For Quick Alerts
  ALLOW NOTIFICATIONS  
  For Daily Alerts

  ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಮದುವೆಯಲ್ಲಿ ಧರಿಸಿದ್ದ ಸೀರೆಯ ಬೆಲೆ ಕೇಳಿದ್ರೆ ದಂಗಾಗ್ತೀರಾ

  |

  ಮಾಜಿ ವಿಶ್ವ ಸುಂದರಿ, ನಟಿ ಐಶ್ವರ್ಯ ರೈ ವೈವಾಹಿಕ ಜೀವನಕ್ಕೆ ಕಾಲಿಟ್ಟು 13 ವರ್ಷಗಳಾಗಿದೆ. 2007ರಲ್ಲಿ ಐಶ್ವರ್ಯ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಜೊತೆ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. ಅಭಿಷೇಕ್ ಬಚ್ಚನ್ ಜೊತೆ ಕೆಲವು ವರ್ಷಗಳು ಡೇಟಿಂಗ್ ನಲ್ಲಿದ್ದ ಐಶ್ವರ್ಯ ಬಳಿಕ ಏಪ್ರಿಲ್ 20, 2007ರಂದು ಹಸೆಮಣೆ ಏರಿದ್ದಾರೆ. ಈ ಸುದ್ದಿ ಐಶ್ವರ್ಯ ಅಭಿಮಾನಿಗಳಿಗೆ ಬಾರಿ ಬೇಸರವುಂಟು ಮಾಡಿತ್ತು.

  ಐಶ್ವರ್ಯ ಮತ್ತು ಅಭಿಷೇಕ್ ಮದುವೆ ಅದ್ದೂರಿಯಾಗಿ ಮುಂಬೈನಲ್ಲಿ ನೆರವೇರಿತ್ತು. ವಿವಾಹದ ಅಲಂಕಾರ, ಅತಿಥಿಗಳ ಪಟ್ಟಿ, ಉಡುಪು ಸೇರಿದಂತೆ ಪ್ರತಿಯೊಂದು ವಿಚಾರದಲ್ಲೂ ಐಶ್ವರ್ಯ ಮದುವೆ ದೊಡ್ಡ ಮಟ್ಟಕ್ಕೆ ಸದ್ದು ಮಾಡಿತ್ತು. ಅಂದ್ಹಾಗೆ ಐಶ್ವರ್ಯ ಮದುವೆ ವಿಚಾರ ಮತ್ತೆ ಸುದ್ದಿಯಲ್ಲಿದೆ. ಅದರಲ್ಲೂ ಐಶ್ವರ್ಯ ಮದುವೆಯಲ್ಲಿ ಧರಿಸಿದ್ದ ಸೀರೆಯ ಬೆಲೆ ಈಗ ವೈರಲ್ ಆಗಿದೆ. ಮುಂದೆ ಓದಿ...

  ಐಶ್ವರ್ಯ ರೈ ಮಗಳು ಆರಾಧ್ಯ ಆನ್ಲೈನ್ ತರಗತಿ ವಿಡಿಯೋ ವೈರಲ್ಐಶ್ವರ್ಯ ರೈ ಮಗಳು ಆರಾಧ್ಯ ಆನ್ಲೈನ್ ತರಗತಿ ವಿಡಿಯೋ ವೈರಲ್

  ಕುತೂಹಲ ಮೂಡಿಸಿತ್ತು ಐಶ್ವರ್ಯ ಅಲಂಕಾರ

  ಕುತೂಹಲ ಮೂಡಿಸಿತ್ತು ಐಶ್ವರ್ಯ ಅಲಂಕಾರ

  ಐಶ್ವರ್ಯ ಮದುವೆಯಲ್ಲಿ ಯಾವ ರೀತಿಯ ಉಡುಪು ಧರಿಸಲಿದ್ದಾರೆ, ಹೇಗೆ ಕಾಣಿಸಿಕೊಳ್ಳುತ್ತಾರೆ ಎನ್ನುವ ಕುತೂಹಲ ಕೋಟ್ಯಂತರ ಅಭಿಮಾನಿಗಳ ಜೊತೆಗೆ ಸಿನಿಗಣ್ಯರಲ್ಲೂ ಇತ್ತು. ಅವರೆಲ್ಲರು ನಿರೀಕ್ಷೆಯಂತೆ ಐಶ್ ಅದ್ದೂರಿಯಾಗಿ ಅಲಂಕಾರ ಮಾಡಿಕೊಂಡಿದ್ದರು.

  ಕಾಂಜೀವರಂ ಸೀರೆಯಲ್ಲಿ ಮಿಂಚಿದ್ದ ಐಶ್ವರ್ಯ

  ಕಾಂಜೀವರಂ ಸೀರೆಯಲ್ಲಿ ಮಿಂಚಿದ್ದ ಐಶ್ವರ್ಯ

  ಮದುವೆ ದಿನ ಐಶ್ವರ್ಯ ಸಾಂಪ್ರದಾಯಿಕ ಸೀರೆ ಮತ್ತು ಲೆಹಂಗಾದಲ್ಲಿ ಮಿಂಚಿದ್ದರು. ಅಭಿಷೇಕ್ ಬಚ್ಚನ್ ಶೇರ್ವಾನಿಯಲ್ಲಿ ಕಂಗೊಳಿಸುತ್ತಿದ್ದರು. ಕಾಂಜೀವರಂ ಸೀರೆ ಧರಿಸಿದ್ದರು. ಈ ಸೀರೆಯನ್ನು ಖ್ಯಾತ ಡಿಸೈನರ್ ನೀತಾ ಲುಲ್ಲಾ ವಿನ್ಯಾಸಗೊಳಿಸಿದ್ದರು. ಸೀರೆ ಮತ್ತು ಆಭರಣಗಳಲ್ಲಿ ಐಶ್ವರ್ಯ ಅದ್ಭುತವಾಗಿ ಕಾಣಿಸುತ್ತಿದ್ದರು.

  ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದ ಬಿಗ್ ಬಿ ಅಮಿತಾಬ್ ಬಚ್ಚನ್ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದ ಬಿಗ್ ಬಿ ಅಮಿತಾಬ್ ಬಚ್ಚನ್

  ಐಶ್ವರ್ಯ ಧರಿಸಿದ್ದ ಸೀರೆಯ ಬೆಲೆ 75 ಲಕ್ಷ ರೂಪಾಯಿ

  ಐಶ್ವರ್ಯ ಧರಿಸಿದ್ದ ಸೀರೆಯ ಬೆಲೆ 75 ಲಕ್ಷ ರೂಪಾಯಿ

  ಮದುವೆಯಲ್ಲಿ ಐಶ್ವರ್ಯ ಧರಿಸಿದ್ದ ಸೀರೆಯ ಬೆಲೆ ಬರೋಬ್ಬರಿ 75 ಲಕ್ಷ ರೂಪಾಯಿಯಂತೆ. ಹೌದು, ಸೀರೆಯನ್ನು ದುಬಾರಿ ಹರಳುಗಳು ಮತ್ತು ಚಿನ್ನದ ದಾರಗಳಿಂದ ವಿನ್ಯಾಸಗೊಳಿಸಲಾಗಿತ್ತು. 75 ಲಕ್ಷದ ಸೀರೆ ಗೋಲ್ಡ್ ಬಣ್ಣದ ಬಾರ್ಡರ್ ಹೊಂದಿತ್ತು. ಐಶ್ವರ್ಯ ಧರಿಸಿರುವ ಸೀರೆಗಳಲ್ಲಿ ಮದುವೆಗೆ ಧರಿಸಿದ್ದ ಸೀರೆ ಅತ್ಯಂತ ದುಬಾರಿ ಸೀರೆಯಾಗಿತ್ತು. ದಕ್ಷಿಣ ಭಾರತೀಯ ಸಾಂಪ್ರದಾಯಿಕ ಉಡುಗೆಯಲ್ಲಿ ಐಶ್ವರ್ಯ ಮಿಂಚಿದ್ದರು.

  ಸದ್ಯ ತಮಿಳು ಸಿನಿಮಾದಲ್ಲಿ ಐಶ್ವರ್ಯ ನಟನೆ

  ಸದ್ಯ ತಮಿಳು ಸಿನಿಮಾದಲ್ಲಿ ಐಶ್ವರ್ಯ ನಟನೆ

  ಐಶ್ವರ್ಯ ರೈ ಮದುವೆಯಾಗಿ 13 ವರ್ಷಗಳು ಕಳೆದಿವೆ. ಐಶ್ವರ್ಯ ಮತ್ತು ಅಭಿಷೇಕ್ ದಂಪತಿಗೆ ಆರಾದ್ಯ ಎನ್ನುವ ಮುದ್ದಾದ ಮಗಳಿದ್ದಾಳೆ. ಅಂದ್ಹಾಗೆ ಐಶ್ವರ್ಯ ಮಗಳು ಜನಿಸಿದ ಬಳಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು ತೀರಾ ಕಡಿಮೆ. ಮೂರ್ನಾಲ್ಕು ಸಿನಿಮಾಗಳನ್ನು ಮಾಡಿದ್ದರೂ ನಿರೀಕ್ಷೆಯ ಗೆಲವು ಸಿಗಲಿಲ್ಲ. ಇದೀಗ ಐಶ್ವರ್ಯ ರೈ ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  English summary
  Actress Aishwarya Rai’s Wedding Saree by Neeta Lulla Price Rs 75 Lakhs?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X