For Quick Alerts
  ALLOW NOTIFICATIONS  
  For Daily Alerts

  ಅನುರಾಗ್ ಕಶ್ಯಪ್ ಪಾಲಿಗೆ ನವಾಜುದ್ದೀನ್ ಸಿದ್ದಿಕಿ 'ಐಟಂ ಗರ್ಲ್' ಆಗಿದ್ದೇಕೆ?

  |

  'ಒಂದು ವೇಳೆ ನಾನು ಅಥವಾ ಅನುರಾಗ್ ಕಶ್ಯಪ್ ಹುಡುಗಿಯಾಗಿದ್ದರೆ ನಾವು ಖಂಡಿತ ಮದುವೆಯಾಗುತ್ತಿದ್ದೆವು' ಎಂದು ನಟ ನವಾಜುದ್ದೀನ್ ಸಿದ್ದಿಕಿ ನಿರ್ದೇಶಕ ಅನುರಾಗ್ ಕಶ್ಯಪ್ ಬಗ್ಗೆ ತನ್ನ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ.

  ಬಾಲಿವುಡ್ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಮತ್ತು ನಟ ನವಾಜುದ್ದೀನ್ ಸಿದ್ದಿಕಿ ಇಬ್ಬರು ಉತ್ತಮ ಸ್ನೇಹಿತರು. ಇಬ್ಬರ ಕಾಂಬಿನೇಶನ್ ನಲ್ಲಿ ಮೂಡಿಬಂದ ವೆಬ್ ಸರಣಿಗಳು ಚಿತ್ರಪ್ರಿಯರ ನಿದ್ದೆ ಗೆಡಿಸಿವೆ. ಬ್ಲ್ಯಾಕ್ ಫ್ರೈಡೇ ಇಂದ ಪ್ರಾರಂಭವಾದ ಇವರ ಸ್ನೇಹ ಸೇಕ್ರೆಡ್ ಗೇಮ್ಸ್ ವರೆಗೂ ಮುಂದುವರೆದಿದೆ.

  ನಿರ್ದೇಶಕ ಅನುರಾಗ್ ಕಶ್ಯಪ್ 'ಮಿನಿ ಮಹೇಶ್ ಭಟ್' ಎಂದು ಟೀಕಿಸಿದ ಕಂಗನಾ ರಣಾವತ್

  ಸೂಪರ್ ಹಿಟ್ ವೆಬ್ ಸರಣಿಗಳಲ್ಲಿ ಇಬ್ಬರು ಒಟ್ಟಿಗೆ ಕೆಲಸ ಮಾಡಿದ್ದಾರೆ. ವೆಬ್ ಸರಣಿ ರೀತಿ ಈ ಜೋಡಿ ಸಹ ಬಾಲಿವುಡ್ ನಲ್ಲಿ ಸೂಪರ್ ಹಿಟ್. ಒಬ್ಬ ನಟ ಮತ್ತು ನಿರ್ದೇಶಕನ ನಡುವಿನ ಉತ್ತಮ ಸ್ನೇಹ ಬಾಂಧವ್ಯಕ್ಕೆ ಇವರೇ ದೊಡ್ಡ ಉದಾಹರಣೆ. ಮುಂದೆ ಓದಿ...

   ಸಿದ್ಧಿಕಿಯನ್ನು ಐಟಂ ಗರ್ಲ್ ಎನ್ನುತ್ತಾರೆ ಅನುರಾಗ್

  ಸಿದ್ಧಿಕಿಯನ್ನು ಐಟಂ ಗರ್ಲ್ ಎನ್ನುತ್ತಾರೆ ಅನುರಾಗ್

  ಇಬ್ಬರ ಸ್ನೇಹ, ಸಂಬಂಧ ಎಷ್ಟರ ಮಟ್ಟಿಗಿದೆ ಎಂದರೆ, ಅನುರಾಗ್ ಕಶ್ಯಪ್ ಯಾವಾಗಲು ನವಾಜುದ್ದೀನ್ ಸಿದ್ದಿಕಿಯನ್ನು ಐಟಂ ಗರ್ಲ್ ಅಂತ ತಮಾಷೆ ಮಾಡುತ್ತಿರುತ್ತಾರೆ ಎಂದು ಆತ್ಮಚರಿತ್ರೆಯಲ್ಲಿ ವಿವರಿಸಿದ್ದಾರೆ. ಅಷ್ಟೆಯಲ್ಲ ಒಂದು ವೇಳೆ ಹುಡುಗಿಯಾಗಿದ್ದರೆ ಪಕ್ಕ ಇಬ್ಬರು ಮದುವೆ ಆಗುತ್ತಿದ್ದೆ ಅಂತ ಅನುರಾಗ್ ಸದಾ ಹೇಳುತ್ತಿರುತ್ತಾರೆ ಎಂದು ಸಿದ್ದಿಕಿ ಹೇಳಿದ್ದಾರೆ.

   ಅನುರಾಗ್-ನವಾಜುದ್ದೀನ್ ಸಿದ್ದಿಕಿ ಕಾಂಬಿನೇಶನ್

  ಅನುರಾಗ್-ನವಾಜುದ್ದೀನ್ ಸಿದ್ದಿಕಿ ಕಾಂಬಿನೇಶನ್

  ನವಾಜುದ್ದೀನ್, ಅನುರಾಗ್ ನಿರ್ದೇಶನದ ಗ್ಯಾಂಗ್ ಸ್ಟರ್ ಸರಣಿಯಲ್ಲಿ ನಟಿಸಿದ್ದಾರೆ. ಗ್ಯಾಂಗ್ಸ್ ಆಫ್ ವಾಸೇಪುರ್, ರಾಮನ್ ರಾಘವ್ 2.0 ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ.

  ಅನುರಾಗ್ ಕಶ್ಯಪ್ ಜೊತೆ ಭಿನ್ನ ಕತೆಯೊಂದಿಗೆ ಬರಲಿದ್ದಾರೆ ನಟಿ ತಾಪ್ಸಿ ಪನ್ನು

  2004ರಲ್ಲಿ ಪ್ರಾರಂಭವಾದ ಸ್ನೇಹ

  2004ರಲ್ಲಿ ಪ್ರಾರಂಭವಾದ ಸ್ನೇಹ

  ಅನುರಾಗ್ ಕಶ್ಯಪ್ ಜೊತೆಗಿನ ಸ್ನೇಹದ ಬಗ್ಗೆ ನಟ ನವಾಜುದ್ದೀನ್ ಸಿದ್ದಿಕಿ ತನ್ನ ಆತ್ಮ ಚರಿತ್ರೆಯಲ್ಲಿ ವಿವರಿಸಿದ್ದಾರೆ. ಕೆಲವೇ ವರ್ಷಗಳಲ್ಲಿ ಇಬ್ಬರ ಸ್ನೇಹ ಹೇಗೆ ಗಟ್ಟಿಯಾಯಿತು ಎನ್ನುವ ಬಗ್ಗೆಯೂ ಉಲ್ಲೇಖಿಸಿದ್ದಾರೆ. 2004ರಲ್ಲಿಯೇ ಇಬ್ಬರ ಸ್ನೇಹ ಪ್ರಾರಂಭವಾಗಿದೆ. ಬ್ಲ್ಯಾಕ್ ಫ್ರೈಡೆ ಸಿನಿಮಾದೊಂದಿಗೆ ಶುರುವಾದ ಸ್ನೇಹ ಈಗಲೂ ಮುಂದುವರೆದಿದೆ.

   ಇಬ್ಬರು ವಿಚ್ಛೇದನ ಪಡೆಯುತ್ತೇವೆ

  ಇಬ್ಬರು ವಿಚ್ಛೇದನ ಪಡೆಯುತ್ತೇವೆ

  ಸಂದರ್ಶವೊಂದರಲ್ಲಿ ಮಾತನಾಡಿದ ಅನುರಾಗ್ ಕಶ್ಯಪ್, ಇಬ್ಬರ ಸಹಯೋಗ ಬೇಸರವಾದಾಗ ಒಪ್ಪಿಗೆಯ ಮೇರೆಗೆ ವಿಚ್ಛೇದನ ಪಡೆಯುತ್ತೇನೆ ಎಂದಿದ್ದಾರೆ. ಅಲ್ಲದೆ ವಿಮಾನದಲ್ಲಿ ಇಬ್ಬರು ಮಾತನಾಡದೆ ಮೂರು ಗಂಟೆಗೂ ಅಧಿಕ ಸಮಯ ಕುಳಿತುಕೊಳ್ಳುತ್ತೇವೆ ಎಂದು ಇಬ್ಬರ ಸ್ನೇಹ ಸಂಬಂಧದ ರೋಚಕ ಕಥೆಗಳನ್ನು ಅನುರಾಗ್ ಬಿಚ್ಚಿಟ್ಟಿದ್ದಾರೆ.

  English summary
  Director Anurag Kashyap called Nawazuddin Siddiqui is his Item Girl.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X