For Quick Alerts
  ALLOW NOTIFICATIONS  
  For Daily Alerts

  ಐತಿಹಾಸಿಕ ಸಿನಿಮಾದಲ್ಲಿ ಬಾಲಿವುಡ್ ಬ್ಯೂಟಿ ಆಲಿಯಾ

  By Pavithra
  |

  ಐತಿಹಾಸಿಕ ಸಿನಿಮಾವನ್ನು ಬೆಳ್ಳಿತೆರೆ ಮೇಲೆ ಅದ್ಬುತವಾಗಿ ಕಟ್ಟಿಕೊಡುವ ಚಿತ್ರರಂಗ ಬಾಲಿವುಡ್ ಅಂದರೆ ತಪ್ಪಾಗಲಾರದು. ಬಿ ಟೌನ್ ನಲ್ಲಿ ಕಮರ್ಷಿಯಲ್ ಸಿನಿಮಾಗಳ ರೀತಿಯಲ್ಲೇ ಐತಿಹಾಸಿಕ ಸಿನಿಮಾಗಳು ಕೂಡ ಅದ್ಧೂರಿಯಾಗಿ ಮೂಡಿ ಬರುತ್ತವೆ.

  ಇತ್ತೀಚಿಗಷ್ಟೆ 'ಪದ್ಮಾವತ್' ಸಿನಿಮಾವನ್ನು ತೆರೆ ಮೇಲೆ ನೋಡಿ ಆನಂದ ಪಟ್ಟಿದ್ದ ಅಭಿಮಾನಿಗಳಿಗೆ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಖುಷಿಯಾಗುವ ಸುದ್ದಿಯನ್ನು ಕೊಟ್ಟಿದ್ದಾರೆ. ಸಾಕಷ್ಟು ದಿನಗಳ ನಂತರ ಕರಣ್ ಜೋಹರ್ ಮತ್ತೆ ನಿರ್ದೇಶನದತ್ತ ಗಮನ ಹರಿಸಿದ್ದಾರೆ.

  ಕರೀನಾ ಧರಿಸಿರುವ ಈ ಉಡುಪಿನ ತೂಕ ಬರೋಬ್ಬರಿ 30 ಕೆ.ಜಿ ಕಣ್ರೀ.! ಕರೀನಾ ಧರಿಸಿರುವ ಈ ಉಡುಪಿನ ತೂಕ ಬರೋಬ್ಬರಿ 30 ಕೆ.ಜಿ ಕಣ್ರೀ.!

  ಬಿಗ್ ಸ್ಟಾರ್ ಕಾಸ್ಟ್ ಇರುವ ಚಿತ್ರವನ್ನು ಕರಣ್ ನಿರ್ದೇಶನ ಮಾಡಲಿದ್ದು, ಸಿನಿಮಾದ ಪೋಸ್ಟರ್ ಮತ್ತು ಕಲಾವಿದರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಹಾಗಾದರೆ ಕರಣ್ ನಿರ್ದೇಶನದ ಸಿನಿಮಾದಲ್ಲಿ ಯಾರೆಲ್ಲಾ ಅಭಿನಯ ಮಾಡಲಿದ್ದಾರೆ. ಚಿತ್ರೀಕರಣ ಯಾವಾಗ ಆರಂಭ. ಇಲ್ಲಿದೆ ಸಂಪೂರ್ಣ ಮಾಹಿತಿ. ಮುಂದೆ ಓದಿ

  ನಿರ್ದೇಶನಕ್ಕೆ ಮರಳಿದ ಕರಣ್

  ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ 'ತಖ್ತ್' ಎನ್ನುವ ಐತಿಹಾಸಿಕ ಸಿನಿಮಾ ನಿರ್ದೇಶನ ಮಾಡುವುದಾಗಿ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಬಿಗ್ ಬಜೆಟ್ ಸಿನಿಮಾ ಇದಾಗಿದ್ದು ದೊಡ್ಡ ತಾರಾ ಬಳಗವೇ ಸಿನಿಮಾದಲ್ಲಿ ಇರಲಿದೆ.

  ಚಿತ್ರದಲ್ಲಿದೆ ಅದ್ಧೂರಿ ಸ್ಟಾರ್ ಕಾಸ್ಟ್

  ಚಿತ್ರದಲ್ಲಿದೆ ಅದ್ಧೂರಿ ಸ್ಟಾರ್ ಕಾಸ್ಟ್

  'ತಖ್ತ್' ಸಿನಿಮಾದಲ್ಲಿ ಸಾಕಷ್ಟು ಬಾಲಿವುಡ್ ಸ್ಟಾರ್ ಕಲಾವಿದರು ಅಭಿನಯ ಮಾಡಲಿದ್ದಾರೆ. ರಣವೀರ್ ಸಿಂಗ್, ಕರೀನಾ ಕಪೂರ್ ಖಾನ್, ಜಾನ್ಹವಿ ಕಪೂರ್, ಆಲಿಯಾ ಭಟ್, ವಿಕ್ಕಿ ಕುಶಾಲ್, ಭೂಮಿ ಪೆಡ್ನೆಕರ್ ಇನ್ನು ಅನೇಕರು ಚಿತ್ರದಲ್ಲಿ ಅಭಿನಯ ಮಾಡಲಿದ್ದಾರೆ. ಅನಿಲ್ ಕಪೂರ್ ಸಿನಿಮಾದ ಮುಖ್ಯ ಪಾತ್ರವನ್ನು ನಿರ್ವಹಿಸಲಿದ್ದಾರೆ.

  ಆಲಿಯಾ ಮೊದಲ ಐತಿಹಾಸಿಕ ಚಿತ್ರ

  ಆಲಿಯಾ ಮೊದಲ ಐತಿಹಾಸಿಕ ಚಿತ್ರ

  ಈಗಾಗಲೇ ಕಮರ್ಷಿಯಲ್ ಹಾಗೂ ಸತ್ಯ ಘಟನೆ ಆಧಾರಿತ ಚಿತ್ರಗಳಲ್ಲಿ ಅಭಿನಯ ಮಾಡಿರುವ ಆಲಿಯಾ ಭಟ್ ಇದೇ ಮೊದಲ ಬಾರಿಗೆ ಐತಿಹಾಸಿಕ ಕಥೆಯುಳ್ಳ ಚಿತ್ರದಲ್ಲಿ ಅಭಿನಯ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಆಲಿಯಾ ಅಭಿನಯ ಮಾಡಿದ ಮೊದಲ ಚಿತ್ರವನ್ನು ನಿರ್ದೇಶನ ಮಾಡಿದ್ದು ಕರಣ್ ಜೋಹರ್.

  ಐತಿಹಾಸಿಕ ಚಿತ್ರದಲ್ಲಿ ರಣವೀರ್

  ಐತಿಹಾಸಿಕ ಚಿತ್ರದಲ್ಲಿ ರಣವೀರ್

  ಈಗಾಗಲೇ 'ಪದ್ಮಾವತ್', 'ಬಾಜಿ ರಾವ್ ಮಸ್ತಾನಿ' ಸಿನಿಮಾ ಮೂಲಕ ಐತಿಹಾಸಿಕ ಹಿನ್ನಲೆ ಇರುವ ಕಥೆಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿರುವ ರಣವೀರ್ ಸಿಂಗ್ ಮತ್ತೆ ಐತಿಹಾಸಿಕ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ, ಸದ್ಯ ಸ್ಟಾರ್ ಕಾಸ್ಟ್ ಮತ್ತು ಚಿತ್ರದ ಬಗ್ಗೆ ಮಾಹಿತಿ ನೀಡಿರುವ ತಂಡ ಆದಷ್ಟು ಬೇಗ ಚಿತ್ರೀಕರಣ ಆರಂಭಿಸಲಿದೆ.

  English summary
  Bollywood director Karan Johar is directing a historical cinema. Ranveer Singh, Kareena Kapoor Khan, Alia Bhatt and many more are acting in the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X