Don't Miss!
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ S22 ಬೆಲೆಯಲ್ಲಿ ಏಕಾಏಕಿ ಭಾರೀ ಇಳಿಕೆ!..ಸಖತ್ ಆಫರ್!
- News
Shocking Video: ಸೆಲೂನ್ಗೆ ನುಗ್ಗಿದ ಕಾರು: ವಿಡಿಯೋ ಕಂಡು ಜನ ಶಾಕ್..
- Sports
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಭಾರತ ತಂಡದ ಆರಂಭಿಕ ಬ್ಯಾಟರ್
- Automobiles
130 km ರೇಂಜ್ ನೀಡುವ 'ecoDryft' ಬೈಕ್ ಬಿಡುಗಡೆ... .ರೂ.99,999ಕ್ಕೆ ಸಿಗುತ್ತೆ!
- Lifestyle
ಒಂಟಿಯಾಗಿ ಅಂಟಾರ್ಟಿಕಾ ಯಾತ್ರೆ ಮಾಡಿದ ಮೊದಲ ಮಹಿಳೆ: ಕ್ಯಾಪ್ಟನ್ ಪ್ರೀತ್ ಚಾಂದಿ, ಇವರ ಸ್ಟೋರಿಯೇ ಸ್ಪೂರ್ತಿದಾಯಕ
- Finance
Budget 2023 Expectations: ಸಾಮಾನ್ಯ ಜನರ ಬಜೆಟ್ ನಿರೀಕ್ಷೆಗಳೇನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಟ ಅಕ್ಷಯ್ ಕುಮಾರ್ ಇಷ್ಟೆಲ್ಲಾ ಸುತ್ತಿ ಬಳಸಿ ಹೇಳಿದ್ದು 'ಸಂಜು' ಬಗ್ಗೆನಾ.?
ಬಾಲಿವುಡ್ 'ಖಳನಾಯಕ್' ಸಂಜಯ್ ದತ್ ಜೀವನ ಚರಿತ್ರೆ ಆಧಾರಿತ ಸಿನಿಮಾ 'ಸಂಜು' ಬಗ್ಗೆ ಹೊಗಳುವವರು ಎಷ್ಟು ಮಂದಿ ಇದ್ದಾರೋ, ತೆಗಳುವವರು ಕೂಡ ಅಷ್ಟೇ ಇದ್ದಾರೆ.
'ಸಂಜು' ಚಿತ್ರ ಸೂಪರ್ ಆಗಿದೆ, ರಣ್ಬೀರ್ ಕಪೂರ್ ಆಕ್ಟಿಂಗ್ ಚೆನ್ನಾಗಿದೆ ಎಂಬುದು ಹಲವರ ಅಭಿಪ್ರಾಯ. ಈ ನಡುವೆ ಜೀವನ ಚರಿತ್ರೆ ಆಧಾರಿತ ಸಿನಿಮಾ ಮಾಡುವಷ್ಟು ದೊಡ್ಡ ವ್ಯಕ್ತಿ ಅಲ್ಲ 'ಸಂಜಯ್ ದತ್'. ಸಿನಿಮಾದಲ್ಲಿ ಸಂಜಯ್ ದತ್ ರನ್ನ ಒಳ್ಳೆಯವರಂತೆ ಚಿತ್ರಿಸಲಾಗಿದೆ. ಸಂಜಯ್ ದತ್ ಗೆ ಒಳ್ಳೆಯ ಇಮೇಜ್ ಸಿಗಲಿ ಎನ್ನುವ ಕಾರಣಕ್ಕೆ 'ಸಂಜು' ಸಿನಿಮಾ ಮಾಡಲಾಗಿದೆ ಅಂತ ಹೇಳುವವರೂ ಇದ್ದಾರೆ.
ಯಾರು ಏನೇ ಅಂದರೂ ಬಾಕ್ಸ್ ಆಫೀಸ್ ನಲ್ಲಿ ಮಾತ್ರ 'ಸಂಜು' ಸಿನಿಮಾ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಹೀಗಿರುವಾಗಲೇ, 'ಖತರೋಂಕೆ ಖಿಲಾಡಿ' ಅಕ್ಷಯ್ ಕುಮಾರ್ ಕೊಟ್ಟಿರುವ ಒಂದು ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.
ಅಷ್ಟಕ್ಕೂ, ಅಕ್ಷಯ್ ಕುಮಾರ್ ಹೇಳಿದ್ದೇನು.? ಜೀವನ ಚರಿತ್ರೆ ಆಧಾರಿತ ಸಿನಿಮಾಗಳ ಬಗ್ಗೆ ಅವರಿಗೆ ಇರುವ ಅಭಿಪ್ರಾಯ ಏನು.? ಓದಿರಿ ಫೋಟೋ ಸ್ಲೈಡ್ ಗಳಲ್ಲಿ....

'ಸಂಜು' ಬಗ್ಗೆ ಟಾಂಗ್ ಕೊಟ್ರಾ ಅಕ್ಷಯ್ ಕುಮಾರ್.?
''ನನ್ನ ಜೀವನ ಚರಿತ್ರೆ ಆಧಾರಿತ ಸಿನಿಮಾವನ್ನ ನಾನೆಂದೂ ಮಾಡಲ್ಲ. ನಾನು ಅದರ ಕುರಿತು ಯೋಚನೆ ಕೂಡ ಮಾಡಲ್ಲ. ಹಾಗೇ ನನ್ನ ಬಗ್ಗೆ ಪುಸ್ತಕ ಕೂಡ ಹೊರತರುವುದಿಲ್ಲ'' ಎನ್ನುವ ಮೂಲಕ ಸುತ್ತಿ ಬಳಸಿ ಸಂಜಯ್ ದತ್ ಹಾಗೂ 'ಸಂಜು' ಚಿತ್ರಕ್ಕೆ ಅಕ್ಷಯ್ ಕುಮಾರ್ ಟಾಂಗ್ ಕೊಟ್ಟಿದ್ದಾರೆ.
'ಸಂಜು'
ವಿಮರ್ಶೆ:
ರಣ್ಬೀರ್-ರಾಜಕುಮಾರ್
ಹಿರಾನಿಯ
'ಮಾಸ್ಟರ್
ಪೀಸ್'!

ರಿಯಲ್ ಹೀರೋಗಳು ಇವರೇ...
''Tapan Das (ಗೋಲ್ಡ್) ಹಾಗೂ Arunachalam Muruganantham (ಪ್ಯಾಡ್ ಮ್ಯಾನ್) ತರಹ ಇತಿಹಾಸದಲ್ಲಿ ಹಲವು ಅತ್ಯದ್ಭುತ ಕಥೆಗಳಿವೆ. ಇವರೆಲ್ಲರೂ ಭಾರತಕ್ಕೆ ದೊಡ್ಡ ಕೊಡುಗೆ. ಇವರುಗಳೇ ನಿಜವಾದ ಹೀರೋಗಳು'' - ಅಕ್ಷಯ್ ಕುಮಾರ್
'ಸಂಜು'
ನೋಡಿ
ಬೇಸರಗೊಂಡ
ವರ್ಮಾ
ಕೊಟ್ರು
ಬ್ರೇಕಿಂಗ್
ನ್ಯೂಸ್

ಬಯೋಪಿಕ್ ಟ್ರೆಂಡ್
''ಯಾವುದಾದರೂ ಕಾನ್ಸೆಪ್ಟ್ ವರ್ಕ್ ಆದರೆ, ಅದನ್ನೇ ಎಲ್ಲರೂ ಮಾಡ್ತಾರೆ. ಕೊನೆಗೆ ಅದೇ ಫ್ಲಾಪ್ ಆದರೆ, ಅದನ್ನ ಬಿಟ್ಟು ಬೇರೆ ಕಡೆಗೆ ವಾಲುತ್ತಾರೆ. ಸದ್ಯಕ್ಕೆ ಬಾಲಿವುಡ್ ನಲ್ಲಿ ಬಯೋಪಿಕ್ ಮಾಡುವ ಟ್ರೆಂಡ್ ಇದೆ'' ಎಂದಿದ್ದಾರೆ ಅಕ್ಷಯ್ ಕುಮಾರ್

ಹಿಮಾ ದಾಸ್ ಬಯೋಪಿಕ್ ಮಾಡುವ ಬಯಕೆ
''ನನಗೆ ಹಿಮಾ ದಾಸ್ ನಿಜ ಜೀವನದ ಕುರಿತು ಸಿನಿಮಾ ಮಾಡುವ ಇಚ್ಛೆ ಇದೆ. ಆಕೆ ಯುವ ಸಾಧಕಿ. ಆಕೆಯ ಸಾಧನೆ ತುಂಬಾ ದೊಡ್ಡದು. ಅದನ್ನ ಹೈಲೈಟ್ ಮಾಡುವ ಸಲುವಾಗಿ ಸಿನಿಮಾ ಮಾಡಬೇಕು'' - ಅಕ್ಷಯ್ ಕುಮಾರ್