»   » 'ಡಿಡಿಎಲ್ ಜೆ' ಸೂಪರ್ ಜೋಡಿಯ, 'ದಿಲ್ ವಾಲೆ' ಟ್ರೈಲರ್ ನೋಡಿದ್ರಾ?

'ಡಿಡಿಎಲ್ ಜೆ' ಸೂಪರ್ ಜೋಡಿಯ, 'ದಿಲ್ ವಾಲೆ' ಟ್ರೈಲರ್ ನೋಡಿದ್ರಾ?

Posted By:
Subscribe to Filmibeat Kannada

ಬಾಲಿವುಡ್ ಬಾದ್ ಷಾ ಕಿಂಗ್ ಖಾನ್ ಶಾರುಖ್ ಅವರ ಬಹುನಿರೀಕ್ಷಿತ 'ದಿಲ್ ವಾಲೆ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. 'ಚೆನ್ನೈ ಎಕ್ಸ್ ಪ್ರೆಸ್' ಚಿತ್ರದ ಭರ್ಜರಿ ಯಶಸ್ಸಿನ ನಂತರ ನಿರ್ದೇಶಕ ರೋಹಿತ್ ಶೆಟ್ಟಿ ಅವರು 'ದಿಲ್ ವಾಲೆ' ಚಿತ್ರದ ಮೂಲಕ ಮತ್ತೆ ಬಿಟೌನ್ ನಲ್ಲಿ ಸೌಂಡ್ ಮಾಡುತ್ತಿದ್ದಾರೆ.

'ಡಿಡಿಎಲ್ ಜೆ' ಸಿನಿಮಾದಲ್ಲಿ ಒಂದಾಗಿದ್ದ ಶಾರುಖ್, ಕಾಜೋಲ್ ಅನ್ನೋ ಅದ್ಭುತ ಜೋಡಿಯನ್ನು ನಿರ್ದೇಶಕ ರೋಹಿತ್ ಶೆಟ್ಟಿ ಅವರು 'ದಿಲ್ ವಾಲೆ' ಚಿತ್ರದ ಮೂಲಕ ಮತ್ತೆ ಒಂದು ಮಾಡಿದ್ದಾರೆ. ಇವರೊಂದಿಗೆ ನಟ ವರುಣ್ ಧವನ್ ಹಾಗೂ ಕೃತಿ ಸನೂನ್ ಕೂಡ ನಟಿಸಿದ್ದಾರೆ.[ಶಾರುಖ್ ಬರ್ಥ್ ಡೇಗೆ 'ಫ್ಯಾನ್' ಸೂಪರ್ ಟೀಸರ್]

Dilwale Trailer: Shahrukh-Kajol Steal The Show In Rohit's Best Film Ever

ಇದೀಗ ಬಿಡುಗಡೆಯಾಗಿರುವ 'ದಿಲ್ ವಾಲೆ' ಟ್ರೈಲರ್ ನಲ್ಲಿ ಲವ್, ರೊಮ್ಯಾನ್ಸ್, ಆಕ್ಷನ್, ಕಾಮಿಡಿ, ಥ್ರಿಲ್ಲರ್ ಸೀನ್, ಎಮೋಷನ್ ಜೊತೆಗೆ ಸಸ್ಪೆನ್ಸ್ ಎಲ್ಲವೂ ಒಂದಾಗಿದ್ದು, ಟ್ರೈಲರ್ ನೋಡುತ್ತಿದ್ದರೆ ಚಿತ್ರದ ಬಗ್ಗೆ ಭಾರಿ ಕುತೂಹಲ ಹುಟ್ಟುತ್ತದೆ.

ಅಲ್ಲದೇ ನಟ ವರುಣ್ ಧವನ್, ನಟಿ ಕೃತಿ ಸನೂನ್, ಜೋನಿ, ಬೊಮನ್ ಇರಾನಿ ಮುಂತಾದವರ ನಟನೆ ಟ್ರೈಲರ್ ನಲ್ಲಿ ಸಖತ್ ಇಂಪ್ರೆಸ್ಸಿವ್ ಆಗಿ ಮೂಡಿಬಂದಿದೆ.[50ರ ಸಂಭ್ರಮದಲ್ಲಿರುವ ನಟನಿಂದ, 'ವೋಗ್' ನಿಯತಕಾಲಿಕೆಗೆ ಹಾಟ್ ಫೋಸ್]

ರೆಡ್ ಚಿಲ್ಲಿಸ್ ಎಂರ್ಟಟೈನರ್ ಅಡಿಯಲ್ಲಿ ಮೂಡಿಬಂದಿರುವ 'ದಿಲ್ ವಾಲೆ' ಚಿತ್ರ ಶಾರುಖ್ ಹಾಗೂ ಕಾಜೋಲ್ ಜೋಡಿಯ, ಮೋಡಿಯನ್ನು ಮತ್ತೊಮ್ಮೆ ಪ್ರೇಕ್ಷಕರು ತೆರೆಯ ಮೇಲೆ ನೋಡುವಂತೆ ಮಾಡಿದೆ. ಅಂದಹಾಗೆ ಈ ವರ್ಷ ಕ್ರಿಸ್ ಮಸ್ ಹಬ್ಬಕ್ಕೆ ಜಬರ್ದಸ್ತ್ 'ದಿಲ್ ವಾಲೆ' ತೆರೆ ಮೇಲೆ ಅಪ್ಪಳಿಸಲಿದೆ.

ರೋಹಿತ್ ಶೆಟ್ಟಿ ಪ್ರೊಡಕ್ಷನ್ಸ್ ಅಡಿಯಲ್ಲಿ ಮೂಡಿಬಂದಿರುವ ಬಹುನಿರೀಕ್ಷಿತ 'ದಿಲ್ ವಾಲೆ' ಚಿತ್ರದ ಸೂಪರ್ ಟ್ರೈಲರ್ ಬಗ್ಗೆ ನಟ ಶಾರುಖ್ ಖಾನ್ ಅವರು ತಮ್ಮ ಟ್ಟಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ವಿಡಿಯೋ ಇಲ್ಲಿದೆ ನೋಡಿ...

English summary
Dilwale official trailer is out! The much awaited trailer of Shahrukh Khan and Kajol in Rohit Shetty directorial will blow your mind with its awesomeness.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada