ಫೋಟೋ ವೈರಲ್: ನಟಿ ದಿಯಾ ಮಿರ್ಜಾ ಮತ್ತು ವೈಭವ್ ಮದುವೆ ನೆರವೇರಿಸಿದ ಮಹಿಳಾ ಅರ್ಚಕರು

ಬಾಲಿವುಡ್ ನಟಿ ದಿಯಾ ಮಿರ್ಜಾ ಇತ್ತೀಚಿಗೆಷ್ಟೆ ಉದ್ಯಮಿ ವೈಭವ್ ರೇಖಿ ಜೊತೆ ಎರಡನೇ ವಿವಾಹವಾಗಿದ್ದಾರೆ. ತೀರ ಸರಳವಾಗಿ ನೆರವೇರಿದ ಮದುವೆ ಸಮಾರಂಭದಲ್ಲಿ ಕುಟುಂಬದವರು ಮತ್ತು ಆಪ್ತರು ಮಾತ್ರ ಭಾಗಿಯಾಗಿದ್ದರು. ದಿಯಾ ಮತ್ತು ವೈಭವ್ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದೀಗ ದಿಯಾ ಮದುವೆಯ ಇಂಟರೆಸ್ಟಿಂಗ್ ಸಂಗತಿಯೊಂದು ಬಹಿರಂಗವಾಗಿದೆ. ದಿಯಾ ಮತ್ತು ವೈಭವ್ ಮದುವೆಯನ್ನು ಮಹಿಳಾ ಅರ್ಚಕರೊಬ್ಬರು ನೆರವೇರಿಸಿದ್ದಾರೆ. ಮಹಿಳಾ ಅರ್ಚಕರು ಮದುವೆಯ ಪೂಜಾ ವಿಧಾನಗಳನ್ನು ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದಿಯಾ ಮದುವೆ ನೆರವೇರಿಸಿದ ಮಹಿಳಾ ಅರ್ಚಕರು

ದಿಯಾ ಮದುವೆ ನೆರವೇರಿಸಿದ ಮಹಿಳಾ ಅರ್ಚಕರು

ಈ ಬಗ್ಗೆ ಸ್ವತಃ ದಿಯಾ ಮಿರ್ಜಾ ಅವರೇ ಬಹಿರಂಗ ಪಡಿಸಿದ್ದಾರೆ. ಮಹಿಳಾ ಅರ್ಚಕರು ಮದುವೆ ಮಾಡಿಸುತ್ತಿರುವ ಫೋಟೋವನ್ನು ದಿಯಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಾಮಾನ್ಯವಾಗಿ ಭಾರತದಲ್ಲಿ ಹಿಂದೂ ವಿವಾಹ ಸಮಾರಂಭಗಳನ್ನು ಪುರುಷ ಪುರೋಹಿತರು ನಡೆಸುತ್ತಾರೆ. ಆದರೆ ದಿಯಾ ಮದುವೆಯನ್ನು ಮಹಿಳಾ ಅರ್ಚಕರು ನೆರವೇರಿಸಿದ್ದು ಅಚ್ಚರಿ ಮೂಡಿಸಿದೆ.

ಶೀಲಾ ಅಟ್ಟಾಗೆ ಧನ್ಯವಾದ ತಿಳಿಸಿದ ದಿಯಾ

ಶೀಲಾ ಅಟ್ಟಾಗೆ ಧನ್ಯವಾದ ತಿಳಿಸಿದ ದಿಯಾ

ಅಂದಹಾಗೆ ದಿಯಾ ಮದುವೆ ನೆರವೇರಿಸಿದ ಈ ಮಹಿಳಾ ಅರ್ಚಕರ ಹೆಸರು ಶೀಲಾ ಅಟ್ಟ. ಈ ಅರ್ಚಕರ ಫೋಟೋವನ್ನು ಶೇರ್ ಮಾಡಿ ದಿಯಾ ಧನ್ಯವಾದ ತಿಳಿಸಿದ್ದಾರೆ. 'ನಮ್ಮ ವಿವಾಹವನ್ನು ನೆರವೇರಿಸಿದ ಶೀಲಾ ಅಟ್ಟ ಅವರಿಗೆ ಧನ್ಯವಾದಗಳು. ಎಷ್ಟು ಹೆಮ್ಮೆಯಾಗುತ್ತಿದೆ.' ಎಂದು ಬರೆದು ರೈಸ್ ಅಪ್ ಮತ್ತು ಜನರೇಷನ್ ಇಕ್ವಾಲಿಟಿ ಎಂದು ಹ್ಯಾಷ್ ಟ್ಯಾಗ್ ಹಾಕಿದ್ದಾರೆ.

ಬಾಲಿವುಡ್ ಗಣ್ಯರ ಶುಭಾಶಯ

ಬಾಲಿವುಡ್ ಗಣ್ಯರ ಶುಭಾಶಯ

ದಿಯಾ ಮಿರ್ಜಾ ಅವರ ಈ ನಿರ್ಧಾರಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಫೆಬ್ರವರಿ 15ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ನಟಿ ದಿಯಾ ಮತ್ತು ವೈಭವ್ ರೇಖಿ ಅವರಿಗೆ ಬಾಲಿವುಡ್ ಗಣ್ಯರು ಮತ್ತು ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ.

Recommended Video

ವೈರಲ್ ಆಗೋಯ್ತು ರಾಬರ್ಟ್ ಚಿತ್ರದ ಡಿ ಬಾಸ್ ಡೈಲಾಗ್ | Filmibeat Kannada
ಮದುವೆ ಫೋಟೋಗಳು ವೈರಲ್

ಮದುವೆ ಫೋಟೋಗಳು ವೈರಲ್

ದಿಯಾ ಕೆಂಪು ಬಣ್ಣದ ಬನಾರಸ್ ಸೀರೆಯಲ್ಲಿ ಕಂಗೊಳಿಸಿದ್ರೆ, ದಿಯಾ ಪತಿ ವೈಭವ್ ಕುರ್ತಾ ಪೈಜಾಮನಲ್ಲಿ ಮಿಂಚಿದ್ದಾರೆ. ನವ ಜೋಡಿ ದಿಯಾ ಮತ್ತು ವೈಭವ್ ಅವರ ಮದುವೆ ಫೋಟೋಗಳು ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದೀಗ ಮಹಿಳಾ ಅರ್ಚಕರ ಫೋಟೋ ಎಲ್ಲರ ಗಮನ ಸೆಳೆಯುತ್ತಿದೆ.

More from Filmibeat

English summary
Female priest conducting Bollywood Actress Dia Mirza and Vaibhav Rekhi marriage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X