Just In
Don't Miss!
- Finance
ಷೇರುಪೇಟೆಯಲ್ಲಿ ಉತ್ಸಾಹ; ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರು. ಹೆಚ್ಚಳ
- News
ಹಕ್ಕಿ ಜ್ವರ; ಜ.26ರವರೆಗೂ ಕೆಂಪು ಕೋಟೆಗೆ ಪ್ರವೇಶ ನಿರ್ಬಂಧ
- Sports
ನಾಲ್ಕೇ ಸಾಲಿನಲ್ಲಿ ಭಾರತ ತಂಡದ ಅಷ್ಟೂ ಸಾಧನೆ ಹೇಳಿದ ಅಶ್ವೆಲ್ ಪ್ರಿನ್ಸ್!
- Education
NBT Recruitment 2021: 26 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್ಯುವಿ300
- Lifestyle
ಕೋವಿಡ್ ವ್ಯಾಕ್ಸಿನೇಷನ್ ಗೆ ಅನುಸರಿಸಬೇಕಾದ ನಿಯಮಗಳು ಇಲ್ಲಿವೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕಾಲ್‌ಶೀಟ್‌ಗಾಗಿ ಶಾರುಖ್ ಮನೆ ಮುಂದೆ ಬೀಡು ಬಿಟ್ಟ ಕನ್ನಡದ ನಿರ್ದೇಶಕ
ಶಾರುಖ್ ಖಾನ್ ಜೊತೆ ಸಿನಿಮಾ ಮಾಡುವ ಕನಸು ಕಟ್ಟಿಕೊಂಡಿರುವ ಕನ್ನಡದ ಸಿನಿಮಾ ನಿರ್ದೇಶಕರೊಬ್ಬರು ಶಾರುಖ್ ಖಾನ್ ರ ಮುಂಬೈನ ಮನೆ ಮುಂದೆ ನಾಲ್ಕು ದಿನಗಳಿಂದಲೂ ಬೀಡು ಬಿಟ್ಟಿದ್ದಾರೆ.
ಹೌದು, ಈಗಾಗಲೇ 96 ಸಿನಿಮಾ ನಿರ್ದೇಶಿಸಿರುವ ಹಾಗೂ ಕಥಾಸಂಗಮದ 'ಗಿರ್‌ಗಿಟ್ಲೆ' ಕತೆ ಬರೆದಿರುವ ಜಯಂತ್ ಸೀಗೆ ಅವರು ಶಾರುಖ್ ಖಾನ್ ಗಾಗಿ ಕತೆಯೊಂದನ್ನು ರೆಡಿ ಮಾಡಿಕೊಂಡಿದ್ದು, ಶಾರುಖ್ ಖಾನ್ ಗೆ ಕತೆ ಹೇಳಬೇಕೆಂದು ಕೆಲವು ದಿನ ಶಾರುಖ್ ಖಾನ್ ಮನೆಯ ಮುಂದೆ ಬೋರ್ಡ್ ಹಿಡಿದು ನಿಂತಿದ್ದರು.
ಡಿಸೆಂಬರ್ 31 ರಿಂದಲೂ ಶಾರುಖ್ ಖಾನ್ ಮನೆಯ ಮುಂದೆ ಬೋರ್ಡ್ ಹಿಡಿದುಕೊಂಡು ಶಾರುಖ್ ಖಾನ್ ಗಮನ ಸೆಳೆಯಲು ಯತ್ನಿಸಿದ್ದಾರೆ ಜಯಂತ್ ಸೀಗೆ. ಜನವರಿ ತಿಂಗಳ ಮೊದಲ ವಾರ ಮುಂಬೈನಲ್ಲಿಯೇ ಇದ್ದು, ಶಾರುಖ್ ಖಾನ್ ಮನೆ 'ಮನ್ನತ್' ನ ಮುಂದೆ ಬೋರ್ಡ್ ಹಿಡಿದು ನಿಂತಿದ್ದ ಜಯಂತ್ ಮೊದಲ ವಾರದ ಅಂತ್ಯಕ್ಕೆ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.

ಶಾರುಖ್ ಮನೆ ಮುಂದೆ ಪೋಸ್ಟರ್
'ಪ್ರಾಜೆಕ್ಟ್ ಎಕ್ಸ್' ಹೆಸರಿನ ಕತೆಯನ್ನು ಶಾರುಖ್ ಖಾನ್ ಗಾಗಿ ಜಯಂತ್ ಸೀಗೆ ತಯಾರು ಮಾಡಿಕೊಂಡಿದ್ದು, ಶಾರುಖ್ ಖಾನ್ ಬೈಕ್ ಮೇಲೆ ಕೂತಿರುವ ಪೋಸ್ಟರ್ ಒಂದನ್ನು ಸಹ ರೆಡಿ ಮಾಡಿಕೊಂಡು ಅದನ್ನೂ ಶಾರುಖ್ ಖಾನ್ ಮನೆಯ ಮುಂದೆ ಇಟ್ಟಿದ್ದಾರೆ ಜಯಂತ್.

ನನಗೆ ತೃಪ್ತಿ ಇದೆ ಎಂದ ಜಯಂತ್
ನಾಲ್ಕು ದಿನ ಶಾರುಖ್ ಖಾನ್ ಮನೆಯ ಮುಂದೆ ನಿಂತರೂ ಶಾರುಖ್ ಖಾನ್ ಅವರ ಗಮನ ಜಯಂತ್ ಮೇಲೆ ಬಿದ್ದಿಲ್ಲ. ಆದರೆ ಹಲವಾರು ಮಂದಿ ಜಯಂತ್ ಬಳಿ ಮಾತನಾಡಿ ಅವರು ಮಾಡಿಕೊಂಡಿರುವ ಕತೆ ಕೇಳಿದರಂತೆ. ಇದೇ ನನಗೆ ತೃಪ್ತಿ ನೀಡಿದೆ ಎಂದಿದ್ದಾರೆ ಜಯಂತ್.

ವೈರಲ್ ಆಗಿದೆ ಜಯಂತ್ ಸೀಗೆ ಚಿತ್ರಗಳು
ಜಯಂತ್ ಸೀಗೆ ಅವರ ಈ ಪ್ರಯತ್ನ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಜಯಂತ್ ಸೀಗೆ ಅವರು ಬೋರ್ಡ್ ಹಿಡಿದು ಶಾರುಖ್ ಅವರ ಮನ್ನತ್ ಮುಂದೆ ನಿಂತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಹಲವು ಸಿನಿಮಾಗಳಲ್ಲಿ ಶಾರುಖ್ ಬ್ಯುಸಿ
ಇನ್ನು ನಟ ಶಾರುಖ್ ಖಾನ್ ಪ್ರಸ್ತುತ 'ಪಠಾಣ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದಾದ ನಂತರ ಧೂಮ್ 4 ನಲ್ಲಿ ನಟಿಸಲಿದ್ದಾರೆ ಶಾರುಖ್. ಆ ನಂತರ ತಮಿಳು ನಿರ್ದೇಶಕ ಅಟ್ಟಿಲಿಯ ಸಿನಿಮಾದಲ್ಲಿ ನಟಿಸಲಿದ್ದಾರೆ. ಅದರ ನಂತರ ಡಾನ್ 3 ಸಿನಿಮಾ ಶುರುವಾಗುವ ಸಾಧ್ಯತೆ ಇದೆ.