For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಸಹೋದರಿಯರ ವಿರುದ್ಧ ಎಫ್‌ಐಆರ್ ರದ್ದು ಮಾಡದಂತೆ ರಿಯಾ ಮನವಿ

  |

  ಸುಶಾಂತ್ ಸಿಂಗ್ ಸಹೋದರಿಯರ ವಿರುದ್ಧ ನಕಲಿ ವೈದ್ಯಕೀಯ ದಾಖಲೆ, ನಕಲಿ ದಾಖಲೆ ಸೃಷ್ಟಿಸಿರುವ ಪ್ರಕರಣದಲ್ಲಿ ದಾಖಲಾಗಿರುವ ಎಫ್‌ಐಆರ್ ಅನ್ನು ರದ್ದು ಮಾಡದಂತೆ ರಿಯಾ ಚಕ್ರವರ್ತಿ ಬಾಂಬೆ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.

  ನಕಲಿ ವೈದ್ಯಕೀಯ ದಾಖಲೆ ಸೃಷ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಅನ್ನು ರದ್ದು ಮಾಡುವಂತೆ ಸುಶಾಂತ್ ಸಿಂಗ್ ಸಹೋದರಿಯರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಇದಕ್ಕೆ ವಿರುದ್ಧವಾಗಿ ರಿಯಾ ಸಹ ಮನವಿ ಸಲ್ಲಿಸಿದ್ದು, ಸುಶಾಂತ್ ಸಿಂಗ್ ಸಹೋದರಿಯರ ವಿರುದ್ಧ ಎಫ್‌ಐಆರ್ ಅನ್ನು ರದ್ದು ಮಾಡದಂತೆ ಮನವಿ ಮಾಡಿದ್ದಾರೆ.

  ಸುಶಾಂತ್ ಸಿಂಗ್ ಸಹೋದರಿಯರು ಸುಶಾಂತ್ ಸಿಂಗ್ ಆರೋಗ್ಯದ ಬಗ್ಗೆ ನಕಲಿ ದಾಖಲೆ ಸಲ್ಲಿಸಿದ್ದು, ಸುಶಾಂತ್ ಸಿಂಗ್, ದೆಹಲಿಯ ರಾಮ್‌ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ನಿರ್ದಿಷ್ಟ ದಿನಾಂಕದಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ಎಂದು ದಾಖಲೆ ಸೃಷ್ಟಿಸಿದ್ದಾರೆ. ಆದರೆ ಆ ಸಮಯದಲ್ಲಿ ಸುಶಾಂತ್ ಸಿಂಗ್ ಮುಂಬೈನಲ್ಲಿ ವಾಸವಿದ್ದ ಎಂದು ತಮ್ಮ ಪಿಟಿಶನ್‌ನಲ್ಲಿ ತಿಳಿಸಿದ್ದಾರೆ ರಿಯಾ.

  ವೈದ್ಯ ತರುಣ್ ಕುಮಾರ್ ಇಂದ ಕೆಲವು ಚಿಕಿತ್ಸೆಗಳನ್ನು, ಔ‍ಷಧಗಳನ್ನೂ ಸಹ ಸುಶಾಂತ್ ಸಿಂಗ್ ತೆಗೆದುಕೊಂಡಿದ್ದಾರೆ ಎಂದು ಸುಶಾಂತ್ ಸಿಂಗ್ ಸಹೋದರಿಯರು ಹೇಳಿದ್ದಾರೆ. ಆದರೆ ಮುಂಬೈನಲ್ಲಿಯೇ ಇದ್ದ ಸುಶಾಂತ್ ಹಾಗೆ ಮಾಡಿರಲಿಕ್ಕೆ ಸಾಧ್ಯವಿಲ್ಲ, ಒಂದು ವೇಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಔಷಧಗಳನ್ನು ನೀಡಬಹುದೇ ಎಂಬ ಬಗ್ಗೆಯೂ ವಿಚಾರಣೆ ನಡೆಯಬೇಕಿದೆ ಎಂದಿದ್ದಾರೆ ರಿಯಾ ಚಕ್ರವರ್ತಿ.

  English summary
  Rhea Chakraborty filed fresh petition to Bombay high court, not to quash FIR filled against Sushant Singh's sisters.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X