For Quick Alerts
  ALLOW NOTIFICATIONS  
  For Daily Alerts

  260 ಕೋಟಿ ಮೌಲ್ಯದ ಖಾಸಗಿ ವಿಮಾನ ಹೊಂದಿದ್ದಾರೆಯೇ ಅಕ್ಷಯ್ ಕುಮಾರ್?

  |

  ಸಿನಿಮಾ ನಟರ ಬಗ್ಗೆ ಹಲವು ವರದಿಗಳು ಪ್ರಕಟವಾಗುತ್ತಲೇ ಇರುತ್ತವೆ. ಅದರಲ್ಲಿ ಕೆಲವು ಸತ್ಯ, ಹಲವು ಸುಳ್ಳುಗಳು, ಗಾಸಿಪ್‌ಗಳು ಸಹ ಇರುತ್ತವೆ.

  ಹಲವು ನಟ ನಟಿಯರು ತಮ್ಮ ಬಗೆಗಿನ ಗಾಸಿಪ್‌ಗಳನ್ನು ಎಂಜಾಯ್ ಸಹ ಮಾಡುತ್ತಾರೆ. ಬೇಕೆಂದೇ ತಮ್ಮ ಬಗ್ಗೆ ತಾವೇ ಗಾಸಿಪ್ ಹರಡಿಸುವ ನಟ-ನಟಿಯರು ಬಾಲಿವುಡ್‌ನಲ್ಲಿದ್ದಾರೆ. ಆದರೆ ಎಲ್ಲರೂ ಹಾಗಲ್ಲ. ತಮ್ಮ ಬಗ್ಗೆ ಸುಳ್ಳು ಸುದ್ದಿ ಪ್ರಕಟವಾದಾಗ ವಿರೋಧಿಸುವ, ಪ್ರಕರಣಗಳನ್ನು ಹೂಡುವವರೂ ಇದ್ದಾರೆ.

  'ರಾಮ್ ಸೇತು' ರಕ್ಷಣೆಗೆ ನಿಂತ ಕಿಲಾಡಿ ಅಕ್ಷಯ್!: 'ರಾಮ್‌ ಸೇತು' ಸಿನಿಮಾ ಟೀಸರ್ ಸೂಪರ್ ಹಿಟ್'ರಾಮ್ ಸೇತು' ರಕ್ಷಣೆಗೆ ನಿಂತ ಕಿಲಾಡಿ ಅಕ್ಷಯ್!: 'ರಾಮ್‌ ಸೇತು' ಸಿನಿಮಾ ಟೀಸರ್ ಸೂಪರ್ ಹಿಟ್

  ನಟ ಅಕ್ಷಯ್ ಕುಮಾರ್‌ ಬಗ್ಗೆಯೂ ಹಲವು ವರದಿಗಳು ಆನ್‌ಲೈನ್‌ನಲ್ಲಿ, ಮಾಧ್ಯಮಗಳಲ್ಲಿ ಪ್ರಕಟವಾಗುತ್ತಲೇ ಇರುತ್ತವೆ. ಅತಿ ಹೆಚ್ಚು ಸಂಪಾದಿಸುವ ನಟ ಎಂಬ ಖ್ಯಾತಿಯುಳ್ಳ ಅಕ್ಷಯ್‌ರ ಜೀವನ ಶೈಲಿಯ ಬಗ್ಗೆ ಸುದ್ದಿಗಳು ಪ್ರಕಟವಾಗುತ್ತಿರುತ್ತವೆ. ಹೀಗೆಯೇ ತಮ್ಮ ಬಗ್ಗೆ ಪ್ರಕಟವಾದ ಸುದ್ದಿಯ ಬಗ್ಗೆ ಅಕ್ಷಯ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

  ಅಕ್ಷಯ್ ಕುಮಾರ್ ಬಳಿ 260 ಕೋಟಿ ಮೌಲ್ಯದ ಖಾಸಗಿ ವಿಮಾನ ಇದೆ ಎಂಬ ಸುದ್ದಿ ಚಿತ್ರದೊಂದಿಗೆ ಬಾಲಿವುಡ್‌ ನ ಆನ್‌ಲೈನ್ ಸಿನಿಮಾ ಮ್ಯಾಗಜೀನ್‌ ಒಂದರಲ್ಲಿ ಪ್ರಕಟವಾಗಿತ್ತು. ಆ ಸುದ್ದಿಯ ಸ್ಕ್ರೀನ್ ಶಾಟ್ ಅನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಅಕ್ಷಯ್ ಕುಮಾರ್, ಆ ಸುದ್ದಿ ಸುಳ್ಳು ಎಂದಿದ್ದಾರೆ.

  ಕೆಲವರು ಸುಳ್ಳು ಹೇಳುತ್ತಲೇ ಇರುತ್ತಾರೆ. ತಮ್ಮ ಕೆಟ್ಟ ಅಭ್ಯಾಸವನ್ನು ಸುಧಾರಿಸಿಕೊಳ್ಳುತ್ತಲೇ ಇಲ್ಲ. ಆದರೆ ಸುಳ್ಳು ಹೇಳುವವರನ್ನು ಸುಮ್ಮನೆ ಬಿಡುವ ಮೂಡ್‌ನಲ್ಲಿ ನಾನಿಲ್ಲ. ಇನ್ನು ಮುಂದೆ ನನ್ನ ಬಗ್ಗೆ ಬರೆಯಲಾಗುವ ಸುಳ್ಳು ಸುದ್ದಿಗಳನ್ನು ನಾನೇ ಹೊರಗೆಳೆಯುತ್ತೇನೆ. ಆ ಬಗ್ಗೆ ಸ್ಪಷ್ಟನೆ ನೀಡುತ್ತೇನೆ. ಅಂಥಹುದೇ ಸುಳ್ಳು ಸುದ್ದಿಯೊಂದು ಇಲ್ಲಿದೆ ನೋಡಿ ಎಂದಿದ್ದಾರೆ.

  ನಟ ಅಕ್ಷಯ್ ಕುಮಾರ್, ಭಾರತದಲ್ಲಿ ಅತಿ ಹೆಚ್ಚು ಹಣ ಗಳಿಸುವ ನಟ. ವರ್ಷವೊಂದಕ್ಕೆ ಐದಾರು ಸಿನಿಮಾಗಳಲ್ಲಿ ನಟಿಸುವ ಅಕ್ಷಯ್ ಕುಮಾರ್, ಸಿನಿಮಾ ಒಂದಕ್ಕೆ ಹೆಚ್ಚು ಸಂಭಾವನೆ ಪಡೆವ ನಟರಲ್ಲಿ ಒಬ್ಬರು. ವರ್ಷವೊಂದಕ್ಕೆ ಅತಿ ಹೆಚ್ಚು ಹಣವನ್ನು ನಟನೆಯಿಂದ ಗಳಿಸುವ ವಿಶ್ವದ ನಟರ ಪಟ್ಟಿಯಲ್ಲಿ ಅಕ್ಷಯ್ ಕುಮಾರ್ ಹೆಸರು ಸೇರಿಕೊಂಡಿದೆ. ಹೆಚ್ಚು ಹಣ ಗಳಿಸುವ ಸೆಲೆಬ್ರಿಟಿಗಳ ಪಟ್ಟಿ ಮಾಡಿದ್ದ ಫೋರ್ಬ್ಸ್ ಅಕ್ಷಯ್ ಕುಮಾರ್‌ಗೆ 34 ನೇ ಸ್ಥಾನ ನೀಡಿತ್ತು, ಇದು ಕಡಿಮೆಯೇನಲ್ಲ.

  ನೂರಾರು ಕೋಟಿಗಳಲ್ಲಿ ಸಂಪಾದನೆ ಮಾಡುವ ಅಕ್ಷಯ್ ಕುಮಾರ್ ಜೀವನಶೈಲಿ ಸಹಜವಾಗಿ ಅದ್ಧೂರಿಯಾಗಿಯೇ ಇದೆ. ಐಶಾರಾಮಿ ಮನೆ ಹೊಂದಿರುವ ಅಕ್ಷಯ್, ದುಬಾರಿ ಕಾರಗಳನ್ನು ಸಹ ಹೊಂದಿದ್ದಾರೆ. ಆದರೆ ಪ್ರೈವೇಟ್ ಜೆಟ್ ಅನ್ನು ಅಕ್ಷಯ್ ಕುಮಾರ್ ಹೊಂದಿಲ್ಲ.

  English summary
  Akshay Kumar said he do not own private Jet worth of 260 crore. He called lier who published news that he own private jet.
  Monday, October 17, 2022, 16:42
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X