತಿದೆ. ಡಿಸೆಂಬರ್ 20ರಂದು ಬಿಡುಗಡೆಗೊಂಡ ಧೂಮ್ 3 ಚಿತ್ರ 14 ದಿನಗಳಲ್ಲಿ ಗಳಿಸಿರುವ ಮೊತ್ತ 2012, 2013ರಲ್ಲಿ ತೆರೆ ಕಂಡ ಎಲ್ಲಾ ಚಿತ್ರಗಳ ಮೊತ್ತವನ್ನು ದಾಟಿದೆ.

  ಶಾರುಖ್ ಅವರ ಚೆನ್ನೈ ಎಕ್ಸ್ ಪ್ರೆಸ್, ಹೃತಿಕ್ ಅವರ ಕ್ರಿಶ್ 3 ಚಿತ್ರಗಳು ಎರಡು ವಾರದಲ್ಲಿ ಗಳಿಸಿದ್ದ ಮೊತ್ತವನ್ನು ದಾಟಿರುವ ಧೂಮ್ 3 ಚಿತ್ರ ತ್ವರಿತವಾಗಿ ದೇಶಿ ಮಾರುಕಟ್ಟೆಯಲ್ಲಿ 250 ಕೋಟಿ ರು ಹಾಗೂ ಒಟ್ಟಾರೆ 350 ಕೋಟಿ ರು ಗಳಿಸಿ ಹೊಸ ಇತಿಹಾಸ ಸೃಷ್ಟಿಸಿದೆ.

  ಧೂಮ್ 3 ಚಿತ್ರ ತೆರೆಕಂಡ ಎರಡೇ ದಿನಕ್ಕೆ ರು.69.58 ಕೋಟಿ ಬಾಚಿತ್ತು. ಮೊದಲ ದಿನವೇ ರು.36.22 ಕೋಟಿ ಕಲೆಕ್ಷನ್, ಮಾರನೇ ದಿನ ರು.33.36 ಕೋಟಿ ಎಣಿಸಿತ್ತು. ಅಭಿಷೇಕ್ ಬಚ್ಚನ್ ಹಾಗೂ ಉದಯ್ ಛೋಪ್ರಾ ಪಾತ್ರಗಳಿಗೂ ಮೆಚ್ಚುಗೆ ವ್ಯಕ್ತವಾಗಿದ್ದು ಚಿತ್ರದ ಓಟಕ್ಕೆ ಕಾರಣವಾಗಿದೆ. ಕತ್ರೀನಾಗೆ ಒಳ್ಳೆ ರೋಲ್ ಸಿಗದಿದ್ದರೂ ಕತ್ರೀನಾ ಸಾಹಸಮಯ ನೃತ್ಯ ಚಿತ್ರದ ಹೈಲೇಟ್ ಆಗಿದೆ.

  ಎರಡನೇ ವಾರದಲ್ಲಿ ಧೂಮ್ 3 ಗೆ ಪ್ರತಿಸ್ಪರ್ಧಿಯಾಗಿದ್ದ ಮಹಾಭಾರತ್ ಅನಿಮೇಷನ್ ಚಿತ್ರ ಬಾಕ್ಸಾಫೀಸ್ ನಲ್ಲಿ ಸದ್ದು ಮಾಡದೆ ಸುಮ್ಮನಾಗಿದೆ. ಮಿಕ್ಕಂತೆ ಯಾವ ಭಾಷೆ ಚಿತ್ರಗಳು ಧೂಮ್ 3 ಗಳಿಕೆಗೆ ಹೆಚ್ಚಿನ ತೊಂದರೆ ಕೊಟ್ಟಿಲ್ಲ ಹೀಗಾಗಿ ಭಾರತದಲ್ಲಿ ವಿಜಯ್ ಕೃಷ್ಣ ಆಚಾರ್ಯ ನಿರ್ದೇಶನದ ಧೂಮ್ 3 ಇನ್ನೂ ಸದ್ದು ಮಾಡುತ್ತಿದೆ.

  ಸುಮಾರು 71.72 ಕೋಟಿ ರು ಎರಡನೇ ವಾರದ ಗಳಿಕೆ ಮೂಲಕ ಧೂಮ್ 3 ಭಾರತದ ಮಾರುಕಟ್ಟೆಯಲ್ಲಿ ಕಿಂಗ್ ಎನಿಸಿದೆ. ಹಿಂದಿ ಆವೃತ್ತಿಯ ಚಿತ್ರವೇ 69.51 ಕೋಟಿ ರು ಬಾಚಿಕೊಂಡಿದೆ. ತೆಲುಗು ಹಾಗೂ ತಮಿಳು ಡಬ್ ವರ್ಷನ್ 2.21 ಕೋಟಿ ರು ನಿವ್ವಳ ಗಳಿಕೆ ಕಂಡಿದೆ. ವಾರದ ಗಳಿಕೆ ಹೋಲಿಕೆ ವಿವರ ಮುಂದೆ ಓದಿ...

  ಧೂಮ್ 3 #1

  ಧೂಮ್ 3 #1

  * ದೇಶಿ ಮಾರುಕಟ್ಟೆಯಲ್ಲಿ 14 ದಿನಗಳಲ್ಲಿ 262.70 ಕೋಟಿ ರು ನಿವ್ವಳ ( 350 ಕೋಟಿ ರು ಒಟ್ಟಾರೆ) ಗಳಿಕೆ.

  * ಕ್ರಿಶ್ 3 14 ದಿನಗಳಲ್ಲಿ 244.92 ಕೋಟಿ ರು ಗಳಿಸಿ ಸಾರ್ವಕಾಲಿಕ ಅತಿಹೆಚ್ಚು ಗಳಿಕೆ ಚಿತ್ರ ಎನಿಸಿತ್ತು.

  * ಮೂರನೇ ವಾರದಲ್ಲಿ ದೇಶಿ ಮಾರುಕಟ್ಟೆಯಲ್ಲಿ 300 ಕೋಟಿ ರು ಮುಟ್ಟಲಿರುವ ಧೂಮ್ 3 ಚಿತ್ರ ಎರಡನೇ ವಾರದಲ್ಲಿ ಗಳಿಸಿದ್ದು ಹೀಗೆ:(ಕೋಟಿ ರು ಗಳಲ್ಲಿ)

  ಶುಕ್ರವಾರ: 10.10, ಶನಿವಾರ : 12.04, ಭಾನುವಾರ : 16.71, ಸೋಮವಾರ :6.83 , ಮಂಗಳವಾರ :7.26 , ಬುಧವಾರ: 10.78, ಗುರುವಾರ: 8

  ಕ್ರಿಶ್ 3 #2

  ಕ್ರಿಶ್ 3 #2

  ನವೆಂಬರ್ 1ರಂದು ತೆರೆ ಕಂಡ ಹೃತಿಕ್ ರೋಷನ್, ಪ್ರಿಯಾಂಕಾ ಛೋಪ್ರಾ ಅಭಿನಯದ ಕ್ರಿಶ್ 3 ಚಿತ್ರ 14 ದಿನಗಳಲ್ಲಿ 244.92 ಕೋಟಿ ರು ಗಳಿಸಿ 2013ರಲ್ಲಿ ಹಾಗೂ ಸಾರ್ವಕಾಲಿಕ ಎರಡನೇ ಅತಿ ಹೆಚ್ಚು ಗಳಿಕೆ ಚಿತ್ರ ಎನಿಸಿದೆ

  ಚೆನ್ನೈ ಎಕ್ಸ್ ಪ್ರೆಸ್ #3

  ಚೆನ್ನೈ ಎಕ್ಸ್ ಪ್ರೆಸ್ #3

  ದೇಶಿ ಮಾರುಕಟ್ಟೆಯಲ್ಲಿ ಒಟ್ಟಾರೆ 227.13 ಕೋಟಿ ರು ಗಳಿಸುವ ಮೂಲಕ ಶಾರುಖ್ ಖಾನ್, ದೀಪಿಕಾ ಅಭಿನಯದ ಚೆನ್ನೈ ಎಕ್ಸ್ ಪ್ರೆಸ್ ಚಿತ್ರ ಮೂರನೇ ಸ್ಥಾನ ಗಳಿಸಿದೆ.

  ಯೇ ಜವಾನಿ ಹೇ ದಿವಾನಿ #4

  ಯೇ ಜವಾನಿ ಹೇ ದಿವಾನಿ #4

  ರಣಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಈ ಚಿತ್ರ 188.57 ಕೋಟಿ ರು ನಿವ್ವಳ ಗಳಿಕೆ ಮೂಲಕ ಭಾರತೀಯ ಬಾಕ್ಸಾಫೀಸ್ ನಲ್ಲಿ 2013ರಲ್ಲಿ ನಾಲ್ಕನೇ ಅತಿ ಹೆಚ್ಚು ಗಳಿಕೆ ಹೊಂದಿದ ಚಿತ್ರ ಎನಿಸಿದೆ. ಸಾರ್ವಕಾಲಿಕ ಗಳಿಕೆ ಚಿತ್ರಗಳ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಕುಸಿದಿದೆ.

  ರಾಮ್ ಲೀಲಾ #5

  ರಾಮ್ ಲೀಲಾ #5

  ವಿವಾದಗಳ ಜತೆ ಜತೆಗೆ ಬೆಳೆದ ಗಲಿಯೋಂಕಾ ರಾಸ್ ಲೀಲ ರಾಮ್ ಲೀಲ ಚಿತ್ರ ಹಾಗೂ ಹೀಗೂ ದೇಶಿ ಮಾರುಕಟ್ಟೆಯಲ್ಲಿ 116.33 ಕೋಟಿ ರು ಗಳಿಸಿ 2013ರಲ್ಲಿ ಅತಿ ಹೆಚ್ಚು ಗಳಿಸಿದ ಚಿತ್ರಗಳ ಪೈಕಿ ಐದನೇ ಚಿತ್ರ ಎನಿಸಿತು.

  ದೀಪಿಕಾ ಪಡುಕೋಣೆ ಅಭಿನಯದ ಚೆನ್ನೈ ಎಕ್ಸ್ ಪ್ರೆಸ್, ಯೇ ಜವಾನಿ ಹೇ ದಿವಾನಿ ನಂತರ ರಾಮ್ ಲೀಲ ಕೂಡಾ 100 ಕೋಟಿ ರು ಕ್ಲಬ್ ಸೇರಿತು

  ಭಾಗ್ ಮಿಲ್ಕಾ ಭಾಗ್ #6

  ಭಾಗ್ ಮಿಲ್ಕಾ ಭಾಗ್ #6

  ಅಥ್ಲೀಟ್ ಮಿಲ್ಕಾ ಸಿಂಗ್ ಜೀವನ ಚರಿತ್ರೆ ಆಧಾರಿತ ಭಾಗ್ ಮಿಲ್ಕಾ ಭಾಗ್ ಚಿತ್ರ 108.93 ಕೋಟಿ ರು ಗಳಿಸಿ ದೇಶಿ ಮಾರುಕಟ್ಟೆಯಲ್ಲಿ 2013ರಲ್ಲಿ ಆರನೇ ಸ್ಥಾನ ಗಳಿಸಿತು. ಫರಾನ್ ಅಖ್ತರ್ ನಟನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಯಿತು.

  ಗ್ರಾಂಡ್ ಮಸ್ತಿ #7

  ಗ್ರಾಂಡ್ ಮಸ್ತಿ #7

  ಪೋಲಿ ಕಾಮಿಡಿ ಚಿತ್ರ ಗ್ರಾಂಡ್ ಮಸ್ತಿ ಬಹು ತಾರಾಗಣದ ಲಾಭ ಪಡೆದು ಭಾರತೀಯ ಬಾಕ್ಸಾಫೀಸ್ ನಲ್ಲಿ 102 ಕೋಟಿ ರು ಗಳಿಸಿ 2013ರಲ್ಲಿ ಅತಿ ಹೆಚ್ಚು ಗಳಿಕೆ ಚಿತ್ರಗಳ ಪೈಕಿ 7ನೇ ಸ್ಥಾನ ಪಡೆದಿದೆ.

  ರೇಸ್ 2 #8

  ರೇಸ್ 2 #8

  ರೇಸ್ ಸರಣಿಯ ಎರಡನೇ ಚಿತ್ರ ಭಾರತೀಯ ಮಾರುಕಟ್ಟೆಯಲ್ಲಿ 100.45 ಕೋಟಿ ರು ಗಡಿ ದಾಟಿ 2013ರಲ್ಲಿ 8ನೇ ಅತಿ ಹೆಚ್ಚು ಗಳಿಕೆ ಹೊಂದಿದ ಚಿತ್ರ ಎನಿಸಿತು.

  ಆಶಿಕಿ 2 #9

  ಆಶಿಕಿ 2 #9

  ಪ್ರೇಮ ಕಾವ್ಯ ಆಶಿಕಿ 2 ದೇಶಿ ಮಾರುಕಟ್ಟೆಯಲ್ಲಿ 78.42 ಕೋಟಿ ರು ನಿವ್ವಳ ಗಳಿಕೆ ಮೂಲಕ 2013ರಲ್ಲಿ ಅತಿ ಹೆಚ್ಚು ಗಳಿಕೆ ಚಿತ್ರಗಳ ಪೈಕಿ 9ನೇ ಸ್ಥಾನ ಪಡೆದಿದೆ.

  ಸ್ಪೆಷಲ್ 26 #10

  ಸ್ಪೆಷಲ್ 26 #10

  ಭಾರತೀಯ ಮಾರುಕಟ್ಟೆಯಲ್ಲಿ ಒಟ್ಟಾರೆ 66.8 ಕೋಟಿ ರು ಗಳಿಸಿರುವ ಸ್ಪೆಷಲ್ 26 ಚಿತ್ರ 2013ರಲ್ಲಿ ಅತಿ ಹೆಚ್ಚು ಗಳಿಕೆ ಚಿತ್ರಗಳ ಪೈಕಿ 10ನೇ ಸ್ಥಾನ ಪಡೆದಿದೆ.

  English summary
  The action thriller featuring Aamir Khan and Katrina Kaif in negative roles, has beaten the life-time collection record of Hrithik Roshan's Krrish 3 in 14 days and become the all time highest grosser Bollywood movie. Having crossed Rs 250 crore mark in the domestic market, the film is now fast heading towards Rs 300 crore mark.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X