»   » ನಟಿ ಶ್ರೀದೇವಿ ಅಕಾಲ ಸಾವಿಗೆ ನಿಜವಾದ ಕಾರಣ 'ಇದೇ'ನಾ.?

ನಟಿ ಶ್ರೀದೇವಿ ಅಕಾಲ ಸಾವಿಗೆ ನಿಜವಾದ ಕಾರಣ 'ಇದೇ'ನಾ.?

Posted By:
Subscribe to Filmibeat Kannada
ನಟಿ ಶ್ರೀದೇವಿ ಅಕಾಲ ಸಾವಿಗೆ ಅಸಲಿ ಕಾರಣ ಇದೇನಾ? | Filmibeat Kannada

ಒಂದ್ಕಾಲ ಇತ್ತು.... ಆಗ, ಇದೇ ಊರಲ್ಲಿ ಶ್ರೀದೇವಿ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ... ಪಕ್ಕದ ಹೋಟೆಲ್ ನಲ್ಲೇ ಶ್ರೀದೇವಿ ತಂಗಿದ್ದಾರೆ... ಎಂಬ ವಿಷಯ ತಿಳಿದ ಕೂಡಲೆ ಇಡೀ ಊರಿಗೆ ಊರೇ ಶ್ರೀದೇವಿ ಇದ್ದ ಜಾಗಕ್ಕೆ ಹಾಜರ್ ಆಗುತ್ತಿತ್ತು. 'ಅತಿಲೋಕ ಸುಂದರಿ' ಶ್ರೀದೇವಿಯನ್ನ ಒಮ್ಮೆಯಾದರೂ ಕಣ್ಣಾರೆ ನೋಡಬೇಕು ಎಂದು ಬಯಕೆ ಎಷ್ಟೋ ಸಿನಿ ರಸಿಕರಲ್ಲಿತ್ತು.

ಶ್ರೀದೇವಿಯ ದರ್ಶನ ಪಡೆಯಲು ಆಕೆ ಉಳಿದುಕೊಳ್ಳುತ್ತಿದ್ದ ಐ.ಬಿ ಅಥವಾ ಹೋಟೆಲ್ ಮುಂದೆ ಕನಿಷ್ಟ ಅಂದರೂ ಸಾವಿರಾರು ಜನ ಪ್ರತಿ ದಿನ ಕಾದು ನಿಲ್ತಿದ್ರು. ಸೌಂದರ್ಯದ ಸಿರಿದೇವಿ ಶ್ರೀದೇವಿಯನ್ನ ಕಾವಲು ಕಾಯೋಕೆ ಅಂತಲೇ 50 ಮಂದಿ ಅಂಗ ರಕ್ಷಕರು ಹಾಗೂ 100 ಮಂದಿ ಪೊಲೀಸರು ಇದ್ದರು ಅಂದ್ರೆ ನೀವೇ ಊಹಿಸಿಕೊಳ್ಳಿ, ಅಂದು ಶ್ರೀದೇವಿಗೆ ಇದ್ದ ಮಾಸ್ ಮೇನಿಯಾ ಎಂಥದ್ದು ಅಂತ.

ಶ್ರೀದೇವಿಯ ಕೆಣಕುವ ಕಣ್ಣೋಟ, ಮೋಹಕ ಮೈಮಾಟಕ್ಕೆ ಮನಸೋಲದವರೇ ಇರಲಿಲ್ಲ. ದೇಹ ಸಿರಿಯಿಂದಲೇ ಎಲ್ಲರ ಗಮನ ಸೆಳೆದು ಚಿತ್ರರಂಗದಲ್ಲಿ 'ಸೂಪರ್ ಸ್ಟಾರ್' ಆಗಿ ಮೆರೆದಿದ್ದ ಶ್ರೀದೇವಿಗೆ ಈಗ ಅದೇ ಸೌಂದರ್ಯ ಮುಳುವಾಯಿತೇ.?

ವಯಸ್ಸು 54 ಆಗಿದ್ದರೂ, ಇನ್ನೂ ಸುಂದರವಾಗಿ ಕಾಣಬೇಕು ಎಂಬ ಹಂಬಲವೇ ಶ್ರೀದೇವಿಯನ್ನು ಬಲಿಪಡಿಯಿತೇ.? ನಮಗಂತೂ ಗೊತ್ತಿಲ್ಲ. ಆದ್ರೆ, ಅಂಥದ್ದೊಂದು ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಆರಂಭವಾಗಿದೆ. ಮುಂದೆ ಓದಿರಿ...

ಹೃದಯ ಸಂಬಂಧಿ ಕಾಯಿಲೆ ಇರಲಿಲ್ಲ

ಶ್ರೀದೇವಿ ಅವರದ್ದು ಸಾಯುವ ವಯಸ್ಸು ಅಲ್ಲ. ಅಲ್ಲದೇ, ಶ್ರೀದೇವಿ ಅವರಿಗೆ ಹೃದಯ ಸಂಬಂಧಿ ಕಾಯಿಲೆ ಕೂಡ ಇರಲಿಲ್ಲ. ಹೀಗಿದ್ದರೂ, ಹಠಾತ್ತನೆ ಹೃದಯಾಘಾತದಿಂದ ಶ್ರೀದೇವಿ ನಿಧನರಾಗಲು ಹೇಗೆ ಸಾಧ್ಯ.? ಎಂಬ ಪ್ರಶ್ನೆ ಉದ್ಭವವಾಗಿದೆ. ಶ್ರೀದೇವಿ ಸಾವಿನ ಸುತ್ತ ನಾನಾ ಊಹಾಪೋಹ ಸೃಷ್ಟಿಯಾಗಿದೆ.

ಶ್ರೀದೇವಿಯವರ ಸಾವಿಗೆ ನಿಜವಾದ ಕಾರಣವಾದರೂ ಏನು?

ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಶ್ರೀದೇವಿ

ಕೆಲ ಬಾಲಿವುಡ್ ಸೆಲೆಬ್ರಿಟಿಗಳಿಗೆ ಹತ್ತಿರವಾಗಿರುವ ಪಿಯಾಲಿ ಗಂಗೂಲಿ ಪ್ರಕಾರ, ಶ್ರೀದೇವಿ ಅವರಿಗೆ ಅತಿಯಾದ ಸೌಂದರ್ಯ ಪ್ರಜ್ಞೆ ಇತ್ತು. ಮುಖದಲ್ಲಿನ ಸುಕ್ಕು, ಸೊಂಟದ ಬೊಜ್ಜು ಹಾಗೂ ತಮ್ಮ ವಯಸ್ಸನ್ನು ಮರೆಮಾಚಲು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರಂತೆ ನಟಿ ಶ್ರೀದೇವಿ.

ಸರ್ಪ್ರೈಸ್ ಕೊಡಲು ಹೋದ ಬೋನಿ ಕಪೂರ್ ಗೆ ಕಾದಿತ್ತು ಶಾಕ್: ಬಾತ್ ಟಬ್ ನಲ್ಲಿ ಬಿದ್ದಿದ್ದ ಶ್ರೀದೇವಿ!

ಶ್ರೀದೇವಿ ಖುಷಿಯಾಗಿ ಇರಲಿಲ್ಲ

ವಯಸ್ಸಾದಂತೆ ಸೌಂದರ್ಯ ಕಳೆಗುಂದುತ್ತಿರುವುದರಿಂದ ನಟಿ ಶ್ರೀದೇವಿ ತೀವ್ರ ಒತ್ತಡಕ್ಕೆ ಒಳಗಾಗಿದ್ದರು. ಐದು ವರ್ಷಗಳ ಹಿಂದೆ ಶ್ರೀದೇವಿ ಖುಷಿ ಆಗಿರಲಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಪಿಯಾಲಿ ಗಂಗೂಲಿ ಬರೆದುಕೊಂಡಿದ್ದಾರೆ.

ಶ್ರೀದೇವಿ ಮೃತದೇಹ ಇನ್ನೂ ಕುಟುಂಬದ ಕೈಸೇರಿಲ್ಲ: ತಡವಾಗುತ್ತಿರುವುದಕ್ಕೆ ಕಾರಣವೇನು.?

ಕೃತಕ ಸೌಂದರ್ಯಕ್ಕೆ ಬಲಿಯಾದರೆ.?

ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ ನಟಿ ಶ್ರೀದೇವಿ ಆಗಾಗ ದಕ್ಷಿಣ ಕ್ಯಾಲಿಫೊರ್ನಿಯಗೆ ಭೇಟಿ ನೀಡುತ್ತಿದ್ದರಂತೆ. ಅನೇಕ ಬಾರಿ ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗಿರುವ ಶ್ರೀದೇವಿ ಕೃತಕ ಸೌಂದರ್ಯಕ್ಕೆ ಬಲಿಯಾದರೆ.? ಎಂಬ ಪ್ರಶ್ನೆಗೆ ಸದ್ಯ ಅನೇಕರನ್ನು ಕಾಡುತ್ತಿದೆ.

ಅತಿಯಾದ ಸೌಂದರ್ಯ ಪ್ರಜ್ಞೆಯಿಂದ ಸಾವನ್ನಪ್ಪಿದ್ರಾ.?

''ತೂಕ ಕಮ್ಮಿ ಮಾಡಲು ಸೇವಿಸುವ ಮಾತ್ರೆಗಳು ಹಾಗೂ ಅತಿಯಾದ ಬೋಟೋಕ್ಸ್ ದೋಸ್ ನಿಂದಲೂ ಹೃದಯಾಘಾತ ಸಂಭವಿಸುತ್ತದೆ'' ಎಂಬುದು ಸದ್ಯ ಹಲವರ ವಾದವಾಗಿದೆ.

ಕಟ್ಟುನಿಟ್ಟಿನ ಡಯೆಟ್ ಪ್ಲಾನ್ ನಿಂದ ಹೀಗಾಯ್ತಾ.?

ಸೈಝ್ ಝೀರೋ ಮೈಮಾಟ ಹಾಗೂ ಸೌಂದರ್ಯ ಕಾಪಾಡಲು ಶ್ರೀದೇವಿ ಅನುಸರಿಸಿದ್ದ ಕಟ್ಟುನಿಟ್ಟಿನ ಡಯೆಟ್ ಪ್ಲಾನ್ ಹಾಗೂ ಹಲವಾರು ಟ್ರೀಟ್ಮೆಂಟ್ ಗಳಿಂದಾಗಿ ಹೃದಯಾಘಾತ ಸಂಭವಿಸ್ತಾ.?

ಶ್ರೀದೇವಿ ದೇಹ ದಣಿದಿತ್ತೇ.?

ಲೇಸರ್ ಸ್ಕಿನ್ ಸರ್ಜರಿ, ಸಿಲಿಕಾನ್ ಬ್ರೆಸ್ಟ್ ಕರೆಕ್ಷನ್, ಬೋಟೋಕ್ಸ್, ಫೇಸ್ ಲಿಫ್ಟ್ ಹಾಗೂ ಫೇಶಿಯಲ್ ಕರೆಕ್ಷನ್ ಗಳನ್ನ ಮಾಡಿಸಿಕೊಂಡು ಶ್ರೀದೇವಿ ಸುಂದರವಾಗಿ ಕಾಣುತ್ತಿದ್ದರು. ಆದ್ರೆ, ಈ ಎಲ್ಲ ಸರ್ಜರಿಗಳಿಂದ ಅವರ ದೇಹ ದಣಿದಿತ್ತೇ.? ಎಂಬ ಪ್ರಶ್ನೆ ಎದ್ದಿದೆ.

ಇದೆಲ್ಲ ಆಗಿತ್ತು ಅನ್ನೋದಕ್ಕೆ ಏನು ಗ್ಯಾರೆಂಟಿ.?

ಶ್ರೀದೇವಿ ಎಷ್ಟೋ ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಅಂತೆಲ್ಲ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಆದ್ರೆ, ಶ್ರೀದೇವಿ ಕತ್ತರಿ ಪ್ರಯೋಗಕ್ಕೆ ಮುಂದಾಗಿದ್ದರು ಎಂಬುದಕ್ಕೆ ಸಾಕ್ಷಿ ಏನಿದೆ.? ಪ್ಲಾಸ್ಟಿಕ್ ಸರ್ಜರಿ, ಸ್ಕಿನ್ ಸರ್ಜರಿ, ಬ್ರೆಸ್ಟ್ ಕರೆಕ್ಷನ್ ಮಾಡಿಸಿಕೊಂಡಿರುವ ಬಗ್ಗೆ ಶ್ರೀದೇವಿ ಆಗಲಿ, ಆಕೆಯ ಕುಟುಂಬ ಆಗಲಿ ಎಂದೂ ಬಾಯ್ಬಿಟ್ಟಿಲ್ಲ. ಅಲ್ಲದೇ, ಸಾವಿಗೆ ಇದೇ ಕಾರಣ ಅಂತ ಕುಟುಂಬದ ಮೂಲಗಳಾಗಲಿ, ಆಸ್ಪತ್ರೆ ವರದಿಗಳು ಇನ್ನೂ ತಿಳಿಸಿಲ್ಲ. ಅಷ್ಟು ಬೇಗ ಸೋಷಿಯಲ್ ಮೀಡಿಯಾದಲ್ಲಿ ಏನೇನೋ ಕಥೆ ಶುರು ಆಗಿದೆ.

Read in English: Cause of Sridevi's death
English summary
Did Plastic surgeries and desire to look young led to Sridevi's cardiac arrest.? A post has gone viral on Social Media claiming that Sridevi's plastic surgeries and constant endeavor to look young could have caused her untimely death.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada