For Quick Alerts
  ALLOW NOTIFICATIONS  
  For Daily Alerts

  ಅನಿಲ್ ಅಂಬಾನಿ ಜೊತೆ ಐಶ್ವರ್ಯ ರೈ ಡೇಟಿಂಗ್: ಮಾಜಿ ವಿಶ್ವ ಸುಂದರಿ ಹೇಳಿದ್ದೇನು?

  |

  ಮಾಜಿ ವಿಶ್ವ ಸುಂದರಿ, ಬಾಲಿವುಡ್ ನ ಖ್ಯಾತ ನಟಿ ಐಶ್ವರ್ಯ ರೈ ಈಗ ಅಭಿಷೇಕ್ ಬಚ್ಚನ್ ಮದುವೆಯಾಗಿ ಸಂತೋಷದ ಜೀವನ ನಡೆಸುತ್ತಿದ್ದಾರೆ. ಐಶ್ವರ್ಯ-ಅಭಿಷೇಕ್ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟು 13 ವರ್ಷಗಳು ಕಳೆದಿವೆ. ಈ ಜೋಡಿಗೆ ಆರಾಧ್ಯ ಎನ್ನುವ ಮುದ್ದಾದ ಮಗಳಿದ್ದಾರೆ.

  ಈ ನಡುವೆ ಬಾಲಿವುಡ್ ನಲ್ಲಿ ಐಶ್ವರ್ಯ ಬಗ್ಗೆ ಗಾಸಿಪ್ ಹರಿದಾಡುತ್ತಿದೆ. ಹೌದು, ನಟಿ ಐಶ್ವರ್ಯ ರೈ ಮತ್ತು ಭಾರತದ ಖ್ಯಾತ ಉದ್ಯಮಿ ಅನಿಲ್ ಅಂಬಾನಿ ನಡುವಿನ ಡೇಟಿಂಗ್ ವಿಚಾರ ವೈರಲ್ ಆಗಿದೆ. ಅಂದ್ಹಾಗೆ ಇದು ಈಗಿನ ವಿಚಾರವಲ್ಲ. ಐಶ್ವರ್ಯ ಮದುವೆಗೂ ಮೊದಲಿನ ಸುದ್ದಿ. ಆದರೀಗ ಮತ್ತೆ ಐಶ್ ಮತ್ತು ಅನಿಲ್ ಅಂಬಾನಿ ಸಂಬಂಧದ ಬಗ್ಗೆ ಬಾಲಿವುಡ್ ನಲ್ಲಿ ಚರ್ಚೆಯಾಗುತ್ತಿದೆ. ಮುಂದೆ ಓದಿ..

  ಹಲವು ನಾಯಕರ ಜೊತೆ ಐಶ್ವರ್ಯ ಹೆಸರು ಲಿಂಕ್ ಅಪ್

  ಹಲವು ನಾಯಕರ ಜೊತೆ ಐಶ್ವರ್ಯ ಹೆಸರು ಲಿಂಕ್ ಅಪ್

  ಸೌಂದರ್ಯದ ಮೂಲಕ ಇಡೀ ವಿಶ್ವವನ್ನೆ ತನ್ನತ್ತ ಸೆಳೆದ ಸುಂದರಿಗೆ ಫಿದಾ ಆಗದವರೆ ಇಲ್ಲ. ಸೌಂದರ್ಯ, ಸಿನಿಮಾ ಮತ್ತು ಅಭಿನಯದ ಜೊತೆಗೆ ಖಾಸಗಿ ವಿಚಾರವಾಗಿಯೂ ಅಷ್ಟೆ ಸದ್ದು ಮಾಡಿತ್ತು. ಐಶ್ವರ್ಯ ಹೆಸರು ಹಲವು ನಾಯಕ ಜೊತೆ ಕೇಳಿ ಬಂದಿತ್ತು. ಆದರೆ ಇದ್ಯಾವುದರ ಬಗ್ಗೆಯು ಐಶ್ವರ್ಯ ಹೆಚ್ಚು ತಲೆಕೆಡಿಕೊಂಡಿರಲ್ಲ. ಸಲ್ಮಾನ್ ಖಾನ್ ಮತ್ತು ಐಶ್ವರ್ಯ ರೈ ನಡುವಿನ ಪ್ರೀತಿ ವಿಚಾರ ಎಲ್ಲರಿಗೂ ಗೊತ್ತಿರುವುದೆ. ಇನ್ನೂ ವಿವೇಕ್ ಒಬೆರಾಯ್ ಜೊತೆಗಿನ ಸಂಬಂಧವು ಗುಟ್ಟಾಗಿ ಉಳಿದಿಲ್ಲ. ಆದರೆ ಅನಿಲ್ ಅಂಬಾನಿ ಮತ್ತು ಐಶ್ವರ್ಯ ನಡುವಿನ ಡೇಟಿಂಗ್ ವಿಚಾರ ಅನೇಕರಿಗೆ ಶಾಕ್ ಆಗಿತ್ತು.

  ಐಶ್-ಅನಿಲ್ ರಹಸ್ಯವಾಗಿ ಡೇಟಿಂಗ್ ಮಾಡುತ್ತಿದ್ದರಾ?

  ಐಶ್-ಅನಿಲ್ ರಹಸ್ಯವಾಗಿ ಡೇಟಿಂಗ್ ಮಾಡುತ್ತಿದ್ದರಾ?

  ಐಶ್ವರ್ಯ ರೈ ರಹಸ್ಯವಾಗಿ ಖ್ಯಾತ ಉದ್ಯಮಿ ಅನಿಲ್ ಅಂಬಾನಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿತ್ತು. ನೆನಪಿರಲಿ ಇದು 2004ರ ಸಮಯದ ವಿಚಾರ. ಅಂದರೆ ಸುಮಾರು 16 ವರ್ಷಗಳ ಹಳೆಯ ಸುದ್ದಿ. ಐಶ್ ತನ್ನ ಪ್ರೀತಿಯ ವಿಚಾರವನ್ನು ಎಲ್ಲಿಯೂ ಬಹಿರಂಗವಾಗಿ ವ್ಯಕ್ತಪಡಿಸಲಿಲ್ಲ. ಆದರೆ ಅನಿಲ್ ಅಂಬಾನಿ ಜೊತೆಗಿನ ಲಿಂಕ್ ಅಪ್ ವಿಚಾರ ವೈರಲ್ ಆಗುತ್ತಿದ್ದಂತೆ ಐಶ್ವರ್ಯ ಫುಲ್ ಗರಂ ಆಗಿದ್ದರು.

  ಐಶ್ವರ್ಯ ರೈ ಪ್ರತಿಕ್ರಿಯೆ

  ಐಶ್ವರ್ಯ ರೈ ಪ್ರತಿಕ್ರಿಯೆ

  2004ರಲ್ಲಿ ಮಾಧ್ಯಮೊಂದಕ್ಕೆ ನೀಡಿದ ಪ್ರತಿಕ್ರಿಯೆಯಲ್ಲಿ ಐಶ್ವರ್ಯ ಅನಿಲ್ ಅಂಬಾನಿ ಜೊತೆಗಿನ ಸಂಬಂಧದ ಬಗ್ಗೆ ಹೀಗೆ ಹೇಳಿದ್ದರು "ನಾನು ಈ ವಿಚಾರ ಕೇಳಿದಾಗ ಮಿಶ್ರ ಭಾವನೆ ವ್ಯಕ್ತವಾಯಿತು. ನಾನು ಅವರನ್ನು ಭೇಟಿಯಾಗಿದ್ದು ತುಂಬಾ ಕಡಿಮೆ. ಕೊನೆಯದಾಗಿ ನಾನು ಭಾರತ್ ಶಾ ಹುಟ್ಟುಹಬ್ಬದ ಸಮಯದಲ್ಲಿ ಭೇಟಿಯಾಗಿದ್ದೆ. ಒಂದೆ ಟೇಬಲ್ ನಾನು, ಅಂಬಾನಿ ಮತ್ತು ಇನ್ನು ಅನೇಕರು ಕುಳಿತ್ತಿದ್ದೆವು. ನಾನು ಅವರೊಂದಿಗೆ ಕೋಟ್ಯಾಂತರ ರೂಪಾಯಿ ವ್ಯವಹಾರ ಹೊಂದಿದ್ದೇನೆ ಎನ್ನುವ ಸುದ್ದಿ ಆಘಾತವಾಯಿತು. ಇದೆಂಥಾ ಸುದ್ದಿ? ಎಂದು ಹೇಳುವ ಮೂಲಕ ಗಾಸಿಪ್ ಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದರು.

  ಜನರು ಕೇಳಿದ ಹಾಗೆ ಪ್ರತಿಕ್ರಿಯೆ ಇರಬೇಕೆಂದು ಬಯಸುತ್ತಾರೆ

  ಜನರು ಕೇಳಿದ ಹಾಗೆ ಪ್ರತಿಕ್ರಿಯೆ ಇರಬೇಕೆಂದು ಬಯಸುತ್ತಾರೆ

  "ನಾನು ಕೆಲಸದ ಕಡೆ ಹಚ್ಚು ಗಮನ ಹರಿಸುತ್ತಿದ್ದೀನಿ. ನನ್ನ ವೈಯಕ್ತಿಕ ಜೀವನದ ಬಗ್ಗೆ ನಾನೂ ಎಂದಾದರು ಮಾತನಾಡಿದ್ದೀನಾ? ಜನರು ಅವರು ಕೇಳಿದ ಹಾಗೆ ನಾನು ಪ್ರತಿಕ್ರಿಯೆ ನೀಡಬೇಕೆಂದು ಬಯಸುತ್ತಾರೆ. ಆದರೆ ಇದಕ್ಕೆ ನಾನು ಹೊಣೆಯಾಗುವುದಿಲ್ಲ" ಎಂದು ಹೇಳಿದ್ದರು.

  ನಾನು ಈ ಕ್ಷಣವನ್ನು ಜೀವಿಸುತ್ತೇನೆ

  ನಾನು ಈ ಕ್ಷಣವನ್ನು ಜೀವಿಸುತ್ತೇನೆ

  "ನಾನು ಈ ಕ್ಷಣವನ್ನು ಜೀವಿಸುತ್ತೇನೆ. ಮದುವೆ ಬಗ್ಗೆ ಇನ್ನೂ ಯೋಚಿಸಿಲ್ಲ" ಎಂದು ವರ್ಷಗಳ ಹಿಂದೆ ಐಶ್ವರ್ಯ ಹೇಳಿರುವ ಮಾತುಗಳು ಈಗ ವೈರಲ್ ಆಗುತ್ತಿವೆ. ಮತ್ತೀಗ ಐಶ್ವರ್ಯ ಮತ್ತು ಅನಿಲ್ ಅಂಬಾನಿ ಡೇಟಿಂಗ್ ಗಾಸಿಪ್ ವಿಚಾರ ಸದ್ದು ಮಾಡುತ್ತಿದೆ. ಆದರೆ ಐಶ್ವರ್ಯ ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಗಂಡ ಮಗಳು ಅಂತ ಸಂತೋಷದ ಜೀವನ ನಡೆಸುತ್ತಿದ್ದಾರೆ.

  English summary
  Did Aishwarya Rai dating with famous businessman Anil Ambani?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X