For Quick Alerts
  ALLOW NOTIFICATIONS  
  For Daily Alerts

  ಖ್ಯಾತ ನಟ ದಿಲೀಪ್ ಕುಮಾರ್ ಪತ್ನಿ ಸೈರಾ ಬಾನು ಆಸ್ಪತ್ರೆಗೆ ದಾಖಲು

  By ಫಿಲ್ಮಿಬೀಟ್ ಡೆಸ್ಕ್
  |

  ಬಾಲಿವುಡ್ ಖ್ಯಾತ ನಟ ದಿಲೀಪ್ ಕುಮಾರ್ ಪತ್ನಿ ಸೈರಾ ಬಾನು ಆಸ್ಪತ್ರೆಗೆ ದಾಖಲಾಗಿದ್ದು ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಮುಂಬೈನ ಹಿಂದುಜಾ ಆಸ್ಪತ್ರೆಗೆ ಸೈರಾ ಬಾನು ಅವರನ್ನು ದಾಖಲಿಸಲಾಗಿದೆ. ಮೂಲಗಳ ಪ್ರಕಾರ ಸೈರಾ ಬಾನು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನುವ ಮಾಹಿತಿ ತಿಳಿದುಬಂದಿದೆ. ಕಳೆದ 3 ದಿನಗಳ ಹಿಂದೆಯೇ ಸೈರಾ ಬಾನು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಂದು (ಸೆಪ್ಟಂಬರ್ 1) ಐ ಸಿ ಯುಗೆ ಸ್ಥಳಾಂತರಿಸಲಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.

  ಇತ್ತೀಚಿಗಷ್ಟೆ ಸೈರಾ ಬಾನು ಪ್ರೀತಿಯ ಪತಿ ದಿಲೀಪ್ ಕುಮಾರ್ ಅವರನ್ನು ಕಳೆದುಕೊಂಡಿದ್ದರು. ಪತಿಯ ಅಗಲಿಕೆಯ ನೋವಿನಲ್ಲಿದ್ದ ಸೈರಾ ಈಗ ದಿಢೀರ್ ಆಸ್ಪತ್ರೆಗೆ ದಾಖಲಾಗಿರುವುದು ಸ್ನೇಹಿತರಲ್ಲಿ ಆತಂಕ ಮನೆ ಮಾಡಿದೆ. ಸೈರಾ ಆಸ್ಪತ್ರೆಗೆ ದಾಖಲಾದ ಬಗ್ಗೆ ಅವರ ಕುಟುಂಬದವರಾಗಲಿ ಅಥವಾ ಆಸ್ಪತ್ರೆಯಿಂದ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ.

  ಕಪ್ಪು-ಬಿಳುಪು ಕಾಲದಲ್ಲಿಯೇ ಒಂದು ಲಕ್ಷ ಸಂಭಾವನೆ ಪಡೆದಿದ್ದರು ಈ ನಟಕಪ್ಪು-ಬಿಳುಪು ಕಾಲದಲ್ಲಿಯೇ ಒಂದು ಲಕ್ಷ ಸಂಭಾವನೆ ಪಡೆದಿದ್ದರು ಈ ನಟ

  ನಟ ದಿಲೀಪ್ ಕುಮಾರ್ ವಯೋಸಹಜ ಕಾಯಿಲೆಯಿಂದ ಜುಲೈ 7ರಂದು ನಿಧನ ಹೊಂದಿದರು. 98 ವರ್ಷದ ನಟ ದಿಲೀಪ್ ಅನಾರೋಗ್ಯದ ಕಾರಣ ಆಗಾಗ ಆಸ್ಪತ್ರೆಗೆ ದಾಖಲಾಗುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜುಲೈ 7ರಂದು ಕೊನೆಯುಸಿರೆಳೆದರು. ಸೈರಾ ಬಾನು ಮತ್ತು ದಿಲೀಪ್ ಇಬ್ಬರದ್ದು ಪ್ರೇಮ ವಿವಾಹ. ಇಬ್ಬರೂ ಮದುವೆಯಾಗಿ 54 ವರ್ಷಗಳು ಕಳೆದಿವೆ. ಇಬ್ಬರ ಪ್ರೇಮ ಕಥೆ ಬಾಲಿವುಡ್ ನಲ್ಲಿ ಮರೆಯಲಾಗದ ಪ್ರೇಮಕಥೆಯಾಗಿದೆ.

  ಕೊನೆಯದಾಗಿ ಸೈರಾ ಬಾನು ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಪತಿ ಆರೋಗ್ಯದ ಬಗ್ಗೆ ಮಾತನಾಡಿದ್ದರು. ದಿಲೀಪ್ ಕುಮಾರ್ ಆರೋಗ್ಯ ತೀರ ಹದಗೆಟ್ಟಿದೆ ಎಂದು ಹೇಳಿದ್ದರು. "ಅವರ ಆರೋಗ್ಯ ತುಂಬಾ ಹದಗೆಟ್ಟಿದೆ. ತುಂಬಾ ದುರ್ಬಲ ಆಗಿದ್ದಾರೆ. ಮನೆಯೊಳಗೆ ಮಾತ್ರ ಓಡಾಡುತ್ತಾರೆ. ರೋಗನಿರೋಧಕ ಶಕ್ತಿ ಕಡಿಮೆಯಾಗಿದೆ. ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿ" ಎಂದು ಹೇಳಿದ್ದರು. ಜೊತೆಗೆ ಪತಿಯನ್ನು ಹಾಡಿ ಹೊಗಳಿದ್ದರು.

  ಇದೀಗ ಸ್ವತಃ ಸೈರಾ ಅವರೇ ಅನಾರೋಗ್ಯಕ್ಕೆ ತುತ್ತಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೈರಾ ಬೇಗ ಗುಣಮುಖರಾಗಲಿ ಎಂದು ಸ್ನೇಹಿತರು, ಚಿತ್ರರಂಗದ ಗಣ್ಯರು ಹಾರೈಸುತ್ತಿದ್ದಾರೆ.

  English summary
  Bollywood Actor Dilip Kumar wife Saira Banu hospitalized due to blood pressure, shifted to ICU.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X